ವೈಜ್ಞಾನಿಕ ಹೆಸರು: ಮಕೋರಸ್ಆಲ್ಬ
ಕುಟುಂಬ: ಮೋರೇಸಿ

ಕತ್ತರಿಸದೆ ಬೆಳೆಯಲು ಬಿಟ್ಟಾಗ ೨೦-೨೫ ಮೀ. ಎತ್ತರದ ೮ ಮೀ. ದಪ್ಪವಾದ ಮರವಾಗಿ ಬೆಳೆಯುತ್ತದೆ. ಆದರೆ ಕತ್ತರಿಸಿದಾಗ ಪೊದೆ ಅಥವಾ ಮಧ್ಯಮ ಗಾತ್ರಕ್ಕೆ ಬರುವುದಕ್ಕೆ ಅನುಗುಣವಾಗಿ ಬೆಳೆಸಬಹುದಾಗಿದೆ. ಕಾಶ್ಮೀರದಲ್ಲಿ ಹಿಪ್ಪುನೇರಳೆ ಮರವಾಗಿ ಬೆಳೆಸುತ್ತಾರೆ. .ಪಶ್ಚಿಮ ಬೆಂಗಳೂರಿನಲ್ಲಿ ಕತ್ತರಿಸಿ ಪೊದೆಗಳಾಗಿ ಬೆಳೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಮಧ್ಯಮ ಗಾತ್ರದ ೪೫ ರಿಂದ ೯೦ ಸೆಂ.ಮೀ. ಅಂತರ ಬಿಟ್ಟು ಕತ್ತರಿಸಲಾಗುತ್ತದೆ. ಕರ್ನಾಟಕದಲ್ಲಿ ಕೋಲಾರ ವಿಧಾನದಲ್ಲಿ ಸಾಲುಗಳಲ್ಲಿ ನೆಟ್ಟು ಬುಡಕ್ಕೆ ಕತ್ತರಿಸಿ ಎಲೆ ಸಂಗ್ರಹಿಸಲಾಗುತ್ತದೆ. ಎಲೆಗಳು ತಳಿಗೆ ಅನುಗುಣವಾಗಿ ಆಕಾರ, ಅಳತೆ ಮತ್ತು ಬಣ್ಣದಲ್ಲಿ ವಿವಿಧ ಮೊಗ್ಗುಗಳು ಋತುಗಳಿಗೆ ಅನುಗುಣವಾಗಿ ಸುತ್ತಲೂ ಮೊಗ್ಗುಗಳನ್ನು ಚಳಿಗಾಲದಲ್‌ಇ ಬಿಟ್ಟಿರುತ್ತವೆ. ಹೂ ಗೊಂಚಲು ಬೇರೆ ಸಸ್ಯಗಳಲ್ಲಿರುವಂತೆಯೆ ಇರುತ್ತದೆ. ಇದರ ಗಂಡು ತೆನೆ ಉದ್ದವಾಗಿದ್ದು ಕೆಳಗಡೆಗೆ ಜೋತು ಬಿದ್ದಿರುತ್ತದೆ, ಹೆಣ್ಣು ದಪ್ಪ ಹೂಗೊಂಚಲು ಕಂಕುಳಲ್ಲಿ ಬಿಟ್ಟಿರುತ್ತವೆ. ಗರ್ಭಧರಿಸಿದ ನಂತರ ಹೂಗೊಂಚಲು ಒಂದು ಸಂಕೀರ್ಣ ಫಲವಾಗುತ್ತದೆ.

ಪುನರುತ್ಪತ್ತಿ: ಸಾಧಾರಣವಾಗಿ ಚಿಣ್ಣೆಗಳಿಂದ ಸಂತಾನಾಭಿವೃದ್ಧಿ ಮಾಡುವುದು ವಾಡಿಕೆ. ಕತ್ತರಿಸಿದ ಚಿಣ್ಣೆಗಳನ್ನು ನೆಟ್ಟಾಗ ಸುಲಭವಾಗಿ ಚಿಗುರುತ್ತವೆ. ಬೀಜಗಳಿಂದ ಸಂತಾನಾಭಿವೃದ್ಧಿ ಮಾಡುವುದು ವಿರಳ.

ಉಪಯೋಗಗಳು: ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಸಾಕಾಣಿಕೆಗೆ ಮತ್ತು ಜಾನುವಾರುಗಳ ಮೇವಾಗಿ ಉಪಯೋಗಿಸುತ್ತಾರೆ. ಹಣ್ಣು ರುಚಿಕರವಾಗಿರುವುದರಿಂದ ತಿನ್ನಲು ಮತ್ತು ಜೆಲ್ಲಿ ತಯಾರಿಸಲು ಉಪಯೋಗಿಸುತ್ತಾರೆ. ಕೊಂಬೆಗಳನ್ನು ಸೌದೆಯಾಗಿ ಮತ್ತು ದಾರುವನ್ನು ಕ್ರಿಕೆಟ್‌ ಬ್ಯಾಟು ಮತ್ತು ಇತರೆ ಆಟಿಕೆಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.