ಚೊಲೋ ಗವಾಯಿಗಳ ಜಗದೊಳಗಿರುವಾಗ
ಕುರುಬನ ಪದ ಯಾರ ಕೇಳಬೇಕ
ಕುರುಬರಂತೆ ಹೇಳು ಶ್ರುತಿ ಸಾರತಾವ
ಓದಿ ನೋಡಿರಿ ಪುಸ್ತಕ
ಕುರುಬರೆಂದರೆ ಜರಿಯ ಬೇಡದರಿ
ಮಾಡಿಕೊಳ್ಳಿರಿ ನಿಮ್ಮ ಮನಪಕ
ವರುಷಾ ವರುಷಾ ಉಗಾದಿ ಪಾಡೇಕ
ಹೊಲದಾಗ ಕುಂಟಿ ಹೊಡುದಕ
ಮೊದಲ ಕುರುಬನ ಕುಂಟಿ ಹೋಗಲೆಂತ
ರೈತರ ಮಾಡ್ಯಾರ ನೇಮನೂಕ
ಮೋಜಮೊಜಲಿಗೆ ಕುರುಬನ ಮಜಲು
ಗಣಪತಿ ಪೂಜೆಯ ಮಾಡಬೇಕ
ಅಂಗಡಿ ಮುಂಗಡಿ ಯವಾರ ಮೊದಲಿಗೆ
ಕುರುಬನ ಬೋಣಿಗಿ ಆಗಬೇಕ
ಮಳಿ ಇಲ್ಲದೆ ಹನ್ನೆರಡು ವರುಷ ಬರಾ ಬಿದ್ದೀತು ದೇಶಕ್ಕ
ರೈತರಾಣ್ಯಾರೆಲ್ಲ ಹೊಂದಿಗೂಡಿಕೊಂಡು ಬಂದಾರ ಕುರುಬನ ಹಂತೇಕ
ಕುರಬ ಗಾಬರ‍್ಯಾಗಿ ಅವರನ ಕೇಳತಾನ
ಮಳಿ ಇಲ್ಲದು ನಿಗ ಗೊತೈತಿ ಮಳಿ ಆಗುದ ನೀ ಹೇಳಬೇಕ
ಕುರುಬ ಗೌಡನ ದಿಗಲ ಬಿದ್ದಿತು ಮಕಾ ಮಾಡಿದನು ಮ್ಯಾಲಕ್ಕ
ಬೀರದೇವರ ಸುಸ್ತ್ರ ಮಾಡುತ ವಿಚಾರ ಮಾಡ್ಯಾನ ತನಮನಕ್ಕ
ಚಿಂತಿ ಮಾಡಬ್ಯಾಡಿರಿ ಮಳೆ ಬರುವದು ಬರೆ ನೋಡಿರಿ ನಾಳೆ ಮಧ್ಯಾನಕ
ಕುರುಬ ಗೌಡನು ಮರುದಿನ ತಾ ಬಂದು ಗುಡ್ಡ ಹತ್ತಿ ನಿಂತ ಮ್ಯಾಲನ್ಕು
ಮೂಢಭಕ್ತಿಯಿಂದ ಕಂಬಳಿ ಬೀಸಿದಂಗ
ಜಡಿ ಮಳಿ ಸುರದಿತು ಹೊಳೆ ಕಡೆಕ
ಕುರುಬಿನಂತೆಕ ಧರ್ಮ ಇರುವದೆಂದು
ಲೋಕೆಲ್ಲ ಹೊಗಳುವ ಕೇಳಬೇಕು