ಎತ್ತೇ ಎತ್ತೇ ನೀನ್ಯಾಕ್ ಎಳೀವೊಲ್ಲೆ?
ಏನು ಮಾಡಲಪ್ಪ ನೊಗ ಒತ್ತುತೈತೆ
ನೋಗವೇ ನೊಗವೇ ನೀನ್ಯಾಕ್ ಒತ್ತುತೀಯ?
ಏನು ಮಾಡಲಪ್ಪ ಬಡಗಿ ಕೆತ್ತಲಿಲ್ಲ.
ಬಡಗೀ ಬಡಗೀ ನೀನ್ಯಾಕೆ ಕೆತ್ತಲಿಲ್ಲ?
ಏನ್ ಮಾಡಲಪ್ಪ ಬಾಚಿ ಒಳ್ಳೆದಲ್ಲ.
ಬಾಚೀ ಬಾಚೀ ನೀನ್ಯಾಕ್ ಒಳ್ಳೆದಲ್ಲ?
ಏನು ಮಾಡಲಪ್ಪ ಕಮ್ಮಾರ ಹಣೆಯಲಿಲ್ಲ.
ಕಮ್ಮಾರ ಕಮ್ಮಾರ ನೀನ್ಯಾಕ್ ಹಣೆಯಲಿಲ್ಲ?
ಏನ್ ಮಾಡಲಪ್ಪ ತಿದಿ ಒಳ್ಳೇದಲ್ಲ
ತಿದಿಯೇ ತಿದಿಯೇ ನೀನೆ ಯಾಕೊಳ್ಳೇದಲ್ಲ?
ಏನ್ ಮಾಡಲಪ್ಪ ಕ್ವಾಣ ಸಾಯಲಿಲ್ಲ.
ಕ್ವಾಣಾ ಕ್ವಾಣಾ ನೀನ್ ಯಾಕ್ ಸಾಯಲಿಲ್ಲ?
ಏನು ಮಾಡಲಪ್ಪ ಹುಲ್ಲು ಬಂದಿತಲ್ಲ.
ಹುಲ್ಲೇ ಹುಲ್ಲೇ ನೀನ್ ಯಾಕೆ ಬಂದೆಯಲ್ಲ?
ಏನ್ ಮಾಡಲಪ್ಪ ಮಳೆ ಬಂದಿತಲ್ಲ.
ಮಳೆಯೇ ಮಳೆಯೇ ನೀನ್ ಯಾಕೆ ಬಂದೆಯೆಲ್ಲ?
ಏನು ಮಾಡಲಪ್ಪ ನಾನ್ ಲೋಕ ಸಲಹೋನಲ್ವೆ?