ಏಳುಕೊಳ್ಳದ ಯಲ್ಲಮ್ಮ    ಪಲ್ಲ

ಒಂದಕ್ಕ ಒಲವಾಗಿ
ಎರಡಕ್ಕ ಹೊರತಾಗಿ
ಮೂರಕ್ಕ ಮೂಗಾಗಿ
ನಾಲ್ಕಕ್ಕ ಹೆಸರಾಗಿ
ಐದಕ್ಕ ಇದಿಯಾಗಿ
ನಿಂತಾಕಿ ಕುಂತಾಕಿ
ನೀ ಗುಡ್ಡದಾಕಿ
ಎಳು ಕೊಳ್ಳದಾಕಿ          ೧

ಅದಕ್ಕ ಅರುವಾಗಿ
ಎಳಕ್ಕ ಮೇಲಾಗಿ
ಎಂಟಕ್ಕ ನೆಂಟಾಗಿ
ಒಂಭತ್ತಕ್ಕ ವೈರಿಯಾಗಿ
ಹತ್ತಕ್ಕ ಮುತ್ತಾಗಿ
ಬಾಳಿದಾಕಿ ಬದುಕಿದಾಕಿ
ನೀ ಶಕ್ತಿ ಅವತಾರ
ನಿನಗೆ, ನನ್ನ ನಮಸ್ಕಾರ   ೨