ಗಂಡ ಸಂತನವಾssss ವಂಬತ್ತು ಕೊಡಿ ಸ್ವಾಮಿsss,
ವಂಬತ್ತರ ಮೇನೇsss ಕಳಸಾssವss || ಕೊಟ್ಟರೇsss
ಕಳಸss ಕನ್ನೂಡಿsಡೀsss ಹೊಳsವssದುsss || ||೩೮೪||

ಯೆಣ್ಣೀದಾ ಕಾರ್ಯsss ಯೆಣ್ಣೀದಾಂಗಾದsರೇss
ಪನ್ನೀರs ಹೊಯ್ಯೂವೇ ತೊಳಚೀಲೀsss || ಪೀಟದ ಮೇನೇsss
ಹರಕೀs ವಪ್ಪಿಸುವೇss ಗಿರಿ ಮೇನೇssss || ||೩೮೫||

ನಮ್ಮಪ್ಪs ಕೊಟ್ಟಲ್ಲೀsss ನಮ್ಮವ್ವೀs ಮನುಸೀದ್ದಲ್ಲೀsss
ನಮ್ಮss ಹಣಿಯಲ್ಲೀsss ಬರುದಲ್ಲೀsss || ದ್ಯಾವ್ಯಾರೇss,
ನಾವೆಣ್ಣೀsದಂತೇsss ಲಾಗೂದೇsss ? || ಹರಿಹರಾssನಾsss
ಅನುಗ್ರಾssವಿದ್ದಲ್ಲೀsss ಆಗೂದೂsss || ||೩೮೬||

ಮುತ್ತೈದೆತನವಾsss ಕೊಟ್‌ ಹೋಗೇ ಗೋಪಮ್ಮಾss,
ಹತ್ತೂಗೀದುಂಬೀsss ಮನದುಂಬೀss || ಮಿಕ್ಕೀದಾss
ಹೊಯ್ದ ಹೋಗೆ ನನ್ನ ಸಾಲೀsss ಸೆರಗೀಗೇsss || ||೩೮೭||

ಗಾಳೀs ಬಿಡೋs ನಮ್ಮ ಗಾಳೀs ಗೋಪುರದೊಡಿಯಾss,
ಗಾಳೀss ಬಿಡು ನಮ್ಮಾsss ಹರಗೊಳಗೇss || ನಮು ರಾಜೀಲೀss
ಗಾಳೀsಲಿದ್‌ ಹೊರತುsss ಸೊಬುನಲ್ಲsss ||೩೮೮||

ಸಿಟ್ಟಿನ ನಲ್ಲನ ಕೈಲೀss ಯಚ್ಚರದಿಂದಿರಬೇಕುss
ನಿಚ್ಚಾsಸಾsದಿಕದಾsss ನೆರ್ಯಲ್ಲೀsss || ಬೆಲ್ಲಾsದಾss
ಅಚ್ಚೀನಪ್ಪಂತೇsss ಇರಬೇಕು || ||೩೮೯||

ಮಕ್ಕಳ ಬೇಡಿಕೊಳೇsss ಮರಳೂs ದೇವರ ಕೋಡೇsss
ಶಿರಿಯಾss ಬೇಡಿಕೊಳ್ಳೇsss ಶಿವನಲ್ಲಿsss
ಶಿರಿಯಾs ಬೇಡಿಕೊಳ್ಳೇ ಶಿವನಲಿ ನಿನು ನಲ್ಲಾsನಾsss
ಆಯುಶ ಬೇಡಿಕೊಳ್ಳೇsss ಶರಗೊಡ್ಡೀssss ||೩೯೦||

ಮುತ್ತೈತಾsತನಕೇss ಯಾವsಲು ಚಿsನ್ನ ಮೇಲೂss
ಮುತ್ತಿನ ಮೂಗುತೀsss ಕರಿಮsಣಿsss ಕಾಲುಂಗಿಲಾs
ಯಾವ್ ಚೆನ್ನಕಿಂತೂssss ಅದು ಮೇಲೂsss ||೩೯೧||

ಬೆಟ್ಟಕು ಬೇಣಕೂss ಚಿಗ್ರೀ(ದಾss) ಯೆಲ್ಯಾsಗೂss
ಉತ್ತಮರ್ ಸೂಡೂsss ಕೊಡ್ಯಾಗೂss || ಲಿವ್ರ ಮನಿಯss
ಮುತ್ತೈದ್ಯರ್ ಗೇರುವಾsss ಗೆರಸ್ಯಾಗೂsss ||೩೯೨||