ಗುಡ್ಡದಾಗಿಂದ
ಗವಿಯಾಗಿಂದ
ಯೋಳ ಕೊಳ್ಳದಿಂದ
ನಕ್ಕೋಂತ ಬರತಾಳ
ನೋಡು ನಮ್ಮವ್ವ ಪಲ್ಲ
ಉಗರಗೊಳ್ಳದ ಈಚಿಂದ
ಸವದತ್ತಿ ಆಚಿಂದ
ನಡು ಗುಡ್ದದಾಗಿಂದ
ಕುಣಕೋಂತ ಬರತಾಳ
ನೋಡು ಎಲ್ಲವ್ವ ೧
ಚೌಡಕೀಯ ನಾದಕ್ಕ
ಗೆಜ್ಜಿಯ ಕುಣಿತಕ್ಕ
ಕುಣಿದಾವ ದಾರಿಕೇರಿ
ಬೆಳಕಿನಾಂಗ ಬರತಾಲ
ನೋಡ ರೇಣುಕವ್ವ ೨
ಜಮದಗ್ನಿ ಶಾಪಕ್ಕ
ಪರಶುರಾಮನ ಕೋಪಕ್ಕ
ಹೆದರಿಲ್ಲ ಬೆದರಿಲ್ಲ
ಶಕ್ತಿ ಹ್ಯಾಂಗ ಬರತಾಳ
ನೋಡ ಯಲ್ಲವ್ವ ೩
Leave A Comment