ಭೌಗೋಳಿಕವಾಗಿ ಕರ್ನಾಟಕದಲ್ಲಿ ನೆಲೆಸಿರುವ ಡಕ್ಕಲಿಗರು ಇಲ್ಲಿಯ ಮಾದಿಗರ ಜೊತೆಗೆ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಇವರ, ದಂತಕಥೆ ಐತಿಹ್ಯಗಳಲ್ಲಿ ಸಾಮಾನ್ಯವಾಗಿ ಜಾಂಬಮುನಿ ಆದಿಶಕ್ತಿಯ ಕಥೆಗೆ ಹೋಲಿಸಿಕೊಂಡು ಹೇಳುತ್ತಾರೆ. ಇವರು ತಮ್ಮ ಸಂಪ್ರದಾಯ, ನಂಬಿಕೆ, ಆಚಾರ ವಿಚಾರಗಳಲ್ಲಿ ಒಂದು ದೃಷ್ಟಿಯಿಂದ ತಮ್ಮದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿಗಳಂಥ ಜನಪದ ವೃಂದಗಳ ಜೀವನ ಕ್ರಿಯೆಯಲ್ಲಿ ಭಾಷೆಯ ಮೌಖಿಕ ಪರಂಪರೆಯದೇ ಪ್ರಧಾನ ಪಾತ್ರ. ಇಂದಿಗೂ ಈ ಬಗೆಯ ಅನೇಕ ಜನಪದ ಸಮುದಾಯಗಳಲ್ಲಿ ಮೌಖಿಕ ಪರಂಪರೆಯೇ ಚಲಾವಣೆಯಲ್ಲಿರುವುದು ಸಹಜ. ತಮ್ಮ ವೃತ್ತಿಯ ಕಾರಣದಿಂದಾಗಿ ಹತ್ತಾರು ಕಡೆ ಸುತ್ತಾಡಿ ವಿವಿಧ ಕಡೆಗೆ ವಲಸೆ ಹೋಗಿ ಕೆಲವೊಮ್ಮೆ ಅಲ್ಲಲ್ಲಿ ನೆಲೆಸಿದ ಕಾರಣ ಇವರ ಭಾಷೆ ತುಂಬ ಸಂಕೀರ್ಣ ಸ್ವರೂಪದ್ದಾಗಿದೆ. ಡಕ್ಕಲಿಗರು ಕನ್ನಡ ಮಾತನಾಡುವುದು ಸಹಜ. ಆದರೆ ಕೆಲವರು ತೆಲುಗು, ಮರಾಠಿ, ತಮಿಳು ಉರ್ದು ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಾರೆ.

ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿಯೂ ಡಕ್ಕಲಿಗರು ಕಾಣಸಿಗುತ್ತಾರೆ. ಆಂಧ್ರದ ಕಡಪ್ಪಾ, ಕರ್ನೂಲ, ಅನಂತಪುರ, ಶ್ರೀಶೈಲ, ಧಡೇಕಲ್‌ಗಳಲ್ಲಿ ತಮಿಳುನಾಡಿನ ತಂಜಾವೂರ, ಪಾಲೈಮಕೊಟೈ, ಶಿವಕಾಶಿಗಳಲ್ಲಿ ಮತ್ತು ಮಹಾರಾಷ್ಟ್ರದ ಮಾನಗಾಂವ, ಕರಾಡ, ಬೊರಕಳ್‌, ಖಡೇಪುರ, ಸಾತಾರಾ, ಕೊಲ್ಲಾಪುರ ಮುಂತಾದ ಪ್ರದೇಶಗಳಲ್ಲಿ ಇವರು ವಾಸಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಬೀದರ, ಬಸವಕಲ್ಯಾಣ, ಗುಲ್ಬರ್ಗಾ ಕೊಡೆಕಲ್‌, ಬಳ್ಳಾರಿ, ಕೊಟ್ಟೂರು, ಹೊಸಪೇಟ, ರಾಯಚೂರು, ಮದಗಲ್‌, ರಾಮದುರ್ಗ, ಹತ್ತರಕಿಹಾಳ, ನಿಡಗುಂಡಿ, ಇಂಗಳೇಶ್ವರ ಮೂಡಲಗಿ, ಸೂರೇಬಾನ, ಧಾರವಾಡ, ಕೋಲಾರ, ತುಮಕೂರ ಹೀಗೆ ವಿವಿಧ ಪ್ರದೇಶಗಳಲ್ಲಿ ಕಾಣಸಿಗುತ್ತಾರೆ.

ಕರ್ನಾಟಕದಲ್ಲಿ ಡಕ್ಕಲಿಗರ ಜನಸಂಖ್ಯೆ ಎಷ್ಟು ಎನ್ನುವುದು ಜನಗಣತಿಯ ವರದಿಗಳಲ್ಲಿ ನಿರ್ದಿಷ್ಟವಾಗಿ ದೊರೆಯುವುದಿಲ್ಲ. ಗೆಜೆಟಿಯರ ಆಫ್‌ ಇಂಡಿಯಾದ ಕರ್ನಾಟಕ ಸ್ಟೇಟ್‌ ಗೆಜೆಟಿಯರದಲ್ಲಿ ೧೯೬೧-೧೯೭೭ರ ಸಾಲಿನ ಪರಿಶಿಷ್ಟ ಜಾತಿಗಳ ಬಗೆಗೆ ವಿವರಣೆ ನೀಡುವಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ೬, ಮೈಸೂರು ಜಿಲ್ಲೆಗಳಲ್ಲಿ ೯ (೧೯೭೧), ಬೆಂಗಳೂರ ಜಿಲ್ಲೆ ೧೩೧, ಚಿಕ್ಕಮಗಳೂರು ೧೧೫, ಕೋಲಾರ ೧೬೦, ಉಳಿದ ಜಿಲ್ಲೆಗಳ ಅಂಕಿ ಸಂಖ್ಯೆ ಖಚಿತವಾಗಿ ಕೊಟ್ಟಿರುವುದಿಲ್ಲ. ಒಟ್ಟಾರೆ ಡಕ್ಕಲಿಗರ ಜನಸಂಖ್ಯೆ ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯ ಶೇ ೧ ರಷ್ಟು ಕೂಡ ಕಾಣಸಿಗುವುದಿಲ್ಲ. ಆದ್ದರಿಂದ ಡಕ್ಕಲಿಗರ ಜನಗಣಿತಿಯ ಬಗೆಗೆ ನಿರ್ದಿಷ್ಟವಾದ ಅಂಕಿ ಸಂಖ್ಯೆ ಕೊಡುವುದು ಸಾಧ್ಯವಾಗಿಲ್ಲ ಎಂದು ಹೇಳಬಹುದು.

ಡಕ್ಕಲಿಗರು ವೃತ್ತಿಯ ಕಾರಣದಿಂದಾಗಿ ಊರೂರು ಅಲೆಯುವುದರಿಂದ ಆಯಾ ಊರಿನ ಮಾದಿಗರ ಗುಂಪಿನವರೊಡನೆ ಕೂಡಿರುವುದರಿಂದ, ಜನಗಣತಿಯ ಕಾಲಕ್ಕೆ ಪ್ರತ್ಯೇಕವಾಗಿ ಪಟ್ಟಿಮಾಡದೇ ಹಾಗೂ ಸೆನ್ಸಸ್‌ ರಿಪೋರ್ಟು ತಯಾರಿಸುವಾಗ ಆಯಾ ಹಳ್ಳಿ-ನಗರಗಳ ಜನಸಂಖ್ಯೆಯನ್ನು ಸಮ್ಮಿಶ್ರ ಮಾಡಿಕೊಂಡು ಜನಗಣತಿಯ ವರದಿ ತಯಾರಿಸುವುದರಿಂದ ಇವರ ಜನಸಂಖ್ಯಾ ವಿವರಗಳನ್ನು ಕುರಿತು ನಿರ್ದಿಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ. ಆದರೆ ಕರ್ನಾಟಕದಲ್ಲಿ ಡಕ್ಕಲಿಗರ ಜನಸಂಖ್ಯೆ ಸುಮಾರು ೧೫ ಸಾವಿರಕ್ಕಿಂತಲೂ ಕಡಿಮೆಯಾಗಲಾರದು ಎಂದು ಹೇಳಬಹುದು.

n styb �fn�� `�� .0pt;font-family:”Times New Roman”,”serif”;color:black; text-transform:uppercase’>(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ ೨೭.೬.೧೯೯೧) ಇವರ “ಡಕ್ಕಲಿಗರು: ಪುರಾತನ ಬದುಕಿನ ಪಳೆಯುಳಿಕೆಗಳು” ಎಂಬ ಲೇಖನದಲ್ಲಿ ನೂರಾರು ಜಾತಿಗಳ ಈ ನಾಡಿನಲ್ಲಿ ಒಂದೊಂದು ಜಾತಿಗೆ ಒಂದೊಂದು ವೈಶಿಷ್ಟ್ಯ. ಅಲೆಮಾರಿಗಳಾದ ಡಕ್ಕಲಿಗರಿಗೆ ಹೊಗೆ ಇಲ್ಲದ ಊಟ ಮಾಡುವರು ಎಂಬ ಬಿರುದು. ಅಲ್ಲದೆ ಅವರ ಹುಟ್ಟಿನಿಂದ ಮಸಣದವರೆಗಿನ ಹಲವಾರು ಕುತೂಹಲಕಾರಿಯಾದ ವಿಷಯಗಳನ್ನು ಕ್ಷೇತ್ರಕಾರ್ಯದ ಅಧ್ಯಯನದಿಂದ ದತ್ತ – ಸಂಗ್ರಹಣೆ ಮಾಡಿ, ವೈಜ್ಞಾನಿಕ ದೃಷ್ಟಿಯಿಂದ ವರ್ಗೀಕರಿಸಿದ್ದಾರೆ.

 

ಕೇಂದ್ರ ಸರ್ಕಾರದ ಎ.ಎಸ್‌. ಆಯ್‌. ಸಂಸ್ಥೆಯು ೧೯೭೨ ರಲ್ಲಿ ಹೊರತಂದಿರುವ ಕೆ.ಎಫ್‌. ಸಿಂಗ ಅವರು ಸಂಪಾದಿಸಿರುವ “ಪಿಪಲ್ಸ್‌ ಆಫ್‌ ಇಂಡಿಯಾ” ದ ಪ್ರಥಮ ಸಂಪುಟದಲ್ಲಿ ಡಕ್ಕಲರ ವಿವರಣೆ ನೀಡುತ್ತ ಇವರು ಆಂಧ್ರಮೂಲದವರೆಂದು ಹೇಳಿದ್ದಾರೆ.

೧೯೯೨ರ ಜನವರಿ ೧೨ ರ ಪ್ರಜಾವಾಣಿ ‘ಸಾಪ್ತಾಹಿಕ ಸೌರಭ’ದಲ್ಲಿ ಶ್ರೀ ಎಲ್ಲ ಕೆಕೆಪುರ ಅವರು ‘ದೊಕ್ಕಲಿಗರ ಸಂಸ್ಕೃತಿ’ ಎಂಬ ಲೇಖನದಲ್ಲಿ ಡಕ್ಕಲಿಗರ ಸಂಸ್ಕೃತಿಯ ಮೂಲ ಪರಂಪರೆಗಳ ಬಗೆಗೆ ಮಾಹಿತಿ ಒದಗಿಸಲು ಪ್ರಯತ್ನಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದವರು ಸಂಪಾದಿಸಿರುವ ಜಾನಪದ ಸಾಹಿತ್ಯದರ್ಶನ ಬಾಗ-೧೭, ೧೯೯೩ ಇದರಲ್ಲಿ ಡಾ.ಎಸ್‌.ಆರ್. ಸಿಂಗೆ ಅವರ ‘ಡಕ್ಕಲಿಗರು’ ಎಂಬ ಪ್ರಬಂಧ ಪ್ರಕಟವಾಗಿದೆ. ಹತ್ತು ಪುಟಗಳ ಹರವನ್ನು ಪಡೆದಿರುವ ಈ ಪ್ರಬಂಧದಲ್ಲಿ ಡಕ್ಕಲಿಗರ ಬದುಕಿನ ಕೆಲವು ವಿಷಯಗಳನ್ನು ಪರಿಚಯಿಸುತ್ತಾ. ಸವರ್ಣೀಯರಿಂದ ಶೋಷಣೆಗೊಳಗಾದ ಹೊಲೆ – ಮಾದಿಗರಿಗಿಂತಲೂ ಕೀಳಾದ ಡಕ್ಕಲಿಗರ ಜಾತಿ ಇರುವುದು ಕಂಡು ಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ಪ್ರಕಟಿಸಿರುವ “ಡಕ್ಕಲರ ಸಂಸ್ಕೃತಿ” ಗ್ರಂಥವು ಕ್ಷೇತ್ರಕಾರ್ಯ ಮಾಡಿ ಅಧ್ಯಯನ ಕೈಕೊಂಡಿರುವ ಚೆಲುವರಾಜು ಅವರ ಕೃತಿ. ಇದು ಕನ್ನಡದಲ್ಲಿ ಡಕ್ಕಲಿಗರನ್ನು ಕುರಿತು ಪ್ರಥಮ ಕೃತಿ ಎನ್ನಬಹುದು.

ಇಲ್ಲಿಯವರೆಗೆ ಡಕ್ಕಲಿಗರನ್ನು ಕುರಿತು ಗೆಜೆಟಿಯರುಗಳಲ್ಲಿ ಸೆನ್ಸಸ್‌ ರಿಪೋರ್ಟುಗಳಲ್ಲಿ, ಕೃತಿಗಳಲ್ಲಿ, ಜರ್ನಲ್‌ಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಗಮನಿಸಲಾಯಿತು. ಆದರೆ ಇವುಗಳು ಡಕ್ಕಲಿಗರ ಸಂಸ್ಕೃತಿಯ ಸಮಗ್ರವಾದ ಅಧ್ಯಯನವಲ್ಲ. ಇವು ಅವರ ಸಂಸ್ಕೃತಿಯ ವಿವಿಧ ಅಂಶಗಳನ್ನು ಎತ್ತಿಕೊಂಡು ಬರೆದವುಗಳು. ನಾನು ಸಂಶೋಧನ ಅಧ್ಯಯನಕ್ಕಾಗಿ ಕರ್ನಾಟಕದ ಯುದ್ಧಕ್ಕೂ ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಆಕಸ್ಮಾತ್‌ ಈ ಜನಪದ ವೃಂದ ನನ್ನ ಗಮನ ಸೆಳೆಯಿತು. ಆಗ ಡಕ್ಕಲಿಗರ ಹಿರಿಯರ ಜೊತೆಗೆ ಸಮಾಲೋಚಿಸಿದಾಗ ಅವರು ತಮ್ಮ ಸಂಸ್ಕೃತಿಯ ಸಾರವನ್ನೇ ಧಾರೆಯೆರೆದರು. ಇಂಥ ಕುತೂಹಲಕಾರಿ ವಿಷಯಗಳನ್ನು ಕಲೆ ಹಾಕಿ ಕೃತಿಯ ರೂಪದಲ್ಲಿ ತರಬೇಕೆಂದು ದತ್ತ-ಸಂಗ್ರಹಣೆ ಮಾಡಿದೆ. ಆದರೆ ಇಂಥ ಕೊರತೆ ಕೇವಲ ಏಕಮುಖದ ಅಧ್ಯಯನದಿಂದ ಎಂಬುವಂಥದಲ್ಲ ಎನ್ನುವುದು ಈ ಪುಸ್ತಿಕೆ ರಚನೆಯ ಕಾಲದಲ್ಲಿ ಬಂದ ಅನುಭವ.