ಆನೀಗಿಟ್ಟಲು ಬಾಣ್ಣಾsss ಆಕಾsಸಾsಕ್ ಹಸಿದಾವೇss
ಯಾರಿಟ್ಟರೆ ಕುಂತೀsss ಮಗು ಬೀಮಾsss
ಯಾರಿಟ್ಟರೆ ಕುಂತೀssss ಮಗು ಬೀsಮಿಟ್ಟ ಬಾಣ್ಣಾsss
ಆರೇಳು ಚಾsರಿಕಲಾsss ಹೊಳಿದsವೇss || ||೩೫೪||

ಪಂತೀಲೀ ಪರಪಂಚೂss ಯೆಂತೋಳೇs ಮಾಡ್ವೋಳೂs ?
ಕುಂತೀದೇವೀ ತsನ್ನಾsss ಮಗುssನೀಗೇss
ಕುಂತಿದೇವಿ ತನ್ನಾ ಮಗುನಿಗರಜೂಣಾಗೇs
ಪಂತೀಲೀs ಹಾsಲಾss ಇರssವsಳುsss ||೩೫೫||

ಕುಂತೀsಮಕ್ಕಳೂssss ಪಂತವ್ರೂss ಪಾಂಡವ್ರೂsss
ಪಂತss ಬಿದ್ದಲ್ಲೀssss ಪರಣವಾssss || ಕೊಡುವಂತಾssss
ಕುಂತೀಯಾss ಅತ್ತೀsಯಾsss ಮಗುದೀರುssss || ||೩೫೬||

ಕಣ್ಣಾss ಕಾಣದ ಕೆಮ್ಯೂ ಕೇಳದ ಕೆಟ್ಟಾss
ಸನ್ನೇಸೀs ಕೆಟ್ಟಾssss ಜಪದಲ್ಲೀss || ಪಾಂಡೋರಾs (ಕುಟ್ಟನಾ?)
ಹೆಣ್ಣ ತಂದೀs ಕೆಟ್ಟಾsss ಅಬಿಮನ್ಯುsss || ||೩೫೭||

ಸಾಯುವ ಮರಣs ಯಾರಿಗು ತಪ್ಪsದುs |
ಸ್ವಾಮಿಯ ತಂಗಿ ಸೌಬದ್ರೆ | ಮಕ್ಕಳು
ಆಡುಕೋದಲ್ಲಿs ಮರಣವು || ||೩೫೮||