ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ |
ದಂಡ ನೋಡಿ ಬರತ ಹಡದವ್ವಾ | ಕೋಲೆನ್ನ |         || ಕೋಲ ||

ಹುಟ್ಟಿದ ಮಗಳವ್ವ ಕಟ್ಟಿಕಲ್ಲ ಇಳಿದಿಲ್ಲ |
ಭ್ಯಾಡ ನನ ಮಗಳ ಹೊರಿಯಾಕ |  || ಕೋಲ ||

ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ |
ಹೋಗಿ ಅಗಸ್ಯಾಗ ನಿಂತಾಳ |      || ಕೋಲ ||

ಢೇರ‍್ಯಾದ ಮ್ಯಾಲಕಿಯ ಬೆಳಕ |     || ಕೋಲ ||

ಮುಗಲಿಲ್ಲ ಮಾಡಿಲ್ಲ ಮಿಂಚ ಗದ್ದರಣಿಲ್ಲ |
ಇದು ಯಾತಕ ಬೆಳಕ ಕರಣೀಕ |    || ಕೋಲ ||

ಒಬ್ಬರ ಹೋಗಂದ್ರ ಇಬ್ಬರ ಹೋಗಿದಾರ |
ಓಡ್ಹೋಗಿ ಆಕಿನ ಹಿಡದಾರ |         || ಕೋಲ ||

ಇಪ್ಪತ್ತು ವರುಷದ ತುಪ್ಪುಂಡ ಕೂದಲ |
ನಾರಿ ನಿನಗಾಗಿ ಕಾಯ್ದಿದಾಳೇನ |   || ಕೋಲ ||

ಹನ್ನೆರಡು ವರುಷದ ಎಣ್ಣುಂಡ ಕೂದಲ |
ಮಿತ್ರಿ ನಿನಗಾಗಿ ಕಾಯ್ದಿದಾಳೇನೆ |   || ಕೋಲ ||

ನಾರಿ ನಿನಗಾಗಿ ಕಾಯ್ದಿದಾಳೇನ ಸೊಲ್ಲಪುರದ |
ದಂಡೀಗಿ ಧಾರಿ ಎರೆದೀದನೇನ |    || ಕೋಲ ||

ಅಂಗಳದಾಗಿನ ತನುವ ಶಾವಂತಿಗ್ಹೂವ |
ಹೂ ಬಾಡಿದಾಗೊಮ್ಮ ನೆನೆಯವ್ವ | || ಕೋಲ ||

ಕುಂಬಿಯ ಮ್ಯಾಲಿನ ದುಂಡ ಶಾವಂತಿಗ್ಹೂವ |
ಹೂ ಬಾಡಿದಾಗೊಮ್ಮ ನೆನೆಯವ್ವ | || ಕೋಲ ||*      ದಂಡ ಬಂತವ್ವಾ ದಂಡ, ಕಾಪಸೆ ರೇವಪ್ಪ, ಮಲ್ಲಿಗೆದಂಡೆ, ಸಮಾಜ ಪುಸ್ತಕಾಲಯ ಧಾರವಾಡ ೧೯೭೦, ಪು.ಸಂ. ೫೨.