ಒಂದು ತಾಯಿಗೇsss ಯೇಳು ಜsನ ಮಕ್ಕಳು
ಏಳು ಜನರ ನೆಡುಗೊಂದು
ಶಣುಗಂssಗೆ ಲಂಬು ತಂಗಿ
“ಕೇಳು ಕೇssಳೆ ತಾsಯವ್ವ,
ಸಣ್ಣಗಂಗೆ ಅಂಬೂ ತಂಗಿ
ಲೈದು ವರ್ಸsವಾsಗಿತು
ಲಗ್ನಕಾರೂss ಬsಂದಿತು”
“ಕೇಳ್ ಕೇಳೆ ತಾsಯವ್ವ,
ಏಳು ಜsನಲಣ್ಣsದಿರು
ಏಳು ಜನ್ರ ನೆಡುಗ್ವೊಂದು
ಸಣು ಗಂsಗೆ ಲಂಬೂ ತಂಗೀ
ಹನ್ನೆರಡ್ ವರ್ಸಲಾssಗಿತು
ಲವ್ಳು ಲಗ್ನssಕೆ ಬssಂದಳು
ದಂಡಿಗಿನ್ನೆ ಹೋಗು ಕರ್ಯs
ಪದ್ಕs ಸರವs ಗೈಸ್ಕಂಡ್ ಬತ್ತುs
ಏಳು ಜsನ ಲಣ್ಣದಿರು
ಸಣ್ಣ ಗಂssಗೆ ಲಂಬೂs ತಂಗಿs
“ಕೇಳ್ ಕೇssಳೆ ತಾsಯವ್ವs,
ದಂಡೀಗೆ ಲೋಗುತಾರೆ
ಸಣ್ಣ ಗಂsಗೆ ಲಂಬೂ ತಂಗಿ
ಹಿತ್ಲಕಡ್ಗನ ಬಾಗ್ಲದಾsಗೆ
ಚೆಂದ್ ಚೆsಂದs ಲೂಗುಂಟು
ಕೊವ್ಕೆಲಾದ್ರುs ಕಳ್ಗುಬೇಡ
ಬೆಂಕಿಗಾದ್ರೆs ಕಳ್ಗಬೇಡ
ನೀರಿಗಾದ್ರೂ ಕಳ್ಗಬೇಡ”
ಲಂದ್ಹೇsಳಿ ಹೇಳವ್ರೆs
ಏಳು ಜsನ ಲಣ್ಣದಿರು
“ಕೇಳ್ ಕೇಳೇ ಸಣುಗಂಗೆ,
ಹಿತ್ಲಕಡಗನs ಬಾಗ್ಲದಲ್ಲಿ
ಚೆಂದ್ ಚೆಂದ ಲೂssಗುಂಟು
ಕೊವ್ಕೆಲಾದ್ರೂ ಲ್ಹೋಗಬೇಡ”
ಎಂದ್ಹೇಳಿ ಲೆsಳವ್ರೆs
ಏಳು ಜsನ ಲಣ್ಣದಿರು
“ಕೇಳ್ ಕೇsಳೆ ತಾssಯವ್ವ,
ಬಚ್ಲಕ್ವೊಂದ ಕಿಚ್ಚs ನುರ್ಯೆs
ಬೇಗದಿಂsದೆ ಲಡಗಿ ಮಾಡು’
ಬಚ್ಲಕ್ವೊಂದ ಕಿಚ್ಚ ನಿಟ್ಲು
ಬೇಗದಿಂದೆ ಲಡಗಿ ಮಾಡ್ತು
“ಕೇಳ್ ಕೇಳಿ ಬಾsಲಯ್ಯ,
ಜಳ್ಕನಾದ್ರೂ ಮಾಡ್ಬನ್ನಿ’
ಏಳು ಜsನ ಮಗದಿರು
ಸಾನ ಮಾಡಿ ಬಂsದವ್ರೆs
“ಕೇಳ್ ಕೇಳೇ ತಾsಯವ್ವss,
ಬೇಗದಿಂದ ಬಡ್ಸು’ ಲಂದ್ರು
ಏಳು ಎಲಿ ಮಾssಡಿತುs
“ಕೇಳ್ ಕೇಳಿ ಮಕ್ಕಳಿರs,
ಬಡುಸಿsನ್ನೆಲಿsಟ್ಟಿದೆ
ಲೂಟಕಾದ್ರೂ ಬನ್ನಿ’ಲಂತು
ಏಳು ಜsನ ಮsಗದಿರು
ಲೂಟಕಾದ್ರೂ ಲೋssಗವ್ರೆ
“ಕೇಳ್ ಕೇಳೆ ತಾsಯವ್ವs,
ಏಳು ಜsನ ಮಗsದಿರು
ಏಳು ಜsನ್ರ ನೆಡುಗ್ವೊsಂದು
ಶಣುಗಂsಗೆ ಲಂಬೂ ತಂಗಿ
ಅದ್ಕ್ ವಂದ್ ಎಡಿ ಮಾsಡಂ”ದು.
ಅಟ್ಟಂಬೂs ಮಾsತಿನ್ನೆs
ಕೇಳಿತು ತಾsಯವ್ವಿs
ಎಂಟು ಯೆಲಿ ಮಾsಡಿತುss
“ಕೇಳ್ ಕೇಳೆ ಸಣುಗಂಗೆ
ಲೂಟಕಾsದ್ರೂ ಬಾ”sಲಂದ್ರುs
ಶಣುಗಂsಗೆ ಲಂಬೂತಂಗಿs
ಲೂಟಾಕಾsದ್ರೂ ಕುಳಿತಿತು
ಏಳು ಜsನಲಣ್ಣದಿsರು
ವಂದಂದ್ ತುತ್ತ ಬಡುsಸವ್ರೆ
ತಂಗೀssಯ ಯೆಡಿ ಮೇನ್ದ
ವಂದಂದ್ ತುತ್ತ ತೆಗುದವ್ರೆ
ಲೂಟಲಾದ್ರೂ ಮಾsಡವ್ರೆss
ಏಳು ಜsನಲಣ್ಣದಿರು
ಮೊಕ್ವನಾದ್ರೂs ತೊಳುದವ್ರೆs
ಪಟ್ಟಮಂಚ್ಕೆ ಬಂsದವ್ರೆs
ಆಯಿಪ್ಪದ್ ಹssಣ್ಣಡಕೆs
ಸೋಯಿsಪ್ಪದ್ ಬೆಳಿಯೆಲೆs
ಹಾಲಿನsಲ್ಲಿ ಬೆಂsದಿದ
ತನಿಸುsಣ್ಣ ತಟ್ಟಿಕಂಡಿ
ಆಯsಕೆ ವಂsದೀಳ್ಯs
ಮೆಲಿದವ್ರೆ ಲಣ್ಣದಿರು
“ಕೆಳ್ ಕೇಳೆ ತಾsಯವ್ವs,
ದಂಡಿಗಿನ್ನೆ ಹೋಗೆಬತ್ರು
ಏಳು ಜsನ ಮಗsದಿರು
ಕೊದ್ರಿಸಾಲಿಗ್ ಹೊssಗವ್ರೆs
ಬೇಕಾsದ ಕೊದುರಿsಯ
ಹೊಡು ಕಂsಡಿ ಬಂsದವ್ರೆs
ಪಟುದ ಸಾsಲಿಗ್ಹೋsಗವ್ರೆ
ಬೇಕಾದ್ ಪಟ್ಟsಲೆಕ್ಕಂಡ್ರು
ಏಳು ಜsನ ಮsಗದಿರುs
ಕೊದುರೀssಯಲsತ್ತವ್ರೆ
ವಂದದ್ ಚಿಬುಕs ಹೊಡುದವ್ರೆ
ಯೆಯ್ದು ತಾsಸ್ನಲಾsದಿಯs
ಒಂದೇ ತಾಸಿಗ್ ತೊಳ್ದೆಲೋದ್ರುs
ಸಣುಗಂsಗೆ ಲಂಬೂ ತಂಗಿs
ಇಲ್ಲಿಲಾದ್ರು ಲೇನೆ ಮಾಡ್ತು ?
ಹಿತ್ಲಕಡಗ್ನs ಬಾಗ್ಲದಲ್ಲೀ
ಇಳಿದೇsಯ ಲ್ಹೋಗಿತುs
ಹಿತ್ಲಕಡಗನs ಬಾಗ್ಲದಲ್ಲೀ
ಚೆಂದ ಚೆಂದs ಲ್ಹೂsಗುಂಟು
ಕೊಯ್ದಿನ್ನೆ ಮುಡುದಿತುs
ಚೊಬ್ಬೀಯs ತುಂಬಿತುs
ಮಾಬಲಸ್ವಾಮಿ ಸೋರಿಗ್ ಬಂದ
ಸಣುಗಂಗೆ ಲಂಬು ತಂಗಿ
ಮನಿಗಿsನ್ನೆ ಬಂದಿತುss
ಮಾಬsಲ ಸ್ವಾsಮಿಯ
ಮನಿಗಿನ್ನೆs ಲ್ಹೋಗವ್ನೆs
“ಕೇಳು ಕೇsಳಿ ಗೌsಡಿರಂs,
ವಳ್ಳ ಸಣುಗಂಗೆ ಲಂಬೂತಂಗಿ
ಹಿತ್ಲ ಕಡಗ್ನs ಬಾಗ್ಲದಲ್ಲಿ
ವಳ್ಳs ಹೂಗೆ ಕೊವ್ಕೆ ಬರುತದ್ಯೆ
ಲೈದು ಜsನ ಗೌsಡಿರುs
ಅವಳsಕೆರಿಗಿsನ್ನೆ ಕರಕಂಡ ಬನ್ನಿ”
ಅಂದ್ಹೇಳಿ ಲೇssಳಿದ
ಅಟ್ಟಂsಬೂ ಮಾssತಿನ್ನೆ
ಕೇಳsವ್ರೆ ಗೌsಡಿರು
ಕೆರಿಗಿsನ್ನೆ ಬsಂದವ್ರೆs
ಅವಳs ಸಣುಗಂsಗೆ ಲಂಬೂ ತಂಗಿs
ಹೂsಗಿsನ್ನೆ ಕೊsಯುತಿತ್ತು
“ಕೇಳು ಕೇಳೆ ಸಣುಗಂಗೇ,
ಇದ್ಯೆಂsತಾ ಲೂsಗಂ”ದ್ರು
“ನಾಜು ಬಂsಡುನ್ಹುsಗಲ್ಲೆ”
ಕೇಳು ಕೇsಳೆ ಸಣುಗಂಗೆ,
ನಮ್ಮ ಸಂಗ್ತಿಗ್ ಬಾss”ರಂದ್ರು
ವಳ್ಳೆs ಸಣುಗಂಗೆ ಲಂಬೂ ಹೆಣ್ಣು
ನನ್ನ ಸಂತಿಗ್ ಬಾsರಂದ್ರು
ವಳs ಚಂದ್ ಚsಂದಲ್ಹೂsಗುಂಟು
ನಾವಿsನ್ನೆ ಕೊಯ್ದಿ ಕೊಡ್ತ್ರು”
ಸಣ್ಣಗಂಗಿ ಕೈಲಿ ಲೇಗೆ
ಲಟ್ಟಂsಬು ಮಾತ್ ಹೇಳ್ದ್ರು
ಸಣ್ಣಗಂಗೆ ಲಂಬೂಲ್ಹೆಣ್ಣು
ಐದು ಜನ್ರs ಗೌಡೀರ್ ಬೆನ್ಗೆ
ಕೆರಿಗಿsನ್ನೆಲ್ಹೋsಗದೆ
ಕೇಳು ಕೇsಳು ಸಣುಗಂಗೆ
ವಳ್ಳೆs ಕೆರಿಗಿsನ್ನೆಲಳುಬೇಕೇ”
ಐದು ಜsನ ಗೌಡಿರ್ ಸಂಗ್ತಿಗೆ
ಸಣುಗಂsಗೆ ಲಂಬೂ ತಂಗಿ
ಕೆರ್ಯsಲು ಲುಳುದದ್ಯೆ
ಮಿಂದಿ ಸಾನs ಮಾssಡವ್ರೆ
ಐದು ಜsನ ಗೌಡೀರು
ಬಾಚಿ ಮುಡ್ಯs ಕsಟ್ಟವ್ರೆs
“ವಳ್ಳ ಸಣುಗಂsಗೆ ಲಂಬೂ ತಂಗಿ
ಬೇಕಾದ್ ಹೂಗs ಮುಡುಕಣೆ”
ಅಂದ್ಹೇsಳಿ ಲೇಳವ್ರೆ
ಲೈದು ಜsನ ಗೌsಡಿರು
ವಂದು ಮೆಟ್ಟಲsತ್ತಿತುs
ವಂದು ತಿಂಗsಳಾಯಿತುs
ಯೆಯ್ಡು ಮೆಟ್ಟsಲ್ಹsತ್ತಿತುs
ಯೆಯ್ಡು ತಿಂಗsಳಾsಯಿತುs
“ಕೇಳ್ ಕೇsಳಿ ಗೌsಡಿರs
ನಾನೇsನು ಲತ್ತsಲಾರೆs’
“ಕೇಳ್ ಕೇಳೆ ಸಣುಗಂಗೆ,
ಲಿನ್ನೊಂದ್ ಹತ್ತು”sಲಂದ್ರು
ಮೂರು ಮೆಟ್ಟಲ್ಹsತ್ತಿತು
ಮೂರು ತಿಂಗಳಾsಗಿತು
“ಕೇಳು ಕೇsಳಿ ಗೌsಡಿರs,
ನಾಯೇsನು ಲತ್ತsಲಾರೆ’
“ಕೇಳು ಕೇsಳೆ ಸಣುಗಂಗೆ,
ಲಿನ್ನೊಂದ್ ಮೆಟ್ಲಲತ್ತು’ ಲಂದ್ರು
ನಾಕು ಮೆಟ್ಟsಲ್ಹsತ್ತಿತು
(ಹೀಗೇ ಒಂದೊಂದು ಮೆಟ್ಟಲ ಹತ್ತಿ ಒಂದೊಂದು ತಿಂಗಳ ಗರ್ಭ ಬೆಳೆಯಿತು)
ಏಳು ಮೆಟ್ಲಲsತ್ತಿತು
ವಳ್ಳ ಸಣುಗಂಗೆ ಲಂಬೂ ತಂಗಿ
ಐದು ಜsನ ಗೌssಡಿರು
ವಳ್ಳs ಸಣುಗಂಗೆ ಲಂಬೂ ತಂಗಿ
“ಕೇಳು ಕೇsಳೆ ಸಣುಗಂಗೆs,
ವಳ್ಳೆ ಮನಿಗಿsನ್ನೆ ಹೋಗು” ಲಂದ್ರು
ಸಣುಗಂsಗೆ ಲಂಬೂ ತಂಗಿ
ವಳ್ಳೆ ಮನಿಗಿsನ್ನೆ ಬಂssದಳೆ
ಮಾಳುsಗಿ ವಳsಗಿನ್ನೆ
ಹೋಗsದ್ಯೆ ಸಣುಗಂಗೆ
ಮುಂಡ ಮುಸ್ಕs ಹೊಡುದsದೆ
ಮಾಳೂಗಿ ವಳsಗಿನ್ನೆ
ನೆಡುದsದೆ ತಾssಯವ್ವಿ
“ಕೇಳು ಕೇಳೆ ಸಣುಗಂಗೆs,
ಯಂತsಕೆ ಮನುಗಿದ್ಯೆ ?”
ಯೇನ ಕೇಳಿದ್ರೂ ಹೇಳೂದೆಲ್ಲ
ಸಣ್ಣಗಂಗೆ ಲಂಬೂ ತಂಗಿ
ಯಾರು ಕೊಂದ್ರೆ ಮಗನೆ ನಿನ್ಗೆ ?
ಯಾರು ಬಯ್ದ್ರೆ ಮಗನೆ ನಿನ್ಗೆ ?”
ಅಂದ್ಹೇsಳಿ ಕೇsಳಿತು
ಲೇನೇನ್ಕೆಳ್ದ್ರೂ ಮಾತೇಯಿಲ್ಲ
ಲಟ್ಟಂಬೂs ಮಾsತಿನ್ನೆ
ಕೇಳೀssತು ತಾsಯವ್ವಿ
“ಹರಹsರ” ಲಂದದ್ಯೆ
“ರಾಮ ರಾsಮ” ಲಂsದಿತು
ದಂಡಿಗೋದ ಮಗುನಿಗೆ
ವಳ್ಳೆ ವಾಲಿನ್ನೆs ಬರುsದದೆ
“ವಳ್ಳಿ ಸಣುಗಂಗೆ ಲಂಬೂ ತಂಗಿ
ವಳ್ಳೆ ಮುಂಡ ಮುಸ್ಕ ಹೊಡುದದೆ
ಏನೇನೇಳ್ದ್ರೂ ಕೇಳುದೆಲ್ಲ
ಲೂಟಕಿನ್ನು ಬಂದಿಲ್ಲ
ಅಂದ್ಹೇಳಿಲ್ಹೇsಳಿತು
ಸಣುಗಂಗೆ ಲಂಬೂ ತಂಗಿ
ಲೂಟಕಿನ್ನು ಬರ್ವದಿಲ್ಲs
ಏಳುಜsನಲಣ್ಣದಿರು
ಬೇಗದಿಂದೆ ಬರುಬೇಕು’
ಅಟ್ಟಂಬೂ ಮಾsತ್ ಹೇಳಿ
ವಾಲಿsನ್ನೆ ಬರುದದ್ಯೆ
ಏಳು ಜsನ ಮಗದಿರು
ವಾಲಿನ್ನೆs ಸಿsಕ್ಕಿತು
“ಹರಹsರ”ಲಂದವ್ರೆs
“ರಾಮ ರಾsಮ”ಲಂದವ್ರೆs
ಏಳು ಜsನಲಣ್ಣದಿರು
ಏಳು ಜsನ ನೆಡುಗೊಂದು
ಸಣುಗಂಗೆ ಲಂಬೂ ತಂಗಿ
ಲಗ್ನಕಾದ್ರೂ ಬಂದಿತು
ದಂಡೀsಗೆ ಬಂsದಿರು
ಕೇಳು ಕೇsಳಿ ತಮ್ಮದಿರs,
ಏಳು ಜsನಲಣ್ಣದಿರು
ಏಳು ಕೊದ್ರಿಲsತ್ತವ್ರೆ
ಮೂರು ದಿವ್ಸನಲ್ಹಾದಿಯ
ವಳೆ ಯೆಯ್ಡು ದಿವ್ಸಕೆ ತೊಳ್ದೆ ಬಂದ್ರು
ಅಟ್ಟsಲು ದೂssರಿನ್ನೆ
ನೋಡsದ್ಯೆ ತಾssಯವ್ವಿs
ಮಗನೀsಗೆ ಲೇsಗಿನ್ನೆ
ತಾನೆಲಾರ್ತಿ ತಂsದದ್ಯೆ
“ಕೇಳು ಕೇsಳೆ ತಾsಯವ್ವs,
ಸಣುಗಂsಗೆ ಲಂಬೂ ತಂಗಿ
ಯೆಲ್ಲಿಗಾದ್ರೂ ಲ್ಹೋಗದ್ಯೆ ?
ನಿನ್ನಲಾರ್ತಿ ನಮ್ಗೆ ಬೇಡ
ಅಂದ್ಹೇsಳಿ ಕೊದ್ರಿ ಲಿಳ್ದಿ
ಏಳು ಜsನ ಲಣ್ಣದಿರು
ಮಾಳ್ಗೇsಗೆ ಲ್ಹೋsಗರೆ
“ಕೇಳು ಕೇಳೆ ಸಣುಗಂಗೆ
ಲೇನೆಲಾದ್ರು ಲಾssಗಿತೆ ?”
ಏನೇನ್ ಹೇಳ್ದ್ರೂ ಮಾತೆ ಇಲ್ಲ
“ಸಣುಗಂಗೆ ಲಂಬೂ ತಂಗಿ
ಕೇಳು ಕೇsಳೆ ತಾಯವ್ವ,
ಸಣುಗಂಗೆ ಲಂಬೂ ತಂಗ್ಯ
ಬೆಂಕಿಗಾದ್ರೂ ಕಳ್ಸಿದ್ಯೇನೆ ?
ನೀರಿಗಾದ್ರೂ ಕಳ್ಸಿದ್ಯೇನೆ ?”
“ಕೇಳು ಕೇಳಿ ಮಗುದೀರs,
ನಾಯೇನು ಕಳ್ಗಲಿಲ್ಲ”
“ಹಿತ್ಲಕಡಗ್ನ ಬಾಗ್ಲದಲ್ಲಿ
ಚೆಂದು ಚೆಂsದ ಹೂsಗುಂಟು
ಕೊವ್ಕಾsದ್ರು ಕಳ್ಗಿದ್ಯೇನೆ ?
ಮಾಬಲ ಸ್ವಾರಿಗ್ ಬತ್ತ”
“ಕೇಳು ಕೇsಳಿ ಮಗುದಿರs,
ವಳ್ಳೆ ಸಣುಗಂಗೆ ಲಂಬೂತಂಗಿ
ನನ್ನ ಮಾತ ಕೇಳಲೆಲ್ಲ
ಕೆರಿಗಿನ್ನೆಲ್ಹೂಗ ಕೊವ್ಕೆ
ಹೋಗೀsತು ಮಗ್ನೆ ತಂಗಿ”
ಲಂದ್ಹೇsಳಿ ಹೇssಳವ್ಳೆ…………
“ಏಳು ತಿಂಗಳಾsಗಿತು”
ಲಂದ್ಹೇsಳಿ ಹೇsಳವ್ಳೆ
ಅಟ್ಟಂsಬೂ ಮಾsತಿನ್ನೆ
ಕೇಳವ್ರೆs ಲಣ್ಣದಿರು
ಕಡ್ಬಿ ಕಾಯಂತಾ ರೊಟ್ಟಿ ಸುಡು
ಲಿಂಬಿ ಕಾಯಂತಾ ಬುತ್ತಿ ಕಟ್ಟು
ಕಡ್ಬಿ ಕಾಯಂತಾ ರೊಟ್ಟಿ ಸುಟ್ತು
ಲಿಂಬಿ ಕಾಯಂತಾ ಬುತ್ತಿ ಕಟ್ತು
“ಕೇಳು ಕೇsಳು ತಮ್ಮಯ್ಯs,
ನಿಂಗೆ ಬೇಕಾದ್ ಪಟ್ಟs ಹೆಕ್ಕಣೊ
ಬೇಕಾದ್ ಕೊದ್ರಿ ತsಕ್ಕಣೀss
ವಳ್ಳ ? ಸಣುಗಂಗೆ ಲಂಬೂ ತಂಗಿ
ರೊಂಡಡ ಲ್ಹೊಡ್ಡಿ ಬಾರೋs” ಲಂದ್ರು
ಏಳು ಜsನ ಲಣ್ಣದಿರು
ಅಟ್ಟಂsಬೂ ಮಾsತಿನ್ನೆ
ಕೇಳsವ್ನೆ ಕಿರ್ಯ ಅಣ್ಣs
ಅಣ್ಣದಿರ ಮಾsತಿನ್ನೆ
ಮೀರೋsದು ದರ್ಮವಲ್ಲ
ಬೇಕಾsದಪಟ್ವಲ್ಹೆಕ್ದs
ಬೇಕಾದ ಕೊದ್ರಿಲ್ಹೆಕ್ದ
ಆರು ಜsನ ಲಣ್ಣದಿರು
ವಳ್ಳೆ ಮಾsಳುsಗಿಗ್ ಹೋsಗವ್ರೆ
ವಳ್ಳೆ ಸಣುಗಂಗೆ ಲಂಬೂ ಹೆಣ್ಣ
ವಳ್ಳೆ ಒಳಗಿಂsದೆನೆಕ್ಕಂಡ್ ಬಂದ್ರು
ವಳ್ಳೆ ಕೊದ್ರಿಮೇನ್ ಕೊಳುಸವ್ರೆ
ಏಳು ಜssನಲಣ್ಣsದಿರು
“ಕೇಳು ಕೇಳೆ ಸಣುಗಂಗೆs,
ವಳ್ಳೆ ಏಳು ಜsನಲಣ್ಣದಿರು
ಏಳು ಜನ್ರನೆಡುಗ್ವೊಂದು
ವಳ್ಳೆ ಸಣುಗಂsಗೆ ಲಂಬೂ ತಂಗಿ
ರುಂಡನ್ಹೊಡ್ಡಿ ಬಾss”ರಂದು
ವಳ್ಳೆ ಕಿರ್ಯಲ ಅಣ್ನಕೂಡೆ
ಕೊದ್ರೀsಯ ಲತ್ತಿಕಂಡ
ವಳ್ಳೆ ಕಿರ್ಯsಲು ಲsಣ್ಣನು
ಆರು ಜsನಲಣ್ಣದಿರು
ವಳ್ಳೆ ಲ್ಯೊಡಿನ್ನೆ ಹೊsಯ್ಕಂತ್ರು
“ಕೇಳು ಕೇsಳೆ ತಾsಯವ್ವs,
ವಳ್ಳೆ ನಾವು ಏಳು ಜನ ಮಗುದಿರು
ಅಂದ್ಹೇsಳಿ ತೆಳ್ದಿಕಣೆ
ವಳ್ಳೆ ಹೆsಣಿsನ್ನೆ ಹುಟ್ಟಲಿಲ್ಲ”
ಅಂದ್ಹೇsಳಿ ಹೇsಳವ್ರೆs
ವಳ್ಳೆ ತಾಯಿಗಿನ್ನೆ ಬುದ್ದಿ ಹೇಳ್ದ್ರು
ಪಳ್ಳೆ ರುಂಡ ಹೊಡುಕ್ಹೋsದಣ್ಣ
ವಳ್ಳೆ ಲಡವಿಗಿನ್ನೆ ಲ್ಹೋssಗನೆ
“ಕೇಳು ಕೇsಳೊ ಲಣ್ಣಯ್ಯs,
ನಾಯೇsನು ಬರಲಾರೆ
ಆಸ್ರಿsನ್ನೆಲಾಗುತದ್ಯೊs
ವಳ್ಳೆ ಹಸ್ವಿsನ್ನೆ” ಲಾಗುತದ್ಯೊs
ಯಟ್ಟು ದೂರೆ ಲೋsಗುತ್ಯೋ ?
ನನ್ನ ರುಂಡ ಲಲ್ಲೆ ಹೊಡ್ಯೊs”
ಅಟ್ಟಂsಬು ಮಾssತಿನ್ನೆs
ಕೇಳsವ್ನೆ ಲssಣ್ಣಯ್ಯs
ತೊಂಡಿಕಾಯ್ನಂತ ರೊಟ್ಟಿಸುಟ್ಟ
ಲಿಂಬಿ ಕಾಯ್ನಂತ ಬುತ್ತಿ ಕಟ್ಟs
ತಂಗೀsಗೆ ಲೇನ ಮಾಡ್ದs ?
ಲಲ್ಲೇಯ ಬಿಚ್ಚಿ ಕೊಟ್ಟ
ತಂಗೀಂsi ಲೂಟ ಮಾಡ್ತು
ಕೇಳು ಕೇsಳೊ ಲssಣ್ಣಯ್ಯs,
ನನ್ನ ರುಂಡ ಹೊsಡಿಯಂತು
ಹಣುಕಿsನ್ನು ಕೂssತಿತು
ಅಣ್ಣsನು ಲೇನ ಮಾssಡ್ದs ?
ಪಟನಿsನ್ನೆ ನೆಗುದನ್ಯೇs
ಹೊಡ್ದಪಟುದ ಮೇssನಿನ್ನೆ
ಸಿಸವಾssಗಿ ಹೊಳುದಿತು
ಲಟಕಿsನ್ನೆ ಬಿssಟ್ಟಿದ
“ಕೇಳು ಕೇಳು ತಂssಗಮ್ಮs,
ಕಂಬ್ಳೀssಯ ಹಾಸಿಕೊಡ್ತೆ
ಇಲ್ಲೇssಯ ಗಾssಳಿಗೆ
ಬಗಿಲಿsನ್ನು ಮನಗು” ಯೆಂದs
ಸಣುಗಂssಗೆ ಲಂಬೂs ತಂಗಿs
ಅಣ್ಣನ ಮಾsತ ಕೇssಳವ್ಳೆs
ಅಲ್ಲೆssಯ ಮನುsಗಿsತು
ನೆದ್ರೀssಯ ಬಂssದಿತು
ಸಣುಗಂssಗೆ ಲಂಬೂs ತಂಗ್ಯs
ಮೂರುs ಸsರ್ತಿ ಕsರುsದವ್ನೆs
ಮಾತೇssನು ಲಾsಡುದೆಲ್ಲs
ನೆದುರೀssಯs ಬಂssದಿತುs
ಲಣ್ಣಿssನ್ನುs ಯೇನs ಮಾsಡ್ದs ?
ಹೀಗೇssಯs ಲೋssಗಿದ್ರೆs
ರುಂಡ ಹೊಡ್ದಿss ಬರುssಲಿಲ್ಲs
(ಲೇಳುತವ್ರೆs ಅಂssದ್ ಹೇಳಿ)
ಬೆಟ್ ಹೊssನ್ನೆ ಮರುsಕ್ ಹೋದs
ಬೆಟ್ ಹೊssನ್ನೆ ಮರುsಕಿನ್ನೆs
ಒಂದುs ಕಪ್ಪss ಲ್ಹೊಡುsದವ್ನೆs
ಲದುsರsನ್ನss ಸೊನಿತಕಂಡs
ಕೊದುರೀssಯsಲssತ್ತಿದ
ಮನಿಗಾssರು ಬಂssದವ್ನೆ
“ಕೇಳು ಕೇssಳಿ ತssಮ್ಮಯ್ಯs,
ತಂಗೀssಯs ಹೊಡ್ದಿ ಬಂದ್ಯs?”
“ತಂಗೀssಯಲ್ಹೊಡ್ದೆ ಬಂದೆ
ಲಂದ್ ಹೇssಳಿ ಹೇssಳವ್ನೆss
ಪಟವಿssನ್ನ್ ಕೊssಟ್ಟಿದ್ದs
ಲಣ್ಣssಲು ದೀssರಿಗೆs
“ಕೆಳು ಕೇssಳೊ ತssಮ್ಮಯ್ಯss,
ಸಿಟ್ಟಿಗೊಂದು ಮಾsತ ಹೇಳ್ದ್ರೆss
ಸಣುಗಂssಗೆ ಲಂಬೂ ತಂಗ್ಯss
ರೊಂಡ ಹೊಡ್ದಿ ಬಂssದ್ಯೇನೋss?
“ಹರ ಹssರ” ಲಂssದವ್ರೆs
ರಾssಮ ರಾssಮ” ಲಂssದವ್ರೆss
ಲಾಗಿssಟ್ಟss ಮರುssಗವ್ರೆss
ತಾಯಿssನು ತಂssದಿನುss
ಲೇನs ಹೇಳಿ ಮsರುsಗವ್ರೆs ?
ಸಣ್ಣುಗಂಗೆ ಲಂಬೂs ತಂಗಿs
ಲೇಗೆ ಯೇನs ಮಾssಡಿತುs ?
ಏದ್ದೀssss ಕುಂssತಿತುs
ಒಳ್ಳೆ ಸಣಗಂssಗೆ ಲಂಬೂs ತಂಗಿs
“ಹರ ಹssರ” ಲಂssದಿತು
“ರಾsಮ ರಾsಮ” ಲಂssದಿತು
ಸಣ್ಣುಗಂಗೆ ಲಂಬೂsತಂಗಿ
ಒಳ್ಳೆ ಅಣ್ಣನೀಗೆ ಕರುದಿತು
ಅಣ್ಣ ಮಾsತನಾsಡಲಿಲ್ಲs
* ಸಣ್ಣಗಂಗೆ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೭೩ ಪು. ೫೩-೭೮.
Leave A Comment