ಗುಡ್ಡ ಗುಡ್ಡ ನೋಡ
ಗುಡ್ಡದ ವಾರಿಯ ನೋಡ
ಗುಡ್ಡದ ಯಲ್ಲವ್ನ ಜಾತ್ರಿಯ ನೋಡ  ೧

ನೀರ ನೀರ ನೋಡ
ನೀರಿನ ಝರಿಯ ನೋಡ
ಗುಡ್ಡದ ಯಲ್ಲವ್ನ ಜಳಕವ ನೋಡ   ೨

ಹೂವ ಹೂವು ನೋಡ
ಹೂವಿನ ಮಾಲಿಯ ನೋಡ
ಗುಡ್ಡದ ಯಲ್ಲವ್ನ ಪೂಜೆಯ ನೋಡ  ೩

ಜ್ವಾಳ ಜ್ವಾಳ ನೋಡ
ಜ್ವಾಳದ ಬೆಳೆಯ ನೋಡ
ಗುಡ್ಡದ ಯಲ್ಲವ್ನ ಮ್ಯಾಳವ ನೋಡ  ೪

ಬೆಲ್ಲ ಬೆಲ್ಲ ನೋಡ
ಬೆಲ್ಲದ ಪೆಂಟಿಯ ನೋಡ
ಗುಡ್ದದ ಯಲ್ಲವ್ನ ಘಂಟಿಯ ನೋಡ  ೫

ಗೆಜ್ಜಿ ಗೆಜ್ಜಿ ನೋಡ
ಗೆಜ್ಜೀ ಕಾಲ ನೋಡ
ಗುಡ್ಡದ ಯಲ್ಲವ್ನ ಕುಣಿತ ನೋಡ     ೬

ಗುಡಿ ಗುಡಿಯ ನೋಡ
ಗುಡಿಯ ಕಿಳಸವ ನೋಡ
ಗುಡ್ಡದ ಯಲ್ಲವ್ನ ಮಡಿಯ ನೋಡಿ   ೭