ನೀನು ನಡೀ ಎಲ್ಲವ್ವನ ಗುಡ್ಡಕ
ಜಗದಂಬಿ ಜಾತ್ರಿ ಬಾಳ ಕಡಕ ೧
ಮುನ್ನೋಳಿ ಮುಂದ ಎಲಿದೋಟಿ
ದೇವಿ ಪೂಜ್ಯಾಗುದು ಅರಭಾಟ ೨
ಉಗರಗೋಳ ಸೌದತ್ತಿ ನಡಕ
ಜೋಗಳ ಬಾವ್ಯಾಗ ಮಾಡೂತ ಜಳಕ ೩
ದೇವಿ ಗುಡಿಯಾಗ ಬಿಜಲಿ ಬೆಳಕಾ
ಸುತಿ ಚೌಡಕಿ ಮ್ಯಾಳ ಗುಮಗುಮಕ ೪
ದೇವಿ ಪೌಳ್ಯಾಗ ಮಾಡತಾರ ಬೆಳಕ
ಹೊಳ್ಳಿ ಹೋಗಲೇನ ಹುಲಕುಂದಕ ೫
Leave A Comment