ರಾಗಿ ಬಿತ್ತೀದೆ | ಮಾದು
ರಾಗಿಗೆ ನೀರಿಲ್ಲ | ಮಾದು
ಯಾತ ಎತ್ತಯ್ಯ | ಮಾದು
ಎಲಿಯ ತಿದ್ದಯ್ಯ | ಮಾದು
ಬೆಂಕೆಂಬೊ ದೊರಿಯೆ | ಮಾದು
ಬ್ಯಾಗೆಂಬೊ ದೊರಿಯೆ | ಮಾದು
ಕಳ್ಳರ ಕೆರಿ ತುಂಬಿ | ಮಾದು
ದೊರೆಗಳು ಜೂಜಾಡಿ ಮುರದಾರೆ | ರಾಮುರು
ತಲದಂಡಾಡ್ಯಾರೆ

(ಹೀಗೆಯೇ ಕಾಳ ಬಿತ್ತೀದೆ, ಜೋಳ ಬಿತ್ತೀದೆ ಎಂದು ಹಲವಾರು ಧಾನ್ಯಗಳನ್ನು ಕುರಿತು ಹೇಳಬೇಕು.)

ರಾಗಿಯ ಸಾಲ ನೋಡೆ
ಅವಳುಟ್ಟಿರುವೋ ರಾಮಗಿರಿ ಸೀರೆಯೆ ನೋಡೆ
ಕಣ್ಣಿಗೆ ಕಾಡಿದಾರ
ಕೆರಿಗೋಡಿ ಜಡಿಯ ಸಂಕುರನ ತೋರೆ
(ಹೀಗೆಯೇ ಅವರೆ, ಪುಣ್ಣೆ ಮುಂತಾದ ಧಾನ್ಯಗಳ ಸಾಲುಗಳನ್ನು ಕುರಿತು ಹೇಳಬೇಕು)

ಒಂದೆ ಹಣತೀಗೆ ಒಂದೆ ಬುತ್ತಿಯನ್ಹಾಕಿ
ಒಂದೇ ಪಾವೆಣ್ಣೆ ಅಳದೂದು
(ಹೀಗೆ ಎರಡೆ ಹಣತೀಗೆ, ಮೂರೆ ಹಣತೀಗೆ, ನಾಲ್ಕೆ ಹಣತೀಗೆ ಮತ್ತು ಐದೆ ಹಣತೀಗೆ ಎಂದು ಹೇಳಿಕೊಳ್ಳಬೇಕು.)