ವೈಜ್ಞಾನಿಕ ಹೆಸರು: ಕಾಮ್ಮಿಫೋರ ಕಾಡೇಟ
ಕುಟುಂಬ: ಬರ್ಸೆರೇಸಿ

ಪೊದೆ ಅಥವಾ ಮರ, ಕೊಂಬೆಗಳು ಹಳದಿ ಮಿಶ್ರಿತ ಹಸಿರು, ದಪ್ಪ ಮೊಂಡವಾಗಿದ್ದು, ಇದರ ಮೇಲೆ ಹಸಿರು ಎಲೆ ಪತ್ರಗಳು ೨-೫ ಜೊತೆ, ಅಸಮ ಗರಿ ಪತ್ರ ಹೊಂದಿದ್ದು, ಹೊಳಪುಳ್ಳದಾಗಿರುತ್ತವೆ. ಅಂಡಾಕಾರ, ಮೊನಚು, ನೀಳಾಕಾರ ಕೆಳಗಿನ ಗರಿ ಎಳೆಗಳು ತುದಿಯಲ್ಲಿರುವುದಕ್ಕಿಂತ ಚಿಕ್ಕದಾಗಿದ್ದು, ಉದ್ದನೆ ತೊಟ್ಟುಳ್ಳದ್ದಾಗಿದ್ದು ಪುಷ್ಪ ಪಾತ್ರೆ ಹೊಳಪುಳ್ಳದಾಗಿರುತ್ತದೆ.

ಪುನರುತ್ಪತ್ತಿ: ಸಂತಾನಾಭಿವೃದ್ಧಿಗಾಗಿ ಕಾಂಡದ ಚಿಣ್ಣಿಗಳನ್ನು ಕತ್ತರಿಸಿ ನೆಡುವುದರಿಂದ ಮಾತ್ರವೇ ಸುಲಭವಾಗಿ ಪುನರುತ್ಪತ್ತಿ ಮಾಡಲಾಗುತ್ತದೆ.

ಉಪಯೋಗಗಳು: ಎಲೆಗಳನ್ನು ಪೂಜೆಗೆ ಉಪಯೋಗಿಸುತ್ತಾರೆ. ತೊಗಟೆ ಮತ್ತು ಎಲೆಗಳನ್ನು ಆಯುರ್ವೇದದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಈ ಸಸ್ಯವನ್ನು ಜಮೀನಿನ ಬೇಲಿಗೆ ಚಿಣ್ಣಿಗಳನ್ನು ಕಡಿದು ನೆಡಬಹುದು. ಕೊಂಬೆಗಳು ಮುಳ್ಳಿನಂತಿರುವುದರಿಂದ ಇದನ್ನು ಜಾನುವಾರುಗಳು ಮೇಯುವುದಿಲ್ಲ.