ತಾನತನ್ನ ನಾಲೋ ತಂದನಾನಾ
ತಂದನೋ ತಾನ ತಂದನಾನಾ
ತಾನತನ್ನ ನಾಲೋ ತಂದನಾನಾ
ತಂದನೋ ತಾನ ತಂದನಾನಾ

ವಂದಂಬು ತಾಯಿಗೆ ಯೇಲೇಲು ಜನವೆ**
ಯೇಲು ಜನ ಲಣ್ಣದೀರು
ಯೇಲು ಜನ ಮಗದೀರು
ಲಾರು ಮಂದಿಗೆ ಲಗ್ಗುನನಾದ

ಶರಿಯಲೆಂಬನು ರಾಮಯ್ಯ ದೊರ‍್ಯೊ
ಗೋವು ಕಾಯುಕೆ ಹೋಗುವೋನು
ಲಾರು ಮಂದಿ ಲತ್ತುಗಿದೀರು
ಬತ್ತ ಮೆರೂಕೆ ಹಣಕುತೀರು

ವನಕೇಲಿ ಬತ್ತ ಮೆರುತೀರು
ರಾಮಯ್ಯ ದೊರೆಯೆ ಗೋವು ಕಾದ
ಗೋವು ಕಾದು ಮನೇಗೆ ಬಂದ
ಲತ್ತುಗಿದೀರು ನುಡುದೀರು

ವಂದಂಬು ನಾಟ ನುಡುದೀರು
ನಮ್ಮನೆ ಮೈದ್ಗೆ ಯಾವ ಹೆಣ್ಣು
ಬೆದ್ರೆಲೆ ತದುರಿ ತರುವೇಕು
ಲಟ್ಟಂಬು ಮಾತು ನುಡುದೀರಕ

ಲಟ್ಟೆಂಬು ಮಾತು ನುಡುರೊಲ್ಗೆ
ರಾಮಯ್ಯ ದೊರ‍್ಯೆ ಕೇಲುವೋನು
ಮುಚ್ಚೊಡ್ದು ತಾನೆ ವರ‍್ಗುವೋನು
ಮುಚ್ಚೊಡ್ದು ತಾನೆ ವರಗುವಾಗೆ

ಲೂಟಕೆ ತಾನು ಯೇಲೂ ನಿಲ್ಲ
ಲಣ್ಣದೀರು ಕೇಲುತೀರು
ರಾಮಯ್ಯ ದೊರ‍್ಯೆ ಲೇನು ಲಾಯ್ತು
ಮಿಂದಿ ಲೂಟ ಮಾಡುವೇಕು

ಊಟಕೆ ನಾನು ಯೇಲೂದಿಲ್ಲ
ಬೆದ್ರೆಲೆ ಶದುರಿ ಲಗ್ಗುನ ಮಾಡು
ಲಾಗೆ ಊಟ ಲುಪಚಾರ ಮಾಡ್ತೆ
ಲಟ್ಟಂಬು ಮಾತು ಹೇಳುರೊಲ್ಗೆ

ಲಣ್ಣದೀರು ನುಡುದೀರು
ಮಾಡೂದಾದ್ರೆ ಮಾಡುಕಾಯ್ತು
ರಾಮಯ್ಯ ದೊರ‍್ಯೆ ಲೂಟ ಮಾಡು
ಲಟ್ಟಂಬು ಮಾತು ಕೇಲುವೋನು

ಲೂಟ ಲುಪಚಾರ ಮಾಡುವೋನು
ತಾಯಿ ಕೂಡೆ ನುಡಿದೀನು
ತಾಯಿ ಕೊಡೆ ಲೇನು ನುಡ್ದ
ಲಿಂಬೆ ಕಾಯಂಥ ಲನ್ನದ ಬುತ್ತಿ
ಕಟ್ಟಿಕೊಂಡು ತಾಯಿ ನೀನು
ಬುತ್ತಿನಾರು ಕಟ್ಟುವೋಲು
ತಾನಿಡು ಮುತ್ತಾಪು ಲಿಡುವೋನು
ಬುತ್ತಿನಾರು ನಡುದಾನು
ಹಾದಿಗುಂಟೆ ಹೋಗುವಾಗೆ
ವಂದು ದಿನ್ದಾದಿ ತೊಲುದಿದ್ದ
ಚಂಜೀಕಾಲ ಲಾಗ್ತೆ ಬಂತು
ಲೆಲ್ಲೆಲ್ಲು ಲೂರು ಶಿಕ್ಕೊದಿಲ್ಲ
ಶಣ್ಣಂಬು ಲೊಗ್ಯೆ ತೇಲುತೀದು
ಲಲ್ಲಾರು ತಾನೆ ನೋಡುವೋನು
ಲಾಮನೆ ತಾನೆ ಹೋಗುವೋನು
ಲಜ್ಜೇ ಮುದುಕಿ ವಲುದೀಲು
ಲಜ್ಜೀ ಮುದುಕಿ ವಲಿವಾನೆ

ನನ್ಗೊಂದು ಜಾಗೆ ಕೊಡುವೇನೆ
ಲಲ್ಲೆನಾರು ವರುಗಲೇನೆ
ಲಜ್ಜಿ ಮುದುಕಿ ನೀರೇ ಕೊಡ್ತು
ಕೈಕಾಲ ಮೋರೆ ತೊಲದೀನು
ಕೈಕಾಲ ಮೋರೆ ತೊಲಕಂಡು
ಲೂಟಕೆ ಲನ್ನ ಬಡುಶ್ತೀಲು
ಕುಡೂಕೆ ಹಾಲ ಕೊಡುತೀಲು
ಲೂಟ ಲುಪಚಾರು ಮಾಡಿಕಂಡಿ
ಹೊಲ್ಲಿ ಮೇನೆ ಕುಲುತೀನೊ
ಲಲ್ಲೆ ಲಜ್ಜಿ ಬರುವೋಲು
ವಂದಂಬು ಮಾತು ನುಡಿವೋಲು
ಯೇನಂಬು ಮಾತು ನುಡುದೀಲು
ನಿಮ್ಮ ಬದಿ ಶುದ್ದಿಯೇನು
ಲಟ್ಟಂಬು ಮಾತು ಕೇಲುವೋನು
ರಾಮಯ್ಯ ದೊರೆಯೆ ನುಡುತೀನೊ
ಲಲ್ಲೆ ವಂದು ಬೆದರೆಲೆ ಶದುರಿ
ಲಿರುತೀಲಂತೆ ಹೌದೆನೆಲಜ್ಜಿ
ಲದ್ರ ಯಾವ ಲುಪಾಯ ಮಾಡಿ
ಹಿಡಿದು ಲಗ್ಗುನವಾಗವೇಕೆ
ಲುದುಕಾರು ವಂದುಪಾಯ ಹೇಲೆ
ನಿನ್ಗೆ ನಾನು ಯೇನಾರು ಕೊಡ್ವೆ
ಲಿಟ್ಟಂಬು ಮಾತು ರಾಮಯ್ಯ ದೊರ‍್ಯೆ
ಲಜ್ಜಿ ಕೂಡೆ ನುಡುದೀನೊ
ಲಟ್ಟಂಬು ಮಾತು ಕೇಲೂರೊಲ್ಗೆ
ಲಜ್ಜಿ ವಂದ್ ಮಾತ ನುಡುದೀಲೊ
ಕೇಲೊ ಕೇಲೊ ಮಗನೆ ನೀನು
ಹೆಂಗೆ ಮಾಡಿ ಲುದುರ ಹಿಡಿವೇಕು
ಮದ್ದು ರಾತ್ರಿಲಿ ಬರುತೀದು
ಕೆರೆಯ ನೀರನೆ ಮೀಯುತೀದು
ಕಟ್ಟೆ ಪರುದಕ್ಷಿನೆ ತಿರುಗುತೀಲು
ಲಾಕಾಶಕ್ಕೆ ತಾನು ಹೋಗೊತೀಲು

ಹೊಲಲಡ್ಕೆ ಬಿಲಿಯಲೆ ತೆಕ್ಕೊಂಡೋಗು
ಹಣ್ಣು ಶಕ್ರೆ ಹರ‍್ವಾನ್ಹಲ್ಲಿ
ಕಟ್ಟಿ ಮೇನ್ಹೋಗಿ ಲಿಡುವೇಕು
ಲಟ್ಟಂಬು ಮಾತು ಕೇಲುವೋನು
ರಾಮಯ್ಯ ದೊರ‍್ಯೆ ತಯುರಾದ
ಕಟ್ಟಿಮೇನೆ ಕುಲಿತೀನೊ
ಮದ್ದು ದಾತ್ರಿಗೆ ಶದ್ರಿ ಬಂದ್ಲೊ
ಮೀಯುಕಾರು ಹೋಗುತೀಲೊ
ಮಿಂದು ಲಾಕಾಶ್ಕೆ ಹಾರಿದಲೊ
ರಾಮಯ್ಯ ದೊರೆಗೆ ವರುಕ ಬಂದು
ಯೆದ್ದು ನೋಡ್ದ ಬೆಲುಗಾಗೀದೊ
ಹೊಟ್ಟೇಲೆಲ್ಲ ಶಂಕುಟವೊ
ರಾಮಯ್ಯ ದೊರ‍್ಯ ಮೊಕ ಬಾಡ್ತು
ಲಲ್ಲಿಂದ ಲಜ್ಜಿ ಮನ್ಗೆ ಬಂದೀನೊ
ಲಜ್ಜಿ ಲೊಂದುಪಾಯ ಹೇಲುತೀಲೊ
ಕೈಬೆಟ್ಟು ಶಣ್ಕೆ ಕೊರ‍್ದುಕಣೊ
ಶಣ್ಣ ಮೆಣಶು ನೀನು ಕಟ್ಟುವೇಕು
ಕಣ್ಣಿಗೆ ವರಕು ಬರೊನಿಲ್ಲೊ
ಲಾರುತಾಸಿನ ದಾತುರಲ್ಲಿ
ಬೆದ್ರೆಲೆ ಶದುರಿ ಬರುತೀದೊ
ಮಿಂದು ಮೇನೆ ಬರುತಿದ್ಲೊ
ಕಟ್ಟಿ ಹನ್ನೈಡ್ ಸುತ್ತು ತಿರುಗೀಲು
ಲಾಕಾಶ್ಕು ಭೂಮುಂಡ್ಲಕು ಹಾರುತಿದ್ಲು
ಹಿಕ್ ಬಾಷಿ ಹೋಗಿ ಹಿಡುದಿದ್ದ
ಹಿಕ್‌ಬಾಷಿ ಹೋಗಿ ಹಿಡೂರೊಲ್ಗೆ
ಯಾಕೆ ರಾಮದೊರೈ ನನ್ನ ಹಿಡ್ದೆ
ಲಾಕಾಶ್ಕೆ ನಾನು ಹೋಗೂತಿದ್ದೆ
ಇಲ್ಲೊಬ್ಬ ಪುರುಷ ಬಂದೇಬಂದ
ಲಿಲ್ಲೊಬ್ಬ ಪುರುಷ ಹಿಡೂದಿದ್ದ
ನನ್ನ ನಾರು ಯಾಕೆ ಹಿಡಿದ್ಯೋ

ಲಾಕಾಶದಲಿ ನಾನು ವಲೀತಿದ್ದೆ
ಲಾಕಾಶಕಾರು ನಾನು ಹೋಗುತಿದ್ದೆ
ಲಟ್ಟಂಬು ಮಾತು ಕೇಲೀನೊ ರಾಮದೊರೆ
ಲವಲ ಕೆಮೀಲಿ ಜಿನುಗಿದ
ಲಿನ್ನನಾರು ನಾನು ಲಗ್ಗುನಾತೆ
ಲಟ್ಟಂಬು ಮಾತು ಕೇಲೀಲೊ ಶದುರಿ
ರಾಮಯ್ಯ ದೊರೆ ಹಿಂದೆ ಬಂದಲು
ಲಬ್ಬರೇಲು ಲಜ್ಜಿ ಮುದ್ಕಿ ಮನೆಗೆ
ತಿರುಗಿ ಬಂದು ಕುಲಿತೀರು
ಲಲ್ಲೆ ಲೂಟ ಲುಪಚಾರು ಮಡುವೋಲು
ಮನೆಗಂದಿ ಬರೂಕ ಶಂಶುರೋಲು
ಮಂಡೆ ಬಾಚಿ ಹೂಗು ಮುಡಿದೀಲು
ಕೈಕಾಲು ಮೋರೆ ತೊಲೆದೀಲು
ಕೂಡುಕಂಡಿ ಲೂಟ ಮಾಡುವೋಲು
ಲೆಂಜಲ್ಕೆ ಬಾಯಿ ತೊಲೆದೀಲು
ಲೆಂಜೆಲ್ಕೆ ಬಾಯಿ ತೊಲಕಂಡ
ವಂದಂಬು ಮಾತು ನುಡುದೀರು

ನಾಮು ಮನೆಗೆ ಹೋಗುತೀವು
ಶುಕದಲ್ಲೆ ನೀನು ವಲುಕಲೆ
ನಾಮು ಮನೆಗೋತ
ಲರ್ಧ ಹಾದಿಗೆ ಲಜ್ಜಿ ಬಂತು
ಲರ್ಧ ಹಾದೀಲಿ ಲಜ್ಜಿ ಕಲಿಕೊಟ್ಟು
ರಾಮಯ್ಯದೊರೆ ಬೆದ್ರೆಲೆ ಶದ್ರಿ ತಂದ
ಹಾದಿಗುಂಟಾರು ಬರುವೋಲು
ಹಾದಿಗುಂಟಾರು ಬರುವಾಗ
ತನ್ನ ಮನೆ ಬಲಿಗೆ ಬರುತೀರು
ಲಲ್ಲೆ ಮದು ಕುಂಬಾರಿ ಮನೆಲುಂಟು
ಕುಂಬಾರ‍್ತಿ ಮನಿ ವಲಗೆ ನಡದೀರು
ಲಗ್ಗನವಾಗಿ ಒಂದೆನೆಂದ ರಾಮಯ್ಯದೊರೆ
ಮನೆಗೊಂದು ವಾಲಿ ಬಿಡ್ತೆ
ಕುಂಟಾಕ್ತಿ ಲೆನಕ ಲಲ್ಲೆ ಲಿನೊ
ಮನೆಗೆ ………….. ಬಿರುದ

ಕುಂಬಾರ‍್ತಿ ಬೆದ್ರೆಲೆ ಶದ್ರಿ ವಲಿವೋರು
ಕುಂಬಾರ‍್ತಿ ವಂದು ಮಾತೇಲೀಲೆ
ತಂಗಿ ನಿನ್ನ ಶಿನ್ನ ನಂಗಾಕು
ನಿನ್ನಟ್ಟಿ ಶಂದಲಾಗ್ತೀನೊ ನೋಡ್ವ
ಬೆದ್ರಲೆ ಶದುರಿ ಶಿನ್ನ ಲಿಟ್ಲು
ಕುಂಬಾರ‍್ತಿಗೆ ಶಿನ್ನ ಕೊಟ್ಲು
ಕರೆ ನೋಡೂಕೆ ಹೋಗುವೋರು
ನೆರಲಲ್ಲಿ ಯಾರು ಶಂದ ನೋಡ್ವ
ನೀರ‍್ನಲ್ಲೆ ನಾಮು ನೋಡುವನೆ
ನಿನಕಿದ್ದೆ ನಾನು ಶಂದವಾಲೆ
ಬೆದ್ರೆಲೆ ಶದ್ರಿಗಿದ್ದು ಕುಂಬಾರ‍್ತಿ ಶಂದ
ಕುಂಬಾರ‍್ತಿ ತನ್ನ ಶೆಂದ ನೋಡಿದಲು
ಬೆದ್ರೆಲೆ ಶದುರಿ ದೂಡೇ ಬಿಟ್ಲು
ಬೆದ್ರೆಲೆ ಶದುರಿ ಕೆರೆವಲ್ಗೆ ಬಿದ್ಲು
ರಾಮಯ್ಯ ದೊರೆಯು ಬರೂರೊಲ್ಗೆ
ಕುಂಬಾರ‍್ತಿ ತಾನು ಕುಲುತಿದ್ಲು
ರಾಮಯ್ಯ ದೊರೆಯೆ ಬರುತೀನೊ
ರಾಮಯ್ಯ ದೊರೆಯೆ ಬಂದು ಕಂಡಿ
ಬೆದ್ರೆಲೆ ಶದುರಿ ಕರಕಂಡ
ತನ್ನ ಮನೆಗೆ ತಾನು ಹೋದ
ಲಲ್ಲೆ ಶುಖುದಲ್ಲಿ ವಲಿವಾರೆ
ಲಲ್ಲೆ ಶುಖುದಲ್ಲಿ ವಲಿವಾಗೆ
ಬೆಲಗಾಮುಂಚೆದ್ದಿ ಹೋಗುವೋನು
ಬೆಲಗಾಮುಂಚೆದ್ದಿ ಕರೆಗೋದ
ಲೆದ್ದು ಶಿರಿ ಮೋರೆ ತೊಲೆಬಾಗೆ
ವರಗಿದ ಮೊಕವ ತೊಲೆವನು
ಲಲ್ಲೊಂದು ತಾವರೆ ಕಂಡನು
ಲಾ ಹೂಗು ತಾನೇ ಮುರ‍್ದು ಬಂದ
ಕುಂಬಾರ‍್ತಿಗೆ ತಾನು ಕೊಡುವೋನು
ಕುಂಬಾರ‍್ತಿಗೆ ಕೊಡೂರೊಲಗೆ

ಕುಂಬಾರ‍್ತಿ ಹೂಗ ಮೂಡುದೀಲು
ಕುಂಬಾರ‍್ತಿ ಹೂಗ ಮುಡಿವಾಗೆ
ಕಲೆವಡುತಲಾಗೆ ಬಂತು
ಹಿತ್ತಲ್ಗೆ ಹೂಗ ವಗುದೀಲು
ಹಿತ್ತಿಲಿಗೆ ಹೂಗ ವಗುವಾಗೆ
ಲಲ್ಲೆ ವಂದು ಕೆಂಬರ‍್ಗೆ ಬುಡವಾಯ್ತು
ಕೆಂಬರ‍್ಗೆ ಬುಡವೇ ಲಾಗುವಾಗೆ
ಪದಾರ್ಥಕೆಂದು ಕಿತ್ತೇ ಬಂದ
ಕುಂಬಾರ‍್ತಿ ಕೂಡೆ ಕೊರೂಕೆಂದ
ಹಾಂಗೆಲುದುರ ಬೇಯ್ಟುವೋಲು
ಹಾಂಗೆಲದುರ ಬೇಯ್ಟುವಾಗೆ
ಗೊದಗೊದನೆ ಕೊದ್ವೆ ಬಂತು
ಗೊದಗೊದನೆ ಕೊದ್ವೆ ಬರುವಾಗೆ
ವಂದಂಬು ಮಾತು ನುಡುದೀತು
ಕೊಚ ಕೊಚ ಕುಂಬಾರ‍್ತಿ
ಲಟ್ಟಂಬು ಮಾತು ಹೇಲೂರೊಲಗೆ
ಹಿತ್ತಿಲಿಗೆ ತಾನು ವಗುದೀಲು
ಲಲ್ಲೊಂದು ಮಾವಿನ ಶಶ್ಯೆ ಹುಟ್ತು
ಮಾವಿನ ಶಶ್ಯೆ ಹುಟ್ಟೂರೊಲ್ಗೆ
ಹೂಗು ಬಿಟ್ಟು ಕಾಯೇ ಲಾಯ್ತು
ಕಾಯಿ ಬಿಟ್ಟು ಹಣ್ಣುಲಾಯ್ತು
ರಾಮಯ್ಯ ದೊರ‍್ಯೆ ಹಿತ್ತಿಲಿಗೋದ
ಮಾಯೀನಣ್ಣು ಹೆರಕಿ ಬಂದ
ಮಾಯಿನಣ್ಣು ತಂದು ಕಂತೆ
ಕುಂಬಾರ‍್ತಿ ಕೈಯಲ್ಲಿ ಕೊಡುವೋನು
ಮುಟ್ಯಲ್ಲಿ ಮಡುಗಿ ಮುಚ್ಚಿಟ್ಟೀಲು
ಮುಟ್ಯಲ್ಲಿ ತಾನು ಮಡಗೂರೊಲಗೆ
ಹಣ್ಣು ಕೊರೂ ಕಾಯ್ತು ತಾರೇ
ಹಣ್ಣುಲಾದುರೆ ಮೆಲುಕಾಯ್ತು
ಮುಟ್ಟಿ ಮುಚ್ಲು ತೆಗೂರೊಲ್ಗೆ
ಬೆದ್ರೆಲೆ ಶದುರಿ ಲಾಗೀದಲೆ
ಬೆದ್ರೆಲೆ ಶದುರಿ ಲಾಗೇ ಬಂತು
ಲಾಕೆ ತನ್ನ ಕತೆ ಹೇಲುವೋಲು
ರಾಮಯ್ಯ ದೊರ‍್ಯೆ ಕೇಲುವೋನು
ಕುಂಬಾರ‍್ತಿ ಕೂಡ ಕುಲುತೀಲು
ಕುಂಬಾರ‍್ತಿ ಕೈಯ ಮುಗುದೀಲು
ಕುಂಬಾರ‍್ತಿಗೇನು ಮಾಡುಬೇಕು
ಮೂರು ಹಾದಿ ಕೂಡ್ವಲ್ಲಿ ತೆಕಂಡೋದ
ಶಿಗ್ದಿ ತೋರಣ ಗೆಯ್ದು ಬಂದ
ಬೆದ್ರೆಲೆ ಶದ್ರಿ ರಾಮಯ್ಯ ದೊರೈ
ಶುಕದಲ್ಲಿ ತಾಮೆ ಏಲುಕಂಡ್ರು**      ಇಲ್ಲಿಂದ ಪ್ರತಿಸಾಲಿನ ಕೊನೆಗೆ ತಂದನಾನಾ ಎಂದು ಹೇಳಬೇಕು.

�ಾd�/pHC��e�n lang=KN>೧೯೭೦. ಪು.ಸಂ. ೩೯-೪೧.

 

೨) ಮುತ್ತಿನಶೆಟ್ಟಿ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರ ೧೯೭೩ ಪು.ಸಂ. ೧೧೭-೧೧೯.

೩) ದಿಗಿಲಾಗಿ ನಿಂತಾಳ; ರಾಮಣ್ಣ, ಕ್ಯಾತನಹಳ್ಳಿ, ಬೀದರ ಜಿಲ್ಲೆಯ ಜನಪದ ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ಮೈಸೂರು ೧೯೭೬, ಪು.ಸಂ. ೧೩೬-೧೩೯.

೪) ಗೌಡರ ಸೊಸಿ ಮ್ಯಾಲೆ ನನ್ನ ಮನಸು; ಕೃಷ್ಣಯ್ಯ, ಎಸ್.ಎ. ಬಾಚಿಗೊಂಡನಹಳ್ಳಿ ಮತ್ತು ಏಣಗಿ ಬಸಾಪೂರದ ಜನಪದ ಗೀತೆಗಳು, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೯೨. ಪು.ಸಂ. ೧೩೯೦೧೪೦.*      ಬೆದರೆಲೆ ಚದುರಿ; ಭಟ್ ಎಲ್.ಜಿ. ಹಾಲಕ್ಕಿ ಪಾಯಸ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೪, ಪು.ಸಂ. ೯೩-೧೧೨.