ಅಣ್ಣ ತಮ್ಮದಿರೂs ಹೊಡುದಾಟಾs
ಹೆತ್ತಮ್ಮನ ವೊಡಲೂs ಉರವದೂ || ಉರವಟ್ಟಾ ಹೊತ್ತಿಗೂ ||
ಊರಲು ಪsಟೆಲ್ರಾ ಕರುದಳೂ ||
ಊರಲು ಪsಟೆಲ್ರಾ ಯೇನಂದಿ ಕರುದೊ?
“”ಈ ಕಡುದಾಟಾ ನಂಬರನೇs ಹಿಡಿಬೇಕೇs ||
“”ಹೆತ್ತಳು ನೀ ತಾಯಿs, ನಾವ್ಹೇಳುದೂs ಯೇನು ತಾಯಿs,
ಸರುಕಾರುಕ್ ವಂದ ಅರುಜಿಯೇ ಕೊಡಬವದೇs”
“”ನನು ಮಗನೇ,” ಅಂದೀss ಮರುಗಳೂ || ಮರುಗೀ ಲಾಪ್ಪಡುಸೀಯೇ
ಸೀದಾಲು ಕsಚುರಿಗೂ, ನೆಡುದಳೂ || ಲsವ್ನ ತಾಯೀs
“”ಈ ಗೋಳು ನಾನೂss ಲರಿಯನೇ || ನೋಡದೆ ವಳಿಯಲಾರೇ,
ತನುಗಲು ಈಸನೇss ಕೊಡಬೇಕೂs ||”
“”ವಳ್ಳಲು ಹೆಂಗಸೂ, ನೀ ಮಾತ್ಯಾsಕಾಡುತೇs?
ಬರವೆನೇ ನಿಮ್ಮಲೀss ಅರುಗಳುಗೇs ||
ಬರವೆನೇ ಆರುಗಳಿಗೇs ಮನಿಯಲ್ಲಿ ನಿನು ಮಗುನನ್ನೂ
ಕಯ್ಯಿಗು ಬೇಡೀss ತರುತೇನೇs ||
ಅಟ್ಟೂವಾs ಮಾತೂs ನಡುದsರೂ ವೊsಲಿಸರೂs
ಯಾನಾನು ಮೇನೆಯ ತರವರೂ || ತರವಟ್ಟು ಹೊತ್ತಿಗೂs
ಲಣ್ಣಲು ಕದ್ದು ಬಿದ್ದಿಯೇs ವೋಡುವನೂ || ವೋದುವಟ್ಟಾ ಹೊತ್ತಿಗೂss
ಪಿಸ್ತೂಲ್ ಹಚ್ಚಿ ಲವನಾ ಹೊಡಿವರೂs

ಸೊಂಟಾನಿಂದು ಕೆಳುಗೇs ಖೂನಿಯಲಾದೇವೊss
ಬಂತಿರುಗೀs ಮನಿಗೆs ಬರವsನೂs ||
ಕೇಳಲ್ಲೇ ನನು ತಾಯೇs, ನಾ ಮೋಸಾ ಮಾಡಿದೇs
ದುಕ್ಕsಲು ಸsಂತರುಸೀs ನನುಗ್ಹೇಳೂs ||
“”ವಳ್ಳೆವರ ಹೊsಟ್ಟೀಲೀs ಯಾಕ್ ಹುಟ್ಟಿದೆ ನೀನು ಪಾಪೀ ?
ಕಾರಲೂ ಈಸವಾs ನಿನ್ಯ್ ಕೊಡಸೂವೇs ||
ಗೊಂಬಿಯಂತವ್ನಾs ಮೋಸನೇ ಮಾಡಿದೇ
ಹನ್ನೈಡೂ ವರಸಾs ಗಳಿಗೆಲ್ಲಾ ಲೀ ಪಾಪಿಗೂs
ಕಯ್ಯಲು ಬಂದಿತೋ ನಿನುಗ್ ಹೇಗೇ
ವೋದುವ ಮಟಕ್ಹೋಗೀs ವೋದಿಯ ಬರುವಂತ ಬಾಲಾs
ಮೋಸಾಲು ಮಾಡಿದಿಯೋs ಲರುಗಳಿಗೇs || ಯಲು ವೈರೀ,
ದುಕ್ಕsಲು ಸಂತುರುಸೀs ವಳಿಲಾರೇ ||
ಇಸವಲು ತsಕ್ಕಂಡೀs ಮರುಣಾತೇs ||”*      ತಮ್ಮನ ಕೊಲೆ, ಹೆಗಡೆ ಎಲ್.ಆರ್. ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು ೧೯೭೯, ಪು.ಸಂ. ೮೧-೮೨.