ಹೋಗೋಣ ನಡಿಯಲ್ಲಮ್ಮನ ಗುಡ್ಡಕ್ಕ
ಗುಡ್ಡದ ಜಾತ್ರಿ ಬಾಳ ಕಡಕ ಪಲ್ಲ
ಬರತೈತಿ ಲಕ್ಷಾಂತರ ಮಂದಿ
ಭಾರತ ಹುಣಿವಿಗೆ ಬಾಳ ಗರದಿ
ಹೋಗೋಣ ನಡಿ ೧
ಮಕ್ಕಳ ಮರಿ ನೋಡ ಗೆಳತಿ
ಹೆಣ್ಣು ಗಂಡು ಜನ ಜಾತ್ರಿ
ಹೋಗೋಣ ನಡಿ ೨
ಹೂ ಹಣ್ಣು ಕಾಯಿ ಕರ್ಪೂರ
ರಾಶಿ ರಾಶಿ ನೋಡ ಭರಪೂರ
ಹೋಗೋಣ ನಡಿ ೩
ಜೋಗುಳದ ಭಾವಿ ಎಣಿಗೊಂಡದಾಗ
ಮಾಡಬೇಕ ನೋಡ ಜಳಕ
ಹೋಗೋಣ ನಡಿ ೪
ಎಲ್ಲಮ್ಮ ಜಮದಗ್ನಿ ಆ ಮ್ಯಾಲ
ಪರಶುರಾಮಗ ಕೈಮುಗಿಯಬೇಕು
ಹೋಗೋಣ ನಡಿ ೫
ದೇವಿ ದರ್ಶನ ಪಡೆಯಲಾಕ
ಮೈಮನಸು ಹಸನಾಗಾಕ
ಹೋಗೋಣ ನಡಿ ೬
ದೇವಿ ಇದ್ದರ ನಮಗ ಬಂಗಾರ
ಹಚ್ಚಾಕ ನಡೀ ನೀ ಭಂಡಾರ
ಹೋಗೋಣ ನಡಿ ೭
Leave A Comment