ಶೌಮೂಗೇ ಶಕಗಡಬಾss ರಿತ್ಯೊಳ್ಳs ತೆಳ್ಳವ್ವೂsss
ಜ್ಯೋತೀs ಮಾsಣಿಕುದಾsss ಹೊರಗಡಬಾss || ಯಡನಡುಗೇss
ಸೋತೀss ಬಿದ್ದದ್ಯೇsss ಇಡ್ಲಗೀsss ||೩೯೩||

ಹಾದೀಲ್ ಹೋಗ್ವೊವನೇs, ಹಾಳಿಕೊಟ್ಟಿ ಮೊಕದವ್ನೇss,
ಕಾಕೀಗ್ ವಂದು ಕssಲ್ಲೂsss ಹೊಡದ್ಹೋಗುss || ಬಡ್ಡೀಮಗನೇ,
ನಿನ್ ಕಂಡೀ ಬರ್ವಂದ್ರೇsss ಕೈಸವನಾsss ||೩೯೪||

ಕಾಕೀಗಿಮದು ಕರಿಯವ್ನೇss, ಚೂಜೀsಗಿಂದು ಸಪುರವ್ನೇss,
ಆಜ್ಜsssಜ್ಜೀಗಿಂssದೂsss ಹೆರಿಯವ್ನೇss, || ಬಡ್ಡssಮಗನಾs
ಕರಡೂs ಬರ್ವಂದ್ರೂsss ಕೈಸವನಾsss ||೩೯೫||

ಅಂಬೀsರಾs ಮಗುವೇss, ಆಶೀಗ್ಯೇನಾs ತಂದೀವೇss?
ಯೇsನೆಲ್ಲಾs ವಡತೀss, ಬರಿಕಯ್ಯೀss || ನಮ್ಮನಿಯಾs
ಬೀಸೂಕ್ಹೋದ ತsಮ್ಮssss ಬರಲೆಲ್ಲಾssss ||೩೯೬||

ಮಾತಾಡೂ ಮಲ್ಲುಗೀsss ಶೀತಾಳಿ ಶಿರಿಗಂದಾsss
ಶೀತಾಳಿವರ್ಣಕದಾss ಚಿಲುಮೀಯೇss || (ಮೀ) ಬಾಯ್ಲಿಕಚ್‌ಕಂಡೀsss
ಮಾತಾಡುತೇs ಹೊಗ್ಯssss ಬಿಡವsನೇsss ||೩೯೭||

ಬಂಗೀ ಶೇವವ್ನಾssss ಬಂಗಾsವಾ ನೋಡಿರೀsss
ತೆಂಗೀsನಾ ಕಾಯೀsss ಗುಡುಗೂಡೀsss|| ಬಾಯ್‌ಕಚ್‌ಕಂಡೀsss
ಕೆಂಡಕೇಳು ಮನ್ಯಾssss ತಿರಗೂsವssss ||೩೯೮||