ಉಗರಗೊಳ್ಳ ಭೂಮ್ಯಾಗ ಯಲ್ಲವ್ವ ಬಾಳ ಮೋಜಿನಾಕಿ
ಸುತ್ತಲು ಜಾತರಿ ಬರತೈತಿ ಪಲ್ಲ
ಬಾಗಲಕೋಟೆ ಮಾಧುರಾಯನ ಪರಸಿ ಬರತೈತಿ
ಜೋಗುಳ ಬಾವ್ಯಾಗ ಇಳೀತೈತಿ ೧
ಜೋಗುಳ ಬಾವ್ಯಾಗ ಇಳದ ಬಳಿಕ ಜಳಕಾ ಮಾಡತಾರ
ದೇವಿ ಹುಟ್ಟಿಗೆ ಉಡತಾರ ೨
ಹುಟ್ಟಿಗೆ ಉಟಕೊಂಡು ಕಂಟಕ ಕಳೆದುಕೊಂಡು
ದೇವಿಗೆ ಉಧೋ ಉಧೋ ಅನತಾರ ೩
ನಾಕ ಮೂಲಿಗೆ ಮಾಲಗಂಟಕ ಪಡಾಳಿ ಕಟ್ಟತಾರ
ಕೊಡ ಕೊಡ ಎಣ್ಣಿ ಹಾಕತಾರ ೪
ಎಣ್ಣಿ ಹಾಕಲು ಬೆಟ್ಟದಮ್ಯಾಲ ಬೆಳಕ ಬೀಳತೈತಿ
ಸುತ್ತಿನ ಜಾತ್ರಿ ನೋಡತೈತಿ ೫
ಏನ ಹೇಳಲಿ ದೇವಿ ಮೈಮ್ಯಾಲ ಕಬರು ಬರತಾವ
ಕೊಬರಿ ಭಂಡಾರ ಹಾರತಾವ ೬
ಎಲ್ಲನಗೌಡ ನಿಂಗನಗೌಡ ಪದಾಮಾಡಿದಾರ
ಜೋಗ್ಯಾರಿಗೆ ಹಾಡಂತ ಹೇಳ್ಯಾರ ೭
Leave A Comment