ಮಳೆ ಹೋಯ್ತೆಂದು ಮಳೆರಾಯ್ನ ಬಯ್ಯದಿರಿ
ಸಾವಿರ ಹೊನ್ನಿನ ಸರಗಂಟಿ ತಕ್ಕೊಂಡು,
ಸಾಲಕೆ ಹೋಗ್ಯವನೆ ಮಳೆರಾಯ
ಮಳೆಗಳು ಯಾಕ್ಹೋದವೋ-ಲೋಕವನು
ಸಾಕಲಾರದೆ ಹೋದವೋ-ಲೋಕವನು
ಸಲಹಲಾರದೆ ಹೋದವೊ |
ಪುಣ್ಯವಿಲ್ಲದ ನಾರಿ ಪುರುಷನ ಬೈದರೆ
ಅನ್ಯಾಯ ಮಳೆ ಹೋದವೊಕೆ ||