ಯಾವ ಇದಿ ಮಾಯೀಯೋ
ಕೆಟ್ಟ ವ್ಯಾಳೆಯೋ
ಎಲ್ಲಮ್ಮ ದೇವಿ ಮ್ಯಾಲೆ
ಜಮದಗ್ನಿ ಕೋಪ

ತಂದಿ ಮಾತ ಕೇಳಿ
ಮಗ ಪರಶುರಾಮ
ಕೊಂದ ಕೊಡಲಿಯಿಂದ
ತಾಯಿ ಯಲ್ಲಮ್ಮಗ        ೨

ಕೊಡಲಿ ಹೊಡತಕ್ಕ
ತಾಯಿ ಶಿರ ಹಾರಿತು
ಪುಣ್ಯದ ರಥ ಉರಳೀತೋ
ನೆಲದ ಮ್ಯಾಲ ಆ ಕ್ಷಣ     ೩

ಆಗ ಆಕಾಶ ಕಳಚಿತೋ
ಭೂಮಿ ತಾ ಸೀಳಿತೋ
ಎಂಟು ದಿಕ್ಕು ಅಬ್ಬರಿಸಿ
ಮಗನಿಗೆ ಕಣ್ಣೀರ ತರಿಸಿ    ೪

ಮಗನ ಮಾತ ಕೇಳೀ
ತಂದೀ ಜಮದಗ್ನಿ ಆಗ
ಮತ್ತ ಬದುಕಿಸಿದ
ತಾಯಿ ಯಲ್ಲಮ್ಮಗ        ೫

ತಂದಿಗಿಂತಲೂ ತಾಯಿ
ಎಂದೆಂದಿಗೂ ದೊಡ್ಡಾಕಿ
ಅದಕ್ಕ ಬದಕ್ಯಾಳ ಮತ್ತ
ಮಾತಾಯಿ ಯಲ್ಲಮ್ಮ      ೬