ನಾರಿಗೆ ನಲ್ಲನ ಚಿಂತೀssss ಹೋರಿಗೆ ಹುಲ್ನ ಚಿಂತೀssss
ಹೂಡೂsವs ಚೆಂತೀsss ಗೌಡಾssಗೇss || ಈ ಊರಾsss
ಆಳ್ವೆನಂಬೂss ಚಿಂತೀssss ಅರಸೂsಗೇsss || ||೩೫೯||

ಇಲು ಬೀದಲು ಬಿದ್ದೀsss ಚಿಪ್ಪೀss ಕುಳಿಯಲು ಬಿದ್ದೀsss
ಬಲ್ಲೀsದನ ಮನಿಯಾsss ಅಗಳೀಗೇss
ಬಲ್ಲೀsದನ ಮನಿಯಾsss ಅಗಳೂ ಬೋನ ತಿಂದೂsss
ಇದು ವಂದು ಗಾವಿಲಕೂsss ಅರಸು ಆದಾsss || ||೩೬೦||

ತಂಗಿ ಗಂಡsಗೇsss ಕಂಚಿನಾss ಗುಂಗೂsಡೀsss
ಮಂಚದ ಮೇನಾಡೂss ಬಕವೇss || (ಕಾ) ಸುಣ್ಣದ ಕಾವಾsss
ಬಂಕಾsಪುರದರಸೂsss ಕಳಗೀನೆsss || ||೩೬೧||

ಬಂಕಾಪುರದರಸೀನಾsss ಬಾಸೀss ನಮಗ್ ತೆಳಿಯಾವೇsss
ಮೀಸೀs ಕಪ್ಹಚ್ಚೀsss ಬರವರೂsss || ರಣ್ಣಯ್ಯಾನಾss
ಬಾಸೀss ಬಂsಟರಿಗೇsss ತೆಳಿಯವೇsss || ||೩೬೨||

ಕೇಳೆ ಕೇಳೆ ನಾರೀsss, ಕೆರಿಯಲ್ಲಿ ನೀರಿಲ್ಲಾsss
ಸೋರಿಗೆ ಬರತಾರೇsss ದೋರೆಗೊಳುs ||
ಸೋರಿಗೆ ಬರತಾರೇsss ದೋರೆಗೊಳ ಬೆನ್ನೀಗೆss
ಗಿಳಿಗೊಳು ಬಾಯಾsss ಬಿಡವssದೂsss || ||೩೬೩||

ನೋಡಿರೆ ನೋಡಿರೇsss ಸೂಲ್ಯಮ್ಮ ಉದಿಯಾಗ್ವಾದಾsss
ಕೋಡೆ ಕೂ ಕುಮ್ಮಾsss ಉದರುತೇss || ಚಿನ್ನದ ಗಿಂಡೀ
ಈಡ್ಯಾಡಿ ಬಾs ದೊರ್ಯಾsss ಬಗಲಲ್ಲೀsss || ||೩೬೪||

ಕೂಟಕೆ ಕರುದರೆs ಕೋಡೊಳ್ಳೀsಗಾsರನಾs
ನಾsಟಕ ಸಾಲೀಲಿs ಪಗುಡಿಯೇs || (ಗುಡೀ) ಲಾಡುಂಬುಕೇ
ಕೂಟಕೆ ಸ್ವಾsಮ್ಯರೂsss ಕರುದರೋs || ||೩೬೫||

ಆಳೂs ಇಲ್ಲಂsದೀsss ಲರುಸೂಮನಿಗ್ಹೋದರೇs
ಆಳೀದ್ದsರಡಕೀsss ಮರನ್ಹಾಂಗೇsss || ಲರ್ಮನೇಲಿs
ನೀವ್ ಕೂತರ್ ಹುಲಿಯಾsss ಮರಿಯಂಗೇsss ||೩೬೬||