ತಾಯಿ ತಂದಿs ಸತ್ತು ಇಂದಿsಗ್ಹನ್ನೆರಡೊ ವರುಷ ||
ಇಂದs ನಮ್ಮ ನಿ()ಲ-ಗಂಗನ ಭಾವ ಬಂದ್ ನs | ಸೂಯಿ ||
ಇಂದs ನಿಮ ನಿ()ಲ-ಗಂಗನ ಖಳುವಬೇಕವ್ವಾ | ಸೂಯಿ ||

* * * *

ಅಚ್ಚೀ ಬಿಂಡಿs ಬಿಡು ಇಚ್ಚಿ ಬಿಂಡಿs ಬಿಡು ||
ನಡುವಿsನ ಬಿಂಡ್ಯಾನ ಸೀರಿ ಉಟಗ್ವಾ ನಿಲಗಂಗಾ | ಸೂಯಿ ||
ಅಚ್ಚೀ ಭರಣೀ ಬಿsಡು ಇಚ್ಚೀ ಭರಣೀ ಬಿsಡು ||
ನಡುವಿನ ಭರಣ್ಯಾನ ವಸ್ತಾ ಇಟಿಗ್ವಾ ನಿಲಗಂಗಾ | ಸೂಯಿ ||
ಎಡಕೊಮ್ಮೆ ಹೊಳ್ಳವ್ವಾ ಬಲಕೊಮ್ಮ ಹೊಳ್ಳವ್ವಾ ||
ನಿಂತ ಗೆಳದ್ಯಾರಿಗಿ ಹೇಳವ್ವಾ ತಂಗಿs | ಸೂಯಿ ||
ಬಿಸಿಲs ಬಡಿದರ ಶೆಲ್ಲ್ಯಾ ಮುಸುಕ ಹಾಕಣ್ಣಾ | ಸೂಯಿ ||
ನೀರಡಿಕ್ಯಾದರ ಗಿಂಡಿಲಿ ನೀರ ಕುಡಿಸಣ್ಣಾ | ಸೂಯಿ ||

* * * *

ತೇವರೀಗ್ಹೊಡಿಯುವ ಕುದುರಿ ತೆಗ್ಗೀಗಿ ಹೊಡೆದಾನ ||
ಮೈಯ ಕೈಯುಗಳು ಮುಟ್ಟಲ್ಹೋಗ್ಯಾನs | ಸೂಯಿ ||
ಸಿಟ್ಟೇಲಿ ನೀಲಗಂಗಾ ಮಡವ ಧುಮುಕ್ಯಾಳ | ಸೂಯಿ ||

* * * *

ಆ ಊರ ಹಾದೀಲಿ (ಬತ್ತಲ) ಕುದರಿs ಬರತದ ||
ಅಣ್ಣಾ ಸಹ ದೇವಣ್ಣಾ ಒಬ್ಬನೇ ಬರತಾನ | ಸೂಯಿ ||
ಮಡದೀ ನೀಲಗಂಗಾನ ಖಳುವಲಿಲ್ಲೇನ | ಸೂಯಿ ||
ಆ ಊರ ಹಾದೀಲಿ ಏಳ್ಮಂದಿ ಕಳ್ಳsರು ||
ಮೈಯs ಕೈಯಗಳು ಮುಟ್ಟಲ್ಹೋಗ್ಯಾರೋ | ಸೂಯಿ ||
ಸಿಟ್ಟೇಲಿ ನೀಲಗಂಗಾ ಮಡವ ಧುಮಕ್ಯಾಳೋ | ಸೂಯಿ ||
ಮೊನ್ನಿsನ ರಾತುರಲಿ ಸಪನsವು ಬಿsದ್ದಿತೊ ||
ಮುತ್ತಿನ ತೂರಾಯಿಗಿ ಬೆಂಕಿ ಹತ್ತಿತ್ತೊ | ಸೂಯಿ ||
ಇsವು ಸುದ್ದಿಗಳವರಕ್ಕsಗ ಒಯ್ಯೋ | ಸೂಯಿ ||

* * * *

ತಂಗಿs ನೀಲಗಂಗಾ ಏನ ಹೇಳ್ಯಾಳೊ | ಸೂಯಿ ||
ಆ ಊರ ಹಾದೀಲಿ ಏಳ್ಮಂದಿ ಕಳ್ಳsರ ||
ಮೈಯ ಕೈಯಗಳು ಮುಟ್ಟಲ್ಹೋಗ್ಯಾರೊ || ಸೂಯಿ ||
ಸಿಟ್ಟೇಲಿ ನೀಲಗಂಗಾ ಮಡವ ಧುಮಕ್ಯಾಳೊ | ಸೂಯಿ ||
ತಾಯ್ತಂದಿ ಸಾಯಾsಗ ಐಯ್ದಿನದ ಕೂಸಿದ್ದ್ಯಾ |
ಖಾರಿಕ ತೆಯ್ದ್ಹಾಕಿ ಸಲಹಿದನಲ ತಂಗಿs | ಸೂಯಿ |
ತಾಯ್ತಂದಿ ಸಾಯಾಗ ಏಳ್ದಿನದ ಕೂಸಿದ್ದಿ ||
ಅಂಜರದ್ಹಣ್ಹಾಕಿ ಸಲವಿದನಲ ತಂಗಿs | ಸೂಯಿ ||*      ನೀಲಗಾಂಗನ ಹಾಡು, ಕಾಪಸೆ ರೇವಪ್ಪ ಮಲ್ಲಿಗೆದಂಡೆ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೦, ಪು.ಸಂ. ೫೩-೫೪.