ಏಳು ಕೊಳ್ಳದಾಗ ಇರುವ ಯಲ್ಲಮ್ನ ಜಾತ್ರಿಗೆ ಹೋಗೂನು ಬಾ
ನಿತ್ಯ ಪೂಜೆ ಮಾಡೂನು ಬಾ
ಉಧೋ ಉಧೋ ಎನ್ನುತ ಹಾಡನು ಹಾಡೂನು ಬಾ ಬಾ       ೧

ಕಂಚಿನ ಚವಡಿಕಿ ಮಿಂಚುಳ್ಳ ಜಾಗಟೆ ಶಬ್ದೆವ ಕೇಳುನು ಬಾ
ದಿನ ದಿನ ಪೂಜೆಯ ಮಾಡುನು ಬಾ
ಉಧೋ ಉಧೋ ಎನ್ನುತ ಹಾಡುನು ಬಾ    ೨

ಹಣ್ಣು ಹಣ್ಣು ಮುದಿಕಿಯನಾದಳು ಬಾ
ಬಡವರ ಮನೆಗೆ ಬಂದಾಳು ಬಾ
ಉಧೋ ಉಧೋ ಎನ್ನುವ ಶಬ್ದವ ತೋರ್ಯಾಳು ಬಾ ೩

ಶಬ್ದಕ್ಕೆ ಗಾಬರಿ ಆದೇವು ಬಾ
ಏಳ ಕೊಳ್ಳದಿ ಇರುವ ಯಲ್ಲಮ್ನ ಜಾತ್ರಿಗೆ ಹೋಗೂನು ಬಾ
ನಿತ್ಯ ಪೂಜೆ ಮಾಡುನು ಬಾ ಬಾ    ೪

ಏಳಕೊಳ್ಳದ ಜಾತ್ರಿಗೆ ಹೋಗುನು ಬಾ
ಶಬ್ದವ ಕೇಳಿದಿ ಬಾ ಗಾಬರಿನಾದೇವಿ ಬಾ
ಮನೆಯೆಲ್ಲ ಸಾರಿಸಿ ಏಳ ಕೊಳ್ಳಕ ಹೋಗುನು ಬಾ     ೫

ರೊಟ್ಟಿಯ ಬುತ್ತಿಯ ಕಟ್ಟೂನು ಬಾ
ತಾಯವ್ನ ಜಾತ್ರೆಯ ಮಾಡೂನು ಬಾ
ಗುಡ್ಡವ ಹತ್ತಿ ಬರೂನು ಬಾ ಮೈಯನ್ನ ಪಾಪ ಕಳೆಯೂನು ಬಾ   ೬

ಏಳಕೊಳ್ಳದ ಯಲ್ಲಮ್ಮನ ಜಾತ್ರೆಗೆ ಹೋಗುನು ಬಾ
ಗುಡ್ಡವ ಹತ್ತಿನಿ ಬಾ ರಾಮನ ಕಳಿಸುನು ಬಾ
ನಾವು ಭಂಡಾರ ಹಚ್ಚುನು ಬಾ ಬಡತನ ಕಳೆಯೂನು ಬಾ       ೭

ಏಳಕೊಳ್ಳಕ ಹೋಗುನು ಬಾ ನಮ್ಮ ಬಡತನ ಹೇಳುನು ಬಾ
ನಾವು ಭಕ್ತರು ಆದೇವು ಬಾ ತಪ್ಪದೇ ತಾಯವ್ವಗ ನಡಿಯೂನು ಬಾ
ಏಳಕೊಳ್ಳದ ಜಾತ್ರೆಯ ನೋಡೂನು ಬಾ ಬಾ          ೮