ವಂದಲs ಅರಸೂಗೈs ತಂದ್ರನಾssನಾs
ಯೋಳುಜನ  ಮಗದೀರೊ
ಯೋಳಜನಕೆ ಲಗ್ಗನ ಮಾದ್ರಾs
ಯೋಳಜನಕೆ ಯೋಳೇ ಹಡಗೋ
ಗೆಯ್ಸೇಗೆ ಕೊsಟ್ಟಿದಾs
“”ಹಡ್ಗಿನಾ ಯಾಪಾರ ಮಾಡsಬೇಕೊ”
ಅಂದ್ಹೇಳಿ ಅರಸು ನುಡಿದಾನೇ
ಲೂಟ ಉಪಚಾsರಾ ಮುಗೂssಸ್ಯಾರೋ
ಹಡ್ಗನ ಬಂದ್ರಕ್ಕೆs ನಡೂsದಾರೋ
ಹಡುಗಿಗೆ ಸಾಮಾನಾs ತುಂಬೂsಸಿದಾs
ಕಿರ‍್ಯಮಗನೆ ಯೇನಾ ಹೇಳಿದಾs?
“”ಕೇಳಲ್ಲೊ ಕೇಳೊ ಅಪ್ಪಯ್ಯs, ನೀನು
ವಳ್ಳ | ನನ್ನ ಹಡಗೀಗೆ ಅಕ್ಕಿsಯ ಚೀಲಾs
ತುಂಬಸಬೇಕೊ ಅಪ್ಪಯ್ಯ, ನೀನು”
ಅಟ್ಟಂಬೂ ಮಾತೇ ಕೇಳಿದ ಅರಸೂss
ಕಿರ‍್ಯಮಗನಾs ಹುಡುಗೀssಗೋs
ಅಕ್ಕಿಚೀಲವೆ ತುಂಬೂsಸೀದಾs
ಹಡುಗಿಗೆ ಪೂಜಾವ ಮಾಡಿದರೋ
ಆ ಹುಡ್ಗ ಬಿಟಕಂಡೆ ನಡದಾರೋ
ಆರು ಜನ | ಅಣದೀರ ಹಡಗೇ
ವಂದೇ ಲಳವಿಲಿ” ಹೋssಗಿತೇss
ಕಿರ‍್ಯತಮನಾs ಹಡೂಗ್ವೊಂದೇ
ಬರಗಲ ದೇಸಕೆ ಹೋಗಿತೋ
ಬರಗಲ ದೇಸದಾs ಬಂದರಕ್ಹೋಗೇs
ತಾsಡಿತೆ ಹsಡುಗ್ವೊಂದೂs
ಶದ್ನ ಕೋವಿಯಾs ಹೊಡುವಾನೊ
ಬರಗಲ ದೇಸದ ರಾsಜಾsನೂs
ಅಸದ್ದೂs ಕೇಳೇsಕಂಡೇss
ಆಳಗಳಾs ಕsರೂಕಂಡೇss
ಬಂದರಕೇs ಬರೂsವನೋ
ಅಕ್ಕಿ ಚೀಲಾವ ತೋಡಿಕಂಡಾs
“”ಕೇಳಲ್ ಕೇಳಲ್ಲೊ ಅರಸೂಮಗನೇ,
ಅಕ್ಕಿ ಹಣವೇs ಯೇಗೆಲ್ಲಾs
ವಂದು ತೆಂಗಿಳ ಮೇsಲೆsಗೇs
ಕಳುಸೇಗೇs ಕೊಡುತೀನೋss”
ಅಟ್ಟಂಬೂ ಮಾತಾs ಕೇಳಿದ ಅರಸೂ
ಹಿಂತಿರ‍್ಗಿ ಹಡುಗಾs ಬಿsಡೊವಾನೋs
ಆರುಜsನ ಅಣದೀsರ್ ಹಡುಗೇs
ಮುಂದಾಗೀ ಬರವಾssದೋs
ಅವ್ರಾ ಬೆನ್ನಿಲೆ ಇವ್ನಲೊ ಹಡಗೇ
ಬಿಟ್ಟೀಕಂsಡಿ ಬsರುsವನೋ
ಬಂದೇ ಬಂದೇಯ ಬಂದ್ರಕೆ ತಾಡೇ
ಸದ್ನ ಕೋವಿsಯ ಹೊಡುವಾರೋ
ಅರಸೂ ಯೇಗೆ ಕೇಳಿದನೋs
ಅಳುಗಳಾs ಕರದಿಕಂಡಾs
ಹಗ್ಗನ ಬಂದ್ರಕೆ ಬರುsವನೆ
ಬಂದು ಹಡಗು ನೋಡಿದsನೊ
ಆರು ಜನ ಮಗದೀರ್ ಹಡಗೇ
ಸಾಮಾನ್ ತುಂಬೆ ಬಂದ್ ನಿಂತದ್ಯೋ
ಕಿರ‍್ಯಮಗನಾs ಹಡುಗ್ವೊಂದೇs
ಕಾಲೀಬಂದೆ ನಿಂssತದ್ಯೋ
ಅಟ್ಟಂಬೂದ ನೋಡಿದ ಅರಸೂs
ಸಾಮಾsನೆಲ್ಲ ತೋಡಿಸಿಕಂಡಾs
ಆರು ಜನ ಮಗ್ರಿರ ಕರುsಕಂಡಾ
ಹಿಂತಿರ‍್ಗಿ ಮನ್ಗೆ ಬsರುsವನೋ
ಅವ್ರ ಬೆನ್ಗೆ ಕಿರ‍್ಯ ಮಗನೂs
ಹಿಂದಿಂದೆ ಬsರುವs ನೋs
ಮನಿಗೇ ಗೆ ಬಂದೇಕಂಡೇ
ಕೈಕಾಲು ಮೋರಿ ತೊಳುsವಾರೋ
ಕಿರ‍್ಯ ಮಗನೂ ಮಾತಾಡ್ಸಾಲೆಲ್ಲಾs
ಜಗ್ಲಿಗೆ ಬಂದೇ ಕುಂತುಕಂಡಾs
ಆರುsಜsನ ಲಣ್ಣಾದೀರೂs
ಅಪ್ಪsನೂ ಅಂ ಬವ್ನೂs
ಲೂಡಕಾsರೂ ನೆಡುದಾರೋs
ಕಿರ‍್ಯಮಗ್ಗೆ ಮಾತಾಡ್ಸ್‌ಲೆಲ್ಲಾs
ಲೂಟಕೆ ಬಾರೆಂದು ಹೇಳುಲಿಲ್ಲಾ
ಸುಮ್ಮನೆ ಬದ್ಯಲ್ಲಿ ಕುಂತೆಕಂಡಾs
ಲೂಟಿs ಲ್ಲಾ ಮಾಡಿದ್ದಾರೋ
ಶಂಜಿಯಿ ಗೆ ಆsಯಿತೋ
ಅವ್ರವ್ರ್ ಕೋಣಿಗ್ ಹೋಗೆ ಮಲ್ಗ್‌ದ್ರೋ
ಕಿರ‍್ಯ ಮಗ್ನೂ ಯೇನs ಮಾಡ್ದಾss?
ನನ್ನ ಮಡುದೀsದ್ದ ಕೋsಣೀsಗೇs
ಹೋಗಿsದ್ದ ಯೇsಗಿsನ್ನೇs
ಮಡುದಿ ಅಂಬವ್ಳ ಯೇsನಂತೋs?
“”ಕೇಳಲ್ಲೆ ಸ್ವಾsಮ್ಯವ್ರಾs,
ನನ್ನ ಕೋಣೆಗೆ ನೀವ್ ಬರುಬೇಡಿ
ಬೇಕಾದ್ ಕಡಿಗೆ ಹೋಗೂಬವ್ದೋ”
ಅಂದ್ಹೇsಳಿ ನುಡೂದಳೂs
ಅಟ್ಟಂಬು ಮಾತೂs ಕೇಳೀದsನೂ
ಕುಂತೇ ಯೇಗೆ ಬೆಳ್ಗುಮಾಡ್ದಾs
ಬೆಳ್ಳೂ ಮೂಡಿ ಬೆsಳುಗಾಯ್ತೋ
ಯೆದ್ದೇ ಯೇಗೆ ಹೆರಗೇ ಬಂದಾs
ಕೈಕಾಲು ಮೋರೀs ತೊsಳುದಾsನೋ
ದೇವರಿಗೆ ಕಯ್ಯಾ ಮುsಗುದಾsನೋ
ಅಂಗೀದೋತ್ರಾ ಹಾಕಿಕಂದಾs
ಜಗುಲಿಗೆ ಬಂದೇ ನಿಂತೀ ದs
ತಾಯಿ ಅಂಬವ್ಳ್ ಯೇsನ್ ಹೇಳ್ತೋ?
“”ದೇಸಂತ್ರ ಹೋಗೊ ಮಗನೆ” ನೀನೂ
ನಾವಂದು ಬುತ್ತೀ ಕಟ್ಟೀ ಕೊಡುತೀ
ಆ ಬುತ್ತಿ ನೀನು ತಕ್ಕೊಂಡ್ ಹೋಗೋ
ಅಂದ್ಹೆಳಿ ತಾಯೀ ನುಡುsದಳೆದೇ
ಮೂರು ಬೊಗಸೂ ಹೊನ್ನಾ ಮುಗಿತೋ
ಬುತ್ತಿಯೇಗೆ ಕssಟ್ಟಿತೋss
ಮಗ್ನಾ ಕಯ್ಯಲಿ ಕೊsಟ್ಟಿತೋ
ಕೊಟ್ಟಾs ಬುತ್ತಿ “”ತಟ್ಟೀಕಂಡಾss
ದೇಸಾಂತರೇಗೇ ನೆಡುದ್ಯಾನೋ
ದೇಸಾಂತರೇಗೇ ಹೋಗುsವಾಗೇ
ಅವ್ನ ಮನ್ಸಿನಲ್ ಯೇನಾss ಯಣ್ದಾ?
“”ಯೋಳುಜನ ನೆಡವಿಲೀ ವಂದಾಲೂ ಅಕ್ಕಾs
ಅದ್ರ ಮನಿಗೆ ನಾ ಹೋಗೊಬೇಕೋ
ಬಾಳ ಹಸ್ವೇ ನಾನ್ಗಾಗುತೀದೋ
ಊಟ ಮಾಡೇ ಮುಂದೆ ಹೋಗೊಬೇಕೋ”
ಅಂದ್ಹೇಳಿ ಆಲಚ್ಚನಿ ಮಾsಡಿದನೋ
ಅಕ್ಕನ ಮನಿಗೆ ಹೋಗೂವನೋ
ತಮ್ಮಾ ಬರುದಾರಿ ನೋಡಿತೆ ಅಕ್ಕಾ
ಸುಮ್ಮನೆ ಬದ್ಯಲ್ಲಿ ಕುಂತಲುಕಂತೋ
“”ಅಕ್ಕ”ಂತೆ ಕರ‍್ಯುತೆ ಹೋದಾs
“ವೋ’ ಯೆನ್ನಾಲೆಲ್ಲಾ ವsಳುಗಿದ್ದೇ
ಬಾಳs ಹಸ್ವೇ ಅಗೂsತಿದೇ
ಲೂಟಕೆ ನನ್ಗೆ ಬಡ್ಸೂಬೇಕೇ”
ಅಟ್ಟ ಮಾತು ಕೇಳಿತೆ ಅಕ್ಕಾs
ಹಿತ್ಲಾಕಡ್ಗೆ ನೆಡೂದsಳೂ
ಕೆಸ್ನಾ ಯೆಲ್ಯs ಕೊಯ್ದೇತಂತೋ
ಮೂರು ದಿವ್ಸನ “”ಹುಳ್ಯಾಗಂಜೀ
ಮೂರು ದಿವ್ಸನ ಹುಳ್ಯಾಲುಗಂಜೀ
ಮೂರು ದಿವ್ಸನ ಹುಳ್ಯಾಲುಗಂಜೀ
ಕೆಸ್ನಾ ಕೀಳೀಲೀ ಬಡುಸೇಲಿನ್ನೆ
ಯೆಡ್ಯಲು ಮಾಡೇ ತಂದ್‌ಕೊಟ್ಟಳೊ
ವಂದಂಬು ತುತ್ತೇ ಕಲುಚೇ ಉಂಡಾs
ಯೆಯ್ದಂಬ ತುತ್ತೇ ಕಲುಚೇ ಉಂಡಾs
ಮಾರಂಬು ತುತ್ತೇ ಹೊಟ್ಟ ಹೇಸಿತೋ
ಹಾಗೇ ಯಡ್ಯಲು ಬುತ್ತಿ ಕಟ್ಟಿದ
ಅಕ್ಕನ ಮಗನಾ ಗೊಬ್ರು ಕುಳಿಲೋ
ಹೊಂಡ ತೋಡೇ ಮುಚ್ಚಿದsನೋ
ಹಾಂಗೆ ದೇಸಾಂತ್ರ ನೆಡುsದಾನೋ
ಹೋಗಿ ಹೋಗೇಲೂ ಸಂಜೀಯಾಯೇ
ಕಟ್ಟಮೇಲೇಯ ಮಲುಗೆ ಕಂಡಾs
ಆ ಊರ ಅರಸೂ ಮನಿಯ್ಗೋ
ಕಳ್ಳsರೂ ಕದ್ದೇssಕಂಡೆss
ಕಟ್ಟಿಕೆಳಗೇ ತಂದಿಟ್ಟ ಕಂಡ್ರೇ
ಪಾಲನ್ನೇ ಹಾsಕಂತೇs
ಕಟ್ಟಿ ಕೆಳಗೆ ಕುಂತಲುಕಂಡ್ರೋ
ಕಟ್ಟಿಮೇಲೆ ಮಲಗಿದರಸೂ
ಯೇನಂತೆ ಹೇಳಿದಾನೋ?
“”ಕೇಳಲ್ ಕೇಳಲ್ಲೊ ಅಣುದೀರ, ನೀವು
ಗುಲ್ಲು ಬೊಬ್ಬಿಯ ಮಾಡಲುಬೇಡಿ
ಬೇಗಂದಿದೆಯ ಪಾಲ್‌ಹಾsಕಂಡೇ
ನಿಮ್ಮ ನಿಮ್ಮಾಲು ಮನಿಗೆ ಹೋಗೀ”
ಅಂದ್ದೆಳಿ ಅರಸೂ ನುಡೂದಾನೋ
ಕಟ್ಟಿ “”ಹತ್ತೆಯ ನೋಡಿದ್ದಾರೋ
ಕತ್ತಲಾದರೂ ತೆಗ್ದೆಕಂಡ್ರೋ
ಇವ್ನಾs ತಲ್ಯನೆ ಕಡ್ಯಲುಬೇಕೋ
“”ಕೇಳಲ್ ಕೇಳಲೊ ಅಣ್ಣಲುದೀರಾs,
ತಲ್ಯಲಾರೂ ಕಡೀಲಕ್ಕೀs
ನನ್ನ ತಾಯೀ ವಂದೂ ಬುತ್ತೀs
ಕಟ್ಟೀಗೇ ಕೊsಟ್ಟೀದೋ
ನಾನೂ ದೇಸಂತ್ರಾs ಬರೂsವಾsಗೇ
ಆ ಬುತ್ತೀನಾವೇssಗೇss
ಮೂರೂಮಂದೀ ಕೂಡೂಟಮಾಡ್ವಾ”
ಅಂದ್ಹೇಳೇs ನುಡುದಾನೋ
ಆ ಬುತ್ತಿಯನ್ನೇ ಬೇಡೇಕಂಡ್ರೂs
ಹಣ್ವಾಗಳೆಲ್ಲಾs ತsಕ್ಕಂಡ್ರೂs
ತಮ್ಮ ತಮ್ಮ ಮನಿಗೇ ನೆಡೂದರೂ
ಬೆಳ್ಳೂ ಮೂಡೇs ಬೆಳೂಗಾಯ್ತೂs
ಬೆಳ್ಳೂ ಮೂಡೇಯ ಬೆಳುಗೇ ಆಯ್ತೋ
ಯದ್ದೆ ಅರಸೂ ಕುಂತೆಯಕಂಡಾs
ದೇಸಾಂತರ ಮುಂದೇ ಹೋದಾs
ವಂದೂ ಅಜ್ಜಿ ಮನೆಗೆss ಹೋದಾs
ಮೊಮ್ಮ ಬಂದದ್ ನೋಡಿಕೆ ಅಜ್ಜೀ
“”ಯಾವಾs ದೇಸವೊ ಆಯ್ತೋ ಮಗನೇ?”
ಬೇಡಿ ತಂದಕ್ಕೀ ಅಡುಗೇಯಾ ಮಾಡ್ತೇ,
ಮೊಮ್ಮಗಗೆ ಊಟಕೆ ಬಡ್‌ಸ್ತೋ
ಊಟ ಅನ್ಕಾ ಮಾಡೇsಕಂಡಾs
ಅಜ್ಜಿಕೋಡೇ ಯೇನಾ ಕೇಳ್ದಾ?
“”ಕೇಳಲೆ ಕೇಳಲೆ ನನ್ನಾs ಅಜ್ಜಿ
ನಿಮ್ಮ ಊರಲ್ಲೆ ಯೇನ ಸುದ್ದಿಯೇ?”
“”ಕೇಳಲೊ ಕೇಳಲ್ಲೊ ಮೊಮ್ಮಗ್ನೆ, ನೀನು
ನಮ ಊರನ ಅರಸೂಮನ್ಯೂs
ನಮ ಊರಲೆ ಅರಸುಮನಿಯಾ
ಅರಸುಗಾದರೆ ಮುಪ್ಪಿನ ಕಾಲs
ರಾಜಿ ಆಳ್ವರು ಯಾರೂ ಇಲ್ಲವೋ
ಅರಸೂssವ ಹೂಡೂಗೀಯೋ
ಬೆಳ್ಳಿ ಬೆತ್ತಾs ಈಟ್ಟನ್ಯೋ
ಬೆಳ್ಳಿ ಬೆತ್ತಾs ಯೆತ್ತೀದವ್ರಿಗ್
ಅವ್ರಾsಲು ಮಗುಳಿನ್ನೇ
ದರ್ಮದ್‌ದಾರೀ ಯರ‍್ದೇ ಕೊಡ್ತೀ”
ಅಂದ್ಹೇsಳಿ ನುಡುದರೋ
ದೇಸದೇಸದ ರಾಜಾsರೆಲ್ಲಾs
ಬಂದೆ ಸೋತೇಯ ಹೋಗಿದ್ದಾರೋ”
“”ಕೇಳಲ್ ಕೇಳಲ್ಲೆ ನನ್ನಾ ಅಜ್ಜೀ
ನಾನೇsಗೆ ಹೋಗೆ ಬರುತೇs
ಬೇಗೆದಿಂದೆ ಅಡುಗಿ ಮಾಡೇ”
ಅಂದ್ಹೇಳಿ ನುಡುದನೂs
ಅಡುಗೀsಯ ಮಾsಡಿತೋs
ಊಟಕೆs ಬsಡುಸಾಳೋ
ಊಟ್ಯಾನೆ ಮಾsಡೆಕಂಡಾs
ಅರಸೂ ಮನ್ಗೆ ಹೋಗಿದ್ದಾನೋ
ಬೆಳ್ಳೆ ಬೆತ್ತಾs ಈಟ್ಟರ‍್ಯೋ
ಅದ್ರಾಲು ಮೇನಿನ್ನೇ
ಯೇನ್ಹೇsಳಿ ಬsರು ದಾರೇs?
“”ಬೆಳ್ಳಿ ಬೆತ್ತಾs ನೆಗೂದವ್ರೀಗ್
ನನ್ನಾ ಲು ಮಗುಳಿನ್ನೇs
ದರ್ಮದ್ ದಾರೀ ಯೆರ‍್ದೇ ಕೊಡುತೇs”
ಅಂದ್ಹೇಳೀ ಹsಚ್ಚರ‍್ಯೋ
ಹೋಗೇsಗೆ ಅರಸೂ ಮಗನೂ
ಬೆಳ್ಳಿ ಬೆತ್ತಾs ಯೆsತ್ತಿದನೋ
ಅರಸೂsವ ಮಗುಳೀಗೇ
ತಟ್ಟಕಂಡಾ ಮಾsಲೀಯೋ
ಅವ್ನಾ ಕೊರುಳೀಗ್ ಈಟ್ಟಳೇ
ಅರಸೂ ಯೇನಾs ಮಾಡೀದಾs?
ಬಟ್ಟಾsರಾ ಕsರೂದಾನ
ಅರಸೂವ ಮಗನಿಗೇ
ದಾರೀಯಾs ಯೆರುದಾನೋ
ದಾರೀsಯಾ ಯೆರೂದೇಗೇ
ಕೊಡ್ವಾsನೋ ಅರಸೂs
ತನ್ನಾಲು ರಾsಜ್ಯಾವೇ
ಅಳಿಯಾಗೆ ಪsಟ್ಟಾsವೇs
ಅಳಿಯಾsಗೇ ಪಟ್ಟ ಕಟ್ಟಿದ ಅರಸೂ
ಸುಕದಿಂsದೆ ರಾಜಿ ಆಳ್ತೇ
ಇರುವಾsನೊ ಯೇಗಿನ್ನೆ
ಇತ್ತಾsಲಾಗ್ಯೇನಾಯ್ತೋ?
ಆರೂಜsನ ಅಣ್ಣಾದಿರೂ
ಆರೂಜsನ ಲತ್ತಗದೀರೂ
ತಾಯಿತಂದಿ ಯೆರಡೂ ಮಂದೀ
ಹೆರ‍್ಯಹೆಂಡತಿ ಯಂsಬವ್ಳೂs
ದೊಂಬರ‍್ಯಾಟ ಆsಡಿತೆ
ದೇಸ ಎಲ್ಲ ತಿರಿಕಂತೇ
ಅವ್ನಾ ರಾಜ್ಯಕ್ ಹೋsಗಿದ್ರೋ
ಅಲ್ಲೆಯ ಬಿಡುರ ಬಿsಟರೊ
ಆ ರಾsಜ್ಯದ ಅರಸೂss
ಪೇಟೆsಗೆ ಬಂದಿsದನೊ
ಅರಸೂ ಕೊಡೆಯೆನ ಹೇಳದ್ರೂs?
“”ಈ ರಾಜ್ಯದ ಅರಸರೆ ನೀವು?
ನಾವು ನಿಮ್ಮನ್ಗೆ ಬsರುತ್ತೇವೆ
ಅಲ್ಲೊಂದು ಆsಟಾs ಆಡುತೇವೆ”
ಅಂದ್ಹೇsಳಿ ನುಡುದಾರೋ
ಅವ್ನಾ ಗುರ್ತಾ ಯಾರು ಮಾಡೂಲಿಲ್ಲ
ಆ ಅರಸು ಯೇsಗಿನ್ನೇ
ಇವ್ರಾ ಗುರುತಾs ಮಾsಡಿದನೋ
ನನ್ನಣ್ಣದೀರೂ ಇವ್ರಾ ಹೌದೊ
ನನ್ನತ್ತಗದೀರು ಇವ್ರಾ ಹೌದೊ
ನನ್ನ ತಾಯಿತಂದೀ ಇವ್ರಾ ಹೌದೊ
ನನ್ನ ಹೆರ‍್ಯಾ ಮಡುದೀ ಇವಳೇಯs”
ಅಂದ್ಹೇಳಿ ಗುರುತಾ ಮಾಡೇಕಂಡೇ
ತನ್ನ ಮನಿಗೆ ಕರುಕುಂಡಿ ಹೋದಾs
“”ಈವತ್ತೆ ನೀವು ಯೇsಗಿನ್ನೆs
ಆಟಾs ಇನ್ನೆ ಆಡುದು ಬೇಡಾs
ನಾಳೆ ಆಟಾs ಅಡೂಬವ್ದೋ”
ಅಂವ್ಹೇsಳಿ ನುಡುದಾನೋ
ಬೆಳ್ಳೂ ಮೂಡೇ ಬೆಳsಗಾಯ್ತೋ
ದೊಡ್ಡಸಬ್ಯಾs ಕೂಡೂಸೀದಾs
ಆ ಸಬ್ಯಾ ವಳುಗೇ ಯೇನಹೇಳ್ದಾ?
“”ಇವ್ರೇ ಹೌದೋ ನಮಣ್ಣದೀರೂ
ನನ್ನ ತಾಯೀತಂದೀ ಇವ್ರೇ ಹೌದೋ
ನನ್ನ ಹೆರ‍್ಯಮಡುದೀ ಇದೇ ಹೌದೋ”
ಅಂದ್ಹೇsಳಿ ನುsಡೂದಾನೋ
“”ನನ್ನ ಮನ್ಯಲ್ಲೆ ಕೆಲಸಾ ನೀವೇ
ಮಾಡುಕಂತೆ ಇsರsಬೇಕೋ”
ಇತ್ಲಾsಗೆ ಯೇನಾsಯ್ತೋ
ಅಕ್ಕಾನೂ ಅಂsಬವ್ಳೊ
ತಮ್ಮsನಿಗೆ ರಾsಜಿಯಾ
ಸಿಕ್ಕೀದಂಬೂ ಸುದ್ದೀ ಕೇಳೇs
ಪತ್ರಾsವ್ಯಾs ಕsಳೂಸೀತೂs
“”ನನ್ನಾsಲು ಮsನೀಗೀಗೇs
ವಂದೂ ದೀವ್ಸನ ಮಾತಿಗೀಗೇ
ಒಂದೇsಯ ಹೋಗುಬೇಕೋ
ಅಟ್ಟಂಬು ಸುದ್ದೀ ಕೇಳಿಕಂಡಾs
ಕುದುರೀsಯ ಹತ್ತೇಕಂಡಾ
ಅಕ್ನಾ ಮನಗೆ ಬsರೂವಾನೋ
ತಮ್ಮs ಬರ‍್ವದಾs ನೋsಡೀತೋ
ಪಾದಕೆ ನೀರಾs ತಂದೇಕೊಟ್ತೋ
ಚಣ್ಣದ ಹಾಸುಗೀ ಹಾsಸೀತೋ
ಆಸ್ರಿಗೆ ಹಾsಲs ಇsಡೂವಾಳೋ
ಅಟ್ಟೊಂದು ಮಾsತೂ ಕೇಳಿದ ತಮ್ಮಾs
“”ಕೇಳಾsಲೆ ನನ್ನ ಅಕ್ಕಾs
ನೀ ಹೇಳಿದಟ್ಟೆ ಸಂತೋಸಾಯ್ತೇ
ನಾನೇ ದೇಸಾsತ್ರ ಹೋಗುವಾಗೇs
ನಿನ್ನ ಕೈಲೆ ನಾsನೇಗೇs
ಊಟ್ಯಾಕೆ ಬಡ್ಸೂ ಹೇಳಿದೆ
ಊಟಕಾsದ್ರೆ ಬs ಬsಡೂಸಿದೇ
ನಿನ್ಗೆ ಕಡ್ಮಿಯೇಕೆ ಅsದಾsರೇs
ನನ್ಗೆ ಬಡ್ಸೀದ್ದ ಯಡಿಯನ್‌ದೇ
ಬುತ್ತೀsಯ ಕsಟ್ಟಿಟ್ಟ
ನಿನ್ಗೆ ಕಢ್ಮೀsಯ ಬಿsದ್ದಲ್ಲೇ
ಕೊಟ್ಟಿಕ್ ಹೋಗ್ವಾಅಂದೆ ಬಂದೇ”
ವಳ್ಳ ಬುತ್ತೀ ಲೆಕ್ಕಬಂದೇ ಕೊಟ್ಟಾs
ಹತ್ತಿದ ಕೊದ್ರೀ ಇಳ್ಯಾಲಿಲ್ಲs
ಹಿಂತಿರ‍್ಗೆ ಮನೆ ಹೋಗುವಾsಗೇs
ಕೇಳೇ ಕೇಳಲೊ ನನ್ನಾ ತಮ್ಮಾs,
ನಂದ್ ಯೆಟ್ಟೂವ ತsಪ್ಪsಲೂs
ಕೇಮಿssಸಬೇಕೋ ನೀನೂss
ತಪ್ಪು ಮಾಡ್‌ದ್ರೆ ವಪ್ಪೊಕಳ್ಳೋ”
ಅಂದ್ಹೇಳಿ ನುಡೂದಳೂ
“ನಿನ್ನ ಮನ್ಗೆ ನಾನೇ ಬತ್ತೀ’
ಅಂದ್ಹೇಳಿ ದುಕ್ಕಾನ ಮಾsಡಿತೋ
ಅಟ್ಟೊಂದು ಮಾತೂ ಕೇಳಿದ ತಮ್ಮs
“ಕೇಳಾsಲೆ ನನ್ನ್ಯಾ ಅಕ್ಕಾs,
ನನ್ನ ಮನಿಗೇ ನಿಟನೇಗೇ
ಬರ‍್ವದಾsದ್ರೆ ಅsಡ್ದೆಳೇ
ಕೊದ್ರೀಮನೆ ಕುಂತೆsಕಳ್ಳೇ”
ಅಂದ್ಹೇಳಿ ನುಡೂದಾನೋ
ಅಕ್ಕನ ಮುಂದೆ ಕುಳ್ಳೇ ಕಂಡಾs
ತನ್ನsಮನ್ಗೆ ಕರುಕಂಡ ಹೋದಾನ
ಕರಕಂಡೆ ಹೋsಗಿನ್ನೇ
ಬೇಕಾದ್ದ ಉಚಯ ಮಾಡ್ದಾsನೆ
ಅಕ್ಕಾ””sಗೆ ಯೇ”ಗಿನ್ನೇ
ಪಟ್ಟೇ ಪೀತಾಂಬ್ರ್ ತೆಗಿಸೆಕೊಟ್ಟಾ
ಹಿಂತಿರೈ ಮನೆಗೆ ಕಳುಸೇ ಕೊಟ್ಟಾ
ಇತ್ಲಾsಗೆ ಯೇನಾsಯ್ತೊ?
ಬರ‍್ಗಲದೇಸದ ರಾsಜನು
ಅಕ್ಕಿಕೊಟ್ಟಾ ಹಣವೇಯೇಗೇ
ಅವ್ನ ಇದ್ದಲಿ ಕಳುಗಾನೆ
ಹಣವ್ಯಾsಲು ತೆಗ್ದೆ ಕಂಡಾs
ತನ್ನಾsಲು ಮನಿಯಲ್ಲೇ
ಸಂತೋಸದಿಂದೆ ಇsರುತಾನೋ



*      ಬರಗಾಲ ದೇಶದ ವ್ಯಾಪಾರ; ಹೆಗಡೆ ಎಲ್.ಆರ್. ಮುಕ್ರಿ ಮತ್ತು ಹೊಲೆಯರ ಪದಗಳು ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೯, ಪು.ಸಂ. ೩೨-೪೩.