(ಇಲ್ಲಿಯ ಸಂಖ್ಯೆಗಳು ಆಶ್ವಾಸ ಮತ್ತು ಪದ್ಯವನ್ನು ಸೂಚಿಸುತ್ತವೆ)
ಅ
ಅಂಗಚಿತ್ತ – ಉಡುಗೊರೆ ೨ – ೮೬ವ
ಅಂಗರಾಗ – ಲೇಪನದ್ರವ್ಯ ೬ – ೧೦ವ
ಅಂಚೆವಿಂಡು – ಹಂಸಪಕ್ಷಿಗಳ ಗುಂಪು ೧ – ೫೮ವ
ಅಂಭೋದಕಾಲ – ಮಳೆಗಾಲ ೯ – ೧೩
ಅಂಶುಮಾಲಿ – ಸೂರ್ಯ ೫ – ೩೨
ಅಂಸ – ಹೆಗಲು ೬ – ೭೩
ಅಕ್ಷವಲಯ – ಜಪಸರ ೪ – ೫೧
ಅಕ್ಷಾವಳಿ – ಜಪಸರ ೧ – ೧೯೮
ಅಗ – ಬೆಟ್ಟ ೪ – ೧೬
ಅಗ್ಗಲಿಸು – ಹೆಚ್ಚು, ಅತಿಶಯವಾಗು ೨ – ೧೯
ಅಗಿ – ಭಯಪಡು ೫ – ೧೦೧
ಅಗುರು – ಮೇಲಕ್ಕೇಳು, ಹೆಚ್ಚಾಗು ೫ – ೧೧೫
ಅಗುರ್ವು – ಅತಿಶಯ ೨ – ೬೫
ಅಗುರ್ವು – ಭಯ ೧ – ೧೩೮
ಅಗುಳ್ – ಅಗೆ (ನೆಲವನ್ನು) ೧ – ೧೭೪
ಅಗೆವೋಲು – ಮೊಳಕೆಹೊರಡು ೨ – ೮೩
ಅಗ್ನಿಶೌಚವಸ್ತ್ರ – ಉಬ್ಬೆಗೆ ಹಾಕಿದ ಬಟ್ಟೆ ೮ – ೪೧
ಅಘಮರ್ಷಣ – ಸ್ನಾನಮಾಡುವಾಗ ಜಪಿಸುವ ಮಂತ್ರ ೧ – ೧೭೭ವ
ಅಚ್ಚರಸಿ – ಅಪ್ಸರಸ್ತ್ರೀ ೫ – ೧
ಅಡಕಿಲ್ಗೊಳ್ – ಒಂದರ ಮೇಲೆ ಒಂದು ಇರು ೬ – ೧೦೪
ಅಡಪ – ಎಲೆಅಡಕೆ ಚೀಲ ; ಸಂಚಿ ೨ – ೩೪
ಅಡ್ಡೆ ಸು – ಅಡ್ಡವಾಗು ೬ – ೧೦೨
ಅಣ್ಪು – ಲೇಪನ ೧ – ೨೬
ಅದವೞಲ್ – ಸಂತಾಪ, ವ್ಯಥೆ ೫ – ೧೭೨
ಅದೃಷ್ಟಪೂರ್ವ – ಹಿಂದೆ ಕಂಡರಿಯದ ೪ – ೨ವ
ಅಗಮ – ಪಡೆಯುವಿಕೆ, ಪ್ರಾಪ್ತಿ ೨ – ೧೧೮
ಅವಾಸಿಸು – ವಾಸನೆ ಕಟ್ಟು ೭ – ೨೧ವ
ಅಧ್ವಗ – ದಾರಿಗ, ಪ್ರಯಾಣಿಕ ೮ – ೩ರ
ಅನಪತ್ಯ – ಮಕ್ಕಳಿಲ್ಲದವ ೫ – ೯
ಅನಿಮಿಷ – ರೆಪ್ಪೆ ಇಲ್ಲದಿರುವುದು, ಮೀನು ೨ – ೯
ಅನುಕಂಪಮಾನ – ನಡುಗುತ್ತಿರುವ, ದಯೆಯಿಂದ ಕೂಡಿರುವ ೭ – ೪೩
ಅನುಗೆಯ್ – ಸಿದ್ಧವಾಗು ೪ – ೬೮
ಅನುರೋಧ – ನಿರ್ಬಂಧ ೬ – ೧೧೪ವ
ಅನುವಿಸು – ಬಯಸು ೭ – ೫೫ ” – ಮಾತನ್ನು ಕೇಳುವಂತೆ ಮಾಡು; ಅನುನಯಮಾಡು ೫ – ೨೦೭
ಅನುಶಾಸಿಸು – ಉಪದೇಶಮಾಡು ೬ – ೯೨
ಅನ್ನೆಯ – ಅನ್ಯಾಯ ೬ – ೯೨
ಅನ್ವಯ – ವಂಶ ; ಕುಲ ೬ – ೧
ಅಪತ್ಯ – ಮಗ ೧ – ೧೬೬
ಅಪನೀತ – ಕಳಚಲ್ಪಟ್ಟ ೮ – ೧೨೦
ಅಪರಾಂಭೋದಿ – ಪಶ್ಚಿಮಸಮುದ್ರ ೫ – ೨೦೮
ಅಪವರ್ಗ – ಕಡೆಗಣ್ಣು ೬ – ೨೦
ಅಬ್ಬ – ತಾವರೆ, ಕಮಲ; ಚಂದ್ರ ೫ – ೨
ಅಬ್ಬೆ – ತಾಯಿ, ಅಮ್ಮ ೧೦ – ೩೬
ಅಬ್ರಹ್ಮಣ್ಯ – ಬ್ರಾಹ್ಮಣರು ಆಪತ್ಕಾಲದಲ್ಲಿ ಮೊರೆಯಿಡುವ ಒಂದು ಶಬ್ದ, ಅನ್ಯಾಯ ೫ – ೧೬೯
ಅಭಿಸಾರಿಕೆ – ಕಾಮಪರವಶಳಾಗಿ ನಲ್ಲನು ಸೂಚಿಸುವ ಸಂಕೇತಸ್ಥಳಕ್ಕೆ ಹೋಗುತ್ತಿರುವ ಹೆಂಗಸು ೧ – ೧೩
ಅಭ್ರಕ – ಮೋಡ ೪ – ೩೭
ಅಭ್ರಕ – ಕಾಗೆಬಂಗಾರ ೪ – ೪೫
ಅಭ್ರಗಂಗೆ – ದೇವಗಂಗಾನದಿ ೧ – ೧೯೪
ಅಬ್ಬಾಕರ – ತಾವರೆಗೊಳ ೧ – ೧೨೨
ಅಭವ – ಶಿವ ; ಪರಮೇಶ್ವರ ೮ – ೧೧೫
ಅಭಿಚಾರ – ಮಾಟ ೩ – ೧೦೩
ಅಭಿಜಾತ – ಸತ್ಕುಲಪ್ರಸೂತ ೩ – ೮೩
ಅಭಿರೂಪ – ಪಂಡಿತ, ನಿಷ್ಣಾತ ೧ – ೫೦
ಅಭಿಷವ – ಸ್ನಾನ ೨ – ೨೬
ಅಭ್ಯರ್ಹಿತ – ಹಿರಿಯ, ಪೂಜ್ಯ ೬ – ೧೬೬ವ
ಅಭ್ಯವಹಾರ – ಆಹಾರ ೧ – ೬೮ವ
ಅಭ್ಯಾಗತ – ಮನೆಗೆ ಬಂದು ಸತ್ಕಾರವನ್ನು ಸ್ವೀಕರಿಸುವವನು ; ಅತಿಥಿ ೪ – ೬೩
ಅಭಿಷವ – ಸ್ನಾನ ೪ – ೬೨
ಅಮರನದಿ – ಗಂಗಾನದಿ ೧ – ೧
ಅಮರ್ಚುಸೇರಿಸು ೧ – ೧೩೮
ಅಮರ್ದು – ಅಮೃತ ೧ – ೩೫
ಅಮೃತಾಸಾರ – ಅಮೃತದ ಜಡಿಮಳೆ ೯ – ೯೧
ಅರಮೆ – ವಿಶೇಷವಾಗಿ ೮ – ೧೩೯
ಅರಸಂಚೆ – ರಾಜಹಂಸ ೫ – ೧೪
ಅರೆವಾನಿಸಿಕೆ – ಅರ್ಧಮನುಷ್ಯತ್ವ ೧ – ೧೦
ಅರ್ತಿ – ಆಸೆ ೫ – ೨೮
ಅಲಂಪು – ಪ್ರೀತಿ ೫ – ೧೬೩
ಅಲಕ್ತಕ – ಅರಗಿನ ರಸ ೧ – ೮೩
ಅಲತಗೆ – ಅರಗಿನ ರಸ, ಅಲಕ್ತಕ ೯ – ೧೧ವ
ಅಲರ್ – ಅರಳು, ವಿಕಸಿತವಾಗು ೨ – ೮೪
ಅಲರ್ಗಣೆ – ಹೂವಿನ ಬಾಣ ೧೦ – ೫೫
ಅಲರ್ಗೊಂಚಲ್ – ಹೂವಿನ ಗೊಂಚಲು ೫ – ೫೧
ಅಲುಂಬು – ಒಗೆದು ಮಡಿಮಾಡು ೫ – ೨೭
ಅಲೆ – ಪೀಡಿಸು ೫ – ೩೩ವ
ಅಲೆಪ – ಬೀಸುವಿಕೆ ೨ – ೮೭
ಅಲೆಪ – ಚಲನೆ ೧ – ೮೩
ಅವಗಾಹನ – ಸ್ನಾನ ೧ – ೧೫
ಅವಚೂಲ – ಬಾವುಟದ ತುದಿಯಿಂದ ಕೆಳಕ್ಕೆ ಜೋಡಾಡುವ ಕುಚ್ಚು, ಅಲಂಕಾರಕ್ಕಾಗಿ ಕಟ್ಟಿದ ಕುಚ್ಚು ೮ – ೨
ಅವಜ್ಞೆ- ತಿರಸ್ಕಾರ ೫ – ೧೨೧ವ
ಅವತಂಸ – ಕಿವಿಯ ಆಭರಣ ೫ – ೭೦
ಅವಧರಿಸು – ತಿಳಿದುಕೊಳ್ಳು ೫ – ೨೦೮
ಅವಮೆ – ಅಮಾವಾಸ್ಯೆ ೯ – ೧೩
ಅವಸರ – ಅವಕಾಶ ೨ – ೮೨
ಅವಿತಥ – ಸತ್ಯ ೨ – ೮೬
ಅವಿನಯ – ಕೆಟ್ಟನಡವಳಿಕೆ ೧೦ – ೩ವ
ಅವಿಭಾವ್ಯ – ಗುರುತು ಹಿಡಿಯಲು ಆಗದವನು ೮ – ೬೧
ಅವ್ವಳಿಸು – ಮೇಲೆ ಬೀಳು ೫ – ೩೩
ಅಶ್ರುತಪೂರ್ವಹಿಂದೆದೂ ಕೇಳದಿರುವ ೧ – ೧೨೮
ಅಸವಸ – ಆತುರ, ತ್ವರೆ ೧ – ೧೮೮
ಅಸಿತಾಹಿ – ಕರಿನಾಗರಹಾವು ೫ – ೧೧೫
ಅಸಿತೋರಗ – ಕರಿನಾಗರಹಾವು ೧ – ೧೫೨
ಅಸಿಯುಗುರ್ – ತೆಳುವಾದ ಉಗುರು ೩ – ೫೫
ಅಹಮಹಮಿಕೆ – ನಾನು ಮುಂದು ತಾನು ಮುಂದು ಎಂಬ ಹುರುಪು, ಉತ್ಸಾಹ ೩ – ೧೮
ಅಳಕ – ಮುಂಗುರುಳು ೧ – ೬೧ವ
ಅಳರು – ವ್ಯಾಪಿಸು, ಹರಡು ೬ – ೮೩
ಅಳೀಕ – ಸುಳ್ಳಾದ, ಮೋಸದ ೬ – ೮೩
ಅಳುಪು – ಪ್ರೀತಿ ೫ – ೩೩ವ
ಅಳುರ್ – ಆವರಿಸು, ಹರಡು ೧೦ – ೫೬
ಅಳ್ಕು – ಶಕ್ತಿಗುಂದು ೫ – ೮೦
ಅಱಗುಲಿ – ಧರ್ಮಭ್ರಷ್ಟ ೧ – ೧೪೮
ಅಱಲ್ಗೊಳ್ – ಬಾಯಾರು ೮ – ೮೧
ಅಱುಂಬುನೀರ್ – ಬತ್ತಿದ ಹಳ್ಳದಲ್ಲಿ ತೋಡಿದಾಗ ಬರುವು ನೀರು, ಚಿಲುಮೆ ೮ – ೧ವ
ಅೞಲ್ – ದುಖ ೧ – ೧೫೪ ಅೞ್ತಱು – ಪ್ರೀತಿ ೩ – ೧ ಅೞ್ತವಡು – ಸಂತೋಷಪಡು ೨ – ೧೧೬
ಆ
ಆಕೇಕರಾಲೋಕ – ಓರೆಗಣ್ಣು ೩ – ೧೫
ಆಗರ – ಗಣಿ, ಆಧಾರಸ್ಥಾ; ಆಕರ ೧೦ – ೪೨
ಆಗುಳಿ – ಆಕಳಿಕೆ ೬ – ೧೩೫
ಆತಪತ್ರ – ಕೊಡೆ, ಛತ್ರಿ ೩ – ೨೦
ಆತ್ಮಘಾತ – ಆತ್ಮಹತ್ಯೆ ೫ – ೨೦೪
ಆಭಿಜಾತ್ಯ – ಕುಲೀನತೆ ೬ – ೯೨
ಆಮಳಕ – ನೆಲ್ಲಿಕಾಯಿ ೧ – ೭೪
ಆಮಿಷ – ಮಾಂಸ ೧ – ೧೪೬
ಆರ್ – ತಣಿ, ತೃಪ್ತಿಪಡು ೩ – ೪೨
ಆರಾಧ್ಯ – ಪೂಜ್ಯ, ಗುರು ೮ – ೧೩೯
ಆರ್ಗೆ – ಯಾರ ಮಗಳು? ೧೦ – ೫೦
ಆಲಜಾಲ – ಮಿಥ್ಯಾಭಿಲಾಷೆ ೯ – ೩೭
ಆವಿಲ – ಕೊಳಕು, ಮಲಿನ ೮ – ೧೪೪
ಆಶೀವಿಷ – ಹಾವು ; ಸರ್ಪ ೩ – ೮೬
ಆಶ್ವಿಕಬಲ – ಕುದುರೆ ಸೈನ್ಯ ೮ – ೧೦೨
ಆಸ್ತ – (ಧಾ.ಆಸಱು) ಬಳಲಿದ ೩ – ೧೩೧
ಆಸವ – ಹೆಂಡ, ಮದ್ಯ ೩ – ೨೯
ಆಹ್ವಯ – ಹೆಸರು ೨ – ೧
ಆಳವಾಳ – ಪಾತಿ ೧ – ೧೮೯
ಆ – ಶಕ್ತನಾಗು ೫ – ೧೪೨
ಆಱಸು – ಸಮಾಧಾನಪಡಿಸು ೫ – ೧೯೦
ಆೞ್ – ನೀರಿನಲ್ಲಿ ಮುಳುಗು ೫ – ೫೬
ಆಱಸು – ನೀರಿನಲ್ಲಿ ಕೊಚ್ಚಿಕೊಂಡು ಹೋಗು, ಮುಳುಗಿಸು ೯ – ೪೨
ಇ
ಇಂಗಡಲ್ – ಕ್ಷೀರಸಮುದ್ರ ೩ – ೧೧೪
ಇಂಚರ – ಇಂಪಾದ ಧ್ವನಿ ೧ – ೫೮ವ
ಇಂತುಟೆ ವಲಂ – ಇಷ್ಟೇನೆ? ಹೀಗಾಯಿತೆ? ೮ – ೬೩ವ
ಇಂದೂಪಲ – ಚಂದ್ರಕಾಂತಶಿಲೆ ೭ – ೧೪
ಇಂಧನ – ಸೌಧೆ, ಕಟ್ಟಿಗೆ ೫ – ೧೮೦
ಇಕ್ಕುವಡು – ಹೊಡೆಯಲ್ಪಡು ೮ – ೧೧೪
ಇಕ್ಕೆದಾಣ – ಬಿಡದಿ, ವಾಸಸ್ಥಳ ೨ – ೩
ಇಟ್ಟಳ – ಮನೋಹರ ೨ – ೫೫
ಇಟ್ಟಳ – ದಟ್ಟವಾದುದು ೧ – ೪೨
ಇಡು – ಬೆಳಸು ೮ – ೧೪೬
ಇನಬಿಂಬ – ಸೂರ್ಯಮಂಡಲ ೧ – ೬೭
ಇಭ – ಆನೆ ೫ – ೧೩೫
ಇರ್ಪು – ತೈವ, ಒದ್ದೆ ೭ – ೩ವ
ಇಱುಂಬು – ನಡುವೆ, ಮಧ್ಯ ೧ – ೧೦೩
ಈ
ಈಂಟು – ಕುಡಿ, ಪಾನಮಾಡು ೧ – ೭೨
ಈಳ್ಕೊಳ್ – ಕಸಿದುಕೊಳ್ಳು ೧ – ೩೫
ಉ
ಉಕ್ಕೆವ – ಉತ್ಸಾಹ, ಆಶೋತ್ತರ ೫ – ೧೯೨
ಉಜ್ಜಳಿಸು – ಪ್ರಕಾಶಿಸು ೯ – ೧೧ವ
ಉಟಜ – ಪರ್ಣಶಾಲೆ ೧ – ೯೬
ಉಡುಪ – ಚಂದ್ರ ೭ – ೨೩
ಉಡೆ – ಸೀರೆ ೩ – ೨೭
ಉತ್ಕ – ಮೈಮರೆತ ೫ – ೧೩೯
ಉತ್ಕಂಠಿತ – ಹೆಚ್ಚು ಆಭಿಲಾಷೆಯುಳ್ಳವನು ೧೦ – ೧೮
ಉತ್ಕಲಿಕೆ – ೧ ಕಾಮೋದ್ರೇಕ ೨ ಅಲ್ಲೋಲ ಕಲ್ಲೋಲ ೮ – ೧೨೫
ಉತ್ತಮಾಂಗ – ತಲೆ ೧ – ೭೧
ಉತ್ತರೀಯ ವಸನ – ಹೊದೆಯುವ ಪಂಚೆ ೧ – ೨೫
ಉತ್ತವಳಿಕೆ – ಕಾತರತೆ ೫ – ೨೦೩
ಉತ್ಸಂಗ – ತೊಡೆ ೨ – ೫೫
ಉತ್ಸೇಧ – ಎತ್ತರ ೧ – ೧೪೬ವ
ಉದಮೇಲೆ – ಸಮುದ್ರದ ಪ್ರವಾಹ, ಅಲೆ ೯ – ೪೬
ಉದ್ದೆಸ – ಉದ್ದೇಶ ೫ – ೪೬
ಉನ್ನತಿಕೆ – ಹಿರಿಮೆ, ಪೆಂಪು ೨ – ೧೦೮
ಉಪಚಯ – ಅಭಿವೃದ್ಧಿ ೭ – ೪೭
ಉವಧಾನ – ತಲೆದಿಂಬು ೨ – ೬೫
ಉಪಪ್ಲವ – ಬಾಧೆ, ತೊಂದರೆ ೨ – ೧೬
ಉಪಶಮನ – ಅಡಗುವಿಕೆ, ಶಾಂತಿ ೫ – ೧೧೮
ಉಪಶ್ರುತಿ – (ಜೋಯಿಸರನ್ನು ಕೇಳುವ) ಭವಿಷ್ಯ ೨ – ೬೮
ಉಪಾಂಶುವಧೆ – ಗುಟ್ಟಾಗಿ ಮಾಡುವ ಕೊಲೆ ೩ – ೧೦೩ವ
ಉಷಾರೂಢ – ಏರಿದ, ಪಡೆದ ೩ – ೧ವ
ಉಪಾಲಂಭನ – ನಿಂದೆ ೫ – ೧೭೬
ಉಪ್ಪವಡಿಸು – ಹಾಸಿಗೆಯಿಂದ ಏಳು, ಎಚ್ಚರಗೊಳ್ಳು ೬ – ೬೬ವ
ಉಬ್ಬೆಗ – ಉದ್ವೇಗ ೩ – ೧೦೫
ಉಮ್ಮಳಿಸು – ದುಖಪಡು ೬ – ೧೦೦
ಉರುಪು – ಸುಡು, ದಹಿಸು ೧ – ೧೪
ಉರುಳಿ – ವಿಲೇಪನ ೭ – ೩
ಉರ್ಚು – ಜಾರಿಬೀಳು ೭ – ೧೩ವ
ಉರ್ಚುಹೊರಕ್ಕೆ ಬರು ೮ – ೧೫೬
ಉರ್ವರೆ – ಭೂಮಿ ೧ – ೯೯
ಉಲುಪು – ಶಬ್ದ ೧ – ೩೨ ಉಲ್ಲೋಲ – ದೊಡ್ಡ ಅಲೆ ೩ – ೧೦
ಉಷ್ಣೀಷ – ರುಮಾಲು ೫ – ೧೮೪ವ
ಉಳ್ಳವರ್ – ಚೆನ್ನಾಗಿ ಅರಳು ೫ – ೧೧ವ
ಊ
ಊರುದಘ್ನ – ತೊಡೆಯವರೆಗೂ ಮುಳುಗುವ ೮ – ೬೦ವ
ಊರುಯುಗ – ಎರಡು ತೊಡೆಗಲು ೨ – ೩೮
ಊರ್ಣೆ – ಹುಬ್ಬಿನ ನಡುವಿನ ಕೂದಲು ೨ – ೧೦೯
ಊಷರ – ಬಂಜರುನೆಲ ೧ – ೧೨೪
ಋ
ಋಜುವೃತ್ತಿ – ಸರಳಸ್ವಭಾವ ೧೦ – ೮೯
ಎ
ಎಡೆವರಿ – ಮಧ್ಯೆ, ಅಂತರವನ್ನು ಹೊಂದು, ಹಿಂದೆ ಬೀಳು ೪ – ೮
ಎಡ್ಡ – ಸುಂದರ ೩ – ೨೫
ಎಮೆಯಱುಗಲ್ – ಒತ್ತಾದ ಕಣ್ಣಿನ ರೆಪ್ಪೆ ೫ – ೧೦೨
ಎರವುಗೊಳ್ – ಬೇಡಿಕೊಳ್ಳು ೫ – ೧೯೭
ಎರೆ – ಆಹಾರ ೧ – ೧೫೨
ಎಲರ್ – ಗಾಳಿ ೧ – ೨೫
ಎಲವ – ಬೂರುಗದ – ಮರ ೧ – ೧೦೫
ಎಲ್ಗಳ್ – ಮೂಳೆಗಳು ೧ – ೧೯೮
ಎಸಕ – ಕಾರ್ಯ, ಪ್ರಭಾವ ೧ – ೧೦೭
ಎಳವುಳಿಲ್ದಾಣ – ಕೋಮಲವಾದ ಮರಳುದಿಣ್ಣೆ ೮ – ೬೦
ಎಳವರೆ – ಬಾಲಚಂದ್ರ ೨ – ೪೨
ಎಳೆಕುಳಿಗೊಳ್ – ಪಡೆಯಲು ತವಕಿಸು ೨ – ೫೬
ಎಱಂಕೆ – ರೆಕ್ಕೆ ೧ – ೯೭ವ
ಎಯ – ಒಡೆಯ, ಸ್ವಾಮಿ ೧ – ೮
ಎವಟ್ಟು – ಆಶ್ರಯಸ್ಥಾನ ೭ – ೨೨
ಎೞಲ್ – ಜೋಲು ೨ – ೧೨
ಏ
ಏಳಿಸು – ತಿರಸ್ಕರಿಸು ೨ – ೧೭
ಏ – ಗಾಯ, ಹುಣ್ಣು ೧೦ – ೩೦ವ
ಐ
ಐಕಿಲ್ – ಚಳಿ, ಶೀತ
ಒ
ಒಚ್ಚತಂ – ಒಂದೇಸಮನೆ ೯ – ೧೧ವ
ಒಡರಿಸು – ಉಂಟುಮಾಡು ೨ – ೫೯
ಒಡರ್ಚು – ಹುಟ್ಟು ೧ – ೧೪೭
ಒತ್ತಂಬ – ಒತ್ತಡ, ಬಲಾತ್ಕಾರ ೧ – ೧೪೬
ಒಳ್ಳಾರ – ಒಳ್ಳೆಯ ದಾರಿ ೩ – ೫೧
ಓ
ಓ (ಓವು) – ಸ್ನೇಹವನ್ನು ತೋರಿಸು ೫ – ೧೪೮
ಓಪ – ಇನಿಯ, ಕಾಂತ ೫ – ೧೩೪
ಓರಂತೆ – ಒಂದೇಸಮನೆ ೨ – ೪೯
ಓಸರಿಸು – ಹಿಂಜಲಿ ೮ – ೩೬
ಓಸರಿಸು – ಓರೆಯಾಗು ೫ – ೧೯೩
ಓಸರಿಸು – ಸರಿಪಡಿಸು ೬ – ೭೮
ಓಜ – ಗುರು, ಆಚಾರ್ಯ ೫ – ೪೪
Leave A Comment