ಹೋಗುನ್ನಡೀರೆಲ್ಲಮ್ಮನ ಗುಡ್ಡಕ
ಜಗದಂಬಿ ಜಾತ್ರಿ ಒಳ್ಳೆ ಕಡಕ ಪಲ್ಲ
ತಾಳ ಚೌಡಿಕಿ ಒಳ್ಳೊಳ್ಳೆ ಚಮಕ
ದೇವಿಗಿರಿಯಾಗ ಬಿಜಲಿಯ ಬೆಳಕ ೧
ಎಣಿಗೊಂಡೈತ್ರಿ ಅಲ್ಲಿ ಬಿಗಿಬಂದ
ಜೋಗತೇರು ಜಳಕಾ ಮಾಡ್ತಾರ ಬಂದ ೨
ಪಾತರಪೌಳ್ಯಾಗ ಜೋಗತೇರು ಮುಂದ
ದೇವಿ ಗಿರಿಯಾಗ ಭಂಡಾರ ದುಂದ ೩
ಸುತ್ತ ಸವದತ್ತಿ ಎಡಬಲ ನಡಕ
ಎಣಿಗೊಂಡದಾಗ ಮಾಡಬೇಕ್ರಿ ಜಗಳಕ ೪
ಉಗರಗೊಳ್ಳದೆಡಬಲ ನಡಕ
ಜೋಗತಿ ಬಾವ್ಯಾಗ ಜೋಗತೇರ ಜಳಕ ೫
Leave A Comment