ಉಧೋ ಉಧೋ ಕರಿ ರೇಣುಕಾ
ನೀ ಆದಿ ಆದಿ ಅಳಂಬಿಕಾ  ಪಲ್ಲ

ರೇಣುಕ ರಾಜನ ಮಗಳಪ್ಪ
ತಾಯಿ ಮಂಗಳ ದೇವಿಯಪ್ಪ
ಹುಲಿ ಕೇಸರಿ ಗುಡ್ಡಪ್ಪ
ಅವರ ಲಗ್ನಕ ನಡದಾರಪ್ಪ           ೧

ಲಗ್ನಾ ಮಾಡಿ ಕೊಟ್ಟಾರಪ್ಪ
ತಿರಿಗಿ ಮನಿಗೆ ಬಂದಾರಪ್ಪ
ಯೋಳ ಕೊಳ್ಳಾ ಸಾದೇವಪ್ಪ
ಅದು ಯಾವ ದಿವ್ಸ ಹೇಳಪ್ಪ         ೨

ಅಯ್ತಾರಮಾಸಿ ಹೊತ್ತಪ್ಪ
ಹುಟ್ಟಿದ ಮಿರಗನ ಮೋರ್ತಪ್ಪ
ಮಕ್ಕಳ್ಹಡದಿ ಮೂರ‍್ನಾಕ
ಪರಸರಾಮನ ಸೇವಕ     ೩

ಈಗ ನಡಿಯೂದು ಕಲಿಯುಗ
ಕಲ್ಲಾಗಿ ಕುತ್ತಿ ಪೂಜಿಗೊಳ್ಳುದುಕ
ಶಾರ ಸಂವದತ್ತಿ ಹಂತ್ಯಾಕ
ಯೋಳಕೊಳ್ಳದಾಗ ಬೈಟಾಕ       ೪