೧) ಉಷ್ಣೋಪಚಾರ ವಿಧಾನ ಮತ್ತು   ೨) ಯಾಂತ್ರಿಕ ವಿಧಾನ

ಉಷ್ಣೋಪಚಾರದಿಂದ ನಿರ್ವಾತಗೊಳಿಸುವ ವಿಧಾನವೇ ಸಾಮಾನ್ಯವಾಗಿ ಬಳಕೆಯಲ್ಲಿರುವುದು. ಡಬ್ಬಿಗಳು ೧೮೦ -೧೯೦  ಫ್ಯಾ.  ಉಷ್ಣತೆಯ ಬಿಸಿನೀರಿನ ತೊಟ್ಟಿಯ ಮೂಲಕ ಮುಂದಕ್ಕೆ ಸಾಗಿಸಲ್ಪಡುತ್ತವೆ. ಇದಲ್ಲದಿದ್ದರೆ ಒಂದು ಮುಚ್ಚಿದ ಉಗಿ ಪೆಟ್ಟಿಗೆ ಮೂಲಕ ಚಲಿಸುತ್ತಿರುವ ಪಟ್ಟಿಯಲ್ಲಿ ಡಬ್ಬಿಗಳು ಮುಂದಕ್ಕೆ ಸಾಗುತ್ತಿರುತ್ತವೆ. ಬಿಸಿನೀರಿನಿಂದ ನಿರ್ವಾತಗೊಳಿಸುವ ಪೆಟ್‌ಇಗೆಯಲ್ಲಿ ನೀರಿನ ಮಟ್ಟವು ಡಬ್ಬಿಗಳ ಮೇಲಿನ ತುದಿಗಿಂತ ೧/೨-೧ ಅಂಗುಲ ಕೆಳಗಿರಬೇಕು. ನಿರ್ವಾತಗೊಳಿಸಲು ಬೇಕಾದ ಸಮಯ ಪದಾರ್ಥದ ಸ್ವಭಾವಕ್ಕನುಗುಣವಾಗಿ ೫ ರಿಂದ ೨೫ ನಿಮಿಷವಾಗಿರುತ್ತದೆ. ನಿರ್ವಾತಗೊಳಿಸುವ ಅಂತ್ಯದಲ್ಲಿ ಡಬ್ಬಿಯ ಮಧ್ಯಭಾಗದ ಉಷ್ಣತೆ ಸಾಧಾರಣ ೧೭೫ಫ್ಯಾ ಇರಬೇಕು. ನಿರ್ವಾತದಲ್ಲಿ ಮುಚ್ಚುವ ಯಂತ್ರವನ್ನು ಸಾಮಾನ್ಯವಾಗಿ ಗಾಜಿನ ಜಾಡಿಗಳಿಗೆ ಉಪಯೋಗಿಸುತ್ತಾರೆ. ಹಾಗೂ ಜಾಡಿಗಳನ್ನು  ಅಧಿಕ ನಿರ್ವಾತವಿರುವ ಮುಚ್ಚಿದ ಕೋಣೆಗಳಲ್ಲಿಡಲಾಗುತ್ತದೆ.

) ಮೊಹರು ಮಾಡುವುದು : ನಿರ್ವಾತಗೊಳಿಸಿದ ಡಬ್ಬಿಗಳನ್ನು ಮುಚ್ಚಲು ದ್ವಿಅಂಚು ಸೇರಿಸುವ ಒಂದು ವಿಶೇಷ ರೀತಿಯ ಯಂತ್ರ ಬೇಕಾಗುತ್ತದೆ. ಇವುಗಳು ಹಲವು ಮಾದರಿ ಮತ್ತು ಗಾತ್ರದಲ್ಲಿರುತ್ತವೆ. ಇವುಗಳಲ್ಲಿ ಕಂಡು ಬರುವ ವಿವಿಧ ಮಾದರಿಗಳೆಂದರೆ ಕೈಯಿಂದ ಚಲಿಸುವವು, ಭಾಗಶಃ ಸ್ವಯಂ ಚಾಲಿತ ಮತ್ತು ಸಂಪೂರ್ಣ ಸ್ವಯಂ ಚಾಲಿತ ಅಂಚು ಸೇರಿಸುವ ಯಂತ್ರಗಳು. ಈ ಯಂತ್ರಗಳು ಕೆಲಸ ಮಾಡುವ ರೀತಿಯಲ್ಲಿ ಅಡಕವಾಗಿರುವ ಮೂಲತತ್ವಗಳನ್ನು ತವರದ ಧಾರಕಗಳನ್ನು ಕುರಿತು ಅಧ್ಯಾಯದಲ್ಲಿ ವಿವರಿಸಲಾಗಿದೆ.

) ಸೂಕ್ಷ್ಮಜೀವಿಗಳನ್ನು ನಿಷ್ಕ್ರೀಯಗೊಳಿಸುವುದು : ಡಬ್ಬಿಯಲ್ಲಿ ಸಂಸ್ಕರಿಸುವ ತಂತ್ರಶಾಸ್ತ್ರದಲ್ಲಿ ‘ಸಂಸ್ಕರಿಸುವುದು’ ಎನ್ನುವ ಪದಕ್ಕೆ ಒಂದು ವಿಶಿಷ್ಟವಾದ ಅರ್ಥವಿದೆ. ಡಬ್ಬಿಯಲ್ಲಿ ತುಂಬಿದ ಆಹಾರದಲ್ಲಿರುವ ಬ್ಯಾಕ್ಟೀರೀಯಾಗಳನ್ನು ನಿಷ್ಕ್ರೀಯಗೊಳಿಸಲು ಬಿಸಿ ಮಾಡುವ ಅಥವಾ ಬೇಯಿಸುವ ಕ್ರಿಯೆಗೆ ಇದು ಅನ್ವಯಿಸುತ್ತದೆ. ಸೂಕ್ಷ್ಮ ಜೀವಿನಾಶ ಕ್ರಿಯೆಯನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬ್ಯಾಕ್ಟೀರಿಯಾಗಳು ‘ಬೀಜಾಣು’ಗಳೆನ್ನುವ ಅತಿ ಚಿಕ್ಕ ಮತ್ತು ಹೆಚ್ಚಿನ ಬಿಸಿಯನ್ನು ತಡೆಯಬಲ್ಲ ಹೊರಮೈಯನ್ನು ಪಡೆದಿರುತ್ತವೆ. ಇವುಗಳನ್ನು ನಾಶಪಡಿಸಬೇಕಾದರೆ ಅತಿ ಹೆಚ್ಚು ಇಲ್ಲವೇ ಅತಿ ಕಡಿಮೆ ಉಷ್ಣತೆಯು ಇಲ್ಲದಿದ್ದಲ್ಲಿ ಹೆಚ್ಚು ಸಮಯ ಬೇಯಿಸಬೇಕಾಗುತ್ತದೆ. ಆದರೆ ಈ ರೀತಿಯ ತೀವ್ರ ಉಪಚಾರದಿಂದ ಡಬ್ಬಿಯಲ್ಲಿರುವ ಆಹಾರದ ಗುಣಮಟ್ಟ ನಷ್ಟವಾಗಬಲ್ಲದು. ಬ್ಯಾಕ್ಟೀರಿಯಾಗಳು ಬೆಳೆಯದಂತೆ ಮಾಡಬೇಕಾದರೆ ಉಷ್ಣತೆಯ ಮಟ್ಟವು ಅದಕ್ಕೆ ತಕ್ಕಂತಿರಬೇಕು. ಬೇಯಿಸುವ ಕಾಲಾವಧಿಯು ಇದಕ್ಕೆ ಅನುಗುಣವಾಗಿರಬೇಕು. ಅತಿಯಾಗಿ ಬೇಯಿಸುವುದು ಒಳ್ಳೆಯದಲ್ಲ. ಇದು ಪದಾರ್ಥದ ರೂಪ ಮತ್ತು ವಾಸನೆಯನ್ನು ಕೆಡಿಸುತ್ತದೆ. ಹಣ್ಣು ಮತ್ತು ತರಕಾರಿಗಳ ರಚನಾಕ್ರಮದಲ್ಲಿ ವೈವಿಧ್ಯತೆಯಿರುತ್ತದೆ. ಆದ್ದರಿಂದ ಇವುಗಳ ಸಂಸ್ಕರಣೆಗೆ ಬೇಕಾದ ಉಷ್ಣತೆ ಮತ್ತು ಸಮಯದ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಎಲ್ಲ ಬಗೆಯ ಹಣ್ಣುಗಳನ್ನೂ ಹೆಚ್ಚು ಕಡಿಮೆ ೨೧೨  ಫ್ಯಾ.  ಅಂದರೆ ಕುದಯುವ ನೀರಿನ ಉಷ್ಣತೆಯಲ್ಲಿ ಸಂಸ್ಕರಿಸಬಹುದು. ಆಮ್ಲೀಯ ಆಹಾರ ಪದಾರ್ಥ ಗಳಲ್ಲಾದರೆ ಬ್ಯಾಕ್ಟೀರಿಯಾ ಮತ್ತು ಅವುಗಳ ಬೀಜಾಣುಗಳ ಬೆಳವಣಿಗೆಯು ಬಹುಮಟ್ಟಿಗೆ ಕುಂಠಿತಗೊಳ್ಳುತ್ತದೆ. ಹಣ್ಣುಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಸಾಮಾನ್ಯವಾಗಿ ಸಾಂದ್ರ ಸಕ್ಕರೆಪಾಕವನ್ನು ಉಪಯೋಗಿಸಬೇಕಾಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಮತ್ತು ಬೀಜಾಣುಗಳಿಗೆ ಜೀವಿಸಲು ಸಾದ್ಯವಾಗುವುದಿಲ್ಲ. ಆಮ್ಲ ರಹಿತ ತರಕಾರಿಗಳನ್ನು (ಟೊಮೆಟೊ ಮತ್ತು ರೂಬರ್ಟ್‌ನಂಥ ಹೆಚ್ಚು ಆಮ್ಲೀಯ ಹಣ್ಣುಗಳ ಹೊರತಾಗಿ) ಹೆಚ್ಚು ಉಷ್ಣತೆ ಅಂದರೆ ಸಾಧಾರಣ ೨೪೦ -೨೫೦  ಫ್ಯಾ.  ನಲ್ಲಿ ಸಂಸ್ಕರಿಸುದು ಸೂಕ್ತವಾಗಿದೆ. ಈ ಉಷ್ಣತೆ ಡಬ್ಬಿಯ ಮಧ್ಯಭಾಗದಲ್ಲಿರುವ ಉಷ್ಣತೆಯನ್ನು ಸೂಚಿಸುತ್ತದೆ. ಈ ಎಲ್ಲ ದೃಷ್ಟಿಯಿಂದ ಸಂಸ್ಕರಿಸುವ ಸಮಯದ ಬಗ್ಗೆ ಅತಿ ಹೆಚ್ಚಿನ ಗಮನವೀಯಬೇಕು. ಅಧಿಕ ಉಷ್ಣತೆಯನ್ನು ನಿರೋಧಿಸಬಲ್ಲ ಬ್ಯಾಕ್ಟಿರೀಯಾಗಳ ಬೀಜಾಣುಗಳನ್ನು ನಾಶಮಾಡಲು ಡಬ್ಬಿಯ ಮಧ್ಯಭಾಗದ ಉಷ್ಣತೆಯನ್ನು ಸಾಕಷ್ಟು ಹೆಚ್ಚು ಸಮಯ ಮತ್ತು ಉಷ್ಣತೆ ಡಬ್ಬಿಯ ಗಾತ್ರವನ್ನು ಅವಲಂಬಿಸಿರುತ್ತದೆ. ದೊಡ್ಡ ಡಬ್ಬಿಯಾದರೆ ಹೆಚ್ಚು ಸಮಯ ಸಂಸ್ಕರಿಸಬೇಕು. ಸಣ್ಣ ಡಬ್ಬಿಯಾದರೆ ಸ್ವಲ್ಪ ಸಮಯ ಸಾಕು.

ಡಬ್ಬಿಗಳಲ್ಲಿ ಉಷ್ಣದ ಪ್ರವೇಶ (ನುಗ್ಗುವಿಕೆ) : ಯಾವುದೇ ಒಂದು ನಿರ್ದಿಷ್ಟ ಆಹಾರದ ಸಂಸ್ಕರಣೆಯನ್ನು ನಿರ್ಧರಿಸಬೇಕಾದರೆ ಡಬ್ಬಿಯಲ್ಲಿ ಉಷ್ಣದ ಪ್ರವೇಶಗತಿಯನ್ನು ಅಧ್ಯಯನ ಮಾಡುವುದು ಅಗತ್ಯ. ಇದನ್ನು ‘ಥರ್ಮೊಕಪಲ್’ ಎಂಬ ಉಷ್ಣಮಾಪಕ ಉಪಕರಣಗಳನ್ನು ಡಬ್ಬಿಯ ಮಧ್ಯಭಾಗದಲ್ಲಿ ಜೋಡಿಸಿ ತಿಳಿಯಬಹುದು. ಅಮೆರಿಕದಲ್ಲಾದರೆ ಧಾರಕಗಳ ಗಾತ್ರ, ಮಾದರಿ, ಬಗೆ, ಮತ್ತು ತುಂಬುವ ಪದಾರ್ಥ ಅಂದರೆ ಸಕ್ಕರೆಪಾಕ ಅಥವಾ ಉಪ್ಪಿನ ದ್ರಾವಣದ ರೀತಿ, ಪದಾರ್ಥದ ದೃಢತೆ ಇವೇ ಮೊದಲಾವುಗಳ ಸಂಬಂಧವಾಗಿ ವ್ಯಾಪಕವಾದ ಅಧ್ಯಯನವನ್ನು ನಡೆಸಿದ್ದಾರೆ. ಇದನ್ನು ಆಧರಿಸಿ, ಅನೇಕ ಬಗೆಯ ಆಮ್ಲರಹಿತ ತರಕಾರಿಗಳಿಗೆ ಡಬ್ಬಿಯಲ್ಲಿ ಆಹಾರ ಸಂಸ್ಕರಿಸುವ ರಾಷ್ಟ್ರೀಯ ಸಂಘದವರು ಸಂಸ್ಕರಣೆಗೆ ಬೇಕಾದ ಸಮಯವನ್ನು ನಿರ್ಧರಿಸಿದ್ದಾರೆ. ಒಂದು ನಿಶ್ಚಿತ ಆಹಾರವನ್ನೊಳಗೊಂಡಿರುವ ನಿರ್ದಿಷ್ಟ ಪರಿಮಾಣದ ಡಬ್ಬಿಯನ್ನು ಎಷ್ಟು ಉಷ್ಣತೆಯಲ್ಲಿ ಎಷ್ಟು ಸಮಯ ಸಂಸ್ಕರಿಸಬೇಕು ಎನ್ನುವುದನ್ನು ಕಂಡು ಹಿಡಿಯುವುದರಲ್ಲಿ ಬಾಲ್, ಓಲ್‌ಸನ್ ಮತ್ತು ಸ್ಟೀವನ್ಸ್‌ರವರು ಉಪಯುಕ್ತ ಕೆಲಸ ಮಾಡಿದ್ದಾರೆ. ಇವರು ಉಷ್ಣ ನಿರೋಧಕ ಬ್ಯಾಕ್ಟಿರೀಯಾಗಳ ಬೀಜಾಣುಗಳನ್ನು ನಾಶಮಾಡುವ ಕ್ರಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇಂಗ್ಲಂಡಿನ ಕ್ಯಾಂಪ್‌ಡೆನ್‌ನಲ್ಲಿರುವ ಹಣ್ಣು ಮತ್ತು ತರಕಾರಿ ಸಂರಕ್ಷಣೆಯ ಸಂಶೋಧನಾ ಕೇಂದ್ರದವರೂ ಕೂಡಾ ಇದೇ ರೀತಿಯ ಸಂಶೋಧನೆಯನ್ನು ನಡೆಸಿದ್ದಾರೆ. ಕ್ರುಯೆಸ್, ಫಾಂಗ್ ಮತ್ತು ಲಿಯು ಅವರು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಣೆ ಮಾಡುವುದರಲ್ಲಿ ಆಮ್ಲದ ಪಾತ್ರದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಉಪ್ಪಿನ ದ್ರಾವಣಕ್ಕೆ ಅಲ್ಪ ಪ್ರಮಾಣದಲ್ಲಿ ಅಸಿಟಿಕ್ ಆಮ್ಲ ಅಥವಾ ಸಿಟ್ರಿಕ್ ಆಮ್ಲವನ್ನು ಬೆರೆಸಿ ಆಮ್ಲೀಕರಣ ಮಾಡಲು ಸಲಹೆ ನೀಡಿದ್ದಾರೆ. ಇದರಿಂದ ಉಷ್ಣ ನಿರೋಧಕ ಬ್ಯಾಕ್ಟಿರೀಯಾಗಳ ಬೀಜಾಣುಗಳು ತಮ್ಮ ನಿರೋಧಕತ್ವವನ್ನು ಬಹುಮಟ್ಟಿಗೆ ಕಳೆದುಕೊಳ್ಳುತ್ತವೆ. ಈ ರೀತಿ ಆಮ್ಲಿಕರಣ ಮಾಡಿದ ತರಕಾರಿಗಳಲ್ಲಿ ಸೂಷ್ಮಜೀವಿ ನಾಶ ಕ್ರಿಯೆಯ ಸಮಯ ಮತ್ತು ಉಷ್ಣತೆ ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ ಈ ವಿಧಾನವನ್ನು ಅಷ್ಟೊಂದು ಕ್ರಮಬದ್ಧವಾಗಿ ಮನೆಮಟ್ಟದಲ್ಲಿ ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಣೆ ಮಾಡುವಾಗ ಪಾಲಿಸಲು ಸಾಧ್ಯವಾಗಲಿಕ್ಕಿಲ್ಲ ಮತ್ತು ಈ ವಿಧಾನವನ್ನು ಶಿಫಾರಸ್ಸು ಮಾಡುವುದೂ ತರವಲ್ಲ; ಒತ್ತಡದಲ್ಲಿ ಸಂಸ್ಕರಿಸುವುದೇ ಸುರಕ್ಷಿತವಾದ ಏಕಮಾತ್ರ ದಾರಿ.

) ಡಬ್ಬಿಗಳ ಸಂಸ್ಕರಣೆ :

) ಹಣ್ಣು ಮತ್ತು ಆಮ್ಲೀಯ ತರಕಾರಿಗಳು : ಹಣ್ಣುಗಳನ್ನು ಸಂಸ್ಕರಿಸಲು  ಸಾಧರಣವಾಗಿ ಮೂರು ಬಗೆಯ ಬೇಯಿಸುವ ಪಾತ್ರೆಗಳು ಪ್ರಚಾರದಲ್ಲಿವೆ. ಇವುಗಳೆಂದರೆ ಮುಚ್ಚಿಡದೆ ಬೇಯಿಸುವ ತೆರೆದ ಪಾತ್ರೆ, ಕದಡದೆ ಬೇಯಿಸುವ ಪಾತ್ರೆ, ಎಡೆಬಿಡದೆ ಕದಡಿಸಿ ಬೇಯಿಸುವ ಪಾತ್ರೆ.

ಮುಚ್ಚಿಡದೆ ಬೇಯಿಸುವ ತೆರೆದ ಪಾತ್ರೆಗಳು : ಈ ಪಾತ್ರೆಗಳು ರಚನಾಕ್ರಮದಲ್ಲಿ ಬಹು ಸರಳವಾಗಿವೆ. ಇವು ಅಪೇಕ್ಷಿತ ಗಾತ್ರದ ಮರದ ಮರಿಗೆಗಳಾಗಿರುತ್ತವೆ, ಇಲ್ಲವೇ ವಿದ್ಯುನ್ಮುಲಾಮು (ಗ್ಯಾಲ್ವನೈಸ್) ಮಾಡಿದ ಕಬ್ಬಿಣದ ತೊಟ್ಟಿಗಳಾಗಿರುತ್ತವೆ. ಮುಚ್ಚಿದ ಡಬ್ಬಿಗಳನ್ನು ಮೊದಲು ವಿದ್ಯುನ್ಮುಲಾಮು ಮಾಡಿದ ಕಬ್ಬಿಣದ ಬುಟ್ಟಿಗಳಲ್ಲಿಡಬೇಕು. ತೊಟ್ಟಿಯ ಕೃತಕ ತಳದ ಕೆಳಗೆ ಉಗಿ ಕೊಳವೆಗಳಿರುತ್ತವೆ. ಇವುಗಳ ಮೂಲಕ ಉಗಿ ಚಿಮ್ಮುವಂತೆ ಮಾಡಿ ನೀರನ್ನು ನಿರಂತರ ಕುದಿಯುವ ಮಟ್ಟದಲ್ಲಿಡಬೇಕು. ಇದಕ್ಕಿಂತಲೂ ಸುಧಾರಿಸಿದ ರೀತಿಯ ಬೇಯಿಸುವ ಪಾತ್ರೆಗಳಿವೆ. ಇವು ಮೂಲತಃ ಮುಚ್ಚಳವಿರುವ ವಿದ್ಯುನ್ಮುಲಾಮು ಮಾಡಿದ ಕಬ್ಬಿಣದ ತೊಟ್ಟಿಗಳು. ಇವಕ್ಕೆ ವಿದ್ಯುನ್ಮುಲಾಮು ಮಾಡಿದ ರಂಧ್ರವಿರುವ ತಟ್ಟೆಯ ಕೃತಕ ತಳವಿರುತ್ತದೆ. ಇವುಗಳಿಗೆ ಜೋಡಿಸಿದ ಉಗಿಕೊಳವೆಗಳ ಮೂಲಕ ಉಗಿ ಚಿಮ್ಮಿ ಬರುತ್ತದೆ.

ನಿರಂತರ ಕದಡದೆ ಬೇಯಿಸುವ ಪಾತ್ರೆಗಳು : ಈ ವಿಧಾನದಲ್ಲಿ ಡಬ್ಬಿಗಳನ್ನು ಬುಟ್ಟಿಗಳಲ್ಲಿ ಇಡಬೇಕು. ಇವು ಕುದಿಯುವ ನೀರಿನಲ್ಲಿ ಚಲಿಸುತ್ತವೆ. ಇಂಥ ಬುಟ್ಟಿಗಳನ್ನು ಒಯ್ಯಲು ನಿರಂತರ ಚಲಿಸುತ್ತಿರುವ ಪಟ್ಟಿ(ಬೆಲ್ಟ್)ಗಳಿರುತ್ತವೆ. ಇವುಗಳು ಸದಾ ಚಲಿಸುವಂತೆ ಮಾಡಲು ಮೇಲ್ಭಾಗದಲ್ಲಿ ಚಲಿಸುವ ಸಾಧನಗಳನ್ನು ಅಳವಡಿಸಲಾಗಿರುತ್ತದೆ. (ಚಿತ್ರ ೫).  ಉಷ್ಣತೆಯನ್ನು ದಾಖಲು ಮಾಡಲು ಮತ್ತು ನಿಯಂತ್ರಿಸಲು ಬೇಕಾದ ಸಾಧನಗಳನ್ನು ಬೇಯಿಸುವ ಪಾತ್ರೆಯಲ್ಲಿ ಅಳವಡಿಸಲಾಗಿರುತ್ತದೆ.

 ನಿರಂತರ ಕದಡಿಸಿ ಬೇಯಿಸುವ ಪಾತ್ರೆಗಳು : ಈ ಬಗೆಯ ಬೇಯಿಸುವ ಪಾತ್ರೆಗಳು ವಿವಿಧ ಮಾದರಿಯವಗಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಉತ್ಪಾದನಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಮೇಲೆ ತಿಳಿಸಿದ ಕದಡದೆ ಬೇಯಿಸುವ ಪಾತ್ರೆಗಳಲ್ಲಿರುವಂತೆ ಇಲ್ಲೂ ಮುಚ್ಚಿದ ಡಬ್ಬಿಗಳು ಚಲಿಸುತ್ತಾ ಇರುತ್ತವೆ.  ಚಲಿಸುತ್ತಿರುವ ಈ ಡಬ್ಬಿಗಳನ್ನು ಒಂದು ವಿಶೇಷ ಸಾಧನದಿಂದ ಯಾಂತ್ರಿಕವಾಗಿ ತಿರುಗಿಸಲಾಗುತ್ತದೆ. ಇದರಿಂದ ಡಬ್ಬಿಯ ಒಳಗಿರುವ ಪದಾರ್ಥವೂ ತುಳುಕಾಡುತ್ತದೆ.  ಸಂಸ್ಕರಣೆಯ ಸಮಯವು ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಈ ಪಾತ್ರೆಗಳಲ್ಲಿ ಮುಕ್ಕಾಲು ಭಾಗ ನೀರು ತುಂಬಿ ಉಗಿಯಿಂದ ಬಿಸಿ ಮಾಡಬೇಕು. ಅದಿಲ್ಲದಿದ್ದರೆ ಸಂಸ್ಕರಣೆಯನ್ನು ಉಗಿಯಲ್ಲೇ ನಡೆಸಬೇಕು. ಉಷ್ಣತೆಯನ್ನು ಹತೋಟಿಯಲ್ಲಿಡಲು ಸ್ವಯಂ ಚಾಳಿತ ಸಾಧನಗಳಿರುತ್ತವೆ. ಈ ಪಾತ್ರೆಗಳನ್ನು ಕುದಿಯುವ ನೀರಿನ ಉಷ್ಣತೆ (೧೨೧ ಫ್ಯಾ.)ಗಿಂತಲೂ ಕಡಿಮೆ ಉಷ್ಣತೆಯಲ್ಲಿ ಪಾಶ್ಚೀಕರಿಸಲು ಸುಲಭವಾಗಿ, ಕಾರ್ಖಾನೆಯ ಉತ್ಪಾದನೆಯ ಗತಿಯನ್ನು ಗಮನಾರ್ಹವಾಗಿ ಹೆಚ್ಚಿಸಬಲ್ಲವು. ಇವುಗಳನ್ನು ಸಾಮಾನ್ಯವಾಗಿ ಇಂಗ್ಲಂಡ್ ಮತ್ತು ಅಮೆರಿಕ ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪಟ್ಟಿಯಲ್ಲಿ  ಸಂಸ್ಕರಣೆ ಮಾಡುವಾಗ ಬಳಸುತ್ತಾರೆ.

) ಆಮ್ಲರಹಿತ ತರಕಾರಿಗಳು : ಆಮ್ಲರಹಿತವಾದ ತರಕಾರಿಗಳು ರಚನಾಕ್ರಮದಲ್ಲಿ ದೃಢವಾಗಿರುತ್ತವೆ. ಇವು ನೆಲಕ್ಕೆ ಅತಿ ಸಮೀಪವಿರುವುದರಿಂದ ಸೂಕ್ಷ್ಮಜೀವಿಗಳ ಬೀಜಾಣುಗಳಿಂದ ಬೇಗನೇ ಕಲುಷಿತಗೊಳ್ಳುತ್ತವೆ. ಈ ಎಲ್ಲ ಕಾರಣಗಳಿಂದ ಇವುಗಳಿಗೆ ಹಣ್ಣುಗಳಿಗೆ ಬೇಕಾದುದಕ್ಕಿಂತ ತೀವ್ರತರವಾದ ಸೂಕ್ಷ್ಮಜೀವಿನಾಶ ಕ್ರಿಯೆ ಆಚರಿಸಬೇಕಾಗುತ್ತದೆ. ಅಂದರೆ ಇವುಗಳನ್ನು ೧೨೧  ಫ್ಯಾ.  ಉಷ್ಣತೆಗಿಂತಲೂ ಹೆಚ್ಚಿನ ಉಷ್ಣತೆಯಲ್ಲಿ ಸಂಸ್ಕರಿಸಬೇಕು. ಈ ಉಷ್ಣತೆಯನ್ನು ಪಡೆಯಬೇಕಾದರೆ ಮುಚ್ಚಿದ ಕಬ್ಬಿಣದ ರಿಟಾಟðಗಳಲ್ಲಿ ಉಗಿಯ ಒತ್ತಡದಿಂದ ಸಂಸ್ಕರಿಸಬೇಕು.

ಈ ರಿಟಾರ್ಟ್‌ಗಳಲ್ಲಿ ಆಕಾರ ಮತ್ತು ಗಾತ್ರದಲ್ಲಿ ವೈವಿಧ್ಯತೆಯಿರುತ್ತದೆ. ಸಾಧರಣ ೫೦ ಡಬ್ಬಿಗಳಿಂದ ಮೊದಲಾಗಿ ೨೦೦೦-೩೦೦೦ ಡಬ್ಬಿಗಳನ್ನು ತುಂಬುವ ಗಾತ್ರದವುಗಳೂ ಇವೆ. ಇವುಗಳೆಲ್ಲ ಸಾಧರಣವಾಗಿ ಗುಂಪಾಗಿ ಕಾರ್ಯ ನಡೆಸುವಂಥವುಗಳು. ಸ್ವಯಂ ಚಾಳಿತ ಒತ್ತಡದಲ್ಲಿ ಬೇಯಿಸುವ ಪಾತ್ರೆಗಳು ತೀರ ಇತ್ತೀಚಿನವು. ಇವುಗಳೆಲ್ಲ ಎಡೆಬಿಡದೆ ಕೆಲಸ ಮಾಡುವಂಥವು. ರಿಟಾರ್ಟ್‌ಗಳಲ್ಲಿ ಲಂಬವಾಗಿರುವ ಮತ್ತು ಸಮಾನಾಂತರ ಸಮತಲವಾಗಿರುವವು ಎಂದು ಎರಡು ರೀತಿಯವುಗಳಿವೆ. ಇಂಗ್ಲಂಡಿನಲ್ಲಿ ಲಂಬವಾದ ರಿಟಾರ್ಟಗಳನ್ನೇ ಉಪಯೋಗಿಸಿದರೆ, ಅಮೆರಿಕದಲ್ಲಿ ಸಮಾನಾಂತರ ರಿಟಾರ್ಟ್‌ಗಳನ್ನು ಉಪಯೋಗಿಸುವುದು ಹೆಚ್ಚು ಬಳಕೆಯಲ್ಲಿದೆ. ಇವುಗಳಲ್ಲಿ ಕೆಲವು ೬೦ ಅಡಿ ಉದ್ದ ಇರುತ್ತವೆ. ಒಂದು ಕಡೆಯಿಂದ ಡಬ್ಬಿಗಳ ಹೊಸಗುಂಪು ಒಳ ಸೇರುತ್ತಿದ್ದರೆ ಇನ್ನೊಂದು ಪಕ್ಕದಿಂದ ಕೈಗಾಡಿಗಳು ಸಂಸ್ಕರಿಸಿದ ಡಬ್ಬಿಗಳನ್ನು ಹೊರತೆ ತರುತ್ತಿರುತ್ತವೆ. ವಾಣಿಜ್ಯಮಟ್ಟದ ರಿಟಾರ್ಟ್‌ಗಳಲ್ಲಿ ಮಾನವ ದೋಷಗಳನ್ನು ತಪ್ಪಿಸಲು ಯೋಗ್ಯ ಸಾಧನಗಳಿರುತ್ತವೆ. ಉಗಿ, ಉಷ್ಣತೆ ಮುಂತಾದವುಗಳನ್ನು ನಿಯಂತ್ರಿಸಲು ಮತ್ತು ಸಮಯ ದಾಖಲು ಮಾಡಲು ಅಗತ್ಯವಾದ ಸ್ವಯಂ ಚಾಳಿತ ಉಪಕರಣಗಳಿರುತ್ತವೆ. ಅಮೆರಿಕದಲ್ಲಿ ಪ್ರಚಾರದಲ್ಲಿರುವ ವಿವಿಧ ರೀತಿಯ ಮುಚ್ಚದೇ ಬೇಯಿಸುವ ಪಾತ್ರೆ ಮತ್ತು ಒತ್ತಡದ ರಿಟಾರ್ಟ್‌ಗಳ ಬಗ್ಗೆ ಬೆಟ್ಟಿಂಗರು ಸಾಕಷ್ಟು ವಿವರಣೆ ನೀಡಿದ್ದಾರೆ.

ನಮ್ಮ ದೇಶದಲ್ಲಿ ಚಿಕ್ಕದಾದ, ಲಂಬವಾಗಿ ಒಂದೇ ಕಡೆ ಸ್ಥಿರವಾಗಿರುವ ರಿಟಾರ್ಟ್‌ಗಳೇ ಹೆಚ್ಚಾಗಿ ಬಳಕೆಯಲ್ಲಿವೆ. (ಫ್ರಾಂಟಿಸ್ಟೀಸ್) ಎರಕಹೊಯ್ದ ಕಬ್ಬಿಣದ ನಳಿಕೆಯಂತಿರುವ ಈ ರಿಟಾರ್ಟ್‌ಗಳು ವಿವಿಧ ಗಾತ್ರಗಳಲ್ಲಿ ದೊರೆಯುತ್ತವೆ. ಇವುಗಳ ಮುಚ್ಚಳವನ್ನು ಉಗಿ ಬರದ ರೀತಿಯಲ್ಲಿ ಚಿಲಕಹಾಕಿ ಬಿಗಿ ಮಾಡಬಹುದು. ಇದರಲ್ಲಿ ಉಗಿ ಮತ್ತು ನೀರು ಪೂರೈಕೆಯ ವ್ಯವಸ್ಥೆ, ಗಾಳಿ ಚಲಾವಣೆಗೆ ದ್ವಾರ, ಬಸಿಯಲು ದಾರಿ, ರಕ್ಷಣೆ ಕವಾಟ, ಒತ್ತಡ ಮಾಪಕ ಮತ್ತು ಉಷ್ಣಮಾಪಕಗಳನ್ನೊಳಗೊಂಡಂತೆ ಎಲ್ಲ ವ್ಯವಸ್ಥೆಯೂ ಇರುತ್ತದೆ. ಈ ರಿಟಾರ್ಟ್‌ಗಳು ಕೆಲಸಮಾಡುವ ರೀತಿ ಅನುಕ್ರಮವಾಗಿ ಈ ರೀತಿಯಿರುತ್ತದೆ. ಮುಚ್ಚಿದ ಡಬ್ಬಿಗಳನ್ನು ಬುಟ್ಟಿಗಳಲ್ಲಿಟ್ಟು ರಿಟಾರ್ಟಿನ ಒಳಗಿಡಬೇಕು. ಮುಚ್ಚಳವನ್ನು ಅದರ ಜಾಗದಲ್ಲಿಟ್ಟು ಚಿಲಕ ಸಿಕ್ಕಿಸಬೇಕು. ಗಾಳಿ ಚಲಾವಣೆಯ ದ್ವಾರ ಮತ್ತು ಬಸಿದು ಹೋಗುವ ದಾರಿಯನ್ನು ತೆರೆಯಬೇಕು. ಅನಂತರ ಉಗಿಯನ್ನು ಸರಾಗವಾಗಿ ಒಳಗೆ ಬಿಡಬೇಕು.  ಆಗ ಒಳಗಿರುವ ಗಾಳಿಯೆಲ್ಲ ಹೊರಗೆ ಹೋಗುತ್ತದೆ. ಗಾಳಿ ಚಲಾವಣೆಯ ದ್ವಾರ ಮತ್ತು ಬಸಿದು ಹೋಗುವ ದಾರಿಯನ್ನು ಭಾಗಶಃ ಮುಚ್ಚಬೇಕು. ಮತ್ತು ಒಳಗಿನ ಉಷ್ಣತೆ ೨೧೨  ಫ್ಯಾ.  ತಲುಪುವವರೆಗೆ ಉಗಿಯನ್ನು ಒಳಸೇರಿಸಬೇಕು. ಅನಂತರ ಈ ನಿರ್ಗಮನ ದಾರಿಗಳನ್ನು ಸಂಪೂರ್ಣ ಮುಚ್ಚಬೇಕು. ಒಂದು ಸಣ್ಣ ದ್ವಾರವನ್ನು ಮಾತ್ರ ಒಳಗಿರುವ ಹೆಚ್ಚಿನ ಉಗಿ ತೂರಿ ತಪ್ಪಿಸಿಕೊಳ್ಳಲು ಬಿಟ್ಟಿರಬೇಕು. ಒಳಗಿನ ಒತ್ತಡ ಮತ್ತು ಉಷ್ಣತೆ ಅಪೇಕ್ಷಿತ ಮಟ್ಟವನ್ನು ತಲುಪುವವರೆಗೆ ಉಗಿಯನ್ನು ಒಳಗೆ ಬಿಡಬೇಕು. ಒಳಗಿನ ಆಹಾರ ಬೇಯುವಾಗ ಉಷ್ಣಮಾಪಕ ಮತ್ತು ಒತ್ತಡ ಮಾಪಕದ ದಾಖಲೆಗಳು ನಿಕಟವಾದ ಹೋಲಿಕೆಯನ್ನು ತೋರಿಸಬೇಕು. ಉದಾಹರಣೆಗೆ ಬೇಯುವ ಸಮಯದ ಉಷ್ಣತೆ ೨೪೦  ಫ್ಯಾ.  ಆಗಿದ್ದರೆ ಉಗಿಯ ಒತ್ತಡ ೧೦ ಪೌಂಡುಗಳಿಗಿಂತ ಸ್ವಲ್ಪ ಹೆಚ್ಚಿರುತ್ತದೆ. (ಕೋಷ್ಟಕ-೧) ಉಷ್ಣತೆ ೨೪೦  ಫ್ಯಾ.  ಇರುವಾಗ ಒಳಗಿನ ಒತ್ತಡ ೧೦ ಪೌಂಡುಗಳಿಗಿಂತ ಹೆಚ್ಚಾಗಿ ಕಂಡು ಬಂದರೆ ಒಳಗೆ ಗಾಳಿ ಸೇರಿದೆ ಎಂದು ತಿಳಿಯಬೇಕು. ಒಳಗಿನ ಪದಾರ್ಥ ಬೆಂದಮೇಲೆ ಉಗಿಯ ಪೂರೈಕೆಯನ್ನು ನಿಲ್ಲಿಸಬೇಕು. ಅನಂತರ ಮೇಲ್ಭಾಗದಲ್ಲಿರುವ ನಿರ್ಗಮನ ಕವಾಟವನ್ನು ನಿಧಾನವಾಗಿ ತೆರೆಯಬೇಕು. ಆಗ ಉಗಿಯೆಲ್ಲ ಹೊರಗೆ ಹೋಗುತ್ತದೆ. ಉಗಿಯನ್ನು ತಕ್ಷಣ ಬಿಟ್ಟರೆ ಒಳಗಿರುವ ಡಬ್ಬಿಗಳು ಬಿರಿದು ಹೋಗಬಹುದು. ಒತ್ತಡವು ಸಾಧಾರಣ ಸ್ಥಿತಿಗೆ ಬಂದೊಡನೆ ಹೆಚ್ಚು ಬೇಯದಂತೆ ರಿಟಾರ್ಟ್‌ಗಳನ್ನು ತೆರೆದಿಡಬೇಕು. ಮತ್ತು ಡಬ್ಬಿಗಳನ್ನು ಹರತೆಗೆದು ತಣ್ಣಗಾಗಲು ಬಿಡಬೇಕು.

ಕೋಷ್ಠಕ : ಡಬ್ಬಿಯಲ್ಲಿ ಸಂಸ್ಕರಿಸುವಾಗ ರಿಟಾರ್ಟ್ಗಳಲ್ಲಿಯ ಉಗಿಯ ಒತ್ತಡಕ್ಕೂ ಉಷ್ಣತೆಗೂ ಇರುವ ಸಂಬಂಧ (ಕ್ರೂಯೆಸ್, ೧೯೪೮)

ಚದರ ಅಂಗುಲಕ್ಕೆ ಒತ್ತಡ

ಉಷ್ಣತೆ ಫ್ಯಾ

ಚದರ ಅಂಗುಲಕ್ಕೆ ಒತ್ತಡ

ಉಷ್ಣತೆ ಫ್ಯಾ

೨೧೫.೨ ೯. ೨೩೬.೬
೨೧೮.೩ ೧೦. ೨೩೮.೮
೩. ೨೨೧.೩ ೧೧. ೨೪೧.೦
೨೨೪.೨ ೧೨ ೨೪೩.೦
೨೨೬.೯ ೧೩. ೨೪೫.೩
೬. ೨೨೯.೫ ೧೪. ೨೪೭.೩
೭. ೨೩೧.೯ ೧೫. ೨೪೯.೧

ಸಂಸ್ಕರಣೆಯ ಸಮಯದ ಮೇಲೆ ಎತ್ತರ ಮತ್ತು ಕಾಲಾವಧಿ ಪರಿಣಾಮ : ಎತ್ತರ ಪ್ರದೇಶಕ್ಕೆ ಹೋದ ಹಾಗೆ ನೀರಿನ ಕುದಿಯುವ ಬಿಂದು ಕಡಿಮೆಯಾಗುತ್ತದೆ. ಡಬ್ಬಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂಸ್ಕರಿಸಲು ಬೇಕಾಗುವ ಸಮಯವನ್ನು ಪ್ರದೇಶದ ಎತ್ತರ ಹೆಚ್ಚಿದಂತೆ ಹೆಚ್ಚಿಸಬೇಕಾಗುತ್ತದೆ. ಇದಕ್ಕೆ ಉಪಯುಕ್ತವಾಗುವಂತೆ ಒಂದು ಮಾಪಕವನ್ನು ತಯಾರಿಸಿದ್ದಾರೆ. ಇದು ಸಮುದ್ರಮಟ್ಟದಿಂದ ೫೦೦ ಅಡಿ ಎತ್ತರದಲ್ಲಿ ನಿರ್ಧರಿಸಿದುದು ಮತ್ತು ಪ್ರತಿ ೫೦೦ ಅಡಿ ಹೆಚ್ಚಿದಂತೆ ಸಂಸ್ಕರಣೆಯ ಸಮಯವನ್ನು ಎಷ್ಟು ಹೆಚ್ಚಿಸಬೇಕೆಂಬುದನ್ನು ತೋರಿಸುತ್ತದೆ. ಈ ಬಗ್ಗೆ ಒಂದು ಸಾಧಾರಣ ನಿಯಮವೆಂದರೆ ಎತ್ತರ ಪ್ರತಿ ೫೦೦ ಅಡಿ ಹೆಚ್ಚಿದರೆ, ಕುದಿಯುವ ಬಿಂದು ೧  ಫ್ಯಾ. ನಷ್ಟು ಕಡಿಮೆಯಾಗುತ್ತದೆ. ಇದಕ್ಕನುಗುಣವಾಗಿ ಸಂಸ್ಕರಣೇಯ ಸಮಯವನ್ನು ೨ ನಿಮಿಷ ಹೆಚ್ಚಿಸಬೇಕು. ಕೋಷ್ಠಕ ೨ರಲ್ಲಿ ಡಬ್ಬಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಮುದ್ರಮಟ್ಟಕ್ಕಿಂತ ಎತ್ತರ ಪ್ರದೇಶದಲ್ಲಿ ಸಂಸ್ಕರಿಸುವುದಾದರೆ, ಎಷ್ಟು ಹೆಚ್ಚು ಸಮಯ ಸಂಸ್ಕರಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಕೋಷ್ಠಕ : ನೀರಿನ ಕುದಿಯುವ ಬಿಂದು ಮತ್ತು ಡಬ್ಬಿ ಸಂಸ್ಕರಿತ ಹಣ್ಣು ಮತ್ತು ತರಕಾರಿಗಳ ಸೂಕ್ಷ್ಮ ಜೀವಿನಾಶಕ್ರಿಯೆಗೆ ಬೇಕಾದ ಉಷ್ಣತೆಯ ಮೇಲೆ ಪ್ರದೇಶದ ಎತ್ತರದ ಪರಿಣಾಮ

ಎತ್ತರ : ಸಮುದ್ರಮಟ್ಟಕ್ಕಿಂತ ಹೆಚ್ಚು

ನೀರು ಕುದಿಯುವ ಬಿಂದು

ಕುದಿಯುವ ನೀರಿಗೆ ಕೊಡಬೇಕಾದ ಹೆಚ್ಚಿನ ಸಮಯ

ಕೊಟ್ಟ ಒತ್ತಡಕ್ಕೆ ಸೇರಿಸಬೇಕಾದ ಹೆಚ್ಚಿನ ಒತ್ತಡ

(ಅಡಿಗಳಲ್ಲಿ)

(ಫ್ಯಾ)

ನಿಮಿಷಗಳಲ್ಲಿ

(ಪೌಂಡುಗಳಲ್ಲಿ)

೫೦೦ ೨೧೧
೧.೦೦೦ ೨೧೦
೨.೦೦೦ ೨೦೮
೩.೦೦೦ ೨೦೬ ೧೨
೪.೦೦೦ ೨೦೪ ೧೬
೫.೦೦೦ ೨೦೨ ೨೦
೬.೦೦೦ ೨೦೧ ೨೫
೭.೦೦೦ ೧೯೯ ೩೦

ಇದರ ಪ್ರಕಾರ ಪೇರುಹಣ್ಣಿನ ಒಂದು A ೨ ೧/೨ ಡಬ್ಬಿಯನ್ನು ಸಮುದ್ರಮಟ್ಟದಲ್ಲಿ ಸಂಸ್ಕರಿಸಲು ೩೦ ನಿಮಿಷ ಸಾಕು. ಆದರೆ ಸಮುದ್ರ ಮಟ್ಟಕ್ಕಿಂತ ಸಾಧಾರಣ ೬೦೦೦ ಅಡಿ ಎತ್ತರದಲ್ಲಿ ಇದನ್ನೇ ಸಂಸ್ಕರಿಸುವಾಗ ೩೦+ ೨೫ = ೫೫ ನಿಮಿಷ ಬೇಕಾಗುತ್ತದೆ.

ಸಂಸ್ಕರಣೆಯ ಒತ್ತಡ ಮತ್ತು ಉಷ್ಣತೆ : ಸಮುದ್ರಮಟ್ಟಕ್ಕಿಂತ ಎತ್ತರ ಹೆಚ್ಚಿದ ಹಾಗೆ ನಿರ್ದಿಷ್ಟ ಪಡಿಸಿದ ಸಂಸ್ಕರಣೆಯ ಉಷ್ಣತೆಯನ್ನು ಉದಾಹರಣೆಗೆ ೨೪೦ ಅಥವಾ ೨೫೦ ಫ್ಯಾ. ಕಾಯ್ದುಕೊಂಡಿರಲು ಬೇಕಾದ ಒತ್ತಡವೂ ಹೆಚ್ಚಾಗುತ್ತದೆ. ಡಬ್ಬಿಯಲ್ಲಿ ಆಹಾರವನ್ನು ಸಂಸ್ಕರಿಸುವ ಕಾಲಾವಧಿಯ ಸೂಚಕ ಪಟ್ಟಿಗಳು ಉಗಿಯ ನಿಶ್ಚಿತವಾದ ಉಷ್ಣತೆಯಲ್ಲಿ ಡಬ್ಬಿಗಳಲ್ಲಿ ಆಹಾರವನ್ನು ತೆರೆದಿಡುವಿಕೆಯನ್ನು ಆಧರಿಸಿರುತ್ತವೆ. ಆದುದರಿಂದ ಸಮುದ್ರಮಟ್ಟಕ್ಕಿಂತ ೧೦೦೦ ಅಡಿ ಅಥವಾ ಅದಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿ ಸಂಸ್ಕರಣೆ ಮಾಡುವಾಗ ಅದಕ್ಕನುಗುಣವಾಗಿ ಒತ್ತಡವನ್ನೂ ಹೆಚ್ಚಿಸಬೇಕಾಗುತ್ತದೆ. ಕೋಷ್ಠಕ೩ ರಲ್ಲಿ ವಿವಿಧ ಎತ್ತರಗಳಲ್ಲಿ  ನಿರ್ದಿಷ್ಟಪಡಿಸಿದ ಉಷ್ಣತೆಯನ್ನು ಪಡೆಯಲು ಒತ್ತಡ ಮಾಪಕದಲ್ಲಿರಬೇಕಾದ ಅಧಿಕ ಒತ್ತಡವೆಷ್ಟು ಎಂಬುದನ್ನು ವಿವರಿಸಿದೆ.

ದ್ರಾವಣರೂಪದಲ್ಲಿರುವ ಆಮ್ಲೀಯತೆಯು ಜಲಜನಕದ ಅಯಾನ್‌ಗಳಿಂದ ಉಂಟಾಗುತ್ತದೆ. ಜಲಜನಕ ಅಯಾನ್ ಸಾಂದ್ರತೆಯು ಆಮ್ಲತೆಯ ತೀಕ್ಷ್ಣತೆ ಅಥವಾ ಸಾಮರ್ಥ್ಯವನ್ನು ಸೂಚಿಸುವ ಒಂದು ಅಳತೆಯಾಗಿದೆಯಲ್ಲದೆ ಅದು ಆಮ್ಲೀಯತೆಯ ಮೊತ್ತವನ್ನು ತಿಳಿಸುವುದಿಲ್ಲ. ಇದನ್ನು ಪಿಹೆಚ್‌ ಮೌಲ್ಯ ಎಂಬುದಾಗಿ ಸಾಧಾರಣವಾಗಿ ಕರೆಯುತ್ತಾರೆ. ಒಂದು ಗ್ರಾಂ ಜಲಜನಕದ ಅಯಾನ್ ಕಣಗಳು ಎಷ್ಟು ಲೀಟರ್ ದ್ರಾವಣದಲ್ಲಿರುತ್ತವೆಯೋ ಅದರ ಲಘುಗಣಕ ಆ ದ್ರಾವಣದ ಪಿಹೆಚ್‌ ಮೌಲ್ಯಕ್ಕೆ ಸಮ. ಈ ಮಾಪಕದ ಪ್ರಕಾರ ತಟಸ್ಥ ನೀರಿನ ಪಿಹೆಚ್‌ ಮೌಲ್ಯ ೭  ಆಗಿರುತ್ತದೆ. ಪಿಹೆಚ್‌ನ ಬೆಲೆ ೭ಕ್ಕಿಂತ ಹೆಚ್ಚುತ್ತಾ ಹೋದರೆ ಅದು ಕ್ರಮ ಪ್ರಕಾರ ಅಧಿಕವಾಗುತ್ತಿರುವ ಕ್ಷಾರತ್ವವನ್ನು ತೋರಿಸುತ್ತದೆ. ಮತ್ತು ೭ಕ್ಕಿಂತ ಕಡಿಮೆಯಾಗುತ್ತಾ ಇದ್ದರೆ ಅದು ಹೆಚ್ಚುತ್ತಿರುವ ಆಮ್ಲತೆಯನ್ನು ಸೂಚಿಸುತ್ತದೆ. ಪದಾರ್ಥದ ಆಮ್ಲೀಯತೆ ಹೆಚ್ಚಿದಷ್ಟು ಅದರ ಪಿಹೆಚ್‌ನ ಮೌಲ್ಯ ಕಡಿಮೆಯಾಗುವುದು. ಹಣ್ಣುಗಳಲ್ಲಿ ಆಮ್ಲಗುಣ ಅಥವಾ ಅವುಗಳಲ್ಲಿರುವ ಆಮ್ಲದ ಮೂಲವು ಜಲಜನಕದ ಅಯಾನ್‌ಗಳ ಅಸ್ತಿತ್ವದಿಂದಲೇ ಆಗಿದೆ.

ಸೂಕ್ಷ್ಮ ಜೀವಿನಾಶಕ್ರಿಯೆಯಲ್ಲಿ ಪಿಹೆಚ್‌ ಮೌಲ್ಯವು ಅಧಿಕ ಪ್ರಭಾವಶಾಲಿಯಾಗಿದೆ. ಒಂದು ಪದಾರ್ಥದ ಪಿಹೆಚ್‌ ಕಡಿಮೆಯಾದಷ್ಟು ಅದನ್ನು ಹೆಚ್ಚು ಸುಲಭವಾಗಿ ಸಂಸ್ಕರಿಸಬಹುದು. ಅಥವಾ ಅದರ ಸೂಕ್ಷ್ಮ ಜೀವನಾಶಕ್ರಿಯೆಯನ್ನು ತ್ವರಿತಗೊಳಿಸಬಹುದು. ಕೆಮರಾನ್ ಮತ್ತು ಎಸ್ಟಿಯವರು ಆಹಾರವನ್ನು ಈಮುಂದೆ ವಿವರಿಸಿದ ಪ್ರಕಾರ ವರ್ಗಿಕರಿಸಿದ್ದಾರೆ.

ಕಡಿಮೆ ಆಮ್ಲ ಪಿಹೆಚ್. ಮತ್ತು ಹೆಚ್ಚು : ಬಟಾಣಿ, ಬೀನ್ಸ್, ಮುಸುಕಿನ ಜೋಳ, ಅಸ್ಟರಾಗಸ್ ಇವೇ ಮೊದಲಾದವುಗಳು ಈ ವರ್ಗದಲ್ಲಿ ಸೇರುತ್ತವೆ. ಇವು ಕ್ಲಾಸ್ಟ್ರೀಡಿಯಂ ಬಾಟಲ್ಯುನಿಂ ಅನ್ನು ಒಳಗೊಂಡಂತೆ ಮೂರು ಗುಂಪಿನ ಎಲ್ಲ ಉಷ್ಣಪ್ರಿಯ ಮತ್ತು ವಾಯುವಿನ ಅಗತ್ಯವಿಲ್ಲದೆ ಕೊಳೆಯಿಸುವ ವಿಸೋ ಫಿಲಿಕ್‌ಗಳಿಂದಾಗಿ ಕೆಡುತ್ತವೆ.

ಮಧ್ಯಮ ಆಮ್ಲಪಿಹೆಚ್. ರಿಂದ . : ಈ ವರ್ಗದಲ್ಲಿ ಮಾಂಸ ಮತ್ತು ತರಕಾರಿ  ಮಿಶ್ರಣಗಳು, ಸ್ವಾಗೆಟ್ಟಿ, ಸೂಪ್ ಮತ್ತು ಗೊಜ್ಜು ಸಾಂಬಾರುಗಳು ಸೇರುತ್ತವೆ. ಇವುಗಳಲ್ಲಿರುವ ಘಟಕಗಳು ಭಾಗಶಃ ಆಮ್ಲೀಯ ಪದಾರ್ಥಗಳನ್ನು ಉತ್ಪತ್ತಿ ಮಾಡುತ್ತವೆ. ಇವುಗಳು ಸಹ ಮೇಲೆ ಒಂದನೇ ವರ್ಗದಲ್ಲಿ ತಿಳಿಸಿದ ಸೂಕ್ಷ್ಮ ಜೀವಿಗಳಿಂದಾಗಿ ಕೆಡುತ್ತವೆ. ವಯುವಿನ ಅಗತ್ಯವಿರದ ಮತ್ತು ನಿರಸ ಹುಳಿಯ ಉತ್ಪತ್ತಿಗೆ ಕಾರಣವಾದ ಉಷ್ಣಪ್ರಿಯ ಸೂಕ್ಷ್ಮಜೀವಿಗಳು (ಹೈಡ್ರೋಜನ್ ಸಲ್ಫೈಡ್ ಉತ್ಪತ್ತಿ ಮಾಡುವವು) ಈ ವರ್ಗದಲ್ಲಿ ಬಹು ಮುಖ್ಯವಾದವುಗಳು.

ಆಮ್ಲಪಿಹೆಚ್ . ರಿಂದ . : ಟೊಮ್ಯಾಟೊ, ಪೇರು, ಅಂಜೂರ, ಅನಾನಸ್, ನೆಕ್ಟರಿನ್, ಮತ್ತು ಇತರ ಹಣ್ಣುಗಳು ಈ ವರ್ಗದಲ್ಲಿ ಸೇರುತ್ತವೆ. ಇವುಗಳ ಕೆಡುವಿಕೆಗೆ ಕರಣವಾದ ಸೂಕ್ಷ್ಮಜೀವಿಗಳೆಂದರೆ ಬೀಜಾಣುಗಳಾದ ಎಸಿಡ್ಯುರಿಕ್ ಜಾತಿಯವು. ವಾಯುವಿನ ಅಗತ್ಯವಿರದ ಬ್ಯುಟಿಯರಿಕ್, ಆಮ್ಲಪ್ರಿಯ ಕ್ಲಾಸ್ಟ್ರೀಡಿಯಂ ಪ್ಯಾಶ್ಚುರಿಯಾನಮ್ ಮತ್ತು ವಿನ್ನೊಗ್ರಾಡಸ್ಕಿ ಜಾತಿಯವು ಮತ್ತು ವಾಯುವಿನ ಅಗತ್ಯವಿರುವ ಉಷ್ಣಪ್ರಿಯ ಸೂಕ್ಷ್ಮ ಜೀವಿಗಳು.

ಅಧಿಕ ಆಮ್ಲಪಿಹೆಚ್ . ಮತ್ತು ಕಡಿಮೆ : ಸಾವರ್‌ಕ್ರಾಟ್, ಉಪ್ಪಿನಕಾಯಿ, ಬೆರ್ರಿ‍, ನಿಂಬೆ, ಕಿತ್ತಳೆರಸ, ಗ್ರೇಪ್‌ಫ್ರೂಟ್ ಮತ್ತು ರೂಬರ್‌ಗಳು ಈ ವರ್ಗಕ್ಕೆ ಸೇರಿವೆ.

ಬ್ಯಾಕ್ಟೀರಿಯಾದ ಬೀಜಾಣುಗಳು ತರಕಾರಿಯಲ್ಲಿ ಪಿಹೆಚ್ ೫.೦-೬.೦ರಲ್ಲಿ ನಾಶವಾಗುವುದಕ್ಕಿಂತ ಹಣ್ಣುಗಳಲ್ಲಿ ಪಿಹೆಚ್ ೩.೦ ರಲ್ಲಿಯೇ ಹೆಚ್ಚು ಸುಲಭವಾಗಿ ನಾಶವಾಗುತ್ತವೆ. ಇವು ೪.೫ಕ್ಕೀಂತ ಕಡಿಮೆ ಪಿಹೆಚ್‌ನಲ್ಲಿ ಅಂಕುರಿಸುವುದು ಮಾತ್ರವಲ್ಲ ಬೆಳೆಯುವುದೂ ಇಲ್ಲ. ಆದುದರಿಂದ ಅವು ಡಬ್ಬಿಗಳಲ್ಲಿ ಸಂಸ್ಕರಿಸಿದ ಹಣ್ಣುಗಳಲ್ಲಿ ನಾಶಹೊಂದದೇ ಇದ್ದರೂ  ಯಾವುದೇ ರೀತಿಯ ಕೆಡಕನ್ನುಂಟುಮಾಡುವುದಿಲ್ಲ. ಈ ಕಾರಣದಿಂದ ಪಿಹೆಚ್‌ ೪.೫ನ್ನು  ಆಮ್ಲೀಯ ಮತ್ತು ಆಮ್ಲರಹಿತ ಆಹಾರಗಳನ್ನು ವಿಭಜಿಸುವ ಬಿಂದುವೆನ್ನಬಹುದು. ಪಿಹೆಚ್‌ ೪.೫ಕ್ಕಿಂತ ಕಡಿಮೆಯಿದ್ದರೆ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥಗಳನ್ನು ೨೧೨ ಫ್ಯಾ ಉಷ್ಣತೆಯ ಕುದಿಯುವ ನೀರಿನಲ್ಲಿ ಸಂಶ್ಕರಿಸಬಹುದು. ಆದರೆ ೪-೫ಕ್ಕಿಂತ ಹೆಚ್ಚು ಪಿಹೆಚ್‌ ಇರುವ ಪದಾರ್ಥವಾದರೆ ಸಂಸ್ಕರಣೆಯನ್ನು ೧೦-೧೫ ಪೌಂಡಿನ ಉಗಿಯ ಒತ್ತಡದಲ್ಲೇ ಸಂಸ್ಕರಿಸಬೇಕಾಗುತ್ತದೆ.

ಡಬ್ಬಿಯನ್ನು ಯಾವುದೇ ಉಷ್ಣತೆಯಲ್ಲಿ ಮೊಹರು ಮಾಡಿದರೂ ಅದರ ಒಳಗಿನ ಒತ್ತಡದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಡಬ್ಬಿಯ ಒಳಗಿನ ಒತ್ತಡವು ವಾತಾವರಣದ ಒತ್ತಡಕ್ಕೆ ಸಮವಾಗುತ್ತದೆ. ಆದರೆ ಡಬ್ಬಿಯನ್ನು ಮುಚ್ಚಿ ಅನಂತರ ಉಷ್ಣತೆಯನ್ನು ಹೆಚ್ಚಿಸಿದರೆ ಡಬ್ಬಿಯ ಒಳಗಿನ ಒತ್ತಡವೂ ಅಧಿಕವಾಗುತ್ತದೆ. ಡಬ್ಬಿಯ ಒಳಗಿನ ಒತ್ತಡವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳಲ್ಲಿ ಈ ಕೆಳಗಿನವುಗಳು ಮುಖ್ಯವಾದವುಗಳು :

 • ಡಬ್ಬಿಯ ಒಳಗಿನ ನೀರಿನ ಆವಿಯಿಂದಾಗುವ ಒತ್ತಡ
 • ಒಳಗೆ ಗಾಳಿ ಬಂಧಿಸಲ್ಪಟ್ಟಿದ್ದರೆ ಅದರ ಪ್ರಸರಣದಿಂದಾಗುವ ಒತ್ತಡ
 • ಡಬ್ಬಿಯ ಒಳಗಿನ ಪದಾರ್ಥದ ವಿಸ್ತರಣೆಯಿಂದಾಗುವ ಒತ್ತಡ
 • ತರಕಾರಿಯ ಒಳಗೆ ಸೇರಿದ ಅನಿಲಗಳ ಬಿಡುಗಡೆ ಮತ್ತು ವಿಸ್ತರಣೆಯಿಂದಾಗುವ ಒತ್ತಡ
 • ತರಕಾರಿಯ ಒಳಗೆ ಸೇರಿದ ಅನಿಲಗಳ ಬಿಡುಗಡೆ ಮತ್ತು ವಿಸ್ತರಣೆಯಿಂದಾಗುವ ಒತ್ತಡ
 • ಡಬ್ಬಿಯ ತುದಿಗಳು ಗೋಲಾಕಾರವಾಗಿರುವುದರಿಂದ ಡಬ್ಬಿ ವಿಸ್ತಾರಗೊಳ್ಳುವುದು; ಇದಕ್ಕೆ ಪರಿಹಾರವಾಗಿ, ವಿಸ್ತರಿಸುವ ಬಳೆಗಳಿಂದ ಮುಚ್ಚಳದ ಮೇಲಾಗುವ ಪರಿಣಾಮ ಇವುಗಳಲ್ಲಿ ನೀರಿನ ಆವಿ ಅತಿ ಹೆಚ್ಚು  ಪರಿಣಾಂವನ್ನುಂಟುಮಾಡುತ್ತದೆ. ನೀರಿನ ಆವಿಗೆ ೧೪೦ ಫ್ಯಾ.  ನಲ್ಲಿ ಪ್ರತಿ ಚದರ ಅಂಗುಲಕ್ಕೆ ೨.೯ ಪೌಂಡು ಮತ್ತು ೨೪೦ ಫ್ಯಾ.  ನಲ್ಲಿ ೨೫.೦ ಪೌಂಡು ಒತತಡವನ್ನುಂಟುಮಾಡುವ ಶಕ್ತಿಯಿರುತ್ತದೆ. ಈ ರೀತಿ ಉಷ್ಣತೆ ಹೆಚ್ಚಿದ ಹಾಗೆ ಡಬ್ಬಿಯ ಒತ್ತಡದ ಮೇಲೂ ಹೆಚ್ಚು ಪರಿಣಾಮ ಉಂಟಾಗುತ್ತದೆ.

ಸಂಸ್ಕರಿಸುವಾಗ ಡಬ್ಬಿಯ ಒಳಗಿನ ಒತ್ತಡವನ್ನು ನಿಯಂತ್ರಿಸಲು ಈ ಮುಂದೆ ವಿವರಿಸಿದ ಕೆಲವು ಅಂಶಗಳನ್ನು ಗಮನಿಸಬೇಕು.

 • ಡಬ್ಬಿಯ ಒಳಗಿನ ಒತ್ತಡವು ಸಂಸ್ಕರಣೆ ಮಾಡುವಾಗಿನ ಉಷ್ಣತೆಯಲ್ಲಿನ ಆವಿಯ ಒತ್ತಡದಲ್ಲಿ ಡಬ್ಬಿಯನ್ನು ಮುಚ್ಚಿದಾಗಿನ ಉಷ್ಣತೆಯನ್ನು ಕಳೆದರೆ ಬರುವ ಒತ್ತಡಕ್ಕೆ ಸಮವಾಗಿರುತ್ತದೆ.
 • ಒಳ್ಳೆಯ ನಿರ್ವಾತವನ್ನು ಪಡೆಯಲು ಡಬ್ಬಿಯನ್ನು ಮುಚ್ಚುವಾಗಿನ ಉಷ್ಣತೆ ೧೬೦ ಫ್ಯಾ.ಗಿಂತ ಕಡಿಮೆಯಿರಬಾರದು.
 • ಮುಚ್ಚುವಾಗಿನ ಉಷ್ಣತೆಯು ಸಂಸ್ಕರಣೆಯ ಉಷ್ಣತೆಗೆ ಸಮೀಪವಿದ್ದಷ್ಟು (ಅಂತರ ಕಡಿಮೆಯಿದ್ದಷ್ಟು) ಸಂಸ್ಕರಣೆಯ ಕಾಲದಲ್ಲಿ ಡಬ್ಬಿಯ ಒಳಗಿನ ಒತ್ತಡವು ಕಡಿಮೆಯಿರುತ್ತದೆ.
 • ದೊಡ್ಡ ಡಬ್ಬಿಗಳಿಗಿಂತ ಚಿಕ್ಕ ಡಬ್ಬಿಗಳು ಒಳಗಿನ ಒತ್ತಡವನ್ನು ಹೆಚ್ಚು ತಡೆಯಬಲ್ಲವು.
 • ಬಕ್ಲಿಂಗ್ ಆಗುವುದನ್ನು ತಪ್ಪಿಸಬೇಕಾದರೆ ನಂ A ೨ ೧/೨ ಡಬ್ಬಿಗಿಂತಲೂ ದೊಡ್ಡದಾಗಿರುವ ಡಬ್ಬಿಗಳನ್ನು ಒತ್ತಡದಲ್ಲಿದ್ದಾಗಲೇ ತಣ್ಣಗೆ ಆರಿಸಬೇಕು.

ಡಬ್ಬಿಗಳನ್ನು ೧೬೦ ಫ್ಯಾ. ಉಷ್ಣಾಂಶಕ್ಕೆ  ಮುಚ್ಚಿ ೨೪೦ ಫ್ಯಾ. ಉಷ್ಣಾಂಶಕ್ಕೆ ಸಂಸ್ಕರಿಸಿದರೆ ಅವುಗಳಲ್ಲಿ ವಾತಾವರಣದ ಒತ್ತಡಕ್ಕಿಂತ ಅತಿ ಹೆಚ್ಚಿನ ಒತ್ತಡ ಅಂದರೆ ಸಾಧಾರಣ ೨೦-೨೧ ಪೌಂಡು ಒತ್ತಡ  ಉಂಟಾಗುತ್ತದೆ.  ಈ ಒತ್ತಡ ಕೇವಲ ನೀರಿನ ಆವಿಯಿಂದಾಗುವ ತಾತ್ವಿಕ ಮೌಲ್ಯಕ್ಕೆ ನಿಕಟವಾಗಿರುತ್ತದೆ.

೧೦) ತಣ್ಣಗೆ ಮಾಡುವುದು (ಆರಿಸುವುದು) : ಸಂಸ್ಕರಿಸಿದ ಡಬ್ಬಿಗಳನ್ನು ಕ್ಷಿಪ್ರವಾಗಿ ತಣ್ಣಗೆ ಆರಿಸಬೇಕು. ಇದರಿಂದ ಬೇಯುವ ಕ್ರಿಯೆ ಸಂಪೂರ್ಣವಾಗಿ ನಿಲ್ಲುತ್ತದೆ. ಗುಂಪಾಗಿ ಜೋಡಿಸದ ಡಬ್ಬಿಗಳಲ್ಲಿ ಬೇಯುವುದೂ ಸಹ ತಡೆಯಲ್ಪಡುತ್ತದೆ. ದೊಡ್ಡ ಪ್ರಮಾಣದಲ್ಲಿ ಗುಂಪಾಗಿ ಜೋಡಿಸಿದ ಡಬ್ಬಿಗಳಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಭಾಗದಲ್ಲಿರುವ ಡಬ್ಬಿಗಳಲ್ಲಿ ಈ ರೀತಿ ಬೇಯುವುದು ಕಂಡು ಬರುತ್ತದೆ. ಗುಂಪಾಗಿ ಜೋಡಿಸಿದ ಡಬ್ಬಿಗಳು ಅನೇಕ ದಿನಗಟ್ಟಲೆ ಅಥವಾ ಅನೇಕ ಗಂಟೆಗಳ ಕಾಲ ಬಿಸಿಯಾಗಿಯೇ ಇರುವುದರಿಂದ ಇದು ಸಂಭವಿಸುತ್ತದೆ. ಹೆಚ್ಚು ಕಾಲ ಬಿಸಿಯಾಗಿರುವ ಆಹಾರವು ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಸ್ವರೂಪವನ್ನು ಸಹ ಒಂದೇ ರೀತಿಯಾಗಿ ಇಟ್ಟುಕೊಂಡಿರುವುದಿಲ್ಲ. ಅತಿ ಉತ್ಕಟ ಸಂದರ್ಭಗಳಲ್ಲಿ ಪೀಚ್ ಮತ್ತು ಪೇರು ಹಣ್ಣುಗಳು ಕಪ್ಪಾಗುತ್ತವೆ. ಟೊಮ್ಯಾಟೊಕಂದು ಬಣ್ಣಕ್ಕೆ ತಿರುಗಿ ಕಹಿಯಾದ ರುಚಿಯನ್ನು ಪಡೆಯುತ್ತದೆ. ಬಟಾಣಿ ಜಜ್ಜಿದಂತಾಗಿ ಬೇಯಿಸಿದ ರುಚಿಯನ್ನು ಪಡೆಯುತ್ತದೆ. ಅನೇಕ ವಿಧದ ತರಕಾರಿಗಳು ಸರಿಯಾಗಿ ತಂಪಾಗದೆ ಹೆಚ್ಚು ಕಾಲ ಬಿಸಿಯಾಗಿಯೇ ಇರುವುದರಿಂದ ನೀರಸ ಗುಳಿ ಉತ್ಪಾದನೆಯಾಗಲೂಬಹುದು. ಇದು ಸಾಮಾನ್ಯವಾಗಿ ವಾಣಿಜ್ಯ ಮಟ್ಟದಲ್ಲಿ ಸಂಸ್ಕರಿಸುವಾಗ ನಾಶವಾಗದ ಬೀಜಾಣುವನ್ನು ಪಡೆಯಬಲ್ಲ ಉಷ್ಣ ನಿರೋಧಕ ಬ್ಯಾಕ್ಟಿರಿಯಾಗಳಿಂದ ಆಗುತ್ತದೆ. ಇಂಥ ಸಂದರ್ಭಗಳಲ್ಲಿ ಡಬ್ಬಿಗಳು ಉಬ್ಬಿರುವುದಿಲ್ಲ. ಆದರೆ ಒಳಗಿನ ಪದಾರ್ಥ ಮಾತ್ರ ಹುಳಿಯಾಗಿರುತ್ತದೆ.

ಡಬ್ಬಿಯನ್ನು ತಂಪು ಮಾಡಲು ಅನೇಕ ವಿಧಾನಗಳಿವೆ. ಅವು ಯಾವುವೆಂದರೆ ೧) ಬಿಸಿ ಡಬ್ಬಿಗಳನ್ನು ತೊಟ್ಟಿಯಲ್ಲಿಟ್ಟು ತಣ್ಣೀರಿನಲ್ಲಿ ಹಾದು ಹೋಗುವಂತೆ ಮಾಡುವುದು ಇಲ್ಲವೇ ತೊಟ್ಟಿಯಲ್ಲಿ ಮುಳುಗಿಸುವುದು. ೨) ತಣ್ಣೀರಿನಲ್ಲಿ ತುಂತುರು ಹನಿಗಳನ್ನು ಸಿಂಪಡಿಸುವುದು. ೩) ಡಬ್ಬಿಯಲ್ಲಿ ಸಂಸ್ಕರಿಸಿದ ತರಕಾರಿಯಿದ್ದರೆ ಒತ್ತಡದಿಂದ ಬೇಯಿಸುವ ಪಾತ್ರೆಯ ಮೇಲೆ ತಣ್ಣೀರನ್ನು ಚಿಮುಕಿಸುವುದು ಅಥವಾ ೪)  ನೀರಿನ ಪೂರೈಕೆಯು ಅತಿ ಕಡಿಮೆಯಿದ್ದರೆ ಡಬ್ಬಿಗಳನ್ನು ಸಣ್ಣ ಗುಂಪುಗಳಾಗಿ  ಗಾಳಿಗೆ ತೆರೆದಿಟ್ಟು ತಂಪು ಮಾಡಬಹುದು.  ತಯಾರಿಸುವ ವಿಧಾನ ಮತ್ತು ಪರಿಣಾಮವನ್ನು ಅವಲಂಬಿಸಿ ತಂಪು ಮಾಡುವ ಉಪಕರಣಗಳಲ್ಲೂ  ವ್ಯತ್ಯಾಸವಾಗುತ್ತದೆ. ವಿದ್ಯುತ್ ಕಲಾಯಿ  ಮಾಡಿದ ತೆರೆದ ತೊಟ್ಟಿಗಳು ಇದರಲ್ಲಿ ಅತಿ ಸರಳವಾದವು. ಸ್ವಯಂ ಚಾಲಿತ ತಣಿಸುವ ಯಂತ್ರಗಳು ಇದರಲ್ಲಿ ಅತಿ ಜಟಿಲವದವುಗಳು. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬಳಸುವ ತೊಟ್ಟಿಗಳು ಹೆಚ್ಚಾಗಿ ವಿದ್ಯುತ್ ಕಲಾಯಿ ಮಾಡಿದ ಕಬ್ಬಿಣದ ತೊಟ್ಟಿಗಳಾಗಿರುತ್ತವೆ. ಇದರಲ್ಲಿ ತಣ್ಣೀರು ಸದಾ ತುಂಬಿ ಹರಿಯುತ್ತಿರುತ್ತದೆ. ಅಲ್ಲದೆ ಈ ನೀರು ಸಾಕಷ್ಟು ತಣ್ಣಗಾಗಿಯೂ ಇರುತ್ತದೆ. ಡಬ್ಬಿಗಳನ್ನು ಬುಟ್ಟಿಯಲ್ಲಿ ತುಂಬಿ ಈ ತೊಟ್ಟಿಯ ಒಳಗೆ ತಣಿಸಲು ಇಡುತ್ತಾರೆ. ಅಧಿಕ ಉಷ್ಣ ಪ್ರದೇಶದಲ್ಲಿ ನೀರನ್ನು ತಣಿಸಲು ಮಂಜುಗಡ್ಡೆ ಉಪಯೋಗಿಸುವುದೂ ಉಂಟು.

೧೧) ಡಬ್ಬಿಯ ನ್ಯೂನತೆಗಳನ್ನು ಪರೀಕ್ಷಿಸುವುದು : ಕಾರ್ಖಾನೆಗಳಲ್ಲಿ ತಯಾರಾದ ಆಹಾರ ತುಂಬಿದ ಡಬ್ಬಿಗಳನ್ನು  ಸೋರುವ ಮತ್ತು ಪೂರ್ತಿಯಾಗಿ ತುಂಬಿರುವ ಬಗ್ಗೆ ಪರೀಕ್ಷಿಸಬೇಕು. ಇದಕ್ಕೆ ಅನುಸರಿಸಬಹುದಾದ ಅತಿ ಸರಳ ವಿಧಾನವೆಂದರೆ ಡಬ್ಬಿಯ ಮುಚ್ಚಳವನ್ನು ಒಂದು ಸಣ್ಣ ಕಬ್ಬಿಣದ ಕಡ್ಡಿಯಿಂದ ತಟ್ಟುವುದು. ಸ್ಪಷ್ಟವಾದ ಘಂಟೆಯ ಝಣತ್ಕಾರದ ಶಬ್ದ ಬಂದರೆ ಡಬ್ಬಿ ಸರಿಯಾಗಿ ಮುಚ್ಚಿದೆಯೆಂದು ತಿಳಿಯಬೇಕು. ಅದಿಲ್ಲದೆ ಜಡವಾದ, ಪೊಳ್ಳಾದ ಶಬ್ದ ಬಂದರೆ ಅದು ಸೋರುವ ಮತ್ತು ಸರಿಯಾಗಿ ಮುಚ್ಚದ ಡಬ್ಬಿಯ ಚಿನ್ಹೆಯಾಗಿರುತ್ತದೆ. ಇದು ಅತಿ ಶೀಘ್ರವಾದ ವಿಧಾನವೆಂದು ಹೇಳಬಹುದು. ಪರಿಣತನಾದ ಕೆಲಸಗಾರನು ಮುಚ್ಚಳದಲ್ಲಿರುವ ನ್ಯೂನತೆಯನ್ನು ಕಂಡು ಹಿಡಿಯುವಲ್ಲಿ ಎಂದೂ ವಿಫಲನಾಗುವುದಿಲ್ಲ.

ಡಬ್ಬಿಯ ಒಳಗಿನ ನಿರ್ವಾತ ಪರೀಕ್ಷಿಸಲು ಇನ್ನೊಂದು  ವಿಧಾನ ಬಳಕೆಯಲ್ಲಿದೆ. ಇದರಲ್ಲಿ ಒಂದು ಸರಳವಾದ ನಿರ್ವಾತ ಮಾಪಕವನ್ನು ಉಪಯೋಗಿಸುತ್ತಾರೆ. ಅದಕ್ಕೆ ಹೊಂದಿಕೊಂಡಂತೆ ಒಂದು ತೀಕ್ಷಣವಾದ ಸೂಚಕವಿರುತ್ತದೆ. ದಪ್ಪವಾದ ರಬ್ಬರಿನ ಗ್ಯಾಸ್ಕೈಟ್ ಹೊರಗಿನಿಂದ ರಕ್ಷಣೆ ನೀಡುತ್ತದೆ. ತೀಕ್ಷ್ಣವಾದ ಈ ಮುಳ್ಳನ್ನು ಡಬ್ಬಿಯ ಮುಚ್ಚಳದ ಮೂಲಕ ಒಳಗೆ ಚುಚ್ಚಿ ಸ್ವಲ್ಪ ತಿರುವು ಕೊಡಬೇಕು. ಆಗ ರಬ್ಬರ್ ಗ್ಯಾಸ್ಕೆಟ್ ರಂಧ್ರದ ಸುತ್ತಲು ನಿಕಟವಾಗಿ ಒತ್ತಿ ಗಾಳಿ ಸಂಚಾರಕ್ಕೆ ಎಡೆ ಇಲ್ಲದಂತೆ ಮಾಡುತ್ತದೆ. ಡಬ್ಬಿಯ ನಿರ್ವಾತವನ್ನು ನೇರವಾಗಿ ಮಾಪಕದ ಮುಖಫಲಕದ ಮೇಲೆ ಓದಬಹುದು. ಡಬ್ಬಿಯಲ್ಲಿ ದೋಷವಿದ್ದರೆ ಮುಖಫಲಕವು ನಿರ್ವಾತವನ್ನು ತೋರಿಸುವುದಿಲ್ಲ. ಡಬ್ಬಿಯನ್ನು ತೂತು ಮಾಡದೆಯೂ ನಿರ್ವಾತವನ್ನು ತಿಳಿಯಲು ಸಾಧ್ಯವಿದೆ. ಇದಕ್ಕೆ ನಿರ್ವಾತ ಪರೀಕ್ಷಕವನ್ನು ಉಪಯೋಗಿಸಬೇಕು.

೧೨) ಹೆಸರಿನ ಚೀಟಿ ಹಚ್ಚಿ ಪ್ಯಾಕ್ ಮಾಡುವುದು : ಡಬ್ಬಿಗಳ ಹೊರಭಾಗ ಯಾವಾಗಲೂ ಒಳಗಿರಬೇಕು. ಅತ್ಯಲ್ಪ ನೀರಿನಂಶವಿದ್ದರೂ ತುಕ್ಕು ಹಿಡಿಯಲು ಆಸ್ಪದವಾಗುತ್ತದೆ. ಡಬ್ಬಿಗಳನ್ನು ಕೆಲವು ವೇಳೆ ಸಮುದ್ರಕ್ಕೆ ಹತ್ತಿರವಾಗಿ ಅಥವಾ ಅಧಿಕ ಆರ್ದ್ರತೆಯುಳ್ಳ ವಾತಾವರಣದಲ್ಲಿ ದಾಸ್ತಾನು ಮಾಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಡಬ್ಬಿಯ ಹೊರಭಾಗಕ್ಕೆ ಅರಗು ಲೇಪಿಸಿದರೆ ತುಕ್ಕು ಹಿಡಿಯುವದಿಲ್ಲ. ಡಬ್ಬಿಗಳಿಗೆ ಹೆಸರಿನ ಚೀಟಿಯನ್ನು ಕೈಯಿಂದಾಗಲಿ ಅಥವಾ ಯಂತ್ರಗಳಿಂದಾಗಲೀ ಹಚ್ಚಬಹುದು. ಡಬ್ಬಿಗಳನ್ನು ಪ್ಯಾಕ್ ಮಾಡುವ ಮರದ ಪೆಟ್ಟಿಗೆ ಸಾಕಷ್ಟು ಗಟ್ಟಿಯಾಗಿರಬೇಕು. ಪೆಟ್ಟಿಗೆಗಳನ್ನು ರವಾನಿಸುವ ತನಕ ತಂಪಾದ ಒಣ ಜಾಗದಲ್ಲಿ ದಾಸ್ತಾನಿಡಬೇಕು. ನಮ್ಮ ದೇಶದಂಥ ಉಷ್ಣ ಪ್ರದೇಶಗಳಲ್ಲಿ ವಾತಾವರಣದ ಉಷ್ಣತೆಯು ವರ್ಷದ ಅನೇಕ ತಿಂಗಳು ಅಧಿಕವಾಗಿಯೇ ಇರುತ್ತದೆ. ಇಂಥ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೇಸಗೆ ಕಾಲದಲ್ಲಿ ದಾಸ್ತಾನಿಡಲು ನೆಲಮನೆಗಳು ಯೋಗ್ಯವಾಗಿರುತ್ತವೆ. ಇದರಲ್ಲಿಯ ಉಷ್ಣತೆ ಹೊರಗಿನ ವಾತಾವರಣದ ಉಷ್ಣತೆಗಿಂತ ಸಾಧಾರಣ ೧೦-೧೫ ಫ್ಯಾ. ನಷ್ಟು ಕಡಿಮೆಯಿರುತ್ತದೆ. ಡಬ್ಬಿಗಳನ್ನು ಅಧಿಕ ಉಷ್ಣತೆಯಲ್ಲಿ ದಾಸ್ತಾನಿಟ್ಟರೆ ಪದಾರ್ಥವು ತನ್ನ ಗುಣಮಟ್ಟವನ್ನು  ಕಳೆದುಕೊಳ್ಳುತ್ತದೆ. ಅಲ್ಲದೆ ಜಲಜನಕದಿಂದ ಆಗಾಗ್ಗೆ ಉಬ್ಬುವ ಮತ್ತು ರಂಧ್ರವುಂಟಾಗುವ ಸಂಭವವೂ ಇರುತ್ತದೆ. ಆದುದರಿಂದ ಡಬ್ಬಿಗಳನ್ನು ಎಂದೂ ಅಧಿಕ ಉಷ್ಣತೆಯಲ್ಲಿ ದಾಸ್ತಾನಿಡಬಾರದು.