ರಾಗೀs ಕಲ್ಲು ಬೇಕೇss ಗೋದೀs ರೊಟ್ಟಿ ಬೇಕೇss
ರಾಮಪ್ಪssನಂಬೂsss ಮಗ ಬೇಕೇss || ತಾsಯವ್ವಿss,
ಜಾನಕ್ಕೀsಯಂಬೂsss ಸೊಸು ಬೇಕೇsss ||

ರಾಗೀs ಕಲ್ಲಗೇsss ರನ್ನsದs ಮುಚ್ಚಿಲಾsss
ಹೋಗೀs ಬಾs ಕಲ್ಯೇsss, ತೌರೀಗೇsss
ಹೋಗೀs ಬಾs ಕಲ್ಲೆss, ತೌರೂರಪ್ನ ಮನಿಗೇss
ಚಾಣಾsವಾss ಹೊಯ್ದೀsss ಕಳಗೂರೂsss ||

ರಾಗೀ ಕುಂಬ್ರಿಗೇsss ಹೊಗssಬೆಡ ಗಿಳಿರಾಮss
ಹಾರ್ ಹೋಗೂss ಸುಂಡ್ಲಾsss ಕವಣೀಯೇss ||
ಹಾರ್ ಹೋಗೂs ಸುಂಡ್ಲಾsss ಕವಣಿsಲಿ ಕಲ್ಲಿಟ್ಟೀss
ಗಿಳ್ಯಾss, ನಿನು ರೊಂಡಾsss ಇಳಗೂರುsss ||

ರಾಗೀs ಬಿತ್ತುಕೀsss ರಾಯss ದಂಡೀಗ್ಹೋsದಾs
ಆದಾsದಾs ಕದರಾsss ಗಿಳಿ ಮೆಂದೀsss || ರಾಯನ ಮಡದೀs
ರಾsಜಂಗಳ್ಯೆಲ್ಲಾssss ಗಿಳಿ ಹಬ್ಬಾssss ||

ರಾಗೀs ಬೀಸು ಕಲ್ಲೆss, ಗೋದೀs ಬೀಸು ಕಲ್ಲೇss,
ರಾಯಾರಾss ಮನ್ಯಾsss ಪತಿಗಲ್ಲೇss || ಪಾಂಡರ್ ಕಲ್ಲೇsss,
ಚಾಡೀs ಹೇಳ್ವವ್ರಾsss ಯದಿಗಲ್ಲೇsss ||