ಅಪ್ಪ ನೀನಿಲ್ಲದ ಸೊಪ್ಪಾದೊ ಈ ಭೂಮಿ
ಸಪ್ಪೆ ದಂಟಾದೊ ದನಕರ | ದೇವಿಂದ್ರಾಯ
ಅಪ್ಪರಾತಿರಿಕೆ ಕರುಣಾಗೊ ||

ಅಂಬಾರದಲ್ಲಿ ತುಂಬ್ಯಾಡೊ ಮಳಿರಾಯ,
ಗೊಂಬೆ ಹಚ್ಚಡದದೊರಿಮಗನೆ-ನೀನಿಲ್ಲದೆ
ರಂಭೆ ಹಾಕಿದ ಪೈರು ಒಣಗಿದೊ ||

ಬಿತ್ತಿ ಬಂದ ತಮ್ಮನು ಬಿತ್ತಿದ ಸುದ್ದಿಯ ಕೇಳಿ
ಬಿತ್ತಿ ಬಂದೆವ್ವ ಮಳಿಯಿಲ್ಲ-ನಿನ್ನ ಕೊರಳೊಳ್ಳ
ಮುತ್ತಿನಂಗವೆ ತೆನಿ ಜೋಳ ||

ನಕ್ಕರೆ ಬರನಲ್ಲಿ ಕಿಕ್ಕೇರಿ ಮಳೆರಾಯ
ಅಕ್ಕಯ್ಯ ನೀನ್ಹೋಗಿ ಕರೆತಾರೆ-ಬಾಳೆಯ
ತಿಟ್ಟಿನಲ್ಲವನೆ ಮಳೆರಾಯ ||

ಎಮ್ಮೆಯ ತೊರಕೆ ಕೆಮ್ಮುಗಿಲು ಎದ್ದವೆ
ದಮ್ಮಯ್ಯ ಹುಯ್ಯೋ ಮಳಿರಾಯ-ಹೆರಗನಹಳ್ಳಿ
ಮುಮ್ಮಳಿಗೇಲಿತೆಳಗಯ್ಯ ||