ಭಾರತೀಯ ಸಂಗೀತವು ಸಮಾಜವನ್ನು ಆಧರಿಸಿಕೊಂಡೇ ಬಂದಿದೆ. ಕಲಾವಿದರು ಮೂಲತಃ ಸಮಾಜ-ಸಂಘ ಜೀವಿಗಳಾಗಿದ್ದಾರೆ. ಸಂಗೀತಕ್ಕೆ ಸಮಾಜದ ಕೊಡುಗೆ ಏನು? ಹಾಗೆಯೇ ಸಮಾಜಕ್ಕೆ ಸಂಗೀತದ ಕೊಡುಗೆ ಏನು? ಎಂಬುದರ ಬಗೆಗೆ ವಿಚಾರಿಸಿದಾಗ ಸಮಾಜವನ್ನು ಬಿಟ್ಟು ಸಂಗೀತವಿಲ್ಲ ಸಮಾಜಕ್ಕೆ ಸಂಗೀತ ಬಹಳ ಮುಖ್ಯವಾಗಿದೆ. ಸಮಾಜವೆಂದರೆ ಜನರ ಗುಂಪು, ಈ ಜನರು ತಮ್ಮ ದಿನಿತ್ಯದ ಬದುಕುಗಳನ್ನು ಲಯಬದ್ಧವಾಗಿ ಜೀವನಕ್ಕೆ ಅಳವಡಿಸಿಕೊಂಡಿದ್ದಾರೆ. ಈ ಜನರು ತಮ್ಮ ಸಾಮಾಜಿಕ ಬದುಕನ್ನು ಸಂಗೀತದ ಮೂಲಕ ಮನಸ್ಸಿಗೆ ನೆಮ್ಮದಿಯನ್ನು ತೆಗೆದುಕೊಳ್ಳುವದರ ಮೂಲಕ ಸಂಗೀತಕ್ಕೆ ಹೊಂದಿಕೊಂಡಿದ್ದಾರೆ. ಅದು ಹೇಗೆಂದರೆ ಸಮಾಜದಲ್ಲಿ ಕಾರಣ ಪೂಜೆ, ಪುನಸ್ಕಾರ ಸಮಾರಂಭಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಮೊದಲು ಕಾಣುವದೇ ಸಂಗೀತ ಅವರು (ಇದರಿಂದಲೇ) ಸಂಗೀತದಿಂದಲೇ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಇಲ್ಲವಾದರೆ ಯಾವುದಾದರೊಂದು ಮಂಗಲ ವಾದ್ಯದ ಮುಖಾಂತರವಾದರೂ ಆರಂಭಿಸುತ್ತಾರೆ. ಸಂಗೀತಕ್ಕೆ ಸಮಾಜವು ಗೌರವ ಪುರ್ಣ ಭಾವನೆಯನ್ನು ನೀಡಿ ಪ್ರೊತ್ಸಾಹಿಸುತ್ತಾರೆ.

ಸಂಗೀತವು ಸಾಮಾನ್ಯರಿಗೆ ಒಲಿಯದೆ ಕಠಿಣವಾದ ಪರಿಶ್ರಮದಿಂದ ದೈವಿದತ್ತವಾಗಿ ಬರುವಂಥಹ ಕಲೆಯಾಗಿದೆ. ಇಂತಹ ಕಲೆಯನ್ನು ಹೊಂದಿರತಕ್ಕಂತಹ ಸಮಾಜದ ಇದರ ಬಗೆಗೆ ಹೆಚ್ಚಾಗಿ ಅಧ್ಯಯನ ಮಾಡಿ ಕುಟುಂಬದೆಲ್ಲ ಸದಸ್ಯರಿಗೆ ಸಂಗೀತವನ್ನು ಆಭ್ಯಸಿಸಲು ಅನುಕೂಲ ಮಾಡಿಕೊಡುವದಲ್ಲದೇ ಕಲಿಯಲು ಪ್ರೋತ್ಸಾಹಿಸಬೇಕು. ಕಷ್ಟಕರವಾದ ವಿದ್ಯೆ ಅಷ್ಟೇ ಅಲ್ಲದೇ ಖರ್ಚಿನ ವಿದ್ಯೆಯು ಹೌದು. ಹೆಚ್ಚಾಗಿ ಇದು ಬಡ ಕುಟುಂಬದವರಿಗೆ ಹೆಚ್ಚು ಉದ್ಭವಿಸುತ್ತಿರುವುದನ್ನು ನಾವು ಕಾಣುತ್ತೇವೆ. ಈ ವಿದ್ಯೆಯನ್ನು ಬಾಲ್ಯದಿಂದಲೇ ಅಭ್ಯಾಸವನ್ನು ಪ್ರಾರಂಭಿಸಬೇಕು. ಕೇವಲ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡಿದರೆ ಸಾಲದು. ಇದನ್ನು ಅರಿತ ಕಲಾವಿದರು ತಂದೆ ತಾಯಿಗಲು, ಪೋಷಕರು, ಚೆನ್ನಾಗಿ ಅರಿತಿರಬೇಕು. ಯಾವುದೇ ಸಂದರ್ಭದಲ್ಲಿ ತಮ್ಮ ಮಕ್ಕಳು ಸಂಗೀತ ಕಲೆಯನ್ನು ಬೆಳೆಸಬೇಕು. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮೂಡಿ ಬರುವ ಒಳ್ಳೆಯ ಗುಣಗಳು ಯೋಗ್ಯ ಕಲಾವಿದನಾಗಲಿಕ್ಕೆ ಪ್ರಯತ್ನ ಮಾಡಬೇಕು. ಅದಕ್ಕೆ ತಂದೆ ತಾಯಿಗಲು ಸಹಕರಿಸಿ ಪ್ರೋತ್ಸಾಹಿಸಬೇಕು. ತಂದೆ ತಾಯಿಗಳು ಮಗುವಿನ ಆಸಕ್ತಿಯನ್ನು ಕಂಡು ಯೋಗ್ಯ ಗುರುವನ್ನು ಗುರುತಿಸಿ ಅವರಲ್ಲಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡಬೇಕು. ಅಷ್ಟೇ ಅಲ್ಲದೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊಡಬೇಕು. ಮನೆಯೂ, ಸಮಾಜದಲ್ಲಿ ಎಲ್ಲರೂ ಅವನಿಗೆ ಸಹಕರಿಸಬೇಕು.

ಜನಪದ ಸಂಗೀತದಿಂದ ಬೆಳೆದು ಬಂದು ಶಾಸ್ತ್ರೀಯ ಸಂಗೀತವು ಇಂದು ಅದರ ವಿಸ್ತಾರವು ಬಹು ಕಡೆಯೆಲ್ಲ ವ್ಯಾಪಿಸಿಕೊಂಡಿದೆ. ಪ್ರತಿಯೊಬ್ಬರು ಇದನ್ನು ಅಭ್ಯಾಸ ಮಾಡಬೇಕು ಎನ್ನುವ ಮನೋಭಾವನೆ ಮೂಡಿ ಬರಬೇಕು. ಆಧುನಿಕ ಕಾಲದಲ್ಲಿ ಈ ವಿದ್ಯೆಯನ್ನು ಮಕ್ಕಳಿಗೆ ಕಲಿಸುವುದರಿಂದ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಂತಾಗುತ್ತದೆ. ಸಮಾಜದ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಗೀತ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು. ಸಂಗೀತವು ಬರಿ ಹವ್ಯಾಸಸಕ್ಕಾಗಿರದೆ ಇದರಲ್ಲಿಯೇ ರಕ್ತಗತವಾಗಿರಬೇಕು. ನಮ್ಮ ದೇಶದಲ್ಲಿ ಶ್ರೇಷ್ಠ ಸಾಹಿತಿಗಳು ಬರೆದಂತಹ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡುವುದರಿಂದಾಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಒಳ್ಳೆಯ ಕೆಲಸಗಳನ್ನು ನಾವು ನಮ್ಮ ಭಾರತೀಯ ಸಂಗೀತವು ೨ ಮೋಲದಿಂದ ಹರಿದು ಬಂದಿದೆ. ಒಂದು ಕರ್ನಾಟಕ ಮತ್ತು ಹಿಂದುಸ್ತಾನಿ ಪದ್ಧತಿ. ಇವೆರಡು ಗಾಯನ ಪದ್ದತಿಗಳು ಮುಖ್ಯವಾದವುಗಳು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಕಲಾವಿದರನ್ನು ನಾವು ನೋಡುತ್ತಲಿದ್ದೇವೆ. ಆ ಕಲಾವಿದರ ಉಪಯೋಗವನ್ನು ನಾವು ಪಡೆದುಕೊಳ್ಳಬೇಕು. ಹಿಂದಿನ ಕಲಾವಿದರ (ಸಂಗೀತಕಾರರ) ಬಗೆಗೆ ಅಧ್ಯಯನ ಮಾಡಿದಾಗ ಕಂಡು ಬರುವುದೇನೆಂದರೆ ಅವರು ಶತಾಯುಗಳು, ನಿರೋಗಿಗಳು, ದೇಹದಾರ್ಢ್ಯರು, ಹೃದಯ ಶೀಲವಂತರು ಮತ್ತು ದೇಶ ವಿದೇಶಗಳಲ್ಲಿ ನಮ್ಮ ಸಂಗೀತಕ್ಕಾಗಿ ಪ್ರಖ್ಯಾತಿಗೊಳಿಸಿದ ಹಿರಿಮೆ ನಮ್ಮವರದಾಗಿದೆ. ಇದರಿಂದ ತಿಳಿದು ಬರುವ ಮುಖ್ಯವಾದ ವಿಷಯಗಳೇನೆಂದರೆ ಯಾವುದೇ ವಿದ್ಯೆಯಿಂದ ಇವುಗಳನ್ನು ಸಾಧಿಸಲು ಸಾಧ್ಯವಾಗದೆ ಸಂಗೀತ ವಿದ್ಯೆಯಿಂದ ಮಾತ್ರ ಸಾಧ್ಯವೆಂದು ಹೇಳಬಹುದು. ಸಂಗೀತ ವಿಜ್ಞಾನವು ಹೌದು, ಕಲಯೂ ಹೌದು. ಯಾವುದೇ ಸಂದರ್ಭದಲ್ಲಿ ಸಂಗೀತ ಕಲಾವಿದರನ್ನು ಆಹ್ವಾನಿಸಿ ಕಾಕ್ರಮಗಳನ್ನು ಏರ್ಪಡಿಸಬೇಕಾದರೆ ಕಲಾವಿದನಿಗೆ ಯಾವ ಸೌಕವನ್ನು ನಾವು ಒದಗಿಸಬೇಕೆಂಬುದರ ಬಗೆಗೆ ಅರಿತುಕೊಂಡಿರಬೇಕು. ಅವರಿ (ಕಲಾವಿದರಿಗೆ) ತಗಲುವ ವೆಚ್ಚವನ್ನು ತುಂಬಿ ಕೊಡುವುದಲ್ಲದೆ ಅವರಿಗೆ ತಕ್ಕ ಹಾಗೆ ಗೌರವ ಧನವನ್ನು ಸಲ್ಲಿಸಬೇಕು. ಅಂದಾಗ ಅವರು ಸಮಾಜದಲ್ಲಿ ಒಳ್ಳೆಯ ಸಂಗೀತವನ್ನು ನೀಡಿ, ತೃಪ್ತಿಯನ್ನು ಒದಗಿಸಿಕೊಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಈ ವಾತಾವರಣವು ಸಮಾಜದಲ್ಲಿ ಇರುವುದು ಕಡಿಮೆ. ಇದು ಪ್ರತಿಯೊಬ್ಬರು ವಿಚಾರಿಸುವಂಥ ವಿಷಯವಾಗಿದೆ. ಸಮಾಜದ ಜನರಲ್ಲಿ ಶಾಸ್ತ್ರೀಯ ಸಂಗೀತವನ್ನು ತಾಸು ಗಟ್ಟಲೆ ಕುಳಿತು ಕೇಳುವಷ್ಟು ವೇಳೆ ಇರುವುದಿಲ್ಲ. ಮತ್ತು ಕಲಾವಿದರೂ ಕೂಡಾ ತಾಸುಗಟ್ಟಲೆ ಹಾಡುವ ಪರಿಪಾಠವು ಕಡಿಮೆಯಾಗುತ್ತಿರುವುದು ಸಂಗೀತಕ್ಕೆ (ವಿಷಾದವೆನಿಸುತ್ತದೆ) ಪೆಟ್ಟು ಬಿದ್ದಂತಾಗಿದೆ. ಕೇವಲ ಅರ್ಧ ತಾಸು ೧೫ ನಿಮಿಷಕ್ಕೆ ಸೀಮಿತವಾಗಿ ಕಛೇರಿ ನೀಡುವದು ಪ್ರಾರಂಭವಾಗಿದೆ. ಒಂದೊಂದು ರಾಗವನ್ನು ಸುಮಾರು ೩ ತಾಸುಗಟ್ಟಲೇ ಹಾಡುತ್ತಿದ್ದು ನಾವು ಕೇಳಿದ್ದ – ಇರುತ್ತದೆ. ಉದಾ: ಪಂ. ಪಂಚಾಕ್ಷರಿ ಗವಾಯಿಗಳು ತಮ್ಮ ಕೊನೆಯ ಗಳಿಗೆಯಲ್ಲಿಯೂ ಕಾರ್ಯಕ್ರಮ ನೀಡುವಾಗ ಧಾರವಾಡ ಮುರುಘಾಪಠದಲ್ಲಿ ೩ ೧/೨ ಗಂಟೆಗಳ ಕಾಲ ರಾಗ ಮಿಂಯಾ ಮಲ್ಹಾರ ರಾಗವನ್ನು ಹಾಡಿದ್ದು ಉಲ್ಲೇಖವಿರುತ್ತದೆ. ಇಂಥಹ ವಿದ್ವಾಂಸರು ಮಾಡಿಕೊಟ್ಟ ವಿದ್ವಾಂಸರಿಂದ ಆದ ಕೊಡುಗೆ ಬಹಳ ಮಹತ್ವದ್ದು. ಪ್ರತಿಯೊಬ್ಬ ಕಲಾವಿದರು ಇದನ್ನು ಅನುಕರಿಸಬಹುದೇ ಮತ್ತು ಸಮಾಜ ಇದಕ್ಕೆ ಒಪ್ಪಿ ಸಹಕರಿಸಬಹುದೇ ಎಂಬುದು ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಸಮಾಜದಲ್ಲಿ ಗಾಯಕರು ಅಹೋರಾತ್ರಿಯಾಗಿ ಕಾರ್ಯಕ್ರಮವನ್ನು ನೀಡಿ ಕಷ್ಟ ಪಟ್ಟು. ಅವನ ಕಲೆಗೆ ಯೋಗ್ಯವಾದ ಗೌರವ ಧನವನ್ನು ಕೂಡಾ ನೀಡುವುದಿಲ್ಲ. ಇದು ಸಮಾಜದಲ್ಲಿ ದುಃಖದ ಸಂಗತಿ ಎಂದು ಹೇಳಬಹುದು. ಏಕೆಂದರೆ ಸಂಗೀತಕಾರರ ಪರಿಸ್ಥತಿ ಮೊದಲೇ ಹೇಳತೀರದು. ಅಂಥವರಲ್ಲಿ ಸಿಗಬೇಕಾದ ಹಣ ಗೌರವಗಳು ಸಿಗುವುದಿಲ್ಲ.

ಸಂಗೀತ ಪರಂಪರೆಯೂ ಗುರುಮುಖ ಪದ್ಧತಿಯಿಂದ ಸಂಗೀತ ವಿದ್ಯಾಭ್ಯಾಸವನ್ನು ಕಲಿಸುವುದು ಅಥವಾ ಕಲಿಯುವುದಾಗಲಿ ಒಳ್ಳೆಯದು, ಇದನ್ನು ನಾವು ಮುಂದುವರೆಸಿಕೊಂಡು ಬರಲು ಪ್ರಯತ್ನಿಸಬೇಕು. ಈ ಪ್ರಯತ್ನಕ್ಕೆ ಸಂಗೀತಕಾರರ ಸಹಾಯ ಮತ್ತು ಸಮಾಜದ ಸಹಾಯವು ಬೇಕಾಗುತ್ತದೆ. ಸುಮಾರು ೫೦-೬೦ ವರ್ಷಗಳ ಹಿಂದೆ ಸಂಗೀತಗಾರರಿಗೆ ಯಾವುದೇ ಒಂದು ಉದ್ಯೋಗದ ಅವಕಾಶಗಳು ಇರಲಿಲ್ಲ. ಮತ್ತು ಮದುವೆ ಮಾಡಿಕೊಳ್ಳುವ ಸಮಯದಲ್ಲಿಯೂ ಕೂಡ ಹೆಣ್ಣು ಕೊಡುವುದಾಗಲಿ ಅಥವಾ ಗಂಡು ಕೊಡುವುದಾಗಲೆ ಈ ಸಂಬಂಧಗಳನ್ನು ಬೆಳೆಸಲಿಕ್ಕೆ ಜನರು ಹಿಂಜರಿಯುತ್ತಿದ್ದರು. ಅಂತಹ ಒಂದು ಪರಿಸ್ಥಿತಿಯನ್ನು ನಾವು ಈಗ ಕಾಣುವುದಿಲ್ಲ. ಕಾರಣ ಸಂಗೀತಗಾರರಿಗೆ ಸಮಾಜದಲ್ಲಿ ಉನ್ನತವಾದ ಮಾನಗಳು ಸಿಗುತ್ತವೆ. ದೂರದರ್ಶನ, ರೇಡಿಯೋ ಮಾಧ್ಯಮ, ಶಾಲಾ ಕಾಲೇಜುಗಳಲ್ಲಿ ಸಂಗೀತವನ್ನು ಬೋಧಿಸಲು ಸರ್ಕಾರವು ಪ್ರಯತ್ನಿಸುತ್ತಿದೆ. ಸಂಗೀತ ಪದವಿಯನ್ನು ಮಾಡಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಶಾಲಾ ಕಾಲೇಜುಗಳಲ್ಲಿ ಸಂಗೀತವನ್ನು ಬೋಧಿಸಲು ಸರ್ಕಾರವು ಪ್ರಯತ್ನಿಸುತ್ತಿದೆ. ಸಂಗೀತ ಪದವಿಯನ್ನು ಮಾಡಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಉದ್ಯೋಗದ ಅವಕಾಶಗಳು ದೊರಕುತ್ತುರುವುದು ಒಂದು ಒಳ್ಳೆಯ ಕೆಲಸ ಎಂದು ಹೇಳಬಹುದು. ಈಗಾಗಲೇ ಸಂಗೀತದ ಬಗೆಗೆ ಸಾಕಷ್ಟು ಸಂಶೋಧನೆಗಳು ಸಮಾಜಕ್ಕಾಗಿ ಕೊಡಮಾಡಿದ ಶಾಲೆಯ ಸಂಗೀತದ ಮೂಲಕ ಜನರಿಗೆ ಸುಗುವಂತಾಗಿದೆ.

ಸಮಾಜದ ಶಾಂತಿಗಾಗಿ ಪಂಚಾಕ್ಷರಿ ಗವಾಯಿಗಳು ಪಂ.ಪುಟ್ಟರಾಜ ಗವಾಯಿಗಳು ಸಮಾಜಕ್ಕಾಗಿ ಸಂಗೀತ ಸೇವೆಯನ್ನು ಸಲ್ಲಿಸುತ್ತಿರುವ ಅಮೋಘವಾದ ಘನ ಕಾವಾಗಿದೆ. ಇವರ ಸಂಗೀತ ಸಾವಿರಾರು ಜನ ವಿದ್ಯಾರ್ಥಿಗಳ ಬದುಕು ಹಸನಾಗಿದೆ. ಅವರ ಸಾರ್ಥಕ ಸೇವೆಯು ಸಂಗೀತ ಜನರಿಗೆ ಆಶ್ರಯದಲ್ಲಿ ಪ್ರಸಾದದ ಪುಣ್ಯ. ಇವೆಲ್ಲವು ಸಂಗೀತಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇಂದಿನ ನಮ್ಮ ಹಿಂದುಸ್ಥಾನದ ಮೂಲೆ ಮೂಲೆಯಲ್ಲಿಯೂ ಕೂಡಾ ಅವರ ಶಿಷ್ಯರ ಬಳಗವನ್ನು ನಾವು ಕಾಣುತ್ತಾ ಇದ್ದೇವೆ. ಅವರು ದೇಶ ವಿದೇಶಗಳಲ್ಲಿ ಕೂಡಾ ಪ್ರಖ್ಯಾತರಾಗಿ ಗುರುಗಳ ಹೆಸರಿಗೆ ಆಶ್ರಮಕ್ಕೆ ಕೀರ್ತಿ ತಂದ ಹೆಗ್ಗಳಿಕೆಯು ಇದೆ. ಧಾರವಾಡ – ಗದಗಗಳಂಥಹ ಸಂಗೀತ ವಿದ್ಯಾ ಕೇಂದ್ರವು ಸಾಕಷ್ಟು ರೀತಿಯ ಅವಕಾಶ ಮತ್ತು ಸಂಗೀತದ ಬಗೆಗೆ ಪ್ರಚಾರಗಳನ್ನು ಕೂಡ ಮಾಡುತ್ತಾ ಬಂದಿದೆ. ಇದು ಸಮಾಜಕ್ಕೆ ಈ ಕಲಾವಿದರಿಂದ ಆದ ದೊಡ್ಡ ಕೊಡುಗೆ ಆಗಿದೆ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸಮಾಜಕ್ಕಾಗಿ ಪಂಚಾಕ್ಷರಿವಾಣಿ ಎಂಬ  ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡುತ್ತಾ ಬಂದಿದ್ದಾರೆ. ಸಾಕಷ್ಟು ಬಂದೀಶಗಳನ್ನು ಕೂಡಾ ಮಾಡಿ ಚೀಜ್ ಗಳಿಗೆ ನೋಟೇಷನ್ ಹಾಗಿ ತ್ರಿಭಾಷಾ ಕವಿ ಎಂದು ಖ್ಯಾತರಾಗಿದ್ದಾರೆ. ಅಷ್ಟೇ ಅಲ್ಲದೇ ಪಂಡಿತ ಡಾ.ಮಲ್ಲಿಕಾರ್ಜುನ ಮನ್ಸೂರ ಅವರು ಸಂಗೀತದ ಸಮಾಜದ ಸೇವೆಗೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಬಹುದೊಡ್ಡ ಕಲಾವಿದರಾಗಿದ್ದಾರೆ. ಅವರು ಸಂಗೀತಕ್ಕಾಗಿ ಹಗಲಿರುಳು ಎನ್ನದೆ ತಮ್ಮ ಕುಟುಂಬವನ್ನೇ ತ್ಯಜಿಸಿ, ರಾಜ್ಯ ರಾಜ್ಯಗಳಿಗೆ ಹೋಗಿ ದೇಶ-ವಿದೇಶಗಳಲ್ಲಿ ತಮ್ಮ ಹಾಗೂ ತಾಯ್ನಾಡಿನ ಕೀರ್ತಿಯನ್ನು ವಿಜಯ ದುಂಧುಭಿ ಮೊಳಗಿಸಿತು. ಪತಾಕೆ ಹಾರಿಸಿದ್ದಾರೆ. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಗೀತ ವಿಭಾಗ ಹಾಗೂ ಲಲಿತ ವಿಭಾಗವನ್ನು ಸ್ಥಾಪಿಸಿದ ಕೀರ್ತಿಯು ಅವರದು. ಅಷ್ಟೇ ಅಲ್ಲದೆ ಇದನ್ನು ಗಮನಿಸಿದಾಗ ಸಾಕಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟಂತ ಗೌರವವು ಕೂಡಾ ಅವರಿಗೆ ಸಲ್ಲುತ್ತಾ ಇದೆ. ಈ ಸಂದರ್ಭದಲ್ಲಿ ಪಂ.ಡಾ. ಮಲ್ಲಿಕಾರ್ಜುನ ಮನ್ಸೂರ ಅವರು ಸ್ನಾತಕೋತ್ತರ ಸಂಗೀತ ವಿಭಾಗಕ್ಕೆ ನಿರ್ದೇಶಕರಾಗಿಯೂ ೫ ವರ್ಷಗಳ ಕಾಲ ತಮ್ಮ ಸೇವೆಯನ್ನು ಸಾಕಷ್ಟು ಕಲಾವಿದರಿಗೆ ಉಣಬಡಿಸಿದ್ದಾರೆ. ಇದರ ಜೊತೆಗೆ ಸಂಗೀತ ದಿಗ್ಗಜರುಗಳಾದ ಪಂಡಿತವರು ಆದ ವಿದೂಷಿ ಗಂಗೂಬಾಯಿ ಹಾನಗಲ್, ಪಂ. ಬಸವರಾಜ ಬೆಂಡಿಗೇರಿ, ಪಂ.ಆರ್.ಪಿ. ಹೂಗಾರ, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಪಂ. ಸಂಗಮೇಶ್ವರ ಗುರವ, ಪ್ರೊ. ಎ.ಯು. ಪಾಟೀಲ, ಇವರ ಸೇವೆಯು ಕೂಡ ವಿಭಾಗಕ್ಕೆ ಹಾಗೂ ಸಮಾಜಕ್ಕೆ ಅಮೋಘವೆನಿಸಿದೆ. ಇಂಥಹ ಸಂಗೀತ ಸೇವೆಯು ಕಲಾವಿದರಿಗಾಗಿ, ಸಮಾಜಕ್ಕಾಗಿ – ಸಾಕಷ್ಟು ಪ್ರಮಾಣದಲ್ಲೂ ಶ್ರಮಿಸಿದ ಡಾ.ಮನಸೂರ ಅವರು ಕೊನೆಗೆ ಸಮಾಜಕ್ಕಾಗೆಯೇ ದುಡಿದವರಾಗಿದ್ದಾರೆ.

ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಸಂಗೀತ, ಸಾಹಿತ್ಯ, ೨೨ ಪುರಾಣಗಳು ೧೯ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ಹಿಂದು ಸಂಸ್ಕೃತ ಭಾಷೆಯಲ್ಲಿ ೧೮ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಸಂಗೀತದಲ್ಲಿ ೪ ಪುಸ್ತಕಗಳನ್ನು ನೀಡಿದ್ದಾರೆ. ತಾಲ ಪಂಚಾಕ್ಷರಿ, ಸಂಗೀತ ಶಾಸ್ತ್ರ ಜ್ಞಾನ, ಗಾನಸುಧಾ ಭಾಗ-೧, ಗಾನಸುಧಾ-೨ ಹೀಗೆ ಹತ್ತು ಹಲವು ಪುಸ್ತಕಗಳನ್ನು ತಮ್ಮ ಬ್ರೈಲ್ ಲಿಪಿಯಲ್ಲಿ ಭಗವದ್ಗೀತಾ, ಉಪನಿಷತ್, ಶ್ರೀ ರುದ್ರಾ ಶರಧಿ ಬರೆದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಗಾನಸುಧಾ, ಸಂಗೀತ ಮತ್ತು ನಾಟಕ ಪ್ರಶಸ್ತಿ ೧೯೭೩ ರಲ್ಲಿ ಸಂಗೀತ ವಿದ್ವಾನ್ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ ಅವರಿಗೆ ಸಾಕಷ್ಷು ತುಲಾಭಾರಗಳು ಸಮಾಜದಿಂದ ಅವರನ್ನು ಸನ್ಮಾನಿಸುತ್ತಲಿರುವುದು ಈಗಲೂ ನಾವು ಕಾಣಬಹುದು.

ಭಾರತದಲ್ಲಿ ಮೊದಲು ಮುಸ್ಲಿಮರು, ಅವರ ನಂತರ ಬ್ರಿಟಿಷರು ಆಡಳಿತದಲ್ಲಿ ನಮ್ಮ ಮೂಲ ಸಂಸ್ಕೃತಿಯು ಹಾಳಾಗಿ ಅದರ ಸಂಸ್ಕಾರ ಸಮಾಜದಲ್ಲಿ ಜನರ ಜೀವನ ಏರುಪೇರಾಗಿ ಜನ ಜೀವನ ಅಧೋಗತಿಗೆ ಸಾಗಿತ್ತು. ಈ ಎಲ್ಲಾ ಅಸಂಸ್ಕೃತಿಯ ಸಮಯ ಮುಗಿಯುತ್ತಾ ಬರುವಾಗ ಶಿವಶರಣರ ಉಗಮ ಪ್ರಾರಂಭವಾಯಿತು. ಸಮಾಜದಲ್ಲಿ ಜನರ ಮನಸ್ಥಿತಿ ಅಶಾಂತಿಯಾದುದರಿಂದ – ಶಿವಶರಣರ ಉದಯದ ಮೂಲಕ ಕಲಾವಿದನಾಗಿ ಹಾಗೂ ಸಮಾಜಕ್ಕೆ ಉಸಿರು ಬಿಟ್ಟು ನಡೆದಾಡುವಂತಾಯಿತು. ಆದ ನಂತರ ಭಕ್ತಿ ಸಂಗೀತ, ಧರ್ಮ ಸಂಗೀತ, ವಚನ ಸಂಗೀತವು ಪ್ರಾರಂಭವಾಯಿತು. ತಪ್ಪು ಮಾಡಿದವರ ಬಗೆಗೆ ಸರಿಯಾದ ತಿಳುವಳಿಕೆ ಹೇಳಿ ಸಮಾಧಾನ ಪಡಿಸಿ ಸಮಾಜದಲ್ಲಿ ಏರುಪೇರುಗಳನ್ನು ತಿದ್ದಿ, ಕೊಲೆ ಸುಲಿಗೆ, ಮೋಸ, ವಂಚನೆ ಇವುಗಳನ್ನೆಲ್ಲ ತೊಡೆದು ಹಾಕಿ ಅಹಿಂಸೆಯ, ಅಸತ್ಯದ ಜಾಗದಲ್ಲಿ ಸೌಮ್ಯದ ಬೀಜವನ್ನು ಬಿತ್ತಿ ಕತ್ತಲೆಯಿಂದ ಬೆಳಕಿನೆಡೆಗೆ – ಸಂಗೀತ ಮತ್ತು ಸಮಾಜವನ್ನು ಮುನ್ನುಗ್ಗಿಸಿಕೊಂಡು ನಡೆಯ ಹತ್ತಿದರು. ಸ್ತ್ರೀ ಪುರುಷರಿಗೆ ಸಮಾದಾನವಾದ ಅವಕಾಶ, ಜಾತಿ-ಭೇದ, ಮೇಲು-ಕೀಳಲು, ಸಣ್ಣದು-ದೊಡ್ಡದು ಎಂಬುದನ್ನೆಲ್ಲ ಮರೆತು ಎಲ್ಲರಿಗೂ ಸಮಾನವಾದ ಅವಕಾಶವನ್ನು ಕೊಡುತ್ತಾ ಚೆನ್ನಾಗಿ ಸಾಗಿಸುತ್ತ ನಡೆದರು.

ಜಗಜ್ಯೋತಿ ಬಸವೇಶ್ವರ, ವೀರ ವೈರಾಗಿಣಿ ಶಿವಶರಣೆ ಅಕ್ಕಮಹಾದೇವಿ, ಡೋಹರಕಕ್ಕಯ್ಯ, ಸಂತ ತುಳಸೀದಾಸ, ಸಂತ ಮೀರಾಬಾಯಿ, ಪುರಂದರದಾಸರು, ಕನಕದಾಸರು, ಷಡಕ್ಷರದೇವರು, ಅಲ್ಲಮ ಪ್ರಭುಗಳು ಸರ್ವಜ್ಞ ಮೂರ್ತಿಯವರು, ಸಂತ ಶಿಶುನಾಳ ಶರೀಫ ಸಾಹೇಬರು, ಮಾದರ ಹರಳಯ್ಯ, ಶಿವಶರಣೆ ನೀಲಾಂಬಿಕೆ, ಗಂಗಾಂಬಿಕೆ ಇನ್ನೂ ಅನೇಕ ಸಂತ ಶಿವಶರಣರು ತಮ್ಮ ಅಮೂಲ್ಯವಾದ ಜೀವನವನ್ನು ಸಂಗೀತಕ್ಕೆ ಸಮಾಜ ಸುಧಾರಣೆಯ ಬಗೆಗೆ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಇದಲ್ಲದೆ ಸಮಾಜದಲ್ಲಿ ದುಶ್ಚಟಗಳನ್ನು ದೂರವಾಗಿಟ್ಟು ಹಸನಾದ ಬದುಕಿಗೆ ದಾರಿದೀಪಗಳಾದ ವೀರ ಶರಣರಾಗಿದ್ದಾರೆ. ಸಮಾಜಕ್ಕೆ ಆಧಾರವಾಗಲಿ ಹಾಗೂ ಸಮಾಜವು ಸುಧಾರಿಸಿಕೊಳ್ಳಲಿ ಎಂದು ತಮ್ಮ ಜೀವನದ ಅತ್ಯಮೂಲ್ಯವಾದ ಬದುಕನ್ನೇ ಜನರಿಗಾಗಿ ಜನರ ಸೇವೆಗಾಗಿ ತಮ್ಮ ವಚನಗಳ ಮೂಲಕ ಜನರಿಗೆ ತಿಳುವಳಿಕೆಯನ್ನು ಹೇಳಿಕೊಡುವುದು ಆಗಿದೆ. ಸಮಾಜವು ತಪ್ಪು ದಾರಿತುಳಿಯಬಾರದು ಎನ್ನುವ ವಿಚಾರವನ್ನಿಟ್ಟುಕೊಂಡು ವಚನಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಜಾತಿ ಬೋಧನ ವಿಷಯದಲ್ಲಿಯೂ ಕೂಡ ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿಯ ಗಂಡಿಗೆ ಮದುವೆ ಮಾಡಿಸಿ ಎಲ್ಲರೂ ಸಮಾನರು ಎಂದು ತೋರಿಸಿಕೊಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇಷ್ಟೆಲ್ಲ ಸುಧಾರಣೆಗಳನ್ನು ಮಾಡಿದ ಶಿವಶರಣರು ತಮ್ಮ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ.

ನಮ್ಮ ದೇಶದ ಸ್ವಾತಂತ್ಯ್ರ ಹೋರಾಟದ ಸಲುವಾಗಿ ಯುವ ಜನರನ್ನು ಹುರಿದುಂಬಿಸಲು ಹಾಗೂ ಗುಪ್ತವಾಗಿ ಸಂದೇಶಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕಳುಹಿಸಲು ಹಾಡುಗಳ ಮುಖಾಂತರ ರವಾನಿಸಲಾಗುತ್ತಿತ್ತು.

ರಾಜರು ತಮ್ಮ ಆಸ್ಥಾನಗಳಲ್ಲಿ ಆಸ್ಥಾನಗಾಯಕರನ್ನು ನೇಮಕ ಮಾಡಿಕೊಂಡು ಸೈನಿಕರಿಗೆ, ಸಂಗೀತ ಸೇವೆಯನ್ನು ಉಣಬಡಿಸುತ್ತಿದ್ದರು. (ಶೃಂಗಾರ ರಸ, ಭಯಂಕರ ಭೀಭತ್ಸರಸ ವೀರರಸಗಳನ್ನು ಇಲ್ಲಿ ನಾಟಕ ಸಂಭಾಷಣೆ ಇರುಗಳ ಮುಖಾಂತರ ಮನರಂಜನೆಯನ್ನು ಮಾಡುತ್ತಿದ್ದರು.)

ವೀರರು ತಮ್ಮ ಕುಟುಂಬ, ತಂದ-ತಾಯಿ, ಹೆಂಡತಿ ಮಕ್ಕಳನ್ನು ತ್ಯಜಿಸಿ ಸೈನ್ಯದಲ್ಲಿ ತರಬೇತಿಗೆ ಹೋಗಿ ತಮ್ಮ ಸೇವೆಯನ್ನು ದೇಶಕ್ಕಾಗಿ ಅರ್ಪಿಸಲು ಬಂದು ದೇಶದ ಸೈನಿಕರು ಸೈನ್ಯದಲ್ಲಿ ಗೆದ್ದು ಹಿಂದಿರುಗುವಾಗ. ವಿಜಯದ ಸಂಕೇತಕ್ಕಾಗಿ ವಿವಿಧ ವಾದ್ಯಗಳ ಕಹಳೆಯಿಂದ ಮೊಳಗಿಸಿ ನರ್ತಕಿಯರ ಕರೆತಂದು ನೃತ್ಯ ಮಾಡಿಸಿ, ಕುದುರೆ, ಒಂಟೆ, ಆನೆಗಳ ಮೇಲೆ ಮೆರವಣೆಗೆ ಮಾಡಿ ಸಂಗೀತ ಕಾರ್ಯಕ್ರಮಗಳ ಮುಖಾಂತರ ವಿಜೃಂಭಣೆಯಿಂದ ವಿಜಯೋತ್ಸವವನ್ನು ಆಚರಿಸುತ್ತಿದ್ದರು. ಇದು ಒಂದು ರೀತಿಯಿಂದ ಸೈನಿಕರಿಗೆ ಮನಸ್ಸು ಹುರಿದುಂಬಿಸುವ ಕಾರ್ಯವಾಗಿತ್ತು. ಅಷ್ಟೇ ಅಲ್ಲದೆ ಕವಿಗಳು ಸೈನಿಕರನ್ನು ಕುರಿತು ಕವನಗಳನ್ನು ರಚಿಸುತ್ತಿದ್ದರು, ಆ ಬರೆದ ಕವನಗಳಿಗೆ ಸಂಗೀತವನ್ನು ಸಂಯೋಜನೆ ಮಾಡಿ ಹಾಡುತ್ತಿದ್ದರು.

ಜಾನಪದಗಳು, ವಚನಗಳು, ದಾಸರ ಪದ್ಯಗಳು ಇವುಗಳಿಗೆ ಸಮಾಜವು ಹೆಚ್ಚಿನ ಗೌರವವಿದ್ದ ಇವುಗಳೆಲ್ಲವನ್ನು ಸಂಗೀತಕ್ಕೆ ಅವಡಿಸಿಕೊಂಡಿರುತ್ತಾರೆ. ಇವೆಲ್ಲವೂ ನಾವು ಗಮನಿಸಲಾಗಿದೆ ಸಮಾಜಕ್ಕೆ ಸಂಗೀತದ ಅಪಾರವಾದ ಗೌರವವಿದೆ. ಹಾಗೂ ಸಂಗೀತಕ್ಕೆ ಸಮಾಜದಿಂದ ಉತ್ತಮ ಸ್ಥಾನಮಾನ ಎಂಬುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ.