ಕೈಗೆ ಬಳಿ ಚೆಂದ, ಹಣಿಗೆ ಕುಂಕುಮ ಚೆಂದ
ಕೊರಳಿಗೆ ಕಟ್ಟಿದ ತಾಳಿ ಚೆಂದ
ಯಲ್ಲಮ್ಮಗ ಜಡಿ ಚೆಂದ    ೧

ಯಲ್ಲಮ್ಮಗ ಜಡಿ ಚೆಂದ, ಜಡಿಗೆ ಭಂಡಾರ ಚೆಂದ
ಭಂಡಾರಕ ಬಕುತಿ ಚೆಂದ
ಬಕುತಿಗೆ ದೇವಿ ಚೆಂದ     ೨

ಬಕುತಿಗೆ ದೇವಿ ಚೆಂದ, ದೇವಿಗೆ ಹಡಲೀಗಿ ಚೆಂದ
ಹಡಲೀಗಿ ಜೋಗಮ್ಮ ಚೆಂದ
ಜೋಗಮ್ಮಗ ವಲ್ಲಿ ಚೆಂದ  ೩

ಜೋಗಮ್ಮಗ ವಲ್ಲಿ ಚೆಂದ, ವಲ್ಲಿಗೆ ಚೌಡಕಿ ಚೆಂದ
ಚೌಡಕಿಗೆ ದೇವಿಯ ಪದ ಚೆಂದ
ದೇವಿ ಪದಕ ಜೋಗಮ್ಮ ಚೆಂದ     ೪

ದೇವಿ ಪದಕ ಜೋಗಮ್ಮ ಚೆಂದ, ಜೋಗಮ್ಮಗ ಗುಡ್ಡ ಚೆಂದ
ಗುಡ್ಡ ಯಲ್ಲಮ್ಮ ದೇವಿಗೆ ಚೆಂದ
ಯಲ್ಲಮ್ಮಗ ಜಡಿ ಚೆಂದ    ೫

ಜಡಿಗಾಗಿ ಮಹಾಭಾರತ ಆಯ್ತಲ್ಲ ಹಿಂದ
ಜಡಿ ಮಹಿಮೆ ತಿಳಿದ ನಾವು
ಜಡಿಗೆ ಕೈಮುಗಿವುದು ಚೆಂದ        ೬