ಪೂಜಾರಿಗಳ ಸೇವೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಭಿನ್ನತೆಯನ್ನು ಕಾಣುತ್ತೇವೆ. ಸಾಮಾನ್ಯವಾಗಿ ಪೂಜಾರಿ ಬೆಳಗಿನ ಜಾವದಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸುವದು, ಮಡಿಯಿಂದ ಅರ್ಚಿಸುವದು ಇವೇ ಮುಂತಾದ ಕೆಲವು ಅಂಶಗಳು ಎಲ್ಲ ಪೂಜಾರಿಗಳಲ್ಲಿ ಸಾಮಾನ್ಯವಾಗಿದ್ದರೂ ಪ್ರಾದೇಶಿಕ ವಿಶೇಷ ವಿಧಿ-ವಿಧಾನಗಳು ಪ್ರತ್ಯೇಕವಾಗಿ ಕಂಡು ಬರುತ್ತವೆ. ಹಲವು ಪ್ರದೇಶಗಳಲ್ಲಿ ದೇವಿಗೆ ಹಿಂದಿನ ದಿನ ಉಡಿಸಿದ ಬಟ್ಟೆಗಳನ್ನು ತೆಗೆಯುವದು, ದೇವತೆಗೆ ಮಜ್ಜನ ಮಾಡಿಸುವದು, ನಂತರ ಮಡಿಯಿಂದ ಪುನಃ ದೇವಿಗೆ ಬಟ್ಟೆಗಳನ್ನು ತೊಡಿಸುವದು, ಅಲಂಕಾರ ಮಾಡುವದು ದೇವತಾರ್ಚನೆ ಮುಂತಾದ ಕ್ರಿಯೆಗಳು ನಡೆಯುತ್ತವೆ. ಬೆಳಗಿನ ಜಾವದಿಂದ ಸಂಜೆಯವರೆಗೆ ಪೂಜಾರಿ ದೇವಸ್ಥಾನದಲ್ಲಿಯೇ ಇದ್ದುಕೊಂಡು ಭಕ್ತರಿಗೆ ದೇವಿಯ ದರ್ಶನ ಹಾಗೂ ಅವರು ಇಚ್ಛಿಸಿದ ರೀತಿಯಲ್ಲಿ ಅರ್ಚನೆ ನಡೆಸುತ್ತಾನೆ.

ಸಾಮಾನ್ಯವಾಗಿ ಎಲ್ಲ ಪ್ರದೇಶದ ದೇವಸ್ಥಾನಗಳಲ್ಲಿ ಮಂಗಳವಾರ ಹಾಗೂ ಶುಕ್ರವಾರ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುವುದನ್ನು ಕಾಣುತ್ತೇವೆ. ಈ ದಿನಗಳು ದೇವಿಯ ವಾರಗಳೆಂದು ಪರಿಗಣಿಸಿರುವರು. ಆದ್ದರಿಂದ ಈ ಎರಡು ದಿನಗಳಲ್ಲಿ ಸಾಮಾನ್ಯವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು. ದೇವಿಗೆ ವಿಶೇಷ ಪೂಜೆಯನ್ನು  ಸಲ್ಲಿಸುವರು. ರಾತ್ರಿ ಸಮಯದಲ್ಲಿ ಪೂಜಾರಿ ದೇವಿಯನ್ನು ಪೂಜಿಸಿ ಮಂಗಳಾರುತಿ ಎತ್ತುವನು, ಹೆಣ್ಣು ಮಕ್ಕಳಿಂದ ದೇವಿಯ ಬಗೆಗೆ ಸ್ತುತಿಪರವಾದ ಹಾಡುಗಳನ್ನು ಹಾಡಿಸುತ್ತಾನೆ. ದೇವಿಯನ್ನು ತೊಟ್ಟಿಲಕ್ಕೆ ಹಾಕುತ್ತಾನೆ. ರಾತ್ರಿ ಸಮಯದಲ್ಲಿ ದೇವಿಯು ಮಲಗಿ ವಿಶ್ರಮಿಸುತ್ತಾಳೆ ಎಂಬ ನಂಬಿಕೆ ಜನಪದರದು.

ಪ್ರಾದೇಶಿಕವಾಗಿ ದೇವತೆಯರನ್ನು ಕುರಿತಂತೆ ಮತ್ತು ದೇವತೆಗಳ ನಡಾವಳಿಯನ್ನು ಕುರಿತಂತೆ ಸ್ವಾರಸ್ಯಕರವಾದ ನಂಬಿಕೆಗಳಲು ಕಂಡು ಬರುತ್ತವೆ. ಈ ನಂಬಿಕೆಗಳನ್ನು ಪ್ರತಿನಿಧಿಸುವಂತೆ ಒಂದು ವಸ್ತು ದೇವತೆಗಳ ಸ್ಥಾನದಲ್ಲಿ ಕಂಡು ಬರುತ್ತದೆ. ಬೆಳಗಾವ ಜಿಲ್ಲೆಯ ಸವದತ್ತಿಯ ಎಲ್ಲಮ್ಮ, ಧಾರವಾಡ ಜಿಲ್ಲೆಯ, ನವಲಗುಂದ ತಾಲೂಕಿನ ಹನಸಿಗ್ರಾಮ.

mes NewX�a”�VW 0nX black;text-transform:uppercase’>

 

ಗೋರೂರು ರಾಮಸ್ವಾಮಿ ಅಯ್ಯಂಗಾರರು ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನವಾದುದು, ಆರ್ಯರ ಉಪನಿಷತ್ತು ವೇದಗಳ ಕಾಲಕ್ಕೆ ಸೇರಿದವು ಎಂದು ಹೇಳಲಾಗುತ್ತದೆ. ರಾಮಾಯಣದ ಕಾಲಕ್ಕಿಂತ ಹಿಂದಿನಿಂದಲೂ ದೇವತೆ ಇದ್ದಿರಬೇಕು. ಸೀತೆ ಗಂಗೆಯನ್ನು ದಾಟುವಾಗ ಗಂಗೆಯನ್ನು ಹೀಗೆ ಪ್ರಾರ್ಥಿಸುತ್ತಾಳೆ. ನಿನ್ನ ತೀರದಲ್ಲಿರುವ ದೇವತೆಗಳಿಗೆ ಅನೇಕ ನೈವೇದ್ಯಗಳನ್ನು ಮಾಡಿಸುವೆನು. ನಿನಗೆ ಸಂತೋಷವಾಗುವ ಮರ್ಯಾದೆಯಲ್ಲಿ ಸಾವಿರಾರು ಸುರಾಘಟಗಳನ್ನು ಅನೇಕ ಮಾಂಸೋಪಹಾರಗಳನ್ನು ಬಲಿಕೊಡುವೆನು.

ಈ ಎಲ್ಲ ಅಂಶಗಳನ್ನು ಗಮನಿಸಿದರೆ ಗ್ರಾಮದೇವತೆಗಳ ಪ್ರಾಚೀನತೆಯ ಬಗೆಗೆ ವಿದ್ವಾಂಸರಲ್ಲಿಯೂ ಖಚಿತವದ ಅಭಿಪ್ರಾಯಗಳಿಲ್ಲವೆಂದು ಕಂಡುಬರುತ್ತದೆ. ಆದರೆ ಗ್ರಾಮದೇವತೆಗಳ ಬಗೆಗೆ ಊಹಿಸಲು ಸಾಕಷ್ಟು ಆಧಾರಗಳಿರುವವು. ಲಭ್ಯವಾದ ಆಧಾರಗಳ ಮೇಲಿಂದ ವಿವೇಚಿಸಿದರೆ ಖಚಿತವಾದ ಅಭಿಪ್ರಾಯ ಮೂಡಿಬರಲು ಸಾಧ್ಯವಿದೆ.