ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? |

ರೈತರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ರೈತರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs |

ಪುಟ್ಟಿ ಪುಟ್ಟೀಲಿ ರೊಟ್ಟಿ ನಾನೆ ಸುಡಲಾರೆs – ತಂದೆ
ನಾನೆ ಸುಡಲಾರೆ ! ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ  ಗೌರs – ನಿನ್ನ
ಕೊಡಲೇನೆ ಗೌರs ? ||

ಗೌಡರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಗೌಡರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs |

ಆಳು ಕಾಳಿಗೆ ಕೂಳು ನಾನೆ ಬೇಯ್‌ಸ್ಲಾರೆ – ತಂದೆ
ನಾನೆ ಬೇಯ್‌ಸ್ಲಾರೆ ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಬ್ರಾಂಬ್ರರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಬ್ರಾಂಬ್ರರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs |

ಮಡಿ ಮಡೀಲಿ ವ್ರತ ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs ? ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಅಗಸರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಪುಟ್ಟಿ ಪುಟ್ಟೀಲಿ ಬಟ್ಟೆ ನಾನೆ ಒಗಿಲಾರೆs – ತಂದೆ
ನಾನೆ ಒಗಿಲಾರೆs ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ತಂದೆ
ಕೊಡಲೇನೆ ಗೌರs ? ||

ಮ್ಯಾದರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಮ್ಯಾದರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs ? ||

ಬಿದಿರ ಸೀಗಿದು ಬುಟ್ಟಿ ನಾನೆ ಹೆಣಿಲಾರೆs – ತಂದೆ
ನಾನೆ ಹೆಣಿಲಾರೆs ? ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ತಳವರ‍್ನ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ತಳವಾರ‍್ನ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs ||

ರಾತ್ರಿ ರಾತ್ರೀಲಿ ಗಸ್ತೂ ನಾನೆ ಕಾಯಲಾರೆs – ತಂದೆ
ನಾನೆ ಕಾಯಲಾರೆs ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಮಾದಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಮಾದಾರ ಮನೆಬಾಳು ನಾನೆ  ಮಾಡಲಾರೆs – ತಂದೆ
ನಾನೆ ಮಾಡಲಾರೆs ||

ಬುಟ್ಟಿ ಬುಟ್ಟೀಲಿ ಕೆಮ್ಮಣ್ ನಾನೆ ಹೊರಲಾರೆs – ತಂದೆ
ನಾನೆ ಹೊರಲಾರೆs ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? |

ಚಿಂಪಿಗಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? |

ಚಿಂಪಿಗಾರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs ||

ಸೂಜಿ ಸೂಜೀಲಿ ಬಟ್ಟೆ ನಾನೆ ಹೊಲಿಲಾರೆs – ತಂದೆ
ನಾನೆ ಹೊಲಿಲಾರೆs ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? |

ಕುರುಬರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ||

ಕುರುಬರ ಮನೆಬಾಳು ನಾನೆ ಮಾಡಲಾರೆs – ತಂದೆ
ನಾನೆ ಮಾಡಲಾರೆs ||

ಹಿಂಡು ಕುರಿಯ ಹೊಡೆದು ನಾನೆ ಕಾಯಲಾರೆs – ತಂದೆ
ನಾನೆ ಕಾಯಲಾರೆs ||

ಮತ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ? ||

ಬಡಿಗ್ಯಾರ ಮನೆಗೆ ನಿನ್ನ ಕೊಡಲೇನೆ ಗೌರs – ನಿನ್ನ
ಕೊಡಲೇನೆ ಗೌರs ||

ಬಡಿಗ್ಯಾರ ಮನೆ ನನ್ನ ಗಂಡನ ಮನೆ – ನನ್ನ
ಗಂಡನ ಮನೆ ||