ತಿಂಗಳು ತಿಂಗಳಿಗೂ ತಿಂಗಳು ಮಾವನ ಪೂಜೆ
ಗರುಡನಾ ಪೂಜೆ ಘನಪೂಜೆ-ಹಾಗಲವಾಡಿ
ಹನುಮನಾ ಪೂಜೆ ಶನಿವಾರ || ೧ ||

ಗುಡುಗೀದ ಗುಡಿಗೀದ ಗುಬ್ಬೀಲಿ ಮಿಂಚೀದ
ಹೆಬ್ಬೂರಿನ ಮ್ಯಾಲೆ ಮಳೆಬಿದ್ದೋ | ನಂಜನಗೂಡು
ತೇರಿನ ಮ್ಯಾಲೆ ಹನಿ ಬಿದ್ದೋ || ೨ ||

ಯಾರೇನಂದವ್ರು ಬಾರೋ ದೇವೇಂದ್ರುರಾಯಾ
ಮತ್ತೇ ನೆನೆದೇವು ಬಾರೋ || ಪ ||

ಮಳೆ ಹೋಯ್ತಂತಾ ಮಾನ್ಯವರ ಬಯಬ್ಯಾಡಿ
ಸಾಲಾಕ್ಹೋಗವನೆ ಮಳೆರಾಯಾ ||

ಮಳೆರಾಯ್ನ ಹೆಂಡ್ತಿ ಮಕ್ಕಳೊಂದಿಗಿತ್ತಿ
ಮಳೆ ಬಂದಾರೆಲ್ಲಿ ತಂಗ್ಯಾಳೋ | ತಿಂಗಳು ಮಾವ
ಎಳೆಯ ಹೊಂಬಾಳಿ ಸುಳಿಯಲ್ಲಿ |