ಆದಿಶಕ್ತಿ ಇಕಿ
ದೇವಿ ಹೆಚ್ಚಿನಾಕಿ
ಮೂರು ಲೋಕದಲಿ ಸುಖಾ
ಯಾವ ಯಾಳ್ಯೆದಲಿ
ವಾಸವಾದಳೋ
ಮಾಮುನಿ ದನಿಯಳ ರೇಣುಕಾ     ಪಲ್ಲ

ಋಷಿ ಸೇವಕ
ಮುಂಜಾನಿ ನಸಕ
ಜಗದಂಬಿ ಜಳಕ
ಸರಪಿನ ಸಿಂಬಿ
ಮಳಲಿನ ಕೊಡ
ಪವಿತ್ರ ಪುಣ್ಯದ ಫಲ       ೧

ಏಳು ಮಂದಿ ಇವ್ರು
ಅಕ್ಕತಂಗೇರಾ
ಶಾಸ್ತ್ರಿ ಹೊಟ್ಟೀಲಿ ಹುಟ್ಟಿದವರ
ಎಂಕವ್ವ ಮಾಯವ್ವ
ತುಳಜವ್ವ ತುಕ್ಕವ್ವ
ಅಕನೆತ್ತಿ ಬಾವನ್ನದವರ    ೨

ಮೂರುಲೋಕದ
ಗಂಡುದೇವರಾ
ಶಕ್ತಿ ದೇವರ್ಹೊಟ್ಟಿಲ್ಹುಟ್ಟಿ ಬಂದರ
ವಿಷ್ಣು ಬ್ರಹ್ಮರ
ರುದ್ರ ಮುನಿಗಳಾ
ಶೂರ ಇಕಿಲಿಂದಾದರುದ್ಧರಣ        ೩

ಹಾದಿಗೆ ಮೂಲ
ಹಾಕ್ಯಾಳ ಜಾಲ
ದೇಶಕ ಶೂರ ಹೊಡದಾಳ ರಥ
ಮೂರು ಕೋಟಿ
ಮಾಡ್ಯಾಳ ಲೂಟಿ
ತಾನ ಒಡದಾಳ ಸಾತಂಬಳಾ      ೪