ಸ್ವಾಮಿ ಮಳೆರಾಯ ಏ ತಂದೆ
ಯಾವ ದೇವರಿಲ್ಲೊ ನಿನ ಮುಂದೆ
ನೇಮ ನಿತ್ಯಾಕಾರೇ ಕಲ್ಯಾಣಾ
ನೀನು ಭೂಮಿ ಮ್ಯಾಲ ಬಂದಿದೆ |

ನೀನ ಬಾರದೆ ಮುನದಿಂದೆ
ಕೇಡು ತೋರುವುದು ಒಂದೊಂದೆ
ಕಷ್ಟಪಟ್ಟ ಜನ ನಷ್ಟವಾಗುತದೆ
ಯಾತಕ ಇಂತಾ ಹೊತ್ತು ತಂದೆ |

ಪಲ್ಯ ಬೆಳಿಯದೆ ಹೋದಿಂದೆ
ಹ್ಯಾಗೆ ಬದಕಬೇಕು ಮಣತಿಂದೆ
ಮಾನವ ಜಾತಿಗೆ ಮಾಡಿದ್ದಾದರೆ
ಬದಕಲಿಕ್ಕೆ ಅನ್ನವ ತಿಂದೆ |

ಬಂಡಿ ತಿರಗಿ ಬಾಳ ಬಂಡಾಟ
ಬಡ ಜನರಿಗೆ ಬಂದೀತ ಗೋಳಾಟ
ಮಾರಿ ಹಾವಳಿ ಬಂದಂತಾತ
ಜ್ವಾಳದ ಸುತ್ತಲ ಮಾರಾಟ

ಬ್ರಹ್ಮನವರ ಇಂದು ಬರದೀತು
ಆಗ ಕಾರೆವು ತಪ್ಪೀತು
ದೇವ ದೇವರ ನಾಲಿಗಿ ಬಿತ್ತು
ದೋಸೇರ ಪಂಚಾಂಗ ಸುಟ್ಟೋತು

ಕಾಲಜ್ಞಾನ ಕಡಿಮಾಯಿತು
ರೊಟ್ಟಿ ಮಂಚ ಮೂಲಿಗಿ ಬಿತ್ತು
ನೀರು ಮಳಿ ಕಡಿಮ್ಯಾಗಿ ಕಲಿಯುಗದ
ಕಲ್ಲಿನ ಪೆಟ್ಟೊಂದ್ಹೆಚ್ಚಾತು