ನೀರಾಗಿರುವ ಜಗಜ್ಯೋತೆಮ್ಮ ಸಿರಿಗೋಳ ಕೋಡಿಮೆಮ್ಮ
ಪರಿಗೋಳ ತೆಗೆಸಿದ್ದೆಮ್ಮ
ಅಮ್ಮ ನಿನ್ನ ದೈವತಕಿಂತ ಯಾರ್ಯಾರ ಅಂಜಿಕಿಲ್ಲಮ್ಮ
ಬ್ಯಾರ್ಯಾವ ಅಂಜಿಕಿಲ್ಲಮ್ಮ || ಅಮ್ಮ ನಿನ್ನ
ತಲಿಯಾಗಿನ ಪರಟಿ ತೆಗೆದು ಹಡ್ಕಗಿ ಮಾಡಿದೆಮ್ಮ
ನೀನೇ ಧರಿಸಿದೆಮ್ಮ || ಅಮ್ಮ ನಿನ್ನ
ಹಣೆಯ ಹುಬ್ಬ ತೆಗೆದು ಬತ್ತಿ ಮಾಡಿದೆಮ್ಮ
ಹಣೆಯೊಳಗ ಧರಿಸೆಮ್ಮ || ಅಮ್ಮಾ ನಿನ್ನ
ಕಣ್ಣಾಗಿನ ಗುಳ್ಳಿ ತೆಗೆದು ರುದ್ರಾಕ್ಷಿ ಮಾಡಿದೆಮ್ಮ
ಕೊಳ್ಳಾಗ ಧರಿಸಿದೆಮ್ಮ || ಅಮ್ಮಾ ನಿನ್ನ
ಬಾಯಾಗಿನ ಹಲ್ಲ ತೆಗೆದು ಕವಡಿ ಮಾಡಿದೆಮ್ಮ
ಜೋಗತಿಗೆ ಹಾಕಿದೆಮ್ಮ || ಅಮ್ಮಾ ನಿನ್ನ
ಬಾಯಾಗಿನ ನಾಲಗಿ ತೆಗೆದು ಚಪ್ಪಲ ಮಾಡಿದೆಮ್ಮ
ಕಾಲಾಗ ಮೆಟ್ಟಿದೆಮ್ಮ || ಅಮ್ಮಾ ನಿನ್ನ
ಎದಿಯಾಗಿನ ಗುಂಡಿ ತೆಗೆದು ಸುತಿಗಳ ಮಾಡಿದೆಮ್ಮ
ಚವುಡಿಕಿ ಮಾಡಿದೆಮ್ಮ || ಅಮ್ಮಾ ನಿನ್ನ
ಮೈಯಾಗಿನ ಚರ್ಮ ತೆಗೆದು ಸುತಿಗೋಳ ಬಿಗಿಸಿದೆಮ್ಮ
ಚವುಡಕಿ ಬಿಗಿಸಿದೆಮ್ಮ || ಅಮ್ಮಾ ನಿನ್ನ
ಹೊಟ್ಟ್ಯಾಂಗಿನ ಕಳ್ಳ ತೆಗೆದು ತಂತಿ ಮಾಡಿದೆಮ್ಮ
ದಾರಾ ಮಾಡಿದೆಮ್ಮ || ಅಮ್ಮಾ ನಿನ್ನ
ಕೈಯಾಗಿ ಬಳ್ಳ ತೆಗೆದು ಕಡ್ಡಿ ಮಾಡಿದೆಮ್ಮ
ಸುತಿಗೋಳ ಹಾಕಿದೆಮ್ಮ || ಅಮ್ಮಾ ನಿನ್ನ
ಮೈಯಾಗಿನ ತೊಗಲ ತೆಗೆದು ಗದ್ದಿಗಿ ಮಾಡಿದೆಮ್ಮ
ಸದರಾ ಹತ್ತಿದೆಮ್ಮ || ಅಮ್ಮಾ ನಿನ್ನ
ಹೊಟ್ಟ್ಯಾಗಿನ ಪಾಯಿಸ ತೆಗೆದು ಬೇವು ಮಾಡಿದೆಮ್ಮ
ಬೇವ ತಿನಿಸಿದೆಮ್ಮ || ಅಮ್ಮಾ ನಿನ್ನ
Leave A Comment