“ಹರಹssರ”ಲಂssದಿತುs
“ರಾsಮ ರಾsಮs” ಲಂssದಿತುs
ಒಳ್ಳೇ ಒಂಬತ್ತಿಂಗsಳಾssಗಿತ್ತು
“ಹರಹssರ”ಲಂssದಿತು

“ರಾsಮ ರಾsಮs”ಲಂssದಿತು
“ಆಸ್ರಲಿನ್ನೆ ಲಾsಗುತssದೆ
ಹಸುವಿನ್ನೆ ಲಾsಗುತssದೆ”
ಅಟಂsಬು ಮಾssತಿನ್ನೆs

ಹೇಳೀssತು ಸಣ್ಣs ಗಂsಗೆs
ಅಲ್ಲೊಂssದು ಜೋssಗಿಯು
ಬೇಡೂssಕೆ ಬಂssದಿsದ
“ಕೇಳು ಕೇssಳೆ ಸಣುಗಂಗೆs,

ಬಿಕ್ಸಾನಾsದ್ರೆ ನೀssಡಂ”ದ
“ಕೇಳು ಕೇssಳೆ ಜೋಗಿ ನೀನು
ನನಗೂssನು ಲಾಸ್ರಲಾssಯ್ತುs
ಕೇಳು ಕೇssಳು ಜೋಗಿ ನೀನು

ನನಗಿssನ್ನ ಲಸುವಲ್ಲೋ
ಅಟ್ಟಂssಬು ಮಾssತಿನ್ನೆs
ಕೇಳssವ್ನೆ ಜೋಗಿ ಲೀಗೆs
“ಕೆಳು ಕೇssಳು ಸಣ್ಣುಗಂಗೆs,

ನಾನೀನ್ನೆs ಹಣ್ಣs ಕೊಡುತೆs”
ಅಟ್ಟಂssಬು ಮಾssತಿನ್ನೆs
ಹೇಳssವ್ನೆs ಜೋssಗಿನ್ನುs
ಮಾಯೀssನ ಹಣ್ಣ ತೆಗದ

ಕೆತ್ತಿssನ್ನೆs ಹೊಳ ತೆಗದು
ಯೆಯ್ಡ ಹೋಳss ಕೊssಟ್ಟಿದ್ದs
ಸಣ್ಣುಗಂಗಿ ಲಂಬೂs ಹೆಣ್ಣುss
ಗೊಯ್ಟ ತೆಗದಿ ಬೇಣ್‌ದಲ್ಲಿ ವಗೆದs

ಸಣ್ಣುಗಂಗಿ ಲಂಬೂ ಹೆಣ್ಣುs
ಅದ್ವಂssದ ನೋssಡಿತುss
ಸಣ್ಣುಗಂಗಿ ಲಂಬೂ ಹೆಣ್ಣುs
ಯೆಯ್ಡsಲು ಕ್ಯಾsದುಗಿs

ಕೊಟ್ಟssವ್ನೆ ಜೋssಗಿಯು
ಸಣ್ಣುಗಂಗಿ ಲಂಬೂs ತಂಗಿs
ವಳಗಾsದ್ರೂ ಹೋssಗಿತುs
ಸಣ್ಣುಗಂಗೆ ಲಂಬೂs ಹೆಣ್ಣು

ವಳಗಿssನ್ನೆ ಹೋಗಿ ಬರುವs(ಟಕೆ)
ಜೋಗಿssಯು ಮಾಯವಾsದs
ಲಲ್ಲೆssಲ್ಲೂs ಯೆಲ್ಲವಂತುs
ಸಣ್ಣುಗಂಗಿ ಲಂಬೂs ತಂsಗಿs

ಹೊತ್ತಿನ ತೆಂಗ್ಳsಲಾssಗಿತು
ಸಣ್ಣುಗಂssಗೆ ಲಂಬೂs ತಂಗಿs
ಜನ್ನುಲಿನ್ನೆsಲಾssಗಿತುss
ಹುಡ್ಗs ಇನ್ನೆss ಹುssಟ್ಟಿದs

ಬೆಳ್ಳಿssಯ ಲ್ಹೊssಕ್ಕಳss
ಚೆನ್ನssದ ಬುಜವೆಲಿನ್ನೆs
“ಹರಹssರ”ಲಂದಳು ಗಂಗೆs
“ರಾಮ ರಾssಮ” ಲಂssದಿತುs

ತೆಂಗಳಾssದ ಹುಡ್ಗನ ನೋಡ್‌ದ್ರೆs
ಲಾರು ತೆಂಗ್ಳದ ಹುಡ್ಗನಾssದ
ಆರು ತೆಂಗ್ಳದ ಹುಡ್ಗನ ನೋಡ್‌ದ್ರೆs
ವಂದು ವರ್ಸದ ಹುಡ್ಗsನಾsದs

ವಂದು ವರ್ಸದ ಹುಡ್‌ಗ್ನ ನೋಡ್‌ದ್ರೆs
ವಳ್ಳೆ ಲೈದು ವರ್ಸಲಾssಗಿತುs
ಲೈದು ವರ್ಸನ ಲುಡ್‌ಗ್ನ ನೋಡ್‌ದ್ರೆs
ವಳ್ಳೆ ಲೆಂಟು ವರ್ಸಲಾssಗಿತು

“ಕೇಳು ಕೇssಳೆ ತಾssಯವ್ವss,
ವಳ್ಳೆ ಲಸುವಿssನ್ನೆ ಲಾssಗುತದ್ಯೆs”
“ಕೇಳುಕೇssಳು ಮಗನೆ ನೀsನುs
ವಳ್ಳೆ ಲಸ್ವಿsನ್ನೆsಲಾssದರೆ

ಏನssಲು ಕೊಡುಬೇಕುs?
ವಂದsss ಜೋಗೀss ಬಂದs
ಯೆಯ್ಡssಲು ಮಾವಿನ್‌ಕ್ಯಾದಗಿs
ಕೊಟ್ಟssಲು ಹೋssಗಿದ್ದss”

ಲಂದ್ಹೇssಳಿ ಹೇssಳಿತುs
ಸಣ್ಣುಗಂಗೆ ಲಂಬೂs ತಂಗಿs
ಮಗುನೀssಗೆ ಕೊssಟ್ಟಿತುs
ಲದುರೊಂssದ ತಿಂssದಿದ್ದs

“ಹರ ಹssರ” ಲಂssದಿತುs
“ರಾಮ ರಾssಮ” ಲಂssದಿತುs
ಜೋಗಿರ್ ಹೊತಾಕ್ದ ಮಾಯಿನ್ ಮರಕೆ
ಪಲುವಿssನ್ನೆ ಬಂssದದ್ಯೆ

ತಾಯಿssನ್ನೆಲಾssಗಿತು
ವಳ್ಳೆ ಹಣ್ಣೀssಗೆ ಬಂssದದ್ಯೆ
ಹಣ್ಣಿsನ್ನೆಲಾssಗಿತುs
ವಳ್ಳೆ ಸಣ್ಣುಗಂಗೆ ಲಂಬೂ ತಂಗಿ

ಅದ್ರssಲು ತಿಂದಿಕಂಡಿs
ಲುಳ್ದssವ್ರೆ ತೋಟದಲ್ಲಿ
“ಕೇಳು ಕೇssಳೆ ತಾssಯವ್ವss,
ವಳ್ಳೆ ಮೂರು ಕಾsರು ಹೋssತಿದೆs”

“ಕೇಳು ಕೇssಳು ಮಗುನೆ ನೀನುs
ವಳ್ಳೆ ಊರು ಕೇsರಿ ಯೆsಲ್ಲಲೊs
ಅಲ್ಲೊಂsದು ಲsಜ್ಜಿಯುs
ವಳ್ಳೆ ಬೇಡೂssತ ಬಂssದದೆ

“ಕೇಳು ಕೇssಳು ಸಣ್ಣುಗಂಗೆs,
ವಳ್ಳೆ ಬಿಕ್ಸssವ ನೀssಡವ್ವss”
“ಬಿಕ್ಸssವ ನೀssಡುಕೆs
ಬಿಕ್ಸssವೆ ಇssಲ್ಲಂ”ತುss

ನಾನು ತಿಂಬೂ ಮಾವಿನ್ ಹಣ್ಣುs
“ಕೊಡುತೆಂssದಿ ಹೇssಳಿತುs
ಮಾವೀssನಲ್ಹsಣ್ಣಿನs
ಕೊಡ್ತೀss”ದಿ ಹೇssಳಿತುs

“ಕೇಳು ಕೇಳೇ ಲsಜ್ಜವ್ವs,
ಯೆಲ್ಲಿssಗೆ ಬಂssದಿದೆ ?
ನಿನ್ನssಲು ಬಂssದಲಿs
ಲೂರು ಕೇssರಿ ಲುಂssಟೇನೇ ?”

“ಕೇಳು ಕೇssಳೆ ಸಣುಗಂಗೆs,
ವಳ್ಳೆ ಬೆಟ್ಟದಲ್ಲಿ ಸಣ್ಣ ಹಾssದಿ
ಬೆಟ್ಟದಲ್ಲಿ ಲೊಂssದಲುs
ಹುಳಲ್ ಹಾsದಿ ಲುಂssಟಲ್ಲಿ

ಅದೇ ಲ್ಹಾದಿ……………..s
ಲ್ಹೋಗು ಬೇಕೆ ಸಣುಗಂಗೆs
ಅಲ್ಲೇssಯ ಮಾssದೊಡ್ಡss
ವಳ್ಳೆ ಲರಸುಮನೆಯುಂssಟಲ್ಲೆs”

ಅಟ್ಟಂssಬು ಮಾssತಿನ್ನೆs
ಕೇಳssದೆ ಸಣುಗಂsಗೆs
ಮಾವೀsನ ಲsಣ್ಣಟ್ಟುss
ಲೊಟ್ಟುಮಾsಡಿ ಇssಟ್ಟಿದೆs

“ಕೇಳು ಕೇssಳು ಮಗನೆ ನೀsನು
ವಳ್ಳೆ ಮುಟ್ಟಿssನು ಇssಲ್ಲಲೊs
ನಿನ್ನssಲು ಮಾವದಿರುs
ವಳ್ಳೆ ನನ್ನs ತಂದಿ ಬಿಟ್ಟಿರಲ್ಲೋs

ವಂದssಲು ಕಂಬ್ಳಿ ಹಾsಸಿs
ಮನಗ್ಸಿನ್ನೆ ಹೋssಗಿದ್ದs
ಅದರಾssಗೆ ಲೊಂದು ತುಂಡುs
ಕೊಯ್ದಿssನ್ನೆಕೊಡ್ತೆ”ನಂತುs

ಕುಂಬ್ಳೀssಯ ತssಕ್ಕಂಡ
ಮಾಯಿನ್ ಹಣ್ಣ ತಟ್ಟಿಕಂಡs
ಕಟ್ಟssಲು ಕಂಡೀssದs
ವಳ್ಳೆ ತಾಯವ್ವss ಕೇssಳಿದ

“ಕೇಳು ಕೇssಳು ಮಗುನೆ ನೀನುs
ಅಲ್ಲಿ ಹುಲಿ ಕೈssಡಿ ಬಂssದರೆs
ಹೆದುರssಲು ಬೇಡs” ಲಂತುs
ವಳ್ಳೆ ಸಣುಗಂssಗೆ ಲಂಬೂ ತಂಗಿs

ಮಾವಿನ್ಹಣ್ಣsಲ್ಹೊತ್ತಿಕಂಡಿs
ಅರಸುಮನ್ಗೆ ಹೋssಗವ್ನೆs
“ಕೇಳು ಕೇssಳಿ ಅಮ್ಮನವ್ರೆs,
ಮಾವಿನ್ಹಣ್ಣು ಬೇssಕೇನುs?”

ಐದು ಜsನ ಗೌssಡಿರು
ಬತ್ತಲಿನ್ನೆ ಮೆರಿತಿರುs
ಮಾಳುಗಿಗಿನ್ನೆ ಹೋssಗಿರುs
“ಕೇಳು ಕೇssಳಿ ಮಾsಬಲಸ್ವಾಮಿs,

ಅಲ್ಲೊಂssದು ಲುಡ್ಗಲಿನ್ನೆs
ವಳ್ಳೆ ಮಾವಿನ್ಹಣ್ಣು ತಂssದನೆ”
“ಕೇಳಿ ಕೇssಳಿ ಗೌssಡಿರs,
ತಕ್ಕಂಡಾsರು ಬssನ್ನಿರಿs”

ಐದು ಜssನ ಗೌssಡಿರು
ವಳ್ಳೆ ಲ್ಹುಡ್ಗssನ ಲೇssಗಿನ್ನುs
ಕರುಕಂಡಾರೂ ಬಂssದವ್ರೆs
“ಕೇಳುಕೇsಳೊ ತssಮ್ಮಯ್ಯs,

ಮಾವೀssನಲ್ಹssಣ್ಣಿಗೆs
ಯೆಟ್ಟ ದುಡ್ಡs ಕೊಡಬೇಕೋs?”
“ಕೇಳು ಕೇssಳಿ ಲಮ್ಮದಿsರೇs,
ನನ್ಗುಲೇನು ಗೊssತ್ತಿಲ್ಲs

ನೀವssಲು ಕೊಟ್ಟsದ
ತಕ್ಕಂssಡಿ ಬಿಡ್ತೆನಂದs
ಐದು ಜssನ ಗೌssಡಿರುs
ಅಟ್ಟssಕ್ಕೆ ಹೋssಗವ್ರೆs

“ಕೇಳಿ ಕೇssಳಿ ಮಾsಬಲಸ್ವಾಮೀs,
ವಳ್ಳೆ ಹುಡಿssನ್ನೆ ಬಂssದವ್ನೆs
ಮಾವಿನ್ಹಣ್ಣs ತಂದವನ್ಯೆs
ದರವ ಯೇನು ಹೇಳುದಿಲ್ಲs

ನೀವssಲು ಕೊssಟ್ಟಿದ್ದss
ತಕ್ಕಂssಡಿ ಹೋssತಂದss
ವಂದssಲು ಕೊಳುಗಕ್ಕಿss
ಅಳುದssಲು ಕೊಡಿರಂದss

“ಕೇಳು ಕೇsಳಿ ಗೌssಡಿರs,
ಲ್ಹುಡ್ಗssನ ಕೈಲೇssಗs
ನಿನ್ನ ತಂsದಿಯ ಕರುಕಂಡಿs
ನಾಳಿssಕೆ ಬಾss”ರಂದ್ರುs

ವಂದssಲು ಕೊಳುಗಕ್ಕಿss
ಕೊಟ್ಟವ್ರೆ ಯೇssಗಿನ್ನೆs
ಕಂಬ್ಳೀssಲಿ ಕಟ್ಟಕಂಡs
ಮನೆಗಿsನ್ನೆ ಬಂದೀssದs

“ಕೇಳು ಕೇssಳೆ ತಾಯವ್ವss,
ವಂದ್ ಕೊಳ್ಗಕ್ಕಿ ಕೊಟ್ಟsರೆs
ಕೇಳು ಕೇssಳೆ ತಾssಯವ್ವss,
ವಳ್ಳೆ ನಾಳೀssಗೆ ನಿನ್ನssಲುs

ತಂದಿನಾsರು ಕsರುಕಂಡಿs
ಬಾsರಂsದಿ ಹೇssಳವ್ರೆss
ಕೇಳು ಕೇssಳೆ ತಾssಯವ್ವss
ಲಿಂದೀssನಮಾಯಿನ್ ಹೆಣ್ಣss

ಹಾಗೇssಯಲಿಡsಬೇಕುs
ಲನ್ನ ಮಾsಡ್ಕಂಡ್ ಉಂsಬನೆs”
ಸಣ್ಣಗಂಗೆ ಲಂಬೂs ತಂಗಿs
ವಂದುs ತಿದ್ದsಕ್ಕಿ ಹೊssದಿತು

ಅನ್ನ ಇನ್ನೆ ಮಾಡುಕಂಡಿ
ಉಂsಡವ್ರೆ ಯೇssಗಿನ್ನೆs
ಉಂಡಿ ಆರೂs ಲಾssಗಿತುss
“ಕೇಳು ಕೇssಳು ತಾssಯವ್ವss,

ಬೆಳುಗಾssಗೆ ಲೆsದ್ದವ್ರುs
ಹೋಗ್ವssನೆ ತಾssಯವ್ವss”
“ಹರಹssರ” ಲಂssದಿತುs
“ರಾsಮ ರಾssಮs” ಲಂssದಿತುs

ಕೇಳು ಕೇssಳು ಮಗನೆ ನೀನುs
ಯೆಟ್ಟಲು ದೊಡ್ಡ್ ಮನೆಯೊ
ಉಡೂssಕೆ ಇssಲ್ಲಂತು
“ಹರುಕsಲು ವಸ್ತsಲ್ಲೊs”

ಕೆಳು ಕೇssಳೆ ತಾssಯವ್ವs,
ಬೇಣದಾssಗೆ ನಿಲ್ಲಲಕ್ಕು”
ಅವ್ವೀssನು ಮಗನುಲೀsಗೆs
ವಳ್ಳೆ ಕಂಬ್ಳೀssಲಿ ಕಟ್ಟಿಕಂಡುs

ನೆಗದೀssತು ಮಾsವಿನ್ಹಣ್ಣs
ಅವ್ವ-ಮಗ ನೆಡುದವ್ರೆs
ಅರಸುಮನಿಗೋssಗವ್ರೆs
ಲಲ್ಲೇssಯ ಲಿsಟ್ಟಿತುs

“ಕೇಳು ಕೇಳಿ ಅssಮ್ಮೌರೆs,
ವಳ್ಳೆ ಮಾವಿನ್ಹಣ್ಣು ಬೇssಕೇನು ?
ಐದು ಜssನ ಗೌssಡಿರುs
ವಳ್ಳೆ ಲಟ್ಟssಕ್ಕೆ ಹೋssಗವ್ರೆs

ಹುಡುಗsನು ಮಾವಿನ್ಹಣ್ಣುs
ತಕ್ಕಂsಡೆ ಬಂssದಿಡs”
“ಕೇಳು ಕೇssಳಿ ಗೌssಡಿರುs,
ವಳ್ಳೆ ಲವ್ನ ತಾsಯಿ ಬಂssದದ್ಯೆ?”

ಐದು ಜsನ ಗೌssಡಿರುs
ಬಂದssದೆ” ಲಂssದಿರುs
“ಕೆಳು ಕೇssಳಿ ಗೌssಡಿರs,
ಲದುರಾssಲು ಕರ‍್ಕಂಡು ಬನ್ನಿs”

ಐದು ಜssನ ಗೌssಡಿರು
ವಳ್ಳೆ ಬೇಣ ಕಿನ್ನೆ ನೆsಡುದವ್ರೆs
“ಕೇಳು ಕೇssಳೆ ತಂಗಿ ನೀನುs
ವಳ್ಳೆ ನಮ್ಮ ಮನೆಗೆ ಬಾss” ರಂದ್ರುs

“ಕೆಳು ಕೇssಳಿ ಲಕssದಿರs,
ನನ್ನ ವಸ್ತ್ರವೆಲ್ಲ ಹರುಕೆಲೆs
ನಿಮ್ಮssಲು ಮನಿಯಲ್ಲಿs
ಲೆಟ್ಟssಲು ಜನವುಂಟೆs?”

“ಕೆಳ್ ಕೇssಳೆ ತಂಗಿ ನೀsನುs
ಯಾರಾssರು ಇssಲ್ಲಂ” ದ್ರುs
ಯೇನೇನ್ ಹೇಳ್‌ದ್ರೂs ಬರುದಿಲ್ಲs
ಮನಿಗಿsನ್ನೆ ಬಂssದನೆ

ಅಟ್ಟಕ್ಕಿನ್ನೆs ಲ್ಹೋssಗವ್ರೆs
“ಕೆಳು ಕೇssಳಿ ಮಾssಬಲ ಸ್ವಾಮೀs’
ಯೇನೇನ್ ಹೇಳ್‌ದ್ರೂs ಬರ‍್ವದಿಲ್ಲs
“ಹರುಕssಲು ವಸ್ತ್ರ” ವಂತುss”

ಅಟ್ಟಂssಬು ಮಾssತಿನ್ನೆs
ಕೇಳssವ್ನೆ ಮಾಬಲಸ್ವಾಮೀs
“ಐದುs ಜssನ ಗೌಡಿರ್ ಹೋಗಿs
ಕರುಕಂsಡಿ ಬನ್ನಿ” ಅಂದ್ರುs

ಲೈದು ಜssನ ಗೌssಡಿರುs
ಕೆಳುಗಿಳಿದಿ ಬಂssದವ್ರೆs
ಲೈದು ಜssನ ಗೌssಡಿರುs
“ಕೆಳು ಕೇssಳೆ ತಂಗಿ ನೀನುs

ವಳ್ಳೆ ವಸ್ತ್ರವಿನ್ನೆ ಕೊಡುತೇವೆ
ಕರುಕಂಡಿ ಬಂssದವ್ರೆs
ವಳ್ಳೆ ಮೆತ್ತಕಿನ್ನೆ ಹೋssಗವ್ರೆs
“ಕೆಳು ಕೇssಳಿ ಮಾsಬಲಸ್ವಾಮಿs

ವಳ್ಳೆ ಕರುಕಂsಡಿ ಬಂssದವ್ರೆs”
“ಕೆಳು ಕೇssಳಿ ಗೌssಡಿರೆs”
ವಳ್ಳೆ ಬಚ್ಲಕಿನ್ನೆ ಕರ್‌ಕಂಡೋಗಿs
ಸಾನ ಇನ್ನೆ ಮಾಡಿಬನ್ನಿs

ಲೈದು ಜssನ ಗೌssಡಿರುs
ವಳ್ಳ ಕರುಕಂsಡಿ ಹೋssಗವ್ರೆs
ಸಾsನ ಇನ್ನೆ ಮಾssಡಿರುs
ಲೈದು ಜssನ ಗೌssಡಿರುs

ಅಟ್ಟಕಿನ್ನೆss ಲ್ಹೋssಗರ‍್ಯೆ
ಲೈದುs ಜssನs ಗೌssಡಿರುs
“ಕೇಳು ಕೇssಳಿ ಮಾsಬಲಸ್ವಾಮಿs,
ಸಾನ ಇನ್ನೆಲಾssಗಿತುs”

ಬೇಕಾssದ ಪಟ್ಟಿ ಕೊಟ್ಟs
ಬೇಕಾssದ ಕಣವೆ ಕೊಟ್ಟss
ಐದು ಜssನ ಗೌssಡಿರs
ಕರುಕಂಡಿ ಬನ್ನಿಲಿಲ್ಲಿs

ಐದು ಜssನ ಗೌsಡಿರುs
ವಳ್ಳ ಲಟ್ಟಕ್ಕೆ ಕರಕಂಡ್ ಹೋದ್ರುs
ಪಟ್ಟೆ ಮಂಚ್ಕೆ ಕುssಳ್ಸವ್ರೆs
ವಳ್ಳೆ ಐದು ಜssನ ಗೌssಡಿರುs

ಕೆಳುಗಿssನ್ನೆ ಬಂssದವ್ರೆs
ಲೈದು ಜssನ ಗೌssಡಿರು
ಮಾsಬಲ ಸ್ವಾssಮಿಯ
“ಕೇಳು ಕೇಳೆ ಸಣ್ಣಗಂಗೆs”

ತಲ್ಯನಾದ್ರೂ ನೋssಡಂ”ದs
ಸಣುಗಂssಗೆ ಲಂಬೂ ತಂಗಿs
ತಲ್ಯsನಾದ್ರೂ ನೋssಡಿತು
“ಕಣ್ಣೀssರ ಬಿssಟ್ಟಿತುs”

“ಕೆಳು ಕೇssಳೆ ಸಣ್ಣುಗಂsಗೆs,
ಲ್ಯೆಂತಕ್ಕೆs ತೀsಡುತೆss?”
“ಕೇಳು ಕೇssಳಿ ಸ್ವಾಮಿ ನೀವುs
ಲಪ್ನ ಮನ್ಯss ಹಂಬಲಾಯ್ತುs

ಅಪ್ಪssನ ಮನಿಗ್ಹೋssಗಿs
ಲಿಂದೇssಯ ಬರುತೇನೆs
“ಬೇಕಾssದ ಹೋಳ್ಗಿ ಮಾsಡುs
ಬೇಕಾssದ ಕಜ್ಜಾಯ ಮಾsಡುs”

ಸಣ್ಣುಗಂsಗೆ ಲಂಬೂ ಹೆಣ್ಣುs
ಬೇಕಾssದ ಹೋಳ್ಗಿ ಸುಟ್ತುs
ಬೇಕಾssದ ಕಜ್ಜಯ ಮಾಡ್ತುs
ಸಣ್ಣುಗಂಗೆ ಲಂಬೂ ತಂಗಿs

“ಕೆಳು ಕೇssಳಿ ಸ್ವಾಮಿ ನೀವುs
ನನ್ನss ಬೆನ್ನಿಗ್ ಬರುs ಬೇಕುs”
“ನಿನ್ನs ಬೆನ್ನಿಗ್ ಬರುವsಕೆs
ನಿನ್ನssಲು ಲಣ್ಣದಿರುss

ಸಮನssವ ಮಾssಡಿದ್ರೆ
ನಿನ್ನssಲು ಮಾತೆ ಲಾಡ್‌ಸ್‌ದ್ರೆs
ನಾs ಇsನ್ನೆs ಬರುತೆನಂದs
ವಳ್ಳ ಮಾಬssಲ ಸ್ವಾssಮಿಯುss

ಬೇಕsಟ್ಟ ದುಡ್ಡ ಕೊಟ್ಟs
“ನಿನ್ನಣ್ಣದಿರ‍್ಗೆ ಕೊಟ್ಟಿ ಬಾsರೆs
ನಿನ್ನ ತಾಯಿsಗೆs ಕೊಟ್ಟಿ ಬಾsರೆs
ಸಮುನಾssವ ಮಾssಡಿದ್ರೆs

ಲಲ್ಲೆ ಬಾಳಿಸಂದಿಗೆ ನಿಲ್ತೆ ನಾssನುss”
ಅಟ್ಟಂssಬೂ ಮಾssತಿನ್ನೆs
ಕೇಳಿssತು ಸಣುಗಂಗೆs
ನುಗಲ ಉಂಡಿ ಕೊssಟ್ಟಿದs

ಲದ್ರಿssನ್ನೆ ತಟ್ಟಿಕಂಡಿs
ಮಗ್ನಲಿನ್ನೆ ನೆssಕ್ಕಂಡ್ತುs
ನುಗ್ಲುಂssಡೆ ತಟ್ಟಿಕಂಡಿs
ಕೆಳುsಗಿಳುದಿs ಬಂssದಿತುs

ವಳ್ಳ ಸಣ್ಣಗಂssಗೆ ಲಂಬೂ ತಂಗಿs
ಏಳು ಜssನ ಲಣ್ಣsದಿರು
ಲಟ್ಟುದೂsರ ನೋssಡರೆs
ಓಡೋssಡಿ ಬಂssದರೆs

ಲಳಿಯssನ ಕsರುಕಂಡು
“ಕೇಳು ಕೇssಳೆ ತಂssಗಮ್ಮs
ಯೆಲ್ಲಿಂssದೆ ಬಂssದಿದೆs?”
ಅಟ್ಟಂssಬು ಮಾssತಿನ್ನೆs

ಹೇಳsವ್ರೆ ಲಣ್ಣದಿsರುs
ತಂಗೀssಯಲ್ಹಿಡುsಕಂಡಿs
ವಳ್ಳ ದುಕ್ಕ ಇನ್ನೆ ಮಾಡssವ್ರೆs
“ಕೇಳು ಕೇssಳು ಲssಣ್ಣಯ್ಯs

ವಳ್ಳ ಸುಕದssಲ್ಲಿ ಇದ್ದೆ ನಾನುs”
“ಕೇಳು ಕೇssಳೆ
ಯೆಲ್ಲಿssನ್ನೆ ಲೀssದ್ದಿದ್ದೆ ?”
“ಕೇಳು ಕೇssಳೊಲssಣ್ಣಯ್ಯs,

ಮಾಬ್ಲ ಸ್ವಾಮಿಲಿದ್ದಿ ಬಂssದಿದೆ”
“ಕೇಳು ಕೇssಳೆ ತಂssಗಮ್ಮs,
ಬಾsವ್ಯೇssನು ಬsರುಲಿಲ್ವೆss?”
“ಕೇಳು ಕೇssಳೊ ಲsssಣ್ಣಯ್ಯss

ಸಂಜೀssಗೆ ಬರ‍್ತೆ” ನಂದ್ರುss
ಮಬಾssಲಸ್ವಾssಮಿಯುss
ವಳ್ಳ ಸಂಜೀssಗೆ ಬಂssದಿದ್ದs
ಏಳು ಜssನ ಬಾವsದಿರುs

ವಳ್ಳ ಬಾವ ಇನ್ನೆs ಬಂssದಿದ್ದs
ಉಪಚಾssರ ಮಾssಡರೆs
ವಳ್ಳ ಕೇಳು ಕೇssಳು ಬಾssವಯ್ಯs,
ಊಟಕಾsದ್ರು ಲೇಳು” ಲಂದ್ರುs

ಲೇಳು ಜssನ ನೆಂssಟರು
ಊಟಕಿನ್ನೆ ಲೋssಗಿದs
ಊಟನಾsದ್ರು ಮಾsಡಿದs
ಊಟವಾssದ್ರುss ಲಾssಗಿತುs

ಮೊಕುವಿsನ್ನೆ ತೊಳುದಿsದs
ಪಟ್ಟಿ ಮಂಚ್ಕೆ ಬಂssದಿದs
ಮಬಾssಲ ಸ್ವಾssಮಿಯುss
ಆಯೀssಪ್ಪ ಲಣ್ಣಡುಕೇss

ಸೋಯೀssದ್ದ ಬೆಳಿಯೆಲೆs
ಹಾಲಿನssಲ್ಲಿ ಬೆಂssದಿದs
ತೆನಿಸುಣ್ಣ ತಟ್ಟಿಕಂಡಿs
ಕವ್ಳ ಇನ್ನೆ ಲಾssಕವ್ನೆss

ಮಾಬssಲ ಸ್ವಾssಮಿಯು
ಮನಿಗಿನ್ನೆ ನೆಡುದಿದs
ಸಣುಗಂssಗೆ ಲಂಬೂ ತಂಗಿs
“ಕೆಳು ಕೇssಳಿ ಲಣ್ಣದಿssರs,

ಮನಿಗಿssನ್ನೆಲ್ಹೋಗುತೆನೆ”
ಲಂದ್ಹೇssಳಿ ಹೇssಳಿತುs
“ಕೇಳು ಕೇssಳೆ ತಂssಗಮ್ಮs
ಬೇಕಾssದ ಕಜ್ಜಯ ಮಾಡೆs”

ಬೇಕಾssದ ಕಜ್ಜಯ ಮಾಡ್ತುss
ಸಣ್ಣುಗಂssಗೆ ಲಂಬೂ ತಂಗಿs
ಮುಟ್ಟಿನಾsದ್ರು ತುಂssಬಿತುs
ಸಣ್ಣು ಗಂಗೆ ಲಂಬೂ ತಂಗಿs

ಏಳು ಜssನ ಲಣ್ಣದಿರುs
ಬೇಕssಟ್ಟ ದುಡ್ಡ ಕೊಟ್ತು
ಮಾಬssಲ ಸ್ವಾಮಿ ಕೈಲಿs
“ನುಗ್ಲನಾದ್ರು ಬಿಡು” ಲಂತು

ಮಾಬssಲ ಸ್ವಾssಮಿಯ
ಉಂಡೆನಾರು ಬಿssಟ್ಟಿದs
ನುಗ್ಲ ಹತ್ತಿ ನೆಡುದಿತು
ಸಣ್ಣುಗಂಗೆ ಲಂಬೂ ತಂಗಿ

(* ಪ್ರತಿ ಸಾಲಿಗೂ ತಂದರನಾನಾss ಎಂದು ಸೇರಿಸಿಕೊಳ್ಳಬೇಕು)*      ಸಣ್ಣಗಂಗೆ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೭೩ ಪು. ೫೩-೭೮.