ಸಂವಾದವು ಸಂಗೀತದ ಪ್ರಾಣವಾಗಿದೆ. ಸಂವಾದವೆಂದರೇನು? ಎರಡು ಕ್ರಮಾಗತ ಧ್ವನಿಗಳು ಕಿವಿಗೆ ಮಧುರವಾಗಿ ಕೇಳಬೇಕು. ಅಥವಾ ಎರಡು ಧ್ವನಿಗಳು ಏಕಕಾಲಕ್ಕೆ  ಕಿವಿಗೆ ಮಧುರವಾಗಿ ಕೇಳಬೇಕು.

ಷಡ್ಜ ಮತ್ತು ಪಂಚಮ ಸ್ವರಗಳು ಕ್ರಮವಾಗಿಯಾಗಲೀ ಇಲ್ಲವೆ ಏಕಕಾಲದಲ್ಲಾಗಲೀ ಕಿವಿಗೆ ಇಂಪಾಗಿ ಕೇಳುತ್ತವೆ. ಅದರಂತೆ ಷಡ್ಜ ಮತ್ತು ಮಧ್ಯಮ ಸ್ವರಗಳ ಧ್ವನಿಗಳು ಕ್ರಮವಾಗಿಯಾಗಲೀ ಇಲ್ಲವೆ ಏಕಕಾಲದಲ್ಲಾಗಲಿ ಕಿವಿಗೆ ಇಂಪಾಗಿ ಕೇಳುತ್ತದೆ. ಆದ್ದರಿಂದ ಷಡ್ಜ – ಪಂಚಮ- ಮತ್ತು ಷಡ್ಜ – ಮಧ್ಯಮ ಸ್ವರಗಳು ವಾದಿ-ಸಂವಾದಿಗಳಾಗುತ್ತವೆ.

ಪ್ರಚಲಿತ ಸಂಗೀತದಲ್ಲಿ ರಾಗ ಮಾರವಾದ ವಾದಿ-ಸಂವಾದಿಗಳು ಕೋಮಲ ರೆ ಮತ್ತು ಧ ಸ್ವರಗಳಿವೆ. ಅದರಂತೆ ಶ್ರೀರಾಗದ ವಾದಿ-ಸಂವಾದಿಗಳು ಕೋಮಲ ರೆ ಮತ್ತು ಪ, ಸ್ವರಗಳಿವೆ. ಮಾರವಾರ ರೆ – ಧ ಗಳ ಅಂತರ ೧೨ ಶೃತಿ ಮತ್ತು ಶ್ರೀರಾಗದ ರೆ-ಪಗಳ ಅಂತರ ೧೧ ಶೃತಿ ಇದೆ. ಆದರೆ ಸ – ಪ ಮತ್ತು ಸ-ಮ ಗಳ ಅಂತರ ಕ್ರಮವಾಗಿ ೧೩ ಮತ್ತು ೯ ಶೃತಿಗಳಿವೆ. ಆದ್ದರಿಂದ ರೆ-ಧ ಮತ್ತು ರೆ-ಪಗಳು ಪರಸ್ಪರ ಸಂವಾದಿ ಸ್ವರಗಳಲ್ಲ. ಇದು ಶಾಸ್ತ್ರವಿರೋಧವಿದೆ.

ತಂಬೂರಿಯ ಮೇಲೆ ನಿರಂತರ ಹೊರಡುವ ಧ್ವನಿಗಳಿಗೆ ಪ್ರಚಲಿತ ಸಂಗೀತಗಾರರು ಷಡ್ಜ-ಪಂಚಮ, ಇಲ್ಲವೆ ಷಡ್-ಮಧ್ಯಮ ಎಂಬ ಸಂಜ್ಞೆಗಳನ್ನು ಕೊಟ್ಟಿರುತ್ತಾರೆ. ನಿರಂತರ ಬರುವ ಧ್ವನಿಗೆ ‘ಸ್ಥಾಯಿ’ ಸ್ವರವೆಂದು ಭರತಾದಿಯವರು ಕರೆದಿದ್ದಾರೆ.  ‘ಸ್ಥಾಯೀ’ ಸ್ವರವೇ ‘ವಾದಿ’ ಸ್ವರ ಇಲ್ಲವೆ ‘ಅಂಶ’ ಸ್ವರವಿರುತ್ತದೆ. ಎಂದ ಮೇಲೆ ಪ್ರಚಲಿತ ಸಂಗೀತದ ಪ್ರತಿಯೊಂದು ರಾಗದ ವಾದಿ ಸ್ವರವು ಷಡ್ಜ (ಸ್ಥಾಯೀ) ಸ್ವರವಿದೆ. ಸಂವಾದಿ ಸ್ವರವು ಪಂಚಮ ಇಲ್ಲವೆ ಮಧ್ಯಮವಿರುತ್ತದೆ. ರಾಗ ಮಾರವಾ ಅಥವಾ ಶ್ರೀ ಹಾಡುವಾಗ ತಂಬೂರಿಯ ಮೇಲೆ ಹೊರಡುವ ನಿರಂತರ ಧ್ವನಿಗಳಿಗೆ ಷಡ್ಜ-ಪಂಚಮ ಇಲ್ಲವೆ ಷಡ್ಜ-ಮಧ್ಯಮ ಎಂದೇ ಕರೆಯುತ್ತಾರೆ.

ಆದ್ದರಿಂದ ಮಾರವಾ ಅಥವಾ ಶ್ರೀ ಆಗದ ವಾದಿ-ಸಂವಾದಿಗಲು ರೆ-ಧ, ಇಲ್ಲವೆ  ರೆ-ಪ ಗಳಾಗಲಾರವು. ಪ್ರತಿಯೊಂದು ರಾಗದ ವಾದಿ ‘ಷಡ್ಜ’ ಸಂವಾದಿ ಪಂಚಮ ಇಲ್ಲವೆ ಮಧ್ಯಮವೆಂದು ಗಮನಿಸಬೇಕು. ಪಂಚಮ ವ್ಯರ್ಜವಿರುವ ರಾಗಗಳಲ್ಲಿ ಮಧ್ಯಮ ಸಂವಾದಿಯಾಗಿದೆ. ಪಂಚಮ ಮತ್ತು ಮಧ್ಯಮ ಎರಡೂ ಸ್ವರಗಳು ವರ್ಜ್ಯವಿರುವ ರಾಗಗಳಲ್ಲಿ ಷಡ್ಜವೇ ವಾದಿ ಮತ್ತು ಸಂವಾದಿಯಾಗಿರುತ್ತದೆ. (ಮಾರವಾ ರಾಗದ ವಾದಿ-ಸಂವಾದಿಗಳು ಷಡ್ಜವೇ ಆಗಿದೆ).

ಪ್ರಚಲಿತ ಸಂಗೀತದಲ್ಲಿ ಬರುವ ವಾದಿ-ಸಂವಾದಿ ಸ್ವರಗಳ ಅವಸ್ಥೆ ಏನು? ಇದರ ವಿವರ ಯಥಾ ಸ್ಥಾನದಲ್ಲಿ ವಿವರಿಸಿದೆ.

‘ಗ್ರಾಮ-ಸಂಶ್ಲೇಷಣೆ’ ಎಂದರೆ ಮಧ್ಯಮ ಗ್ರಾಮವು ಷಡ್ಜ ಗ್ರಾಮದಲ್ಲಿ ಸೇರಿಸುವುದು. (ಪ್ರಾಚೀನದಲ್ಲಿ ಎರಡು ಗ್ರಾಮಗಳಿದ್ದವು) ಷಡ್ಜಗ್ರಾಮದ ೯ ಸ್ವರಗಳು ಇಂತಿವೆ. ಷಡ್ಜ, ಋಷಭ, ಗಾಂಧಾರ, ಅಂತರ ಗಾಂಧಾರ, ಮಧ್ಯಮ, ಪಂಚಮ, ದೈವತ, ನಿಷಾಧ ಮತ್ತು ಕಾಕಲಿ ನಿಷಾಧ ಇದರಲ್ಲಿ ಮಧ್ಯಮ ಗ್ರಾಮದ ಕಾಕಲಿ ನಿಷಾದ (ಆಧುನಿಕ ತೀವ್ ಮಧ್ಯಮ) ಸೇರಿಸಲು ಒಟ್ಟು ೧೦ ಸ್ವರಗಳಿರುತ್ತವೆ.

ಆಧುನಿಕ ರಾಗಗಳು ಗ್ರಾಮ ಸಂಶ್ಲೇಷಣೆಯಿಂದ ಜನ್ಮ ತಾಳಿವೆ. ಈ ಗ್ರಾಮ ಸಂಶ್ಲಷಣಾ ಕ್ರಿಯೆ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಆರಂಬವಾಗಿದೆ. ಗ್ರಾಮದಿಂದ ಜನ್ಮ ತಾಳುವ ಮೂರ್ಛನೆಯಲ್ಲಿ ನಿ, ನಿ, , ಗ, ಮ, ಮ ಗಳನ್ನು ಸೇರಿಸಿ ಹೊಸ ರಾಗಗಳನ್ನು ನಿರ್ಮಿಸಿದರು. ತಮ್ಮ ಥಾಟ ಪದ್ಧತಿಯನ್ನು ಬಲಾತ್ಕಾರದಿಮದ ಮೂರ್ಛನಾ ಪದ್ಧತಿಯಲ್ಲಿ ಸೇರಿಸಿದರು. ಇದರ ಪರಿಣಾಮದಿಂದ ರಾಗ ವಿಶೇಷದಲ್ಲಿ ಬರುವ ಹೆಸರುಗಳು ಬದಲಾದವು. ಹೊಸ ರಾಗಗಳ ರಸವಿಶೇಷದಲ್ಲಿ ವಿನಿಯುಕ್ತಗೊಳಿಸುವ ಸಿದ್ಧಾಂತದ ಲೋಪವಾಯಿತು. ಪ್ರತಿಯೊಂದು ಸ್ಥಾಯೀ ಸ್ವರವು ಪ್ರಚಲಿತ ರಾಗಗಳಲ್ಲಿ ಷಡ್ಜವಾಯಿತು. ಇದರ ಪರಿಣಾಮದಿಂದ ಷಡ್ಜದ ಪರವರ್ತಿ (ಮುಂದಿನ) ಸ್ವರಗಳ ಸಂಜ್ಞೆಗಳು ಬದಲಾದವು. ರುಚಿ ಭೇದಕ್ಕಾಗಿ ಹೊಸ-ಹೊಸ ರಾಗಗಳು ಹುಟ್ಟಿಕೊಂಡವು. ಒಂದು ಸ್ವರದ ಎರಡು ರೂಪ (ನಿ, ನಿ, , ಗ, ಮ, ಮ)ಗಳು ನಿರಂತರವಾಗಿ ಒಂದು ರಾಗದಲ್ಲಿ ಪ್ರಯೋಗಿಸಿದರು.

ಉದಾ :
ಗ ಮ ಧಮ ನಿ ನಿ ರೆ ಗ ವನ್ನು
ಸ ರೆ ಮ ಪ ನಿ ಸ ಎಂದು

ತೋಡಿ (ದಕ್ಷಿಣದ ನಟವರಾಲಿ) ಥಾಟ ಎಂದು ಮಾಡಿದರು. ಪ್ರಸ್ತುತ ಈ ಸ್ವರಾವಲಿ ಸ್ಥಾಯೀ ಸ್ವರ ‘ಗ’ ಇದೆ ಮತ್ತು ಭರತೋಕ್ತ ಕರುಣೆಯ ಅಭಿವ್ಯಂಜಕವಿದೆ.

ಶುದ್ಧ ಸ್ವರ ಸಪ್ತಕ ಯಾವುದು? ಮತ್ತು ಹೇಗಿರುತ್ತದೆ?

ಉತ್ತರ ಹೀಗಿದೆ –

ಸಪ್ತಕದ ಮೂಲ ಧ್ವನಿ ಷಡ್ಜವು ನಾಲ್ಕು ಶೃತಿ ಪಡೆದಿರಬೇಕು. ಋಷಭವು ಮೂರು ಶೃತಿ ಮತ್ತು ಗಾಂಧಾರವು ಷಡ್ಜದಿಂದ ಐದು ಶೃತಿ ಅಂತರದಲ್ಲಿರಬೇಕು. ಎಂದರೆ ಗಾಂಧಾರವು ಋಷಭದಿಂದ ಎರಡು ಶೃತಿ ಅಂತರದಲ್ಲಿರಬೇಕು. ಸ, ರೆ, ಗ, ಗಳು ಪ, ಧ, ನಿ ಗಳೊಡನೆ ಸ-ಪ, ಸಂವಾದ ಭಾವ ಹೊಂದಿರಬೇಕು. ಎಂದರೆ ಸ-ಪ, ರೆ-ಧ ಮತ್ತು ಗ-ನಿ ಗಳು ಷಡ್ಜ-ಪಂಚ ಸಂವಾದ ಭಾವ ಹೊಮದಿರಬೇಕು. ಮಧ್ಯಮ, ಸ್ವರವು ಸಪ್ತಕ (ಎಂದರೆ ಸರೆಗಮಪಧನಿ) ದ ನಟ್ಟನಡುವೆ ಸ್ಥಾಪಿಸಿರಬೇಕು ಮತ್ತು ಷಡ್ಜವು ಸ-ಪ ಮತ್ತು ಸ-ಮ ಭಾವ ಹೊಂದಿರುವ ಎರಡು ಸಂವಾದಿ ಸ್ವರಗಳನ್ನು ಹೊಂದಿರಬೇಕು.

ಇವು ಷಡ್ಜ ಗ್ರಾಮೀಯ ಸ್ವರಗಳು. ಇವನ್ನು ಹೀಗೆ ಬರೆಯಬಹುದು.

4 ಸ  3 ರೆ3,  2 ಗ59  4 ಪ13  3 ಧ18  2 ನಿ20

(ಗ ಮತ್ತು ನಿಗಳು ಅತಿ ಕೋಮಲ ಸ್ವರಗಳೆಂದು ಈಗಿನವರು ಗ್ರಹಿಸುತ್ತಾರೆ. ಆದರೆ ಇವು ಭರತನ ಶುದ್ಧ ಗಾಂಧಾರ ಮತ್ತು ನಿಷಾಧಗಳಿವೆ)

ಉತ್ತರ ಭಾರತೀಯ  ಸರಸ್ವತಿಯ ವೀಣೆಯ ಮೇಲೆ ೧೨ ಅಚಲ ಪರದೆಗಳನ್ನು ಸ್ಥಾಪಿಸಿದ ಪರಿಣಾಮ ಕೋಮ. ರೆ ಮತ್ತು ಕೋಮಲ ಗಳ ನಿರ್ಮಾಣಗೊಂಡವು.  ಇವು ಕಾಲ್ಪನಿಕ ಸ್ವರಗಳು ಪ್ರಾಚೀನ ಸಂಗೀತದಲ್ಲಿರಲಿಲ್ಲ. ಇವು ಮೂರ್ಛನಾ ಪದ್ಧತಿಯಲ್ಲಿ ಸ್ವಾಭಾವಿಕ ಸ್ವರ ಸ್ಥಾನ ಪಡೆದಿದ್ದವು. ಆಧುನಿಕ ತೀವ್ರ ಮಧ್ಯಮ ಮ ಇದರಿಂದ ಹೊರತಾಗಿಲ್ಲ.

‘ಅಪನ್ಯಾಸ-ಸ್ವರ’ ಇದು ಪ್ರಾಚೀನ ಸಂಗೀತದಲ್ಲಿ ಬರುವ ಒಂದು ಸ್ವರ. ಈ ಸ್ವರವೇ ಪ್ರಚಲಿತ ಸಂಗೀತದಲ್ಲಿ ವಾದಿ-ಸಂವಾದಿ ಸ್ವರವೆಂದು ಇಂದಿನವರು ಭ್ರಮಿಸಿದ್ದಾರೆ. ಒಂದು ಉದಾಹರಣೆಯಿಂದ ತಿಳಿದುಕೊಳ್ಳುವುದು.

ಅಪನ್ಯಾಸ ಸ್ವರವೆಂದರೆ ಪ್ರಾಚೀನ ಸಂಗೀತದಲ್ಲಿರುವ ಗೀತದ ಸ್ಥಾಯೀ ಇಲ್ಲವೆ ಅಂತರಾದಲ್ಲಿ ಒಂದು ಆವೃತ್ತಿಯ ನಂತರ ಷಡ್ಜ, ಮಧ್ಯಮ ಮತ್ತು ಪಂಚಮ ಸ್ವರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ವರದ ಮೇಲೆ ವಿಶ್ರಾಂತಿ ಪಡೆದರೆ ಆ ಸ್ವರಕ್ಕೆ ಅಪನ್ಯಾಸ ಸ್ವರವೆನ್ನುವರು. ಗೀತದ ಪೂರ್ವಾಂಗದ ಸ್ವರದ ಮೇಲೆ ವಿಶ್ರಾಂತಿ ಪಡೆದರೆ ಆ ಸ್ವರಕ್ಕೆ ‘ವಾದಿ’ ಸ್ವರವೆಂದೂ ಉತ್ತರಾಂಗ ಸ್ವರದ ಮೇಲೆ ವಿಶ್ರಾಂತಿ ಪಡೆದರೆ ಆ ಸ್ವರಕ್ಕೆ ‘ಸಂವಾದಿ’ ಸ್ವರವೆಂದೂ ಇಂದಿನವರು ಭ್ರಮಿಸಿದ್ದಾರೆ.

ಪ್ರಚಲಿತ ಯಮನ ರಾಗದ ಯಾವುದೇ ಗೀತವು ಪೂರ್ವಾಂಗದಲ್ಲಿದ್ದರೆ ಇಲ್ಲವೆ ಗ ಸ್ವರದ ಮೇಲೂ ಮತ್ತು ಉತ್ತರಾರ್ಧದಲ್ಲಿ ಧ ಇಲ್ಲವೆ ನಿ ಸ್ವರದ ಮೇಲು ವಿಶ್ರಾಂತಿ ಪಡೆಯಲು ರೆ ಇಲ್ಲವೆ ಗ ಪೂರ್ವಾಂಗದಲ್ಲಿಯೂ ಧ ಇಲ್ಲವೆ ನಿ ಉತ್ತರಾಂಗದಲ್ಲಿಯೂ ಅಪನ್ಯಾಸ ಸ್ವರಗಳಾಗುತ್ತವೆ. ಇವೇ ಸ್ವರಗಳು ಇಂದಿನ ಸಂಗೀತಗಾರರ ದೃಷ್ಟಿಯಲ್ಲಿ ವಾದಿ-ಸಂವಾದಿ ಸ್ವರಗಳಾಗಿವೆ.

ಯಮನ ರಾಗದ ವಾದಿ ಗ ಮತ್ತು ಸಂವಾದಿ ನಿ ಎಂದು ಸರ್ವವಿಧಿತವಿದೆ. ಆದರೆ ಪ್ರಾಚೀನದನ್ವಯ ಇವೆರಡು ಅಪನ್ಯಾಸ ಸ್ವರಗಳಿಗೆ ಯಮನ ರಾಘದ ಸ್ವರಗಳಿಗೆ ಮೂರ್ಛನ ಪದ್ಧತಿಯ ಸ್ವರಗಳ ಹೋಲಿಕೆ ಹೀಗಿದೆ

ಯಮನ ಸ್ವರಗಳು         : ಸ  ರೆ  ಗ  ಮ  ಪ  ಧ  ನಿ  ಸ

ಮೂರ್ಛನಾ ಸ್ವರಗಳು     : ಗ 4  ಮ 4  ಪ 3  ಧ 2  ನಿ 4  ಸ 3  ರೆ 3  ಗ

ಯಮನ ರಾಗದ ಗ, ಮೂರ್ಛನೆಯ ಪ, ಯಮನ ರಾಗದ ನಿ ಮೂರ್ಛನೆಯ ರೆ ಸ್ವರಗಳಾಗಿವೆ. ಇವು ಪ್ರಾಚೀನದ ಅಪನ್ಯಾಸ ಸ್ವರಗಳು. ಇವೇ ಸ್ವರಗಳನ್ನು ಯಮನ ರಾಗದ ವಾದಿ ಮತ್ತು ಸಂವಾದಿ ಸ್ವರಗಳೆಂದು ಇಂದಿನವರು ಭ್ರಮಿಸಿದ್ದಾರೆ. ಮೇಲ ಪದ್ಧತಿಯ ಅಂತರ್ಗತ ಯಮನ ರಾಗದ ವಾದಿ ಮತ್ತು ಸಂವಾದಿಗಳು ಷಡ್ಜ ಮತ್ತು ಪಮಚಮಗಳಾಗಿವೆ. ಈ ಷಡ್ಜ ಮತ್ತು ಪಂಚಮಗಳು ಮೂರ್ಛನಾ ದೃಷ್ಟಿಯಲ್ಲಿ ಗ ಮತ್ತು ನಿ ಇವೆ. ಇವು ಯಮನ ರಾಗ ವಾದಿ-ಸಮವಾದಿಗಳು ಯಮನ ರಾಗದ ತೀವ್ರ ಮ ಮೂರ್ಛನೆಯ ಧ ಸ್ಥಾನದಲ್ಲಿದೆ. ಆದ್ದರಿಂದ ಈ ಮೂರ್ಛನೆಯ ಸಂಜ್ಞೆಗಳು ಯಮನ ರಾಗದ ವಾಸ್ತವಿಕ ಸಂಜ್ಞೆಗಳಾಗಿವೆ. ಯಮನ ರಾಗವು ಪ್ರಾಚೀನ ಸಂಗೀತದನ್ವಯ ವಿವರಿಸಬೇಕಾದರೆ ಹೀಗೆ ಹೇಳಬೇಕು. ಯಮನ ರಾಗವು ಗಾಂಧಾರಾದಿ ಮೂರ್ಛನೆಯಿಂದ ಜನ್ಮ ತಾಳಿದೆ. ಆದ್ದರಿಂದ ಗ ವು ಸ್ಥಾಯೀ ಸ್ವರವಿದೆ. ಗ ಸ್ಥಾಯೀ ಆಗುವುದರಿಂದ ಕರುಣ ಜನಕ ರಾಗವಿದೆ. ಇದರ ರಚನೆ ಸ-ಪ, ಸಂವಾದ ಭಾವದಿಂದ ಕುಡಿದೆ.

ಪ್ರಚಲಿತ ರಾಗಗಳಲ್ಲಿರುವ ವಾದಿ-ಸಂವಾದಿಗಳು ಪ್ರಾಚೀನದನ್ವಯ ಅಪನ್ಯಾಸ ಸ್ವರಗಲಿವೆ. ವರ್ತಮಾನ ಸಮಸ್ತರಾಗಗಳ ವಾಸ್ತವಿಕ ಸಂಜ್ಞಗಳನ್ನು ಕಂಡು ಹಿಡಿಯಬೇಕು.  ಮತ್ತು ಯಾರ ರಸವನ್ನುಮಟು ಮಾಡುತ್ತದೆ ಎಂಬುದನ್ನು ಸ್ಥಾಯೀ ಸ್ವರದ ಆಧಾರಂಮದ ಕಂಡು ಹಿಡಿಯಬೇಕು. (ವರ್ತಮಾನ ೧೨ ಸ್ವರಗಳ ಅಂತರಗಳು ಸಂಶೋಧಕನಿಗೆ ಅನುಕೂಲವಾಗಲೆಂದು ವಿವರಿಸಿದೆ. ಸ೨ರೆ೨ರೆ೪೨ಗ೨ಮ೨ಮ೨ಪ೨೨ಧ೧ನಿ೨ನಿ೨ಸ)

ಪ್ರತಿಯೊಂದು ಕಲೆಯ ಪ್ರಯೋಜನವು ಭಾವಾಭಿವ್ಯಕ್ತವಿದೆ. ಸಂಗೀತದ ಪ್ರಾನಖೂಡ ಭಾವನೆಗಳ ಅಭಿವ್ಯಂಜನವಿದೆ. ಭಾಷೆಯ ಸಹಾಯವಿಲ್ಲದೆ ಸಂಗೀತ ಧ್ವನಿಗಳು ಭಾವ ಜಗತ್ತನ್ನು ಸೃಷ್ಟಿಸಬಲ್ಲವು. ವಾದ್ಯಗಳಿಂದ ಉದ್ಭೂತ ಅನಂತ ಸ್ವರ ಲಹರಿಗಳು ಈ ಸಂದರ್ಭದಲ್ಲಿ ಪ್ರಮಾಣವಾಗಿದೆ. ಸ್ವರಗಳು ಯಾವ ಪರಿಮಾಣ ಮತ್ತು ಯಾವ ಅನುಪಾತದಲ್ಲಿ ಪ್ರಯುಕ್ತವಾಗಿ ಯಾವ ಯಾವ ಭಾವನೆಗಳ ಅಭಿವ್ಯಂಜಕವಾಗುತ್ತವೆ ಎಂಬುದನ್ನು ಈಗಿನ ಸಂಗೀತದಲ್ಲಿ ಸಿಗಲಾರದು. ಸ್ಥಾಯೀ ಸ್ವರದ ರಹಸ್ಯವನ್ನರಿತ ಮೇಲೆ ಇದನ್ನು ವಿಶದೀಕರಿಸಲು ಸಾಧ್ಯ.

ವರ್ತಮಾನ ರಾಗಗಳಲ್ಲಿರುವ ವಾಸ್ತವಿಕ ಸಂಜ್ಷೆಗಳನ್ನು ಶೋಧಿಸಬೇಕಗಿದೆ. ಮತ್ತು ಈ ರಾಗಗಳಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಬೇಕಾಗಿದೆ. ವಾಸ್ತವಿಕ ಶೋಧನೆ ಕಾಯ್ದಲ್ಲಿ ಶ್ರಮ ಮತ್ತು ಆಯಾಸವಿರುತ್ತದೆ.

ಚಿತ್ತು ಅತೀತದಲ್ಲಿ ಭಾರತೀಯ ಸಂಗೀತ – ಮುನಿವರ್ಯರು ನಾದ ಸೂಕ್ಷ್ಮತಮ ತತ್ವಗಳ ನಿರೂಪಣೆ ಮಾಡಿದ್ದಾರೆ. ಜಾತಿ, ಭಾಷಾ, ವಿಭಾಷಾ ಇತ್ಯಾದಿಗಳ ಸಂಯೋಗದಿಂದ ಸ್ವರವು ಅನಂತವಾಗುತ್ತದೆ ಎಂದು ಘೋಷಿಸಿದ್ದಾರೆ. ನಿಷ್ಕಲ ರೂಪದಲ್ಲಿ ಸ್ವರವು ವ್ಯಾಪಕ ಮತ್ತು ನಿತ್ಯವಾಗಿದೆ. ನಮ್ಮ ಪೂರ್ವಜರು ಯಾವ ಪ್ರಕ್ರಿಯೆಯಿಂದ ಸ್ವರದ ಅನಂತತೆ ಸಾಧಿಸಿರುವರೋ ಆ ಪ್ರಕ್ರಿಯೆಯ ಸಂಶೋಧನೆ ಆಧುನಿಕ ಸಂಗೀತಗಾರರು ಮಾಡಬೇಕಾಗಿದೆ. ಮತ್ತು ಮೂರ್ಛನಾ ಪದ್ಧತಿಯಿಂದ ಉಲ್ಲೇಖಿತ ಸಂಗೀತ ಗ್ರಂಥಗಳ ಸಮಪ್ರಮಾಣ ವಿವೇಚನೆ ಮಾಡಿ ಭಾರತೀಯ ಸಂಗೀತದ ಪ್ರಾಚೀನ ರೂಪವನ್ನು ವಿಶ್ವದ ಸಮ್ಮುಖದಲ್ಲಿಡಬೇಕಾಗಿದೆ.

ಸ್ವರದ ರಂಜನೆ ರಾಗದಲ್ಲಿ ಅವಶ್ಯವಿದೆ. ಈ ರಂಜನೆಯ ಸಲುವಾಗಿ ರಾಗದಲ್ಲಿ ಭಾವಾಭಿವ್ಯಂಜನೆಯ ವ್ಯಾಪಕ ಸನಾತನ ಕಾರಣಗಳಿರಲೇಬೇಕು. ಈ ಕಾರಣಗಳ ಶೋಧವಾಗಿಲ್ಲ. ಭಗವಂತನ ಕೃಪೆಯಿಂದ ಇಂದು ಅನೇಕ ವಿಶ್ವವಿದ್ಯಾಲಯಗಳ ಸ್ನಾತಕ್ಕೋತ್ತರ ಪರೀಕ್ಷೆಗಳಲ್ಲಿ ಸಂಗೀತವು ಒಂದು ವಿಷಯವಿದೆ. ಅನೇಕ ವಿದ್ಯಾರ್ಥಿ-ವಿಧ್ಯಾರ್ಥಿನಿಯರು ಎಂ.ಎ. ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಮತ್ತು ಪಿ.ಹೆಚ್.ಡಿ. ಪದವಿಯಿಂದ ವಿಭೂಷಿತರಾಗುತ್ತಿದ್ದಾರೆ. ಇವೆಲ್ಲವು ಒಳ್ಳೆಯ ಲಕ್ಷಣಗಳೇ ಆಗಿವೆ. ಆದರೆ ಈ ನವ್ಯ ಮತ್ತು ಭಾವೀ ಸಂಗೀತಗಾರರು ಈ ದಿಶೆಯಲ್ಲಿ ಗಮನಹರಿಸಲು ನಾನು ಆಗ್ರಹಿಸುತ್ತೇನೆ.

ಸಂಗೀತ ಸಂಶೋಧಕರಿಗೆ ಉಪಯುಕ್ತವಾಗುವ ಕೆಲವು ಮಾತುಗಳನ್ನು ಇಲ್ಲಿ ಹೇಳುವೆ

1)     ಭರತನ ನಾಟ್ಯ ಶಾಸ್ತ್ರದಲ್ಲಿ ಹೀಗೆ ಹೇಳಿದೆ – ‘ಹಾಸ್ಯ ಮತ್ತು ಶೃಂಗಾರ ರಸೋತ್ಪತ್ತಿಯಲ್ಲಿ ಮಧ್ಯಮ-ಪಂಚಮಗಳನ್ನು, ಕರುಣ ರಸೋತ್ಪತ್ತಿಯಲ್ಲಿ ಗಾಂಧಾರ-ನಿಷಾಧಗಳನ್ನು ವೀರ-ರೌದ್ರ ಮತ್ತು ಅದ್ಭುತ ರಸೋತ್ಪತ್ತಿಗಳಲ್ಲಿ ಷಡ್ಜ-ಋಷಭಗಳನ್ನು ಮತ್ತು ಭಿಭತ್ಸ ಮತ್ತು ಭಯಾನಕ ರಸೋತ್ಪತ್ತಿಗಳಲ್ಲಿ ಧೈವತವನ್ನೂ ಸ್ಥಾಯೀ ಸತ್ವಗಳಾಗಿ ಮಾಡಬೇಕಾಗುತ್ತದೆ.

2)    ಸಾಮವೇದದಲ್ಲಿ ‘ಮರೆಸ’ ಸ್ವರಗಳಿಗೆ ಪ್ರಥಮ ಸ್ವರ, ದ್ವಿತೀಯ ಸ್ವರ, ತೃತೀಯ ಸ್ವರ ಮತ್ತು ಚತುರ್ಥ ಸ್ವರ ಎಂದಿದ್ದಾರೆ. ‘ಧ ವನ್ನು ಪಂಚಮವೆಂದು ನಿಷಾಧವನ್ನು ಛಟಾ ಎಂದು, ಪಂಚಮವನ್ನು ಸಪ್ತಮ ಸ್ವರ ಎಂದು ಕರೆದಿದ್ದಾರೆ’.

3)    ಆಧುನಿಕ ಕೋಮಲ ರೆ -ಯು ಮೂರ್ಛನಾದಲ್ಲಿ ನಿ, ಗ, ಅಂತರ-ಗ ಸ್ಥಾನದಲ್ಲಿ, ಕೋಮಲ ಧ, ಮೂರ್ಛನಾದಲ್ಲಿ ನಿ, ಕಾಕಲಿ-ನಿ, ಗ ಮತ್ತು ಮ ಸ್ಥಾನಗಳಲ್ಲಿ ಇರುತ್ತವೆ.

ಪೂರ್ವೋಕ್ತ ಸಾಮಗ್ರಿಯಿಂದ ರಾಗದ ರಚನೆ, ರಾಗದ ವಾಸ್ತವಿಕ ಸಂಜ್ಞೆ, ರಾಗವಿಶೇಷದ ರಸ ಇತ್ಯಾದಿಗಳನ್ನು ಶೋಧಿಸಿ, ಒಂದು ಬೃಹತ್ ಗ್ರಂಥವನ್ನು ರಚಿಸಲು ಸಹಕಾರಿಯಾಗುವುದೆಂದು ಭಾವಿಸುವೆ.