ಲಂಕಾsಪಟ್ಟಣದಲ್ಲೀsss ಯಂತಾs ದೀವುಗಿ ಬೆಳಕೂsss?
ತಾಯಿ ಸೀತಮ್ನಾsss ಕೆಮಿವೋಲೀss || ಬೆಳುಕೀಗೂss
ರಂಬಿರು ಚಿತ್ತರವಾssss ಬರಿದರೂsss ||೩೯೯||

ವಳ್ಳೇನಾs ಮಾಡುದೇss ? ಮನಕ್ಯೇನ ಮಾಡೂದೇss ?
ಮೆರ್ವರ ಕಯ್ಯನಾsss ಸಗತೀಯೇsss || ಬಸವೇಸ್ರss
ದಯವಾsಗೂ ನನ್ನಾsss ಬಲನಲ್ಲೀsss ||೪೦೦||

ಕಳ್ಳss ಕುಡವವ್ರಲ್ಲಾsss ಮೀನಾs ತಿಂಬವ್ರಲ್ಲಾsss
ನಾವೊಂದೂ ಕೊಲುಕೇsss ಜೈನಾsರೂss || ಜಂಗಮ್ಮರುs
ನಿಂಗಾs ಕಟ್ವಲ್ಲೀsss ಅರಿಯಾsರೂss ||೪೦೧||

ಕಾಕೀ ಕರಕರಾsss ನನ ಜೇಮಾss ತರತರಾss
ಯಾವ್ ಹೊತ್ತೀಗ್ಯಾವಾsss ಅವರತಾರಾss | ದೇವರೇs,
ಜೇಮssದಲಿ ಬಾಳೂsss ಗೆಲವೆಲ್ಲಾsss ||೪೦೨||

ಮಾಗೀs ಮಳುಗಲಕೇsss ಯೆಲ್ಲಿರುವೇs ಗಿಳಿರಾಮs?
ಅಂಬsರದ ಮೇನೇsss ಅರುವೇವುsss || ತೋಟಾsದಾss
ಸಿಂಗಾssರಾsದೊಳಗೇsss ಸೆಳುಮಂಚಾsss ||೪೦೩||

ಹೊತ್ತರ ಮುಂಚಿನ ದಾನss ಅನ್ನsಲ್ವಸ್ತ್ರದಾನs
ಮಜ್ಹಾನ ದಾನsss ಶಿವದಾನs || ಅವ್ರಮನ್ಯಲೀs
ಯಜ್ಜೂಗಿ ದಾನss ಬಿಸುಲಲ್ಲೀsss ||೪೦೪||

ಯರವಿನ ಬಂsಗರಾsss ಯರವಿನ ಸಿಂಗಾsರಾs
ಹೆರುಗೆ ಕಾsಣಮ್ಮಾss ಆ ಸಂಸಾರs || ದರಿಯಾs ಮೇನೇss
ಇರವೆನೆಂಬರಗೂsss ತೆರವೆಲ್ಲsss ||೪೦೫||

ವಡಿದೀರಂಗಳಾ ಊಟೀಯ ಚಪ್ಪರಾ
ಸಾವ್‌ಕಾಸೇ ಬನ್ನೀ ವಡೀದೀರೇ|| ನಿಮ್ಮ ಕಾಲಾನಾs
ಜೀಕೀಗೇ ನಾಯೀ ಬಗಳೂದೂsss ||೪೦೬||

ಕೊಂಬರುನಾ ಕೋಡೇ ಕೊಡುನ ತಾರಂದರೇ
ಕೊಡುನ ಮೆನೆನ ಬರುದಿರೇ ? || ಗೋಕಣುದಾs
ಕಡುನೆಳ್ಳಿಮರನಾssss ಬರುದಿರೂsss ||೪೦೭||

ವಳ್ಳssಬಿಸುಲಿsಗೇss ದೇವೀಯಆ ಮರತಂಪುss
ಹಳ್ಳದತ್ತಿಕಾಯಿ ಯೆಳ್ಳೂssಗಿನ ತಂsಬುಳೀss
ಯೆಲ್ಲುಂಡೇss ಚಿಕ್ಕಾsss ಬಣಜಿಗಾ ? || “ನಿನ್ನೂರಾs
ಹಳ್ಳಿಯ ಮೇನುಂಡೇss ಹಸುವಿಲ್ಲಾssss” ||೪೦೮||

ಹಾಂಗ್ಯಾಕೆ ಬಂದೀಯೇss ? ಹಿಂಗ್ಯಾಕೆ ನಿಲತೀಯೇss ?
ನನ್ನಾss ಕಂಡ್ಯಾಕೇsss ಬೆರಗಾದೇss ? || ನಿನು ಕೆಮಿಯಾನಾsss
ಚಿನ್ನಾsಕಿಂದ್ಹೆಚ್ಚುsss ಚಿಲುವೀಯೇsss? ||೪೦೯||

ಹರ್ಕಂತ್ರ ಪೋರನಾss ಊರಕಂತಾ ನೋಡೀರೀ
ಹರ್ಕಂಗೀ ಮೇನೇsss ಹಳಿಯಂಗೀ || ಲಿಟಿಕಂಡೀss
ಉರ್ಕಂತಾss ಮಾಡನ್ಯೇsss ಬಯ್ಲಲ್ಲೀsss ||೪೧೦||

ಅಕ್ ಬೆಳ್ವದು ಅಂಕೋಲೀsss ಮುತ್ ಬೆಳ್ವದು ಗೋಕೈಣss
ಹಿತ್ಲಕಾಯಿ ಬೇಳ್ವದೂsss ತದಡೀಯೇss || (ಯಾ)ನಾರೀರಾsss
ಮುತ್ತಿನ ಮೂಗುತೀssss ಮೊಳುನೀಟಾssss ||೪೧೧||

ದೊಡ್ಡsರ ಹಿಂಡರುss ಕಟ್ಟಿsದ ಮುಡಿ ಚೆಂದಾss
ಬೆಟ್ಟsದ ಸೇಗೀss ಯೆಲಿ ಚೆಂsದಾsss || ನಮ್ಮನಿಯಾs
ಕೊಟ್ಟುಗಿಲಿ ಚೆಂದಾsss ಕರುಗೋಳುss ||೪೧೨||

ಬಾಸೇss ವಳ್ಳವ್ನಾsss ಮೀಸಿ ಮsಣ್ಣಾದವೇ
ದೇಸsದ ಮೇನವ್ನಾsss ಕೈಕಾಲೂsss || (ಲ) ಕಡ್ದರಿಂದೀsss
ಆ ಸುದ್ದೀss ನಮಗೇsss ಬರಲಿಲ್ಲಾssss ||೪೧೩||

ಸಾವರ ಸಂಬರದಾsss ಹಡಗೂs ಬಂದಿಳದಾsವೇss
ಯಾವಾರಾss ದೊಡಿದೀರೂss ಮನಿಲೆಲ್ಲಾss || ಬಣುಜೀಗಾss,
ಸಾವರ ಸಂssಬವರವಾssss ಅಳ್ದ ಹೋಗೂss || ಗೇರ್‌ಸೊಪ್ಪೀss
ಹೇರೊಂದು ಬಂssದದಿಯೇsss ಅಳವೀಲೀsss ||೪೧೪||

ಕೊಕ್ಕss ಕೂರಿತೇsss ಬೆಕ್ಕು ಯೆಸರೆತ್ತೀತ್ತೇsss
ಬೆಳ್ಳಕ್ಕಿss ಜಿಗ್ಗಾsss ಮುರದೀತೇss || ಆಂಕೋಲೀss
ಕನ್ನsಡಕಮ್ನ ಜಬ್ಬೂssss ಹೊಳದೀತೇsss ||೪೧೫||

ಆಡ್ವರೂs ಆಡುಕಿ ತಪ್ಪಿss ಓದ್ವರು ಓದುಕಿ ತsಪ್ಪಿs
ಸಿರಿಯವರ ಕೈಯsss ಬರ ತಪ್ಪಿs ಸಾವಿರ ತsಪ್ಪಿs
ತಪ್ಪಂದಿ ಕೈಯsss ಮುಗುವರುsss ||೪೧೬||

ಹಾಲಂತಾs ಬಿಸುಲಲ್ಲೀss ಗೋರಂಬೂ ಗುಡ್ಡಿಮೇನೇss
ಪುತ್ತುsಲಿ ಸರದಾss ಯೆಲೆಬಳ್ಳೀss ||
ಪುತ್ತುಲಿ ಸರದಾsss ಯೆಲಿಬಳ್ಳಿ ಚಂsದ ಕಂಡೀss
ಗೋರಂsಬೂ ಸರುಪಾsssಲ್ಹೆಡಿಯೆತ್ತೀssss ||೪೧೭||

ಗಿಡ್ಡೀsಯ ಕೈಗೇsss ಕಡ್ಡೀ ಕಾಜಿನ ಬsಳೇss
ಗಿಡ್ಡೀ ಕೈಬೀಸೀsss ಬರವಾsಗೇss || (ನಮ್ಮೂರ)
ವಡ್ಯಣದ ತೇರssss ಯೆಳುದಂತೆss ||೪೧೮||

ರಂಡೇ ಅಂಬವ್ನಾsss ಹಿಂಡೂsತಿ ಸಾಲಯಲಿss
ಮುಂಡೂಗೀ ಚಪ್ಪೂsss ಅಲಿಯಾsಲಿss || ದೇವರೇs,
ರಂಡೇ ಅಂಬವ್ನಾsss ಮದವೀಗೇsss ||೪೧೯||

ಕಣ್ಣss ಗಂಗಳಾss ನನ್ನಾ ಮಾತಾs ಕೇಳುs
ಚೆನ್ನಿಗಾs ಕಂಡಲ್ಲೀss ತಲಬಗ್ಗೂss || (ಗ್ಗಾ)ದಿದ್ದsರೇsss
ನಿನ್ನಿಂದೇ ಬಂದಾsss ಕತನsವೇsss ||೪೨೦||

ಅಂಬೂತೀ ಕೊಂಬೂತೀss ಕೊಂಬಿನ ಮನಿದೀಮಾತೀss
ನಂಬರ ಬಿದ್ದದ್ಯೇsss ನಿನು ಮೇನೇss || ಕುಮಟೀಯ
ಸಂಬಳs ಬಿಟ್ಟೀsss ಬರನಾರೇss ||೪೨೧||

ಮಳ್ಳೀಗೆ ಮಕ್ಕಳ್ಹುಟ್ಟೀ ಅಲ್ಲೇ ಜೋಗುಳ ಹೊರದೀss
ಮಳ್ಳೀಯs ಗಂಡಾss ಪಟಗಾರಾsss || ನಾsದರೆss
ಮುಳ್ಳೀs(ಯ)ಗಜ್ಞೀsss ತನಗಂದಾssss ||೪೨೨||

ಕಟ್‌ಬಣ್ಣಾsss ಹುಟ್‌ಬಣ್ಣಾsss ಹುಟ್ಟೀತ್ ಹೆಗ್ಡಿಊರಾಗೇ,
ಹುಟ್‌ದಂತವ್ರ್‌ಗ್ಯೆಲ್ಲಾsss ಹೊಯ್ಮಾಲೇ || (ಲೀ) ಮಾತಕೇಳೀss
ನುಗ್ಗೀ ಕಲೆದ್ದಿsss ಕೊಣವsದೂsss ||೪೨೩||

ಲಾತೇರೀತೇರೂsss ಸೋದೀss ನಿಂಗನ ತೇರೂss
ಬಾಡಾsದs ಬಟ್ಟಾರಾsss ಹೊಸು ತೇರೂss ||
ಬಾಡಾsದs ಬಟ್ಟಾರಾsss ಹೊಸು ತೇssರನ ಮೇನಿನ್ನೇss
ನೂತನುದಾss ಬೊಂಬೇsss ಹದಿನಾsರುssss ||೪೨೪||

ಗೋಕುಲ ರಾಜ್ಯದಲ್ಲೀ ಯಾತರುದಾs ಗೋಳ್ಯsವೇss ?
ಗೋಕೂsಟ್ಣರಾಯಾsss ಕೊರಳೂಬೀss || ಇಲ್ಲಿರುವಾss
ಗೋಪೀssಯರು ಕದವಾsss ತೆಗವsರುss ||೪೨೫||

ಗೋಕಣ ರಾಜೀಲೀss ಗೋಳಂಬಾssದದುವೇನೇsss?
ಗೋಕೂsಟ್ಣರಾಯಾsss ಕೊರಳೂಬೀss || ಬರವಾssಗೇss
ಗೋಪಮ್ಮರು ಕದವಾsss ಜಡದಾರೆssss ||೪೨೬||

ತಾಯ್ ಸತ್ತಾsss ಮಕ್ಕಳಿರಾsss, ಆಯಾವೂs ನೋಡೀsರೀss
ಆಯಾsವೂs ಬೇರೇsss ಪರಿ ಬೇರೇsss || ಬಾಳೀsಯಾs
ಕುಕ್ಕssಡss ಬೇರೇsss ಕೊನಿ ಬೇsರೇsss ||೪೨೭||

ಪೇಟೆಮಾsರ್ ಹೇಣುಮಕ್ಕsಳುss ಕಾಂಬೂಕೇss ಚೆಲುವೀsರೂss
ಗಾಳೀss ಬೀಸಿದ್ರೇsss ಬಳಕೂssರೂsss || ನಮ್ಮೂರಾsss
ಹಾಳೀ ಮೇನ್ ಹೇಂಗೇsss ತಿರಗೂssರೇsss? ||೪೨೮||

ಇಲ್ಲೀ ಹೇಳಿದ್‌ ಹಾಡೂss ದಿಲ್ಲೀಗೇss ಯಸವssದೂss
ದಿಲ್ಲೀ ನಾರ್ಯವ್ರೂsss ಕೆಮಿದುಂಬೀsss || ಯೇನಂಬೂರುss ?
ಯಾವಾss ಸೋಬಾsನದಾsss ದೆನಿಯೋsರೇss ? ||೪೨೯||

ಕಳ್ಳಾss ಕಳ್ವಕ್ಹೋಗೀss ಬೆಳ್ಳೀಸೋಲಕ್ ಬಿದ್ದಾsss
ಕಳ್ಳಾನಾs ತಂಗೀsss ವಳಗಿದ್ದೀsss ||
ಕಳ್ಳಾನಾs ತಂಗೀsss ವಳಗಿದ್ಯೇನಂಬೂದೂss ?
ಕಳುಬೇಡಾs ಅಣ್ಣಾsss, ಬಯಿಬಂಗಾsss || ಕುಮಟೀಯಾss
ಬೆಳ್ಳೀs ಸೋಲಕೇsss ಗುರಿಯಾದೇsss ||೪೩೦||

ಕಳ್ಳರ ಹಾವುಳೀsss ಪುಂಡರಾsss ಬಾದಿಕಾsss
ನಾವಿಲ್ಲಿರವsಕೇss ಮನಸೆಲ್ಲss || ದೇವssರೇss,
ನಾವಿರವಾss ಗುಡ್ಡೀsss ಮರಿಯಲ್ಲೀsss ||೪೩೧||

ಕೋಡಗೆ ಕೋಡಿಲ್ಲss ತುರ್ಕರಿಗೆ ಜುಟ್ಟಿಲ್ಲsss
ಮೂರೂರ್ ಹೈಗರಿಗೆssss ವಕ್ಕಲೆಲ್ಲs || ಬಗ್ಗೋಣs
ಪಂಡ್ತೋಳ್ ಹಿಂಡರಿಗೇsss ಪಲವೆಲ್ಲsss ||೪೩೨||

ಹಾಡಾs ಹೇಳ್ವ ಬಾರೇsss ಊರಾs ಗೌಡನ ಸೊಸಿಯೇss
ಲನುರಾssಜನ ಸೊಸಿಯೇss, ತೆರುಮಲ್ಲೀss || ಸಂಕ್ರಬಸುವೀss
ನನ್ಹಾಡೀಗುsತ್ತರವಾsss ಕೊಡು ಬಾರೇsss ||೪೩೪||