ಹಾಡಾs ಹೇಳ್ವಕೆ ಬಲ್ಲೇss ಶೇಡೂss ಬರೆವಕೆ ಬಲ್ಲೇ
ಕಾಡಾs ಹಿಂಡುಲಿಯಾsss ಯೆಲೆ ಬಲ್ಲೇs || ತಂಗಮ್ಮs,
ಜೋಡಿನ ಪುಂಡಿsರಾsss ನೆಲ್ಲಿ ಬಲ್ಲೇss ||

ಅತ್ತುಗೆ ಅಂತ ಹೇಳೀss ಅರ್ತಿಕ್ ವಂದ್ ಹಾಡ್ ಹೇಳೀ
ಅತ್ತುಗೆ ನನ್ ಮೇ ನೆ ಮುನದೇಯೇ || ಬಚ್ಚಲುದಾ
ಉಡಗೇರಿ ಕೊಡುವೇ ನಿನಗಿ ಗೇ ||

ಹಾಡೇಳು ಅಂsದರೇss ನಾsಯೇssನ ಹೇssಳಲಿ?
ನೋಡವ್ವಾss ನsನ್ನss ಸಂಸಾರಾss || ಬೆಟ್ಟದಾss
ಕ್ಯಾಮೆಳ್ಳಿಗಿಂsದೂsss ಕಡಿಯಾsದೇsss ||

ಬತ್ತs ಕುಟ್ಟನೆ ಬಾsರೇss ವಪ್ಪೂ ಸಾಯ್ಬನ ಸೋಳೀss,
ನನ್ನಣ್ಣನ ಸೋಳೀsss ಬಿsಡೂsಸೋಳೀsss, || ಜಾಂಬರ ಸೋಳೀss
ನನ್ಹಾಡಿಗುತ್ತsರsವಾssss ಕೊಡೂs ಬಾರೇsss ||

ಹಾಡ ಹೇಳಿದ್ರೇsss ಆಲಿಸಿ ಕೇಳ್ವರಿಲ್ಲಾss
ಮಾಣಿ ಕೇಳನೆಯೇsss ಮಟದಲ್ಲೀs || ಸಿರಸೀಯs
ಅಮ್ಮs ಕೇಳಿತೂsss ಕೆಮಿದುಂಬೀss ||