ಮುಂಗಾರು ಗುಡುಗಿಲ್ಲ ಮಾಡಲು ಸ್ವಾನೇಳ್ಲಿಲ್ಲ
ಹಸ್ತೆ ಚಿತ್ತೇ ಮಳೆ ಸುತ್ಗಿಟ್ಟಿ ಬರಲಿಲ್ಲ
ತುಂಗಭದ್ರೆ ಹೊಳೆ ತುಂಬಿ ಹಾಯಲಿಲ್ಲ
ಮಘೆ ಹುಬ್ಬೆಮಳೆ ಬಗೆಯ ತಿಳಿಯಲಿಲ್ಲ
ಇಂಥಾ ಹಸ್ತದ ಮಳೆ ಹೋದ್ಮೇಲೆ ಕಷ್ಟ ಬಂದಾವೋ ಜನ್ಮ
ಉತ್ತರ ದೇಶದಿಂದ ಉರುವತ ಬಂದಳು ದುರಗಿ
ಬಿತ್ತಿದ ಪೈರೆಲ್ಲ ಬಿಸಿಲಿಗೆ ಬಾಡುತ
ಹೆತ್ತಂತ ಮಕ್ಕಳ ಹೆರವರಿಗೆ ಕೊಡಲವ್ವ
ಕದರು ಕಡ್ಡೀ ಹಂಗೆ ಕೈಕಾಲು ನಾಗುತ
ಬಿದಿರು ಪುಟ್ಟೀ ಹಂಗೆ ಹೊಟ್ಟೆಗಳಾಗುತ
ಮಜ್ಜಿಗೆ ಬೇಡೊಂದ ಅಲ್ಲಲ್ಲಿಗೆ ಸಾವುತ
ಎಂಥಾ ಬಾಳ್ಯವ ಕಾಲ್ಪಂತೋ ನಮ್ಮಣ್ಣಾ ||