ಕರ್ನಾಟಕ ರಾಜ್ಯವು ಉತ್ತರದಲ್ಲಿ ೧೧.೫ ಡಿಗ್ರಿ ಮತ್ತು ೧೮.೫ ಡಿಗ್ರಿ ಅಕ್ಷಾಂಶಗಳ ನಡುವೆ ಹಾಗೂ ಪೂರ್ವದಲ್ಲಿ ೭೪ ಡಿಗ್ರಿ ಮತ್ತು ೭೮.೫ ಡಿಗ್ರಿ ಲಂಬಾಕ್ಷಗಳ ನಡುವೆ ನೆಲೆಯಾಗಿದೆ. ಸಮುದ್ರಮಟ್ಟದಿಂದ ಮೇಲಿನ ಸರಾಸರಿ ಎತ್ತರ ೬೦೦ ಮೀ. ನಿಂದ ೯೦೦ ಮೀ. ವರೆಗೆ ಇರುತ್ತದೆ (ರಾಜೇಗೌಡ ೧೯೯೦). ರಾಜ್ಯದಲ್ಲಿ ಹತ್ತು ಬಗೆಯ ಕೃಷಿ ಹವಾಮಾನ ವಲಯಗಳನ್ನು ಚಿತ್ರ ೫ ರಲ್ಲಿ ಕೊಡಲಾಗಿದೆ.

ಕರ್ನಾಟಕದಲ್ಲಿ ೧೯೭೪ರಿಂದ ೧೯೯೦ರವರೆಗೆ ಸರಾಸರಿ ವಾರ್ಷಿಕ ಉಷ್ಣಾಂಶದಲ್ಲಿ ೧.೫ ಡಿಗ್ರಿ ಸೆ. ಹೆಚ್ಚಳವಾಗಿರುವುದನ್ನು  ಚಿತ್ರ ೬ ರಲ್ಲಿ ಕೊಡಲಾಗಿದೆ.

.೧ ವಿವಿಧ ವಲಯಗಳಲ್ಲಿನ ಮಳೆಪ್ರಮಾಣ

೧೯೦೧ರಿಂದ ೧೯೭೦ರ ವರೆಗಿನ ಅವಧಿಯಲ್ಲಿನ ಸರಾಸರಿ ಮಳೆ ಪ್ರಮಾಣವನ್ನು ವಿಶ್ಲೇಷಿಸಲಾಗಿದೆ. ಬೆಟ್ಟ ಮತ್ತು ತೀರವಲಯಗಳು ಕ್ರಮವಾಗಿ ೨೨೦೯ ಮತ್ತು ೩೮೯೩ ಮಿ.ಮಿ. ಅತಿಹೆಚ್ಚಿನ ಮಳೆಪ್ರಮಾಣವನ್ನು ಹಾಗೂ ಉತ್ತರದ ಒಣವಲಯ ಮತ್ತು ಮಧ್ಯದ ಒಣವಲಯಗಳು ಕ್ರಮವಾಗಿ ೫೮೫ ಮತ್ತು ೬೧೧ ಮಿ.ಮಿ. ನಷ್ಟು ಅತಿಕಡಿಮೆ ಮಳೆ ಪ್ರಮಾಣವನ್ನು ಪಡೆಯುತ್ತವೆ. ವಿವಿಧ ಹಂಗಾಮುಗಳ ಮಳೆ ಪ್ರಮಾಣ ಮತ್ತು ಅವುಗಳ ಶೇಕಡಾವಾರನ್ನು ಕೋಷ್ಟಕ ೨ ರಲ್ಲಿ ಕೊಡಲಾಗಿದೆ.

ಮಾಸಿಕ ಮಳೆ ವಿತರಣೆಯನ್ನು ಚಿತ್ರ ೭ ರಲ್ಲಿ ಕೊಡಲಾಗಿದೆ. ಅಲ್ಲದೆ ಎಲ್ಲಾ ಜಿಲ್ಲೆಗಳಲ್ಲಿನ ಮಾಸಿಕ ಸಾಮಾನ್ಯ ಮಳೆಪ್ರಮಾಣಗಳನ್ನು ಕೋಷ್ಟಕ ೩ ರಲ್ಲಿ ಕೊಡಲಾಗಿದೆ. ಉಡುಪಿಯಲ್ಲಿ ಅತಿ ಹೆಚ್ಚಿನ ವಾರ್ಷಿಕ ಮಳೆಪ್ರಮಾಣ ಅಂದರೆ ೪೧೧೯ ಮಿ.ಮಿ.ಯನ್ನು ಹಾಗೂ ಬಾಗಲಕೋಟೆಯಲ್ಲಿ ಅತಿಕಡಿಮೆ ಅಂದರೆ ೫೬೧.೭ ಮಿ.ಮಿ. ಮಳೆ ಪ್ರಮಾಣವನ್ನು ಪಡೆಯಲಾಗುತ್ತಿದೆ. ತೀರವಲಯದ ಜಿಲ್ಲೆಗಳು ಹೆಚ್ಚಿನ ವಾರ್ಷಿಕ ಮಳೆ ಪ್ರಮಾಣವನ್ನು ಪಡೆಯುತ್ತವೆ.

.೨ ದೀರ್ಘಾವಧಿ ವಾರ್ಷಿಕ ಮಳೆ ಪ್ರಮಾಣ

ಕರ್ನಾಟಕದಲ್ಲಿನ ಸ್ಥಿತಿ

 

ರಾಜ್ಯದಲ್ಲಿ ಬೀಳುವ ವಾರ್ಷಿಕ ಸರಾಸರಿ ಒಟ್ಟು ಮಳೆ ಪ್ರಮಾಣ ೧೧೪೦ ಮಿ.ಮೀ.ಗಳಲ್ಲಿ ಜೂನ್‌-ಸೆಪ್ಟೆಂಬರ್ (ನೈರುತ್ಯ ಮುಂಗಾರು) ಅವಧಿಯಲ್ಲಿ ಸುಮಾರು ೮೦೫ ಮಿ.ಮೀ. (ಶೇ. ೭೧ರಷ್ಟು), ಅಕ್ಟೋಬರ್-ಡಿಸೆಂಬರ್ (ಈಶಾನ್ಯ ಮುಂಗಾರು) ಅವಧಿಯಲ್ಲಿ ಸುಮಾರು ೧೯೫ ಮಿ.ಮಿ. (ಶೇ. ೧೭ರಷ್ಟು) ಹಾಗೂ ಜನವರಿ-ಮೇ ಅವಧಿಯಲ್ಲಿ ಕೇವಲ ೧೩೯ ಮಿ.ಮೀ. (ಶೇ. ೧೭ರಷ್ಟು) ಹಾಗೂ ಜನವರಿ-ಮೇ ಅವಧಿಯಲ್ಲಿ ಕೇವಲ ೧೩೯ ಮಿ.ಮೀ. (ಶೇ. ೧೨ರಷ್ಟು) ಮಾತ್ರ ಬೀಳುತ್ತದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚಿನ ಅಂದರೆ ೨೮೩ ಮಿ.ಮೀ. ಹಾಗೂ ಆಗಸ್ಟ್ ನಲ್ಲಿ ೧೯೦ ಮಿ.ಮೀ. ಮಳೆ ಬೀಳುತ್ತದೆ. ಒಟ್ಟಿನಲ್ಲಿ ಬೆಳೆ ಬೆಳವಣಿಗೆ ಅವಧಿಯು ಮಳೆಯಾಶ್ರಿತ ಪ್ರದೇಶಗಳಲ್ಲಿ ಜೂನ್‌ನಿಂದ ಅಕ್ಟೋಬರ್ ವರೆಗೆ ವಿಸ್ತರಿಸುತ್ತದೆ. ಆದ್ದರಿಂದ ನೈರುತ್ಯ ಮುಂಗಾರು ಮಳೆ ಪ್ರಮಾಣ ಕರ್ನಾಟಕದಲ್ಲಿ ಕೃಷಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಮುಂಗಾರು ಪೂರ್ವ ಮಳೆಯು ಸ್ಥಳೀಯ ಪರಿಸರಗಳ ಮೇಲೆ ಸಂಪೂರ್ಣ ಅವಲಂಬಿತವಾಗಿರುತ್ತದೆ. ನೈರುತ್ಯ ಮುಂಗಾರು ಮಳೆ ಬೀಳುವಿಕೆ ಜಾಗತಿಕ ಪರಿಸರದ ಮೇಲೆ, ಅಂದರೆ ದಕ್ಷಿಣ ಭೂಗೋಳದ ಹಿಂದೂಮಹಾಸಾಗರದಲ್ಲಿ ಉಂಟಾಗುವ ಆಂದೋಲನಗಳ ಮೇಲೆ ಆಧಾರಿತವಾಗಿರುತ್ತದೆ. ಈ ಅವಧಿಯಲ್ಲಿನ ಮಳೆ ಪ್ರಮಾಣದ ಕೊಡುಗೆ ಮತ್ತು ಅದರ ಹರಡಿರುವಿಕೆಯು (ಜೂನ್‌ನಿಂದ ಸೆಪ್ಟೆಂಬರ್ ವರೆಗೆ) ದಕ್ಷಿಣ ಭೂವಲಯದಲ್ಲಿ ಉಂಟಾಗುವ ಭೌತಿಕ ವ್ಯತ್ಯಾಸಗಳಮೇಲೆ ಅವಲಂಬಿತವಾಗಿರುವುದರಿಂದ ಇದು ಸ್ಥಳೀಯ ಪರಿಸರದಿಂದ ಹೆಚ್ಚು ಪರಿಣಾಮಕ್ಕೆ ಗುರಿಯಾಗುವುದಿಲ್ಲ ಈಶಾನ್ಯ ಮುಂಗಾರು ಮಳೆಯು ರಾಜ್ಯಕ್ಕೆ ಖಚಿತವಾಗಿ ದೊರಕುತ್ತದೆಂದು ಹೇಳಲಾಗದಿದ್ದರೂ ಸಹ ಇದು ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಚಂಡಮಾರುತದ ಪ್ರಭಾವಕ್ಕೆ ಗುರಿಯಾಗುತ್ತದೆ. ಕರ್ನಾಟಕದ ಪೂರ್ವಭಾಗಗಳು ಈಶಾನ್ಯ ಮುಂಗಾರಿನಿಂದ ಲಾಭ ಪಡೆಯುತ್ತವೆ.

 

ರಾಜ್ಯದಲ್ಲಿನ ಸರಾಸರಿ ವಾರ್ಷಿಕ ಮಳೆ ಪ್ರವೃತ್ತಿಯು ೧೯೦೧ ರಿಂದ ೨೦೦೦ದ ಅವಧಿಯಲ್ಲಿ ಇಳಿಮುಖವಾಗುತ್ತಿದೆಯೆಂದು ವರದಿಮಾಡಲಾಗಿದೆ. ಚಿತ್ರ ೮ ರಲ್ಲಿ ರಾಜ್ಯದ ಸರಾಸರಿ ಮಳೆ ಪ್ರಮಾಣವನ್ನು ಆಯಾ ವರ್ಷದಲ್ಲಿ ಆಗಿರುವಂತೆ ಕೊಡಲಾಗಿದೆ. ಈ ಚಿತ್ರದಲ್ಲಿನಂತೆ ಕಾಲಶ್ರೇಣಿಯಲ್ಲಿ ೧೯೫೦ ರಿಂದ ೧೯೬೪ಕ್ಕೂ ಹೆಚ್ಚು ಅಂದರೆ ಸುಮಾರು ಹದಿನಾರಕ್ಕಿಂತ ಹೆಚ್ಚು ವರ್ಷಗಳ ಅವಧಿಯಲ್ಲಿನ ರಾಜ್ಯದ ಮಳೆ ಪ್ರಮಾಣದ ಸರಾಸರಿಯು ಒಂದು ನಿರ್ದಿಷ್ಟ ಪ್ರಮಾಣದ ಮಳೆಯನ್ನು ತೋರಿಸಿದೆ. ಈ ಕಾಲಶ್ರೇಣಿಯ ಮೊದಲ ಅರ್ಧದಲ್ಲಿ ಅಂದರೆ ೧೯೫೦ ರಿಂದ ೧೯೫೮ರವರೆಗಿನ ಅವಧಿಯು ಸಾಧಾರಣಕ್ಕಿಂತ ಕಡಿಮೆ ಮಳೆಯನ್ನೂ ಹಾಗೂ ಎರಡನೇ ಅರ್ಧದಲ್ಲಿ ಅಂದರೆ ೧೯೫೯ ರಿಂದ ೧೯೬೪ವರೆಗಿನ ಅವಧಿಯು ಸಾಧಾರಣಕ್ಕಿಂತ ಹೆಚ್ಚಿನ ಮಳೆಯನ್ನೂ ಪಡೆದಿದೆ. ಈ ಚಕ್ರವು ೨೯೯೪ರವರೆಗೆ ಪುನರಪಿಗೊಂಡಿದ್ದು ರಾಜ್ಯವು ೨೦೦೪ ರವರೆಗೆ ಸಕಾರಾತ್ಮಕ ಚಕ್ರಾರ್ಧದಲ್ಲಿದ್ದು ಇದು ೨೦೧೨ ರವರೆಗೆ ಮುಂದುವರೆಯುತ್ತದೆ. ೧೯೦೧ ರಿಂದ ೨೦೦೦ರವರೆಗಿನ ಅವಧಿಯಲ್ಲಿ ರಾಜ್ಯದ ಸರಾಸರಿ ವಾರ್ಷಿಕ ಮಳೆಪ್ರಮಾಣದ ಪ್ರವೃತ್ತಿಯಲ್ಲಿ ಇಳಿಮುಖವಾಗಿರುವುದನ್ನು ಚಿತ್ರ ೯ ರಲ್ಲಿ ಕೊಡಲಾಗಿದೆ. ಬಿಜಾಪುರ ಮತ್ತು ಮುಖ್ಯ ಸಂಶೋಧನಾ ಕೇಂದ್ರ (ಎಂ.ಆರ್.ಎಸ್‌.) ಬೆಂಗಳೂರಿನಲ್ಲಿನ ದೀರ್ಘಾವಧಿ ವಾರ್ಷಿಕ ಮಳೆ ಪ್ರಮಾಣಗಳನ್ನ ಚಿತ್ರ ೧೦ರಲ್ಲಿ ಕೊಡಲಾಗಿದೆ.

ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಮಳೆ ಪ್ರಮಾಣಗಳಲ್ಲಿ ನಿರ್ದಿಷ್ಟವಾಗಿ ಇಳಿಮುಖ ಪ್ರವೃತ್ತಿ ಕಂಡುಬಂದಿದೆ. ಕೊಡಗು ಜಿಲ್ಲೆಯಲ್ಲಿ, ೧೯೦೧ ರಿಂದ ೧೯೫೦ರವರೆಗಿನ ಅವಧಿಯಲ್ಲಿ ಸರಾಸರಿ ವಾರ್ಷಿಕ ಮಳೆಪ್ರಮಾಣವು ೨೭೨೫ ಮಿ.ಮೀ.ಗಳಿಂದ ೨೬೨೫ ಮಿ.ಮೀ.ಗಳವರೆಗೆ ಇಳಿಮುಖವಾಗಿರುವುದನ್ನು ಚಿತ್ರ ೧೧ರಲ್ಲಿ ತೋರಿಸಲಾಗಿದೆ. ಇದೇ ಸುಮಾರು ಅವಧಿಯಲ್ಲಿ, ಚಿಕ್ಕಮಗಳೂರಿನಲ್ಲಿ ವಾರ್ಷಿಕ ಸರಾಸರಿ ಮಳೆಪ್ರಮಾಣವು ೧೯೨೭ ಮಿ.ಮೀ.ಗಳಿಂದ ೧೮೭೨ ಮಿ.ಮೀ.ಗಳಿಗೆ ಇಳಿಮುಖವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸರಾಸರಿ ವಾರ್ಷಿಕ ಮಳೆಪ್ರಮಾಣವು ೩೯೭೬ ಮಿ.ಮೀ.ಗಳಿದ್ದುದು ೩೯೬೦.೩ ಮಿ.ಮೀ.ಗಳಿಗೆ ಇಳಿಮುಖವಾಗಿರುವುದು ಸರಾಸರಿ ವಾರ್ಷಿಕ ಮಳೆ ಪ್ರಮಾಣದಲಿ ಇಳಿಮುಖವಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದ್ದು ಇಳಿಮುಖದ ಪ್ರವೃತ್ತಿಯನ್ನು ಸೂಚಿಸುತ್ತದೆ. ಆದರೆ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ವಾರ್ಷಿಕ ಮಳೆ ಪ್ರಮಾಣದಲ್ಲಿ ಗಣನೀಯವಾದ ಹೆಚ್ಚಳ ಉಂಟಾಗಿದೆ. ಆ ಪ್ರದೇಶಗಳಲ್ಲಿನ ಸರಾಸರಿ ವಾರ್ಷಿಕ ಮಳೆ ಪ್ರಮಾಣವು ೧೯೦೧ ರಿಂದ ೧೯೫೦ ರವರೆಗಿನ ಅವಧಿಯಲ್ಲಿ ಕ್ರಮವಾಗಿ ೮೬೭ ಮಿ.ಮೀ., ೭೪೫ ಮಿ.ಮೀ, ಮತ್ತು ೬೮೭.೯ ಮಿ.ಮೀ ಹಾಗೂ ೧೯೫೧ ರಿಂದ ೨೦೦೬ರವರೆಗಿನ ಅವಧಿಯಲ್ಲಿ ಕ್ರಮವಾಗಿ ೮೮೨.೮ ಮಿ.ಮೀ, ೭೬೨.೨ ಮಿ.ಮೀ. ಮತ್ತು ೭೩೦ ಮಿ.ಮೀ. ಆಗಿದ್ದಿತು. ಬೆಂಗಳೂರು ಜಿಲ್ಲೆಯ ವಾರ್ಷಿಕ ಮಳೆ ಪ್ರಮಾಣದ ಹೆಚ್ಚಳವನ್ನು ಚಿತ್ರ ೧೨ ರಲ್ಲಿ ತೋರಿಸಲಾಗಿದೆ.

.೩ ಮಳೆಪ್ರಮಾಣದ ವ್ಯತ್ಯಾಸ ಮತ್ತು ಆಹಾರೋತ್ಪಾದನೆ

 

ರಾಜ್ಯದಲ್ಲಿ ಬೆಳೆ ಬೆಳೆಯಲಾದ ಪ್ರದೇಶಗಳ ಅಧ್ಯಯನವು ೧೯೯೦ಕ್ಕೆ ಮೊದಲು ಮತ್ತು ಅನಂತರದಲ್ಲಿ ಪ್ರತಿ ಬೆಳೆಯ ಪ್ರದೇಶಗಳಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನು ತೋರಿಸುತ್ತದೆ. ರಾಜ್ಯದಲ್ಲಿನ ನೆಲಗಡಲೆ ಬೆಳೆ ಪ್ರದೇಶದಲ್ಲಿ, ಹವಾಗುಣ ವ್ಯತ್ಯಾಸಗಳಿಂದಾಗಿ ಪ್ರದೇಶದಿಂದ ಪ್ರದೇಶಕ್ಕೆ ಬೆಳೆ ಪ್ರದೇಶಗಳಲ್ಲಿ ಉಂಟಾಗಿರುವ ವ್ಯತ್ಯಾಸಗಳು ಸ್ಪಷ್ಟವಾಗಿ ಕಂಡುಬಂದಿವೆ. ೧೯೮೦ರಲ್ಲಿ ನೆಲಗಡಲೆ ಬಳೆ ಪ್ರದೇಶವು ೭.೫೯ ಲಕ್ಷ ಹೆಕ್ಟೇರುಗಳಷ್ಟಿದ್ದುದು ೧೯೯೦ರಲ್ಲಿ ೧೧.೯೪ ಲಕ್ಷ ಹೆಕ್ಟೇರುಗಳಷ್ಟು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ೧೯೯೦ರ ನಂತರ ೧೧.೯೪ ಲಕ್ಷ ಹೆಕ್ಟೇರುಗಳಿಂದ ೧೦.೪ ಲಕ್ಷ ಹೆಕ್ಟೇರ್ ವರೆಗೆ ತೀವ್ರ ಇಳಿಮುಖವಾಗಿದೆ. ಇದಕ್ಕೆ ಕಾರಣ ಬಹುಮಟ್ಟಿಗೆ, ಮಳೆಪ್ರಮಾಣದಲ್ಲಿ ಕಡಿಮೆಯಾಗಿರುವಿಕೆ ಮತ್ತು ಮಳೆ ಬೀಳುವ ಮಾದರಿಯಲ್ಲಿ ವ್ಯತ್ಯಾಸಗಳಾಗಿದ್ದು ತಡವಾಗಿ ಬರುವ ಮಳೆ ಮತ್ತು ವಿಳಂಬಗತಿಯ ಮಳೆ ಬೀಳುವಿಕೆಗಳು ನೆಲಗಡಲೆ ಬೆಳೆ ಕ್ಷೇತ್ರ ಕಡಿಮೆಯಾಗಿರುವುದಕ್ಕೆ ಮುಖ್ಯ ಕಾರಣವಾಗಿರುತ್ತವೆ. ಜುಲೈ ತಿಂಗಳನಂತರ ನೆಲಗಡಲೆ ಬೆಳೆಯುವುದು ಸೂಕ್ತವಲ್ಲದಿರುವಿಕೆಗೆ ಕಾರಣ ಕೊಯಿಲು ಸಮಯಕ್ಕೆ ಸರಿಯಾಗಿ ತೀವ್ರ ಪ್ರಮಾಣದ ಮಳೆ ಸುರಿಯುವ ಸಮಯವಾಗಿರುತ್ತದೆ. ಬದಲಾಗುತ್ತಿರುವ ಹವಾಮಾನವು ಪ್ರಮುಖ ಬೆಳೆಗಳ ಬೆಳೆ ಪ್ರದೇಶ ಮತ್ತು ಬಳೆ ಉತ್ಪಾದನೆ ಮೇಲೆ (ಬೆಳೆ ಬೆಳೆಯುವ ಮಾದರಿ) ಅಚ್ಚಳಿಯದ ಪ್ರಭಾವ ಬೀರಲಿದ್ದು ಇದರಿಂದ ಕೃಷಿ ಪದ್ಧತಿಗಳ ಪಕ್ಷಿನೋಟವೇ ಬದಲಾವಣೆ ಹೊಂದುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಂದು ವಲಯವನ್ನು ಅದರ ಹವಾಗುಣಕ್ಕೆ ಸಂಬಂಧಿಸಿದಂತೆ ಹಾಗೂ ಕೃಷಿಯ ಮೇಲಿನ ಅದರ ಪರಿಣಾಮಗಳ ಬಗ್ಗೆ ಅಭ್ಯಾಸಮಾಡುವುದು ಸದ್ಯದ ತುರ್ತು ಅಗತ್ಯವಾಗಿದ್ದು, ಇದರಿಂದ ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಆಹಾರೋತ್ಪಾದನೆ ಪೂರೈಕೆಗೆ ಹಾಗೂ ಜಾಗತಿಕ ಉದಾರೀಕರಣದ ಹೊಸ ಸವಾಲುಗಳನ್ನು ಎದುರಿಸುವಿಕೆಗೆ ಅಗತ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಒಟ್ಟು ಬೆಳೆ ಪ್ರದೇಶವನ್ನು ಕುರಿತಂತೆ ೧೯೫೦ ರಿಂದ ೨೦೦೬ ರವರೆಗಿನ ಅವಧಿಯವರೆಗೆ ಅಧ್ಯಯನ ನಡೆಸಲಾಗಿದೆ.

ವಾರ್ಷಿಕ ಮತ್ತು ನೈರುತ್ಯ ಮುಂಗಾರು ಮಳೆ ಪ್ರಮಾಣದ ವ್ಯತ್ಯಾಸಗಳನ್ನು ಹಾಗೂ ಒಟ್ಟು ಉತ್ಪಾದಕತೆಯನ್ನು ಚಿತ್ರ ೧೩ ರಲ್ಲಿ ಗುರುತಿಸಲಾಗಿದೆ. ವಾರ್ಷಿಕ ಮತ್ತು ನೈರುತ್ಯ ಮುಂಗಾರು ಮಳೆಯು ತೀವ್ರ ವ್ಯತ್ಯಾಸಗಳನ್ನು ಹೊಂದಿದ್ದು ಇದರಿಂದಾಗಿ ಆಹಾರೋತ್ಪಾದನೆಯ ಮೇಲೆ ಮುಖ್ಯವಾಗಿ ಪ್ರಭಾವ ಉಂಟಾಗಿರುತ್ತದೆ. ಕಡಿಮೆಮಳೆ ಪ್ರಮಾಣದ ವರ್ಷಗಳಲ್ಲಿ ಉತ್ಪಾದನಾ ಪ್ರಮಾಣ ಉಂಟಾಗಿರುತ್ತದೆ. ಕಡಿಮೆಮಳೆ ಪ್ರಮಾಣದ ವರ್ಷಗಳಲ್ಲಿ ಉತ್ಪಾದನಾ ಪ್ರಮಾಣ ಕಡಿಮೆಯಾಗಿರುವುದನ್ನು ಇದು ಸೂಚಿಸುತ್ತಿದೆ. ಆದ್ದರಿಂದ ಮಳೆ ಪ್ರಮಾಣದ ಪ್ರವೃತ್ತಿಗಿಂತ ಹೆಚ್ಚಾಗಿ ಬೆಳೆ ಹಂಗಾಮಿನಲ್ಲಿ ಮಳೆ ಬೀಳುವುದು ಅತಿಮುಖ್ಯವಾಗಿರುತ್ತದೆ.

ಮಾಸಿಕ ಮಳೆ ಪ್ರಮಾಣದಲ್ಲಿ ಬದಲಾವಣೆಗಳು

 

ಮಧ್ಯ ಮತ್ತು ದಕ್ಷಿಣ ಭಾರತದ ಆಯ್ದ ತಾಣಗಳಲ್ಲಿ ನೈರುತ್ಯ ಮುಂಗಾರು ಹಂಗಾಮಿನ ಕೊನೆಯ ಭಾಗದ ಮಳೆಪ್ರಮಾಣದಲ್ಲಿ ಮಾಸಿಕ ಮಾದರಿಯಲ್ಲಿ ವ್ಯತ್ಯಾಸದ ಸೂಚನೆ ಕಂಡುಬಂದಿದೆ. ರಾಜೇಗೌಡ ಮತ್ತಿತರರ ಅಧ್ಯಯನ (೨೨೦೧) ಪ್ರಕಾರ ಕಳೆದ ದಶಕದಲ್ಲಿ (೧೯೯೧-೨೦೦೦) ಅತಿ ಹೆಚ್ಚು ಮಳೆಗಾಲದ ಸಮಯಗಳಲ್ಲಿ ೨-೩ ವಾರಗಳವರೆಗೆ ವ್ಯತ್ಯಾಸವಾಗಿರುವುದನ್ನು ಗಮನಿಸಲಾಗಿದ್ದು ಅವುಗಳ ಸರಾಸರಿ ವಾರ್ಷಿಕ ಪ್ರಮಾಣಗಳೂ ಸಹ ಬದಲಾವಣೆಯಾಗಿವೆ. ೧೯೯೦ಕ್ಕೆ ಮೊದಲು ವಾರ್ಷಿಕ ಮಳೆ ಪ್ರಮಾಣವು ೬೧೯ ರಿಂದ ೧೧೧೯ ಮಿ.ಮೀ.ವರೆಗೆ ವ್ಯತ್ಯಾಸಗೊಂಡಿದ್ದು ಸರಾಸರಿ ೮೬೯.೨ ಮಿ.ಮೀ. ಶ್ರೇಣಿಯಲ್ಲಿದ್ದು ಸರಾಸರಿ ಪ್ರಮಾಣವು ೧೦೧೧.೨ ಮಿ.ಮೀ. ಆಗಿತ್ತು. ಮೊದಲ ಅವಧಿಯಲ್ಲಿ, ಸರಾಸರಿ ಪ್ರಮಾಣವು ೧೦೧೧.೨ ಮಿ.ಮೀ. ಆಗಿತ್ತು. ಮೊದಲ ಅವಧಿಯಲ್ಲಿ, ಸರಾಸರಿ ಅತಿಹೆಚ್ಚಿನ ಮಳೆ ಪ್ರಮಾಣಗಳು ಮೇ, ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮತ್ತು ಎರಡನೇ ಅವಧಿಯಲ್ಲಿ ಮೇ, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಉಂಟಾಗಿದ್ದನ್ನು ಗಮನಿಸಲಾಯಿತು. ಚಿತ್ರ ೧೫ ರಲ್ಲಿ ಕೊಟ್ಟಿರುವಂತೆ, ಜುಲೈನಲ್ಲಿ ಮಳೆಗಾಲ ಕಡಿಮೆಯಾಗುತ್ತಾ ಬಂದಿರುವುದು ಹಾಗೂ ಆಗಸ್ಟ್‌ನಲ್ಲಿ ಮಳೆಗಾಲ ಹೆಚ್ಚಾಗುತ್ತಾ ಬಂದಿರುವುದು ಕಾಣುತ್ತದೆ. ಇದು ಬಿತ್ತನ ಸಮಯ ಮತ್ತು ಮುಂದಿನ ಬೆಳೆ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವುದರಿಂದ ಬೆಳೆಗಳು ಮತ್ತು ಬೆಳೆ ಮಾದರಿಗಳನ್ನು ಬದಲಾದ ಮಳೆಬೀಳುವಿಕೆಗೆ ತಕ್ಕಂತೆ ಮಾರ್ಪಡಿಸಲು ನೆರವಾಗಿ ಕೃಷಿ ಬೆಳೆಗಳ ಮೇಲೆ ನೇರ ಪರಿಣಾಮ ಹೊಂದಿರುವುದು ಕಾಣುತ್ತದೆ.

ಉತ್ತಮ ಬೆಳೆ ನಿರ್ವಹಣೆಗಾಗಿ ನೀರಿನ ಸಮತೋಲನೆ

 

ವಾತಾವರಣದ ನೀರಿನ ಸಮತೋಲನೆ ಮಾದರಿಗಳನ್ನು ಬಳಸಿ ಬೆಳೆ ಬೆಳವಣಿಗೆಯ ತಿಂಗಳಿನಲ್ಲಿ ಬೆಳೆಗೆ ದೊರಕುವ ನೀರಿನ ವಾಸ್ತವ ಪ್ರಮಾಣ, ನೀರಿನ ಸಂಗ್ರಹಣೆ ಮತ್ತು ಕೊಚ್ಚಿ ಹೋದ ನೀರಿನ ಪ್ರಮಾಣಗಳನ್ನು ನಿರ್ದಿಷ್ಟವಾದ ಮಣ್ಣು, ಬೆಳೆ ಮತ್ತು ಮಳೆ ಸ್ಥಿತಿಗಳಿಗೆ ನಿರ್ದಿಷ್ಟವಾಗಿ ಕಂಡುಹಿಡಿಯಬಹುದು. ದೀರ್ಘಾವಧಿ ಮಳೆ ಬೀಳುವ ಸಾಧ್ಯತೆಯ ವಿಶ್ಲೇಷಣೆ ಮತ್ತು ನೀರಿನ ಸಮತೋಲತೆ ಅಧ್ಯಯನಗಳನ್ನು ಆಧರಿಸಿ ಜುಲೈ ೧೫ ರಿಂದ ನವೆಂಬರ್ ೧೫ರವರೆಗಿನ ಅವಧಿಯು ಈ ವಲಯದಲ್ಲಿ ಬೆಳೆ ಬೆಳವಣಿಗೆಗೆ ಅತ್ಯನುಕೂಲತಮ ಅವಧಿ ಎಂದು ಗಮನಿಸಲಾಗಿದೆ. ಅಗತ್ಯತೆಗೆ ಸಾಕಾಗುವಷ್ಟು ತೇವಾಂಶದ ಲಭ್ಯತೆಯ ಅವಧಿಯನ್ನು ಚಿತ್ರ ೧೬ರಲ್ಲಿ ಕೊಡಲಾಗಿದೆ. ಇದು ಬೆಳೆ ನಿರ್ವಹಣೆಗೆ ಹೆಚ್ಚಿನ ಮಟ್ಟದಲ್ಲಿ ನೆರವಾಗಲಿದೆ.

.೪ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಹವಾಮಾನ ಸಲಹಾ ಸೇವೆಗಳು

 

ಯಶಸ್ವಿ ಕೃಷಿ ಉತ್ಪಾದನೆಗಾಗಿ ವಿವಿಧ ಕಾರ್ಯಾಚರಣೆಗಳಿಗೆ ಸೂಕ್ತ ಸಮಯಕ್ಕೆ ತಕ್ಕಂತೆ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಮಧ್ಯಮಶ್ರೇಣಿ ಹವಾಮಾನ ಮುನ್ಸೂಚನ (MRWF) ಕ್ರಮವು ಬೆಳೆಗಳ ಉತ್ಪಾದನೆಯನ್ನು ನಿರ್ಣಯಿಸುವಲ್ಲಿ ಉಪಯುಕ್ತವಾದ ಒಂದು ಮುಖ್ಯ ಕ್ರಮವೆಂದು ಕಂಡುಬಂದಿದೆ. ಸುಸ್ಥಿರ ಕೃಷಿ ಉತ್ಪಾದನೆಗಾಗಿ ಹವಾಮಾನದ ವ್ಯತಿರಿಕ್ತತೆಗಳನ್ನು ಬಹಳಷ್ಟು ಕಡಿಮೆಮಾಡುವುದು ಅಗತ್ಯವಾಗಿರುತ್ತದೆ. ಅತಿ ಕಡಿಮೆ ಪ್ರಮಾಣದಲ್ಲಿ ಅಲ್ಲದೆ ಹವಾಮಾನವನ್ನು ಬದಲಾಯಿಸುವುದು ನಮಗೆ ಸಾಧ್ಯವಿಲ್ಲವೆಂಬುದು ನಿಜವಾದರೂ ಕೃಷಿ ಕಾರ್ಯಾಚರಣೆಗಳನ್ನು ಹವಾಮಾನ ಮುನ್ಸೂಚನೆಗಳ ನೆರವಿನಿಂದ ಮೂರರಿಂದ ಹತ್ತುದಿನಗಳವರೆಗೆ ಹಿಂದಕ್ಕೆ ಅಥವಾ ಮುಂದಕ್ಕೆ ಕೈಗೊಳ್ಳುವಂತೆ ನಡೆಸಬಹುದಾಗಿದೆ. ಹವಾಮಾನ ಮುನ್ಸೂಚನೆಯ ಉಪಯುಕ್ತತೆಯ ಸೂಕ್ಷ್ಮಮಟ್ಟದಲ್ಲಿ ಅದರ ಅನ್ವಯತೆ ಮತ್ತು ನಂಬಲರ್ಹತೆಗಳನ್ನು ಆಧರಿಸಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿನ ಕೃಷಿ ಉದ್ಯಮಿಗಳ ಸಮುದಾಯವು ಮಾಡಿದ ಅಂದಾಜಿನ ಪ್ರಕಾರ ಹವಾಮಾನ ಮುನ್ಸೂಚನೆಯು ಶೇ. ೫೦-೬೦ರಷ್ಟು ನಿಜವಾದ ಪಕ್ಷದಲ್ಲಿ ಮಾತ್ರ ಅದನ್ನು ಆರ್ಥಿಕ ಬಳಕೆಗೆ ಅನ್ವಯಿಸಬಹುದಾಗಿದೆ.

ಹವಾಮಾನ ಮುನ್ಸೂಚನೆ ಶ್ರೇಣಿ

ಸದ್ಯದ ಮುನ್ಸೂಚನೆ: ಹವಾಮಾನ ಮುನ್ಸೂಚನೆಯು ೦-೧೨ ಗಂಟೆಗಳ ಸಮಯದೊಳಗಿದ್ದಾಗ ಅದನ್ನು ಸದ್ಯದ ಮುನ್ಸೂಚನೆ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಈ ಶ್ರೇಣಿಯಲ್ಲಿ ಮನುಷ್ಯರು ಮಾಡುವ ಮುನ್ಸೂಚನೆಯು ಕಂಪ್ಯೂಟರ್ ನ ಸಾಂಖ್ಯಿಕ ಹವಾಮಾನ ಮುನ್ಸೂಚನೆ (NWP) ಮಾದರಿಗಳಿಗಿಂತ ಹೆಚ್ಚು ಉಪಯುಕ್ತವಾಗಿರುತ್ತದೆ. ಇಂದಿನ ಕಾಲಶ್ರೇಣಿಯಲ್ಲಿ ಸಣ್ಣ ಸಣ್ಣ ಅಂಶಗಳನ್ನೂ ಕೂಡ ಮುನ್ಸೂಚನೆ ಮಾಡುವುದು ಸಾಧ್ಯವಾಗಿದ್ದು ಅಂದರೆ ಪ್ರತ್ಯೇಕ ಮಳೆಮೋಡಗಳ ಸಕಾರಣಯುಕ್ತ ನಿರ್ದಿಷ್ಟತೆಯನ್ನೂ ಸಹ ಸೂಚಿಸಬಹುದಾಗಿದೆಯಾದರೂ ಕಂಪ್ಯೂಟರ್ ನಿಂದ ನಿರ್ಣಯ ಕೈಗೊಳ್ಳಲು ಇವು ಅತಿ ಸಣ್ಣ ಅಂಶಗಳಾಗಿರುತ್ತವೆ.

ಅಲ್ಪಶ್ರೇಣಿ ಮುನ್ಸೂಚನೆ: ಇದು ೨೪ ರಿಂದ ೪೮ ಗಂಟೆಗಳ  ಶ್ರೇಣಿಯಾಗಿರುತ್ತದೆ. ಇಲ್ಲಿಯೂ ಕೂಡ ಸಾಂಖ್ಯಿಕ ಹವಾಮಾನ ಮುನ್ಸೂಚಕ ಮಾದರಿಗಳೆಂದರೆ ಇವು ವಾಯುಗುಣದ ಕಂಪ್ಯೂಟರ್ ಅಳವಡಿಕೆ (ಸಿಮ್ಯುಲೇಶನ್‌)ಗಳಾಗಿರುತ್ತವೆ.

ಮಾಧ್ಯಮ ಶ್ರೇಣಿ ಮುನ್ಸೂಚನೆ: ಇದು ೩ ರಿಂದ ೧೦ ದಿನಗಳವರೆಗಿನ ಹವಾಮಾನ ಮುನ್ಸೂಚನೆಯಾಗಿರುತ್ತದೆ. ಸಾಂಖ್ಯಿಕ ಹವಾಮಾನ ಮುನ್ಸೂಚನೆಗಳು ವಾತಾವರಣಕ್ಕೆ ಸಂಬಂಧಿಸಿದ ಕಂಪ್ಯೂಟರ್ ಅಳವಡಿಕೆಗಳು. ಅವು ಆರಂಭದ ಒಂದು ದಿನದ ವಿಶ್ಲೇಷಣೆಯನ್ನು ಪ್ರಾರಂಭಿಸಿ ಭೌತಶಾಸ್ತ್ರ ಮತ್ತು ದ್ರವ ಚಲನಶಾಸ್ತ್ರಗಳ ಜ್ಞಾನವನ್ನು ಬಳಸಿಕೊಂಡು ಮುಂದಿನ ದಿನಗಳ ವಾತಾವರಣದ ಸ್ಥಿತಿಯನ್ನು ನಿರೂಪಿಸುತ್ತವೆ. ಒಂದು ದ್ರವದ ಸ್ಥಿತಿಯು ಕಾಲದೊಂದಿಗೆ ಹೇಗೆ ಬದಲಾವಣೆ ಹೊಂದುತ್ತದೆಂಬುದನ್ನು ನಿಯಂತ್ರಿಸುವ ಅಂಶಗಳ  ಸಂಕೀರ್ಣ ಸಮೀಕರಣಗಳನ್ನು  ವಿಶ್ಲೇಷಿಸಲು ಉತ್ತಮ ಬಗೆಯ ಕಂಪ್ಯೂಟರ್ ಗಳು ಬೇಕಾಗುತ್ತವೆ. ಪ್ರಸ್ತುತ ಮಾದರಿಯಿಂದ ದೊರಕುವ ಮಾಹಿತಿಯು ಮಧ್ಯಮ ಶ್ರೇಣಿ ಹವಾಮಾನ ಮುನ್ಸೂಚನೆಯ ಆಧಾರವಾಗುತ್ತದೆ. ಮಧ್ಯಮಶ್ರೇಣಿ ಹವಾಮಾನ ಮುನ್ಸೂಚನೆಗಾಗಿ ಭಾರತದಲ್ಲಿ ಅನುಸರಿಸಲಾದ ಪದ್ಧತಿಯ ಯೋಜನಾ ಚಿತ್ರವನ್ನು ಚಿತ್ರ ೧೭ ರಲ್ಲಿ ಕೊಡಲಾಗಿದೆ.

.೫ ವಿವಿಧ ಹಂಗಾಮು ಮತ್ತು ಮಾಸಿಕ ಮಳೆ ಮುನ್ಸೂಚನೆ

ಕೆಲವು ಪ್ರಯೋಗಾಲಯಗಳಲ್ಲಿನ ೩೫ ವರ್ಷಗಳ ಮಳೆಪ್ರಮಾಣ ಮತ್ತು ಉಷ್ಣಾಂಶದ ದತ್ತಾಂಶಗಳನ್ನು ಉಪಯೋಗಿಸಿ ಮಳೆಪ್ರಮಾಣದ ದತ್ತಾಂಶಗಳನ್ನು ವಿಶ್ಲೇಷಿಸಿ ಹಿಂದಿನ ಹಂಗಾಮು ಮತ್ತು ತಿಂಗಳಿನ ಮಳೆ ಹಾಗೂ ಹಿಂದಿನ ತಿಂಗಳುಗಳ ಉಷ್ಣಾಂಶಗಳನ್ನ ಉ ಪರಿಗಣಿಸಿ ವಿವಿಧ ತಿಂಗಳು ಮತ್ತು ಹಂಗಾಮುಗಳ ಮಳೆ ಪ್ರಮಾಣಗಳ ಅಂದಾಜುಗಳನ್ನು ಕೋಷ್ಟಕ ೪ ರಲ್ಲಿ ಕೊಡಲಾಗಿದೆ. ಹಿಂದಿನ ತಿಂಗಳಿನ ಮಳೆ ಪ್ರಮಾಣ ಮತ್ತು ಉಷ್ಣಾಂಶವನ್ನು ಆಧರಿಸಿ ಕೋಷ್ಟಕ ೪ ರ ಅನ್ವಯ ಜೂನ್‌, ಆಗಸ್ಟ್‌ತಿಂಗಳುಗಳ ಮಳೆ ಪ್ರಮಾಣ ಹಾಗೂ ಇಡೀ ನೈರುತ್ಯ ಮುಂಗಾರಿನ ಮಳೆ ಪ್ರಮಾಣದ ಅಂದಾಜನ್ನು ಸಿದ್ಧಪಡಿಸಬಹುದಾಗಿದೆ.

ಕೋಷ್ಟಕ ೪ರ ಅನ್ವಯ ೨೦೦೩ ರಿಂದ ೨೦೦೮ರವರೆಗಿನ ರಾಜ್ಯದ ವಾರ್ಷಿಕ ಮತ್ತು ನೈರುತ್ಯ ಮುಂಗಾರಿನ ಬಗ್ಗೆ ಮಾಡಲಾದ ಮುನ್ಸೂಚನೆಗಳ ಪ್ರಕಾರವೇ ಮಳೆಯಾಗಿರುವುದು ಕಂಡುಬಂದಿದೆ.

ಅತಿದೂರ ಸಂವೇದಿ ಆಧಾರಿತ ರಾಷ್ಟ್ರವ್ಯಾಪಿ ಪ್ರಾಯೋಜನೆಯಾದ ಕೊಯ್ಲು ಪೂರ್ವ ಬೆಳೆ ಎಕರೆವಾರು ಮತ್ತು ಉತ್ಪಾದನೆ ಅಂದಾಜು (CAPE) ಪ್ರಾಯೋಜನೆಗೆ ಕೃಷಿ ಸಚಿವಾಲಯವು ನೆರವು ನೀಡಲಿದ್ದು, ಇದರಿಂದ ಸಕಾರಣ ನಿರ್ದಿಷ್ಟತೆಯ ಹಂಗಾಮು ಬೆಳೆ ಅಂಕಿಅಂಶಗಳು ಪೂರೈಕೆಯಾಗಲಿವೆ. CAPE ಅನುಭವದ ಆಧಾರದ ಮೇಲೆ ISRO ಸಂಸ್ಥೆಯು, ಅತಿದೂರ ಸಂವೇದಿ, ಹವಾಮಾನಶಾಸ್ತ್ರ ಮತ್ತು ಆರ್ಥಿಕ ಅಂಕಿಅಂಶ ಶಾಸ್ತ್ರಗಳನ್ನು ಸಂಯುಕ್ತಗೊಳಿಸಿದಂತೆ ಹಂಗಾಮುಗಳ ರಾಷ್ಟ್ರವ್ಯಾಪಿ ಮುನ್ಸೂಚನೆಗಳನ್ನು ಮಾಡಲು ಬಾಹ್ಯಾಕಾಶ, ಕೃಷಿಹವಾಮಾನಶಾಸ್ತ್ರ ಮತ್ತು ಭೂ ಆಧಾರಿತ ಅವಲೋಕನೆಗಳನ್ನು ಉಪಯೋಗಿಸಿಕೊಂಡು ಕೃಷಿ ಉತ್ಪನ್ನ ಮುನ್ಸೂಚನೆಗಳನ್ನು ನೀಡುವ ಪ್ರಾಯೋಜನೆಯನ್ನು ನಿರೂಪಿಸಿದೆ. ಆದ್ಯತೆಯ ಕ್ಷೇತ್ರಗಳಾದ ತೋಟಗಾರಿಕೆ, ಬೆಳೆ ವೈವಿಧ್ಯಕರಣ, ಭೂಶಿಥೀಲೀಕರಣ ನಕ್ಷೆ ಸಿದ್ಧತೆ ಇತ್ಯಾದಿ ವಿಷಯಗಳಲ್ಲಿ ಅತಿದೂರ ಸಂವೇದಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.