ಅಕ್ಕನೂ ತಂಗೀssನೂss ಸಿವss ಸಿವss
ಹೊಳೆ ನೀರೀಗ್ ಹೋಗೀರೂ ಸಿವss ಸಿವss
ಹೊಳೆsದಿಂಬುದು ಮೇವ ಸಿವss ಸಿವss
ಹಲಿಮಾಡೇs ಹೆಚ್ಚಿರೂ ಸಿವss ಸಿವss

ಕೇಳೆಲ್ಲೇ ನನ್ನsಕ್ಕಾss
ಹಲಿಯs ಚಿತ್ತರss ನೋಡೇss
ಹಲಿಯs ಚಿತ್ತರs ನೋಡೇss
ಮರುಳೀಗೇ ಆsss ದೇsನೆs

ಕೇಳೆಲ್ಲೇ ನನ್ನsಕ್ಕಾss
ಹೊಲಿನ್‌ಸಂsಗsಡ್ ಹೊಗುತೇನೆ
ಹೊಲಿನ್ ಸಂsಗsಡ್ ಹೊಗುತೇನೆ
ಯೇನಾದಾsರೇನ, -ಕ್ಕಾsss?

ಹೊಲಿನ್ ಸಂಗsಡ ಹೊಗುತೇನೆ
ಕೇಳಲ್ಲೆ ನನು ತಂಗೀss,
ಹೊಲಿನ್ ಸಂಗಾಡ್ ಹೋsದಾsರೇ
ಜಾಲೇಯಾs ಬಿಡುವಾಲೆs

ಕೇಳೇಲೇ, ನsನ್ನಕ್ಕಾs
ಜಾತೀ, ಹೋದಾsರೇನೇs ?
ಅಟ್ಟಂಬೂ ಮಾsಲೇsಗೇ
ಕೇಳಿತ್ತೇ ನsನ್ನ ಕ್ಕಾs

ಕೇಳೆಲ್ಲೇ ನನು ತಂಗೀ,
ನಂದೊಂದೂ ಮಾsತಿರಸೇ
ಕೇಳಲ್ಲೇ ನsನ್ನಕ್ಕಾss
ಮಾsತಿಗೆs ಉsತ್ತರವೇss

“ಕೇಳಲ್ಲೇ ನನು ತಂಗೀs
ನೀನು ದಂಡಿ ಗ್ಹೋsದ ಗಂsಡನೆ
ನಿನು ದಂಡಿ ಗ್ಹೋsದ ಗಂsಡನೆ
ಬಂದಾsರೇss ಹೊಡುನಾsಲೇs”

“ಹೊಡುದಾsರೇ ಯೇನಕ್ಕಾs?
ಬಯ್ದಾರೇss ಯೇನಕ್ಕಾs
ಬಯ್ದಾರೇss ಯೇನಕ್ಕಾs
ಹೊಲಿನ್ ಸಂಗsಡಾ ಹೋಗುತೇನೆ”

ಲಟ್ಟಂಬೂss ಮಾssತೀಗೇss
ಕೇಳಿತ್ತೆ ನsನ್ನಕ್ಕಾs
ಮುತ್ತಿನ್ ಕಣ್ಣೀರಾ, ಬಿಡುವಾssಳೂ
ಮುತ್ತಿನ್ ಕಣ್ಣೀರಾs ಬಿಡುವಾssಳೊ

ತಂಗೀಯಾsಲಾsದಾರೇss
ತಂಗೀಯಾsಲಾssದಾರೇsss
ಹೊಲಿನ್ ಸಂಗ್ಯಾಡ ಹೋಗುತೇನೇ
ಅಸುವಂತನ ಕಟ್ಟಿಮೇಲೆ

ಹೊಲಿಯsನು ಅಂsಬಾನು
ಕರ‍್ಯs ಕಂಬುಳಿ ಹಾsಸಾsನೂ
ಹೋಳೂ ಬೆಳಿಯಲ್ಯ ಮೆಲದಾsನೂ
ಕಯ್ಯಾಲ್ ಕೊರುಳ್ ಹಿಡಿದಾsನೂ
ನಾsಚು ಮಾಡಿ ಕರಿದಾನೂ

“ಕೇಳಲ್ಲೇss ನsನ್ನsಕ್ಕಾsss
ನಾ | ಆsಚೆ ನಾsದಾರ್ ಹೋಗುತೇನೆ”

ಅಟ್ಟಂಬೂ ಮಾsತಿಗೇss
ಕೇಳಿತ್ತು ಯಲು ತಂಗೀss
ಕೇಳಿತ್ತು ಯಲು ತಂಗೀss
ಊರ ಮುಂದಿನ ಕಟ್ಟೆಗೀಗೇss

ಕಟ್ಟಿಗೇಗೇs ಬರುವಾsಳೇ
ಕಟ್ಟಿಮೇನೆ ಹತ್ತುವಾsಳೂ
ಕಟ್ಟಿಮೇನೆ ಹತ್ತುವಾsಳೂ
ಕೇಳೇರೆs ಸ್ವಾಮ್ಯವು

ಕೇಳೀರೆ ಸ್ವಾಮ್ಯವು
ನನ್ನ ಪತಿಯೇ ನೀವ್ಯೇಗೆs
ನನ್ನ ಪತಿಯೇ ನೀವ್ಯೇಗೆs
ನಿಮ್ಮ ಸತಿಯೇ ನಾನೀಗೆs
ನಿಮ್ಮ ಸತಿಯೇ ನಾನೀಗೆs
ಲಂದ್ಹೇಳೀss ನಡುದಾಳೂ
ಲಂದ್ಹೇಳೀss ನಡುದಾಳೂ
ಹೋಳು ಬೆಳಿಯಲಿ ಮೆಲಿದಾರು

ಹೋಳು ಬೆಳಿಯಲಿ ಮೆಲಿದಾರೂ
ತನ್ನ ಮನಿಗೇs ಕರ್ಕಂಡ್ ನೆಡುದಾ
ತನ್ನ ಮನಿಗೇ, ಕರ್ಕಂಡ್ ನೆಡುದಾs
ಅತ್ಲಾsಗೇs ಲಾsದಾsರೇ,
ದಂಡಿ ಗ್ಹೋದಾs ಗಂಡಾಗೂs
ಸಪನೀಗೇs ಬಿಳುವಾsದೋ
ಸಪನೀಗೇs ಬಿಳುವಾsದೋ
ನಿನ್ನ ಮಡಯಾsದಾs ಹೆಂಡತಿಯಾ

ನಿನ ಮಡದಿಯಾsದಾs ಹೆಂಡತಿಯಾ
ಮಡದೀಗೆ ಹೋಗsದೇss
ಹರsಹರs ಲಂದೀದಾs
ಸಿವ ಸಿವ ಲಂದೀದಾ

ಗಾsಬರೀs ಬಿಳುವಾsನೂ
ಕುದುರೀಗೆs ಜಿನ ಬಿಗಿದಾs
ಕುದರೀಗೆ ಜಿನ ಬಿಗಿದಾs
ಕುದರೀಗೆ ಜಿನ ಬಿಗಿದಾs
ಕುದ್ರೆ ಮೆನೆ ಕುಂತಿದವನೂ

ಕುದ್ರಿ ಮೇನೆs ಹಂತಿ ಕುಂತಾs
ಮನಿದಾsರೀ ಹಿಡುದಾsನೂ
ಮನಿದಾsರೀ ಹಿಡುದಾsನೂ
ಮನಿಗೇಗೆ ಬರುವಾನೂ
ಮನಿಗೇಗೆ ಬರುವಾನೂ
ಅತ್ತೂಗೀs ಲಂಬsಳೂss
ಅತ್ತೂಗೀs ಅಂsಬsಳೂ
ಮುತ್ತಿನಾsರುತಿ ತರುವಾsಳೂ

ಕೇಳಾsಲೇ ನನ್ನ ತ್ಗೇs
ನಿನ್ ತಂಗಿಯಾರ, ಯೆಲ್ ಹೊಯ್ತೋ ?
ನೀನು ಆsರತಿ ತರದೇ
ನೀನ್ಯೇಗೇನೀರೂ ತಂದೇ
ನೀನ್ಯೇಗೇ ನೀರೂsತಂದೇ
ನಿನ್ನ ತಂಗಿಯಾsರೇ ಯೆಲ್ಲಿಗ್ ಹೋಯ್ತೇ ?
ಕೇಳಾsಲೋ ಬಾವಯ್ಯs
ನಿನ | ಮಡದೀಯಾs ಸುದ್ದೀಯಾ
ನಿನ | ಮಡದೀಯಾs ಸುದ್ದೀಯು
ನಿನ ನೆಂಟರ ಮನಿಗ್ಹೋಗು
ಅಟ್ಟಂಬೂ ಮಾತ್ಯೇಗೇ
ಕೇಳಿದs ಯಲುರಾಜಾs
ಕೇಳಿದs ಯಲುರಾಜಾs
ಮುತ್ತಿನ ಕಣ್ಣೀರಾs ಬಿಡುವಾsನೂs
ಮುತ್ತಿನ ಕಣ್ಣೀರು ಬಿಡುವಾsನೂs
ಹಿಂತಿರುಗಿ ಕುದುರೀಯೂ

ಹಿಂತಿರುಗಿ ಕುದುರೀಗೀ
ನೆಂಟರಾss ಮನಿಗ್ ಹೊಡುದಾs
ನೆಂಟರಾss ಮನಿಗ್ ಹೋದಾs
ಅಲ್ಹೋಗೀ ನಡುದಾsನು

“ಕೇಳಲ್ಲೇ ನsನ್ನತ್ತೇ
ನಿನ | ಮಗಳಾsರು, ಯೆಲ್ ಹೊಯ್ತೇ ?
“ಯೇನಂದೀ, ಹೇಳು ಬೇಕೋ
ಯೇನಂದೀs ಮರುಗಾsಲೋs
ನಿನ ಮಡುದೀ ನಿನ್ನಲ್ಲೇ
ಹೊsಳಿ ನೀರಿಗ್ ಹೋಗೀರೊ
ಹೊಳಿಯಾs ದಿಂಬದ ಮೇನೇ
ಹೊಳಿಯಾs ದಿಂಬದ ಮೇಲೇ
ಹಲಿಮಾಡೀss ಹsಚ್ಚಿದನೂ
ಹಲಿ ಮಾಡೀss ಹsಚ್ಚಿದನೂ
ಮೋದ್ಯೇಗೆss ನೋssಡಾsಳೂs

ಮೋದ್ಯೇಗೇss ನೋಡಾsಳೂs
ಅಕ್ಕನ ಕೂಡೇ ಯೋಗಿನ್ನೇ
ಅಕ್ಕನ ಕೊಡೇ ಯೋಗಿನ್ನೇ
“ಹೊಲಿನ್ ಸಂಗಾಡ್ ಹೊಗುತ್ತೇನೆ”

ಲಂದ್ಹೇಳಿ ಯೇಗಿನ್ನೇ
ಹೊಲಿನ್ ಸಂಗ್ಯಾಡ್ ಹೋಗಾsಳೆ
ಅಂಟ್ಟಂಬೂs ಯಾsಲೇಗೇs

ಹೇಳೀದಾ ಯಲುರಾಜಾ
ಹೇಳೀದಾ ಯಲುರಾಜಾ
ಹೊಲಿನ್ ಮನಿ ದಾರಿ ಹಿಡಿದಾ
ಹೊಲಿನ್ ಮನಿ ದಾ ಹಿಡಿದಾ
ಅಲ್ಲಿಗಾದಾರ್ ಹೋದಾನೂ
ಅಲ್ಲಿಗಾದಾರ ಹೋದಾನೂ
“ಕೇಳಲೊ ಹೊಲಿರವನೇ
ವೋಡೂ ಬೇಡಾ ಅಡುಗ ಬೇಡಾ
ವೋಡೂ ಬೇಡಾ ಅಡಗಬೇಡಾ
ನಿನಗೇನೂ ಹೊಡೂದಿಲ್ಲೋ
ನಿನಗೇನೂ ಹೂಡುದಿಲ್ಲಾ
ಬಾಯೆತ್ತೇ ಬವ್‌ದಿಲ್ಲಾss
ಬಾಯೆತ್ತೇ ಬವ್ ದೆಲವೋ
ನನ್ನಾsಲು ಹಿಂಡುತಿಯಾ
ನನ್ನಾsಲು ಹಿಂಡುತಿಯೂ
ಜೋಪಾsನs ಮಾsಡುಬೇಕೋ
ಜೋಪಾsನs ಮಾsಡುಬೇಕೋ
ಯಾವ ದಿನಕೆ ಮಡಿತಾsಳೋ
ಯಾವ ದಿನಕೆ ಮಡಿತಾsಳೋ
ಅಗಣೀಗೇs ಹಾಕು ಬೇಡಾs
ಅಗಣೀಗೇs ಹಾಕು ಬೇಡಾ
ಮಣ್ಣೀಗೇ ಹಾಕುಬೇಕೋ
ಮಣ್ಣೀಗೇ ಹಾಕುಬೇಕೋ
ನಲವತ್ತೊಂದು ದಿವಸಾsಕೇ
ನಲವತ್ತೊಂದು ದಿವಸಾsಕೋ
ತಲಿಯೇಗೇ ತೆಗುಬೇಕೋ
ತಲಿಯೇಗೇ ತೆಕ್ಕಂಡೀs
ಹರುವಹಳ್ಳಕ್ಹೋಗೀs
ಹರವಾಹಳ್ಳಕೆ ಹೋಗೀs
ಚೆಂದಾsಗೀ ತೊಳಿಬೇಕೊ
ಚೆಂದಾsಗೀ ತೊಳಿಬೇಕೊ
ನನ ಕೈಲೀs ತಂದಿ ಕೊsಡೋ
ಲಚ್ಚಂಬೊ ಮಾತೇಗೇ
ಕೇಳೀದ ಹೊಲಿರವ್ನೂ
ಕೇಳೀದs ಹೊಲಿರವ್ನೂ
ಅವ್ನ ಮಡದೀs ತೀರ್ ಹೋಯ್ತೋ
ಅವ್ನ ಮಡದೀs ತೀರ್ ಹೋಯ್ತೋ
ಮಣ್ಣೀಗಾದಾರ್ ಹಾsಕಿದನೋ
ಮಣ್ಣೀಗಾದಾsರ್ ಹಾsಕಿದ್ನೊ
ರಾಜ ಹೇಳಿದ ನೆಕ್ಕಪತ್ರಾss
ರಾಜ ಹೇಳಿದ ನೆಕ್ಕಪತ್ರಾss
ತಲಿವಳಗೇ ಜಾsನಿಟದಾs
ತಲಿ ವಳಗೇ ಜಾನಿಸಿದಾ
ಮಣ್ಣಿಗಾsದ್ರೆ ಹಾsಕಿದನೋ
ಮಣ್ಣಿಗಾsದ್ರೆ ಹಾsಕಿದನೋ
ನಲವತ್ತೊಂದ್ ದಿವಸಾsವೋ
ನಲವತ್ತೊಂದ್ ದಿವಸಾsಕೋ
ಸೋಸಾsಣಕೇ ಹೋಗಿದನೋ
ಸೋಸಾsಣಕೇ ಹೋಗಿದನೋ
ಮಣ್ಣಿನಾsದಾರ ಬಗುದಾನೋ
ಮಣ್ಣಿನಾsದಾರೇ ಬಗುದಾsನೋ
ತಲಿಯೇಗೇ ತೆಗುದಾsನೆs
ತಲಿಯೇಗೇ ತೆಗುದಾsನೆs
ಹರು ಹಳ್ಳಕೆ ನೆಡಿದಾsನೋs

ಹರು ಹಳ್ಳಕೇ ನೆಡುದಾsನೋ
ಚೆಂದಾsಗೀ ತೊಳುದೀನೇ

ಚೆಂದಾsಗೀ ತೊಳುದಾsನೋ
ರಾsಜsನಾs ಮನಿಗ್ಹೋದಾs

ರಾsಜsನಾs ಮನಿಗ್ಹೋದಾs
ರಾಜಾsನಾs ಕರುದಾsನs
ರಾಜಾsನಾs ಕರಿದಾsನೋ
ನಿನ ಮಡದೀಗಾs ತೀರ್ ಹೋಗೀ
ಮಡದೀಯಾ ತೀರ್ ಹೋಗೀ
ಮಡದೀಯಾ ತೀರ್ ಹೋಗೀ
ನಲವತ್ತೊಂದೂ ದಿವಸಾss
ನಲವತ್ತೊಂದಾ ದಿವಸಾ
ಆಜಾಣಿ ಪರುಕಾಣ

ಲಾsಜೂಣಿ ಪರುಕಾರಾ
ತಲಿಯೇಗೇ ತಂದಿದೇನೇ
ತಲಿಯೇಗೇ ತಂದಿದೇನೇ
ಲಂದ್ಹೇಳಿss ಕೊಡುವಾsನೋ
ರಾಜಾsನು ಬೇಡು ಕಂಡಾs
ರಾಜಾsನು ಬೇಡುಕಂಡಾs
ಯೋಳುಪ್ಪರಗೀ ಮೇಲೆ
ಹೋಗೀಲೂs ಕೂತಿಕಂಡಾs
ಹೋಗೆಳೊ ಕೂತಿಂಕಂಡಾs
ತಲಿ ತೆಗದಿ ಓದಿದನೋ
ಅರಸೂಗೇs ಹುಟುಬೇಕೋ
ರಾಜರೀಗೆ ಮದ್‌ಯಾಗ್ಬೇಕೊ

ರಾಜಾಗೇ ಮದಿಯಾsಗೀ
ಮೂರು ವರ್ಸಾ ಆಳುಬೇಕೇ

ಮೂರು ವರ್ಸಾ ಆಳುಬೇಕೋ
ನಾಕ್ನೇ ವರ್ಸಕೆ ದಂಡಿಗ್ಹೋದಾ

ನಾಕ್ನೇ ವರ್ಸಕೆ ದಂಡಿಗ್ಹೋದಾ
ಹೊಲಿನ್ ಸಂಗಾsಡ್ ಹೋಗುಬೇಕೇ
ಅಂದ್ಹೇಳಿ ಭಿರ್ಮ ಬರುದಾsss
ಅಂದ್ಹೇಳಿ ಬಿರ್ಮ ಬರುದಾsss
ವೋದೀಗೇs ನೋಡಾನೇs
ವೋದೀಗೇs ನೋಡೀದಾs
ಮುತ್ತಿನ್ ಕಣ್ಣಿರಾs ಬಿಡುವಾsನೋ
ತಲಿಮೇಗೆ ಹಿಡಿದಾsನೊ
ತಲಿಮೇಗೆ ಹಿಡಿದಾsನೊ
ಲಾsಚೇರೀ ಮನಿಗ್ಹೋದಾ
ಲಾsಚೇರೀ ಮನಿಗ್ಹೋದಾss
ಆಚೇರಿ ಕೋಡೇ ಯೆನ ನುಡಿದಾs?

“”ಕೇಳಲೋ ಆಚೇರಿs
ಗಂದಾsದ ಪೆಟುಗೀಗೇs
ಗಂದsದಾs ಪೆಟ್ಟಿಯೇಗೇ
ಗೆಯ ಕೊಡೋ ಆsಚೇರಿ
ಗೆಯ ಕೊಡೋ ಆsಚೇರಿ
ಅಂದ್ಹೇಳಿs ನುಡಿದಾsನೋ
ಅಂದ್ಹೇಳೀ ನುಡಿದಾsನೋ
ಗಂದದ್ ಪೆಟ್ಟಿಗೆಯ್ ಕೊಟ್ಟಾ
ಗಂದದ್ ಪೆಟ್ಟಿಗೆಯ್ ಕೊಟ್ಟಾ

ಕೇಳಲ್ಲೊ ಲಾsಚೇರೀ
ನೀವು ತಾಗಿದಾs ಹಣತೆಕ್ಕೋ
ಪೆಟ್ಗೆ ನಾsದಾರೆ ತಕಂಡೋದಾs
ಪೆಟ್ಗೆ ನಾsದಾರೆ ತsಕ್ಕಂಡೊ
ಮನಿಗ್ ಸೀದಾs ಬರುವಾsನೂ
ಪೆಟ್ಗೆ ಯೇಳೂ ಉಪ್ಪರ‍್ಗಿ ಮೇನೇ
ಯೇಳೂ ಉಪ್ಪರ‍್ಗಿ ಮೇನೇ
ಇಟ್ಟದs ರಾಜಾsನೇ
ಇಟ್ಟಿದs ರಾಜಾsನೇ
ಸಂಪೂಗೀs ಹೂಂಗ್ ಕೊಯ್ದು
ಸಂಪೂಗೀs ಹೂಂಗ್ ಕೊಯ್ದು
ಸಂಪೂಗೀ ಹೂಂಗ್ ಸರ ಮಾಡ್ದಾs
ಮಲ್ಲೂಗೀ ಬನsಕ್ಹೋದಾs

ಮಲ್ಲೂಗೀ ಹೂಂಗ್ ಕೊಯ್ದಾs
ದಂಡೀನಾರೇ ಕಟುತಾsನೂ
ದಂಡೀನಾರೇ ಕಟುತಾsನೂ
ಹಿಂತಿರುಗಿ ಮನಿಗ್ ಬಂದಾ
ಕೊಬುರಿಯಾ ಕಾಯ್ ತೆಗೆದಾss
ಗಾಣಗೀsರ ಮನಿಗ್ಹೋದಾs
ಗಾಣಗೇರಾs ಮನಿಗ್ಹೋದಾs
ಗಾಣಗೇರಾs ಕೊಡ್ಯೇನೊs
ಯೇನಂದೀ, ನಡುದಾsನೂs?
ಇದ್ ಹತ್ತೂವ್ವಾ ಕಾಯ್ ಯೇಗೆ
ಗಾsಣsಕೇ ಹಾಕ್ಯೇsಗs
ಗಾsಣsಕೇ ಯೇಗ್ ಹಾಕೇs
ಚಿಂಬೆಣ್ಗೇss ತೆಕ್ಕೊಡೋs
ಚೆಂಬೆಣ್ಗೇ ತೆಕ್ಕೋಡಿs
ತಾಗಿದ್ ಹಣವಾsನಾs ಕೊಡ್ತೇ
ಹಾಗಿದ್ ಹsಣಾs ಕೊಡುತೇನೇ
ಲಂದ್ಹೇಳೀ ನುಡಿದಾನೇ
ಲಂದ್ಹೇಳೀ ನುಡಿದಾನೇ
ಗಾಣ್ಗರ ಶೆಟ್ಟಿ ಲಂಬsವ್ನೂ
ಗಾಣ್ಗರ ಶೆಟ್ಟಿ ಲಂಬsವ್ನೂ
ಕಾಯ್ ಗಾಣಕೆ ಹಾಕಿsದನೂ
ಕಾಯ್ ಗಾಣಕೆ ಹಾsಕಿದನೂ
ಯೆಣ್ಗೆ ನಾದ್ರೆ ತೆಗಿದಾನೋ
ಯೆಣ್ಗೆ ನಾsದರೆ ತೆಗುದಾsನೋ
ರಾಜ್ರಿಗೇ ಕೊಡುವಾsನೋs
ರಾಜ್ರಿಗೇ ಕೊಡುವಾsನೋs
ರಾಜರ್ ಹsಣs ಕೊಡುವಾರೋ
ರಾಜಾsರೂs ಲಂಬಾsರೂs
ಯಣ್ಗೆಚಂಬೇs ಹಿಡಿದಾರೂs
ಯಣ್ಗೆ ಚಂಬೇ ಹಿಡಿದಾರೂs
ಹಂತಿರ‍್ಗ್ ಮನಿಗೆ ಬರುವಾರೂ
ಹಿಂತಿರ‍್ಗ್ ಮನಿಗೆ ಬರುವಾರೂ
ಚಿನ್ನsದಂಗೂಡಿಗ್ ಹೋದ್ರೋs
ಚಿನ್ನದಂಗುಡಿಗ್ ಹೋದ್ರೋs
ಕೊರಳೀಗೆ ಹಾಕೂವಾs
ಚಿನ್ನಾsನೇ ತಕ್ಕಂಡ್ರೂs
ತಕ್ಕಂಡೀ ರಾsಜಾsರೇ
ತಾಗಿದ್ ಹsಣಾs ಕೊಡುವಾsರೂ
ತಾಗೀದ್ ಹsಣಾs ಕೊಡುವಾsರೂ
ಜವಳೀ ಅಂಗಡೀಗ್ ಹೋದ್ರೂs
ಜವಳೀsಅಂಗುಡಿಗ್ ಹೋಗೀ
ಶೇರೀಯಾs ತೆಗುದಾsರೂs
ಶೇರೀಗೆs ತೆಗುದಾರೂ

ತಾಗಿದ್ ಹsಗಾs ಕೊಡುವಾರೋ
ತಾಗಿದ್ ಹsಗಾs ಕೊಡುವಾsರೋ
ಹಿಂತಿರ‍್ಗ ಮನಿಗೇ ಬರುವಾರೊ

ಹಿಂತಿರ‍್ಗ ಮನಿಗೇ ಬರುವಾರೋ
ಗುಡುಗಾರs ಮನಿಗ್ಹೋದ್ರೂ
ಗುಡುಗಾರs ಮನಿಗೋದ್ರೊ
ಕೇಳೀರಿ ಗುಡುಗಾsರೇ
ಕೇಳೀರಿ ಗುಡುಗಾsರೇ
ಹೆಣ್ಣ ಬೊಂಬೇ ಗೈ ಬೇಕೋ
ಹೆಣ್ಣ ಬೊಂಬೇ ಗೈ ಬೇಕೋ
ತಲಿನಾದ್ರೇ ಗೈವ್ಕೆಲ್ಲs
ತಲಿಕಿಂದಾs ಕೆಳಗೀಗೇss
ಹೆಣ್ಣ ಬೊಂಬೆ ಗೈಬೇಕೋ
ಹೆಣ್ಣ ಬೊಂಬೆ ಗೈಬೇಕೋ
ಅಂದ್ಹೇಳಿ, ನುಡುದಾsರೋs
ಅಂದ್ಹೇಳೀs ನುಡುದಾsರೋs
ಗುಡುಗಾsರಾs ಲಂಬಾರೋ

ಗುಡುಗಾsರಾs ಲಂಬಾರೋ
ಹೆಣ ಬೊಂಬೇ ಗೈದಾರೋs
ಹೆಣ ಬೊಂಬೇ ಗೈದಾರೋ,
ತಾಗಿದ್ ಹsಣಾs ಕೊಡುವಾsರೋ
ತಾಗಿದ್ ಹsಣಾs ಕೊಡುವಾsರೋ
ಹಿಂತಿರ‍್ಗ ಮನಿಗೇ ಬರುವಾsರೋ
ಹಿಂತಿರ‍್ಗ ಮನಿಗೇ ಬರುವಾsರೋ
ಬೊಂಬಿಯಾಹಿಡಿದಾsರೋ
ಬೊಂಬಿಯಾ ಹಿಡಿದಾsರೋs
ಬೊಂಬಿಗೇ ತಲಿಹಚ್ಚೇ
ಬೊಂಬಿಗೇ ತಲಿ ಹಚ್ಚೇ
ಕುರುಬಾsರಾs ಮನಿಗ್ ನೆಡದ್ರೂ
ಕುರುಬಾsರಾs ಮನಿಗ್ ಹೋಗೀ
ಚವಲಾನೇss ತರುವಾsರೋ
ಚವಲಾನೆss ತರುವಾsರೋ
ತಾಗಿದ್ ಹsಣಾs ಕೊಡುವಾsರೋ
ತಾಗಿದ್ ಹsಣಾs ಕೊಡುವಾsರೋ
ಹಿಂತಿರ‍್ಗ ಮನಿಗೇ ಬರುವಾsರೋ
ಹಿಂತಿರ‍್ಗ ಮನಿಗೇ ಬರುವಾsರೋ
ತಲಿಗ್ ಚವ್ಲಾsss ಬಗುದಾರೋ
ತಲಿಗ್ ಚವ್ಲಾsss ಬಗುದಾರೋ
ಯೆಣ್ಣೆ ಹಾಕೀsss ಕಂಟ್ಟಾರೋss
ಯೆಣ್ಣೆ ಹಾಕೀsss ಕಂಟ್ಟಾರೋss
ಸಂಪ್ಗಿ ಮಾssಲೀss ಕೊಳ್ಳಿಗ್ ಹಾsಕೀs
ಮಲ್ಲಗಿ ಹೂಂಗೂ ಮುಡಿ ಸಾsರೋs
ಮಲ್ಲಗಿ ಹೂಂಗೂ ಮಡಿಸಾsರೋs
ಶೇರೀಗೆ ಉಡುಸಾsರೋs
ಶೇರಿ ಈಗೆ ಉಡುಸಾsರೋs
ಕೂಕುಮ್ಮಾss ಹಚ್ಚಾರೋs
ಕೂಕುಮ್ಮಾss ಹಚ್ಚಾರೋs

ಗಂದೆಣ್ಣೇssದುರುಸಾsರೋss |
ಗಂದೆಣ್ಣೆssದುರುಸಾsರೊss
ಪೆಟ್ಗೆಮೇನೇ ಕುಳುಸ್ಯಾರೋs
ಪೆಟ್ಗೆಮೇನೇ ಕುಳುಸೇsದಾs
ಪರದಕ್ಷೀ ಮಾಡಿದರೋ
ಪರದಕ್ಷೀ ಮಾಡೀsದಾs
(ದಿನ ಸಾಕೂ ಅದ್ರ ಮುಂದೆ
ಮುತ್ತಿನ ಕಣ್ಣೀರ ಬಿಡುವಾನೋ)
“”ತಾನು ಮಡುದೀ ಹೋದೀನೋ”*      ಯಲುರಾಜನ ಮಡದಿ; ಹೆಗಡೆ ಎಲ್.ಆರ್. ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೯, ಪು.ಸಂ. ೧-೧೬.