ಹಣ್ಣು ಮತ್ತು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಅವುಗಳ ಜೊತೆಯಲ್ಲಿ ಅನೇಕ ರೀತಿಯ ದ್ರಾವಣಗಳನ್ನು ಉಪಯೋಗಿಸಬೇಕಾಗುತ್ತದೆ. ಹಣ್ಣುಗಳನ್ನು ಸಂಸ್ಕರಿಸುವಾಗ ಸಕ್ಕರೆ, ಗ್ಲೂಕೋಸ್ ಅಥವಾ  ಮುಸುಕಿನ ಜೋಳದ ಸಕ್ಕರೆ ಪಾಕವನ್ನು ಉಪಯೋಗಿಸಿದರೆ ತರಕಾರಿಗಳಿಗೆ ಉಪ್ಪಿನ ದ್ರಾವಣವೇ ಯೋಗ್ಯವೆನಿಸಿದೆ. ಈ ದ್ರಾವಣಗಳನ್ನು ವಾಣಿಜ್ಯಮಟ್ಟದಲ್ಲಿ ಮತ್ತು ಮನೆಮಟ್ಟದಲ್ಲಿ ವಿವಿಧ ಅವಶ್ಯಕತೆಗನುಗುಣವಾಗಿ ತಯಾರಿಸುವ ವಿಧಾನವನ್ನು ಈ ಕೆಳಗೆ ಕೊಟ್ಟಿದೆ.

ಸಕ್ಕರೆ ಪಾಕ :

ಡಬ್ಬಿಗಳಲ್ಲಿ ಹಣ್ಣುಗಳನ್ನು ಸಂಸ್ಕರಿಸುವಾಗ ಅದರ ಪರಿಮಳವನ್ನು ಆದಷ್ಟು ಮಟ್ಟಿಗೆ ಹೊರಗೆ ಗೊತ್ತಾಗುವಂತೆ ಮಾಡಲು ಸಕ್ಕರೆಪಾಕವನ್ನು ಬಳಸಲಾಗುತ್ತದೆ. ಆದರೆ ಈ ಸಕ್ಕರೆಪಾಕವನ್ನು ಉಪಯೋಗಿಸುವಾಗ ಡಬ್ಬಿಯಲ್ಲಿರುವ ಪದಾರ್ಥದ ಸಿಹಿ ಅತಿಯಾಗಿ ಹೆಚ್ಚದಂತೆ ಜಾಗೃತೆವಹಿಸಬೇಕು. ಹಣ್ಣಿನ ಜಾತಿ ಮತ್ತು ತಳಿಗೆ ಅನುಗುಣವಾಗಿ ಸಕ್ಕರೆಪಾಕದ ಸಾಮರ್ಥ್ಯವು ಬದಲಾಗುತ್ತದೆ. ಹಣ್ಣುಗಳು ಹೆಚ್ಚು ಆಮ್ಲೀಯವಾಗಿದ್ದರೆ ಉಪಯೋಗಿಸುವ ಸಕ್ಕರಪಾಕ ಹೆಚ್ಚು ಮಂದವಾಗಿರಬೇಕು.

ಶುದ್ಧ ಬಿಳಿ ಹರಳಿನ ಸಕ್ಕರೆಯನ್ನು ಮಾತ್ರ ಉಪಯೋಗಿಸಬೇಕು. ರಾಸಾಯನಿಕ ಸಕ್ಕರೆಗೆ ಸುಕ್ರೋಸ್ (C೧೨ H೨೨ O೧೧) ಎಂದು ಹೆಸರು. ಕಬ್ಬಿನ ಮತ್ತು ಬೀಟ್‌ರೂಟ್‌ನ ಸಕ್ಕರೆಗಳಲ್ಲಿ ಇದರ ಪರಿಮಾಣ ಶೇಕಡಾ ೯೯.೫ ರಷ್ಟಿರುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನದ ರಾಜ್ಯದ ಕೆಲವು ಕಡೆ ಡಬ್ಬಿಯಲ್ಲಿ ಸಂಸ್ಕರಿಸುವಾಗ ಮುಸುಕಿನ ಜೋಳದ ಸಕ್ಕರೆಪಾಕ ಅಥವಾ ಗ್ಲೂಕೋಸ್ ಪಾಕವನ್ನು ಬಳಸುತಾರೆ. ಇದನ್ನು ಹೆಚ್ಚಾಗಿ ಕೆಳಮಟ್ಟದ ಹಣ್ಣುಗಳನ್ನು ಡಬ್ಬಿಯಲ್ಲಿ ಕೆಂಪ್ಡನ್‌ನಲ್ಲಿರುವ ಹಣ್ಣು ಮ್ತು ತರಕಾರಿ ಸಂಸ್ಕರಣೆಯ ಸಂಶೋಧನಾ ಕೇಂದ್ರದಲ್ಲಿದ್ದ ಹರ್ಸ್ಪ ಮತ್ತು ಆಡ್ಯಂ ಎಂಬುವವರು ಬೀಟ್‌ರೂಟ್‌ ಸಕ್ಕರೆಯ ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದಾರೆ. ಬೀಟ್‌ರೂಟ್‌ ಸಕ್ಕರೆಯನ್ನು ಕಬ್ಬಿನ ಸಕ್ಕರೆಯಷ್ಟೇ ಯಶಸಸ್ವಿಯಾಗಿ ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇದಾದನಂತರವೇ ಈ ಸಕ್ಕರೆ ಹೆಚ್ಚು ಜನಪ್ರಿಯವಾದುದು.

ನಮ್ಮ ದೇಶದಲ್ಲಿ ಡಬ್ಬಿಯಲ್ಲಿ ಸಂಶ್ಕರಿಸುವಾಗ ಕೇವಲ ಕಬ್ಬಿನ ಸಕ್ಕರೆಯನ್ನು ಮಾತ್ರ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚೆಗೆ ಗ್ಲೂಕೋಸ್ ಮತ್ತು ಮುಸುಕಿನ ಜೋಳಗಳ ಸಕ್ಕರೆಪಾಕಗಳನ್ನು ಉಪಯೋಗಿಸುವುದು ಕಂಡು ಬರುತ್ತದೆ. ಈ ದೃಷ್ಟಿಯಿಂದ ಇವುಗಳ ಉಪಯೋಗದ ಬಗ್ಗೆ ಸಂಶೋಧನೆ ನಡೆಸುವುದು ಅಗತ್ಯ. ನಮ್ಮಲ್ಲಿಯ ಅನೇಕ ವಾಣಿಜ್ಯ ಮಟ್ಟದ ಸಕ್ಕರೆಗಳು ಗಣನೀಯ ಪ್ರಮಾಣದಲ್ಲಿ ಸಲ್ಫರ್ ಡೈ ಆಕ್ಸೈಡ್ ನ್ನು ಹೊಂದಿರುತ್ತವೆ. ಇಂಥ ಸಕ್ಕರೆಗಳನ್ನು ಡಬ್ಬಿಗಳಲ್ಲಿ ಸಂಸ್ಕರಿಸುವಾಗ ಕೆಲವು ಬಗೆಯ ತೊಂದರೆಗಳು ಕಂಡು ಬರುತ್ತವೆ. ಡಬ್ಬಿಗಳನ್ನು ಸಂಗ್ರಹಿಸಿಟ್ಟಾಗ ಅವುಗಳ ಒಳಭಾಗದಲ್ಲಿ ಜಲಜನಕ ಸಲ್ಫೈಡ್‌ನಿಂದಾಗಿ ಕಪ್ಪು ಪದಾರ್ಥ ಕಾಣಿಸಿಕೊಳ್ಳುತ್ತದೆ. ಇದರಿಂದ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥದ ರೂಪ ಕೆಡುತ್ತದೆ. ಆದರೆ ಇಂಗಾಲೀಕರಣದಿಂದ ತಯಾರಿಸಿದ ಸಕ್ಕರೆಯನ್ನು ಉಪಯೋಗಿಸಿದರೆ ಈ ದೋಷ ಕಂಡುಬರುವುದಿಲ್ಲ.

ಸಕ್ಕರೆಪಾಕ ತಯಾರಿಸುವುದು :

ಸಕ್ಕರೆ ಪಾಕವನ್ನು ‘ತಣ್ಣಗಿನ ವಿಧಾನ’, ‘ಬಿಸಿ ವಿಧಾನ’ ಎಂಬ ಎರಡು ವಿಧಾನಗಳಿಂದ ತಯಾರಿಸಬಹುದು. ತಣ್ಣಗಿನ ವಿಧಾನದಿಂದ ತಯಾರಿಸುವಾಗ ಒಂದು ತೊಟ್ಟಿಯಲ್ಲಿ ಸಕ್ಕರೆಯನ್ನು ಹಾಕಿ ಅದಕ್ಕೆ ತಣ್ಣೀರು ಸೇರಿಸಿ ಕದಡುತ್ತಾ ಇರಬೇಕು. ಈ ಪಾಖವನ್ನು ಅನಂತರ ಒಂದು ತುಪ್ಪಟದ ಬಟ್ಟೆ, ಮಸ್‌ಲಿನ್ ಬಟ್ಟೆ ಅಥವಾ ಸೂಕ್ಷ್ಮವಾದ ಹಿತ್ತಾಳೆಯ ತಂತಿಯ ಜಾಲರಿಯಿಂದ ಶೋಧಿಸಿ ಕರಗದೆ ಇರುವ ಪದಾರ್ಥವನ್ನು ಬೇರ್ಪಡಿಸಬೇಕು. ಬಿಸಿ ನೀರನ್ನು ಉಪಯೋಗಿಸಿದರೆ ಸಕ್ಕರೆ ಬೇಗನೆ ಕರಗುತ್ತದೆ. ‘ಬಿಸಿ ವಿಧಾನ’ವನ್ನು ಅನುಸರಿಸುವಾಗ ಸಕ್ಕರೆ ಮತ್ತು ನೀರನ್ನು ಉಗಿಯ ಹೊರಕವಚವಿರುವ ಪಾತ್ರೆಯಲ್ಲಿಟ್ಟು ಕುದಿಸಬೇಕು. ಮೇಲೆ ಬಂದ ಕಶ್ಮಲದ ನೊರೆಯನ್ನು ತೆಗದುಹಾಕುತ್ತಿರಬೇಕು. ಈ ಪಾಕವನ್ನು ಅನಂತರ ಶೋಧಿಸಿ ಸ್ವಚ್ಛಗೊಳಿಸಬೇಕು. ಉಗಿಯ ಸಂಪರ್ಕದಿಂದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ.  ಈ ಪಾಕವನ್ನು ಹೆಚ್ಚು ಕಾಲ ಸಂಗ್ರಹಿಡಲೂ ಸಾಧ್ಯವಾಗುತ್ತದೆ.  ಅಪೇಕ್ಷಿತ ಬ್ರಿಕ್ಸ್‌ನ ಸಕ್ಕರೆಪಾಕ ತಯಾರಿಸಲು ಅಗತ್ಯವಾದ ಸಕ್ಕರೆ ಮತ್ತು ನೀರಿನ ಅಳತೆಗಳನ್ನು ಕೋಷ್ಠಕ ೫ರಲ್ಲಿ ಕೊಡಲಾಗಿದೆ.

ಇಚ್ಛಿತ ಬ್ರಿಕ್ಸ್‌ನ ಸಕ್ಕರೆಪಾಕವನ್ನು ವಾಣಿಜ್ಯ ಮಟ್ಟದಲ್ಲಿ  ತಯಾರಿಸಲು ಒಂದು ಸೂತ್ರವಿದೆ. ಇದರ ಪ್ರಕಾರ ಅಪೇಕ್ಷಿತ ಪರಿಮಾಣದ ಪಾಕವನ್ನು ಪಡೆಯಲು ನಿರ್ದಿಷ್ಟ ತೂಕದ ಸಕ್ಕರೆಯನ್ನು ಗೊತ್ತಾದ ಪರಿಮಾಣದ ನೀರಿನೊಡನೆ ಬೆರೆಸಬೇಕು. ಉದಾಹರಣೆಗೆ ೫ ಗ್ಯಾಲನ್ ನೀರನ್ನು ೫೦.೧೫ ಪೌಂಡ್ ಸಕ್ಕರೆಗೆ ಸೇರಿಸಿದರೆ ೫೦ ಡಿಗ್ರಿ ಬ್ರಿಕ್ಸ್‌‌ನ ೮.೧೪ ಗ್ಯಾಲನ್ ಪಾಕ ದೊರೆಯುತ್ತದೆ. ಇದೇ ಪ್ರಕಾರ ೫೦ ಡಿಗ್ರಿ ಬ್ರಿಕ್ಸ್‌ನ ೫ ಗ್ಯಾಲನ್ ಪಾಕ ಬೇಕಾದರೆ, ೩೦.೮೦ ಪೌಂಡ್ ಸಕ್ಕರೆಗೆ ಅಪೇಕ್ಷಿತ ಪರಿಮಾಣದ ಪಾಕವನ್ನು ಪಡೆಯಲು ಬೇಕಾದಷ್ಟು ನೀರನ್ನು ಸೇರಿಸಬೇಕು. ಅನಗತ್ಯವಾಗಿ ಆಗಾಗ್ಗೆ ತೂಕ ಮಾಡುವುದನ್ನು ತಪ್ಪಿಸಲು ಸಾಮಾನ್ಯವಾಗಿ ೨ ಹಂಡ್ರಡ್ ವೆಯ್ಟ್ (೨೨೪ ಪೌಂಡ್) ತೂಕದ ಚೀಲವನ್ನು ಒಂದು ಅಳತೆಯಾಗಿ ತೆಗೆದುಕೊಂಡು ಅದರಲ್ಲಿರುವ ಸಕ್ಕರೆಗೆ ಗೊತ್ತಾದ ಪರಿಮಾಣದಲ್ಲಿ ನೀರನ್ನು ಬೆರೆಸಬೇಕು.

ಕೋಷ್ಠಕ : ಸಕ್ಕರೆಪಾಕ ಸಂಯೋಜನೆ ಹಾಗೂ ಬ್ರಿಕ್ಸ ಓದಿನ ಸಂಬಂಧ

ಡಿಗ್ರಿ ಬ್ರಿಕ್ಸ್ ೬೮ ಫ್ಯಾ

ಪ್ರತಿ ಗ್ಯಾಲನ್ ನೀರಿಗೆ ಸೇರಿಸಬೇಕಾದ ಸಕ್ಕರೆ (ಪೌಂಡಗಳಲ್ಲಿ)

ಒಂದು ಗ್ಯಾಲನ್ ನೀರಿನಿಂದ ಆಗುವ ಪಾಕದ ಪರಿಮಾಣ (ಗ್ಯಾಲನ್)

ಒಂದು ಗ್ಯಾಲನ್ ಪಾಕದಲ್ಲಿರುವ ಸಕ್ಕರೆ ತೂಕ (ಪೌಂಡಗಳಲ್ಲಿ)

೧೦ ೧.೧೧ ೧.೦೬೭ ೧.೦೪
೧೧ ೧.೨೩ ೧.೦೭೬ ೧.೧೪
೧೨ ೧.೩೬ ೧.೦೮೫ ೧.೨೫
೧೩ ೧.೪೯ ೧.೦೯೩ ೧.೩೬
೧೪ ೧.೬೩ ೧.೧೦೧ ೧.೪೭
೧೫ ೧.೭೬ ೧.೧೧೧ ೧.೫೮
೧೬ ೧.೯೦ ೧.೧೧೯ ೧.೭೦
೧೭ ೨.೦೪ ೧.೧೨೭ ೧.೮೧
೧೮ ೨.೧೯ ೧.೧೩೭ ೧.೯೩
೧೯ ೨.೩೪ ೧.೧೪೬ ೨.೦೪
೨೦ ೨.೫೦ ೧.೧೫೭ ೨.೧೬
೨೧ ೨.೬೬ ೧.೧೬೭ ೨.೨೮
೨೨ ೨.೮೨ ೧.೧೭೬ ೨.೪೦
೨೩ ೩.೦೦ ೧.೧೮೭ ೨.೫೨
೨೪ ೩.೧೭ ೧.೧೯೮ ೨.೬೪
೨೫ ೩.೩೪ ೧.೨೦೮ ೨.೭೬
೨೬ ೩.೫೨ ೧.೨೨೦ ೨.೮೯
೨೭ ೩.೭೦ ೧.೨೩೧ ೩.೦೧
೨೮ ೩.೯೪ ೧.೨೪೩ ೩.೧೩
೨೯ ೪.೦೯ ೧.೨೫೬ ೩.೨೬
೩೦ ೪.೩೦ ೧.೨೬೯ ೩.೩೮
೩೧ ೪.೫೦ ೧.೨೮೧ ೩.೫೧
೩೨ ೪.೭೨ ೧.೨೯೪ ೩.೬೪
೩೩ ೪.೯೪ ೧.೩೦೯ ೩.೭೭
೩೪ ೫.೧೭ ೧.೩೨೩ ೩.೯೦
೩೫ ೫.೪೦ ೧.೩೩೮ ೪.೦೩
೩೬ ೫.೬೪ ೧.೩೫೩ ೪.೧೭
೩೭ ೫.೮೯ ೧.೩೬೯ ೪.೩೦
೩೮ ೬.೧೪ ೧.೩೮೪ ೪.೪೪
೩೯ ೬.೪೧ ೧.೪೦೧ ೪.೫೮
೪೦ ೬.೬೯ ೧.೪೧೭ ೪.೭೧
೪೧ ೬.೯೭ ೧.೪೩೭ ೪.೮೫
೪೨ ೭.೨೬ ೧.೪೫೪ ೪.೯೯
೪೩ ೭.೫೬ ೧.೪೭೪ ೫.೧೩
೪೪ ೭.೮೮ ೧.೪೯೪ ೫.೨೭
೪೫ ೮.೨೦ ೧.೫೧೪ ೫.೪೨
೪೬ ೮.೫೫ ೧.೫೩೬ ೩.೫೭
೪೭ ೮.೯೦ ೧.೫೫೮ ೫.೭೧
೪೮ ೯.೨೬ ೧.೫೮೦ ೫.೮೬
೪೯ ೯.೬೪ ೧.೬೦೪ ೬.೦೧
೫೦ ೧೦.೦೩ ೧.೬೨೮ ೬.೧೬
೫೧ ೧೦.೪೪ ೧.೬೫೪ ೬.೩೧
೫೨ ೧೦.೮೬ ೧.೬೮೧ ೬.೪೫
೫೩ ೧೧.೩೧ ೧.೭೧೦ ೬.೬೧
೫೪ ೧೧.೭೭ ೧.೭೩೯ ೬.೭೭
೫೫ ೧೨.೨೬ ೧.೭೭೦ ೬.೯೩
೫೬ ೧೨.೭೭ ೧.೮೦೩ ೭.೦೮
೫೭ ೧೩.೨೯ ೧.೮೩೭ ೭.೨೩
೫೮ ೧೩.೮೫ ೧.೮೭೧ ೭.೪೦
೫೯ ೧೪.೪೩ ೧.೯೦೭ ೭.೫೭
೬೦ ೧೫.೦೫ ೧.೯೪೮ ೭.೭೩
೬೧ ೧೫.೬೯ ೧.೯೮೮ ೭.೮೯
೬೨ ೧೬.೩೭ ೨.೦೩೨ ೮.೦೫
೬೩ ೧೬.೦೮ ೨.೦೭೭ ೮.೨೧
೬೪ ೧೭.೮೪ ೨.೧೨೪ ೮.೩೯
೬೫ ೧೮.೬೨ ೨.೧೭೪ ೮.೫೭
೬೬ ೧೯.೪೭ ೨.೨೨೯ ೮.೫೭
೬೭ ೨೦.೩೯ ೨೨.೮೭ ೮.೯೨
೬೮ ೨೧.೩೨ ೨.೩೪೪ ೨.೧೦
೬೯ ೨೨.೨೩ ೨.೪೧೧ ೯.೨೭
೭೦ ೨೩.೪೦ ೨.೪೮೦ ೯.೪೪

ಸಕ್ಕರೆ ಪಾಕದ ಸಾಮರ್ಥ್ಯದ ಪರೀಕ್ಷೆ : ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥ ಒಂದೇ ತೆರನಾಗಿರಬೇಕಾದರೆ ಸಕ್ಕರೆಪಾಕವನ್ನು ತಯಾರಿಸುವಾಗ ಎಲ್ಲ ಪದಾರ್ಥಗಳನ್ನೂ ಕ್ರಮ ಪ್ರಕಾರವಾಗಿ ಸೇರಿಸಬೇಕು. ಸಕ್ಕರೆಪಾಕದ ತಯಾರಿಕೆಯಲ್ಲಿ ದೋಷವೇನಾದರೂ ಕಂಡುಬಂದರೆ ಮುಂದೆ ಅದನ್ನು  ಸರಿಪಡಿಸಲಾಗುವುದಿಲ್ಲ. ಸಿದ್ಧ ಪದಾರ್ಥದ ಒಟ್ಟು ವೆಚ್ಚದಲ್ಲಿ ಸಕ್ಕರೆಪಾಕದ ವೆಚ್ಚವು ಅತಿ ಪ್ರಾಮುಖ್ಯವಾದ ಅಂಶ. ಆದುದರಿಂದ ಸಕ್ಕರೆಪಾಕದ ಸಾಮರ್ಥ್ಯವನ್ನು ಹಿಡಿತದಲ್ಲಿಡುವುದು ಮತ್ತು ಸಕ್ಕರೆ ನಷ್ಟವಾಗದಂತೆ ನೋಡಿಕೊಳ್ಳುವುದು ಅತಿ ಅವಶ್ಯಕ. ಇದಕ್ಕೆ ಸರಿಯಾದ ಉಷ್ಣಮಾಪಕ ಮತ್ತು ಹೈಡ್ರೋಮೀಟರುಗಳು ಬೇಕಾಗುತ್ತವೆ. ಈಗ ಬಳಕೆಯಲ್ಲಿರುವ ವಿವಿಧ ಹೈಡ್ರೋ ಮೀಟರುಗಳೆಂದರೆ ಬ್ರಿಕ್ಸ್ ಅಥವಾ ಬಾಲಿಂಗ್, ಬಾಮೆ,  ವಿಶಿಷ್ಟ ಗುರುತ್ವ ಮತ್ತು ಟ್ವಾಡೆಲ್ ಮೀಟರುಗಳಾಗಿವೆ. ರಿಫ್ರ‍್ಯಾಕ್ಟೋ ಮೀಟರನ್ನು ಸಹ ಇದಕ್ಕೆ ಬಳಸಬಹುದಾಗಿದೆ.

ಬ್ರಿಕ್ಸ್ ಅಥವಾ ಬಾಲಿಂಗ್ ಹೈಡ್ರೋಮೀಟರ್ ಸಕ್ಕರೆಪಾಕದಲ್ಲಿರುವ ಸಕ್ಕರೆಯ ಶೇಕಡಾಂಶವನ್ನು ನೇರವಾಗಿ ತೂಕಲೆಕ್ಕದಲ್ಲಿ ಕೊಡುತ್ತದೆ. ಅದರ ಮೇಲೆ ನಮೂದಿಸಿದ ಅಂಕಿಗಳನ್ನು ೬೮ ಫ್ಯಾ ಗೆ ಸರಿಯಾಗಿ ಬರೆಯಲಾಗುತ್ತದೆ. ಬೇರೆ ಉಷ್ಣತೆಗೆ ಬೇಕಾದರೆ ಅದಕ್ಕೆ ತಕ್ಕ ಸೂಕ್ತ ತಿದ್ದುಪಡಿ ಮಾಡಿಕೊಳ್ಳಬೇಕು. ಬಾಮೆ ಹೈಡ್ರೋ ಮೀಟರಿನ ಅಂಕಿಗಳನ್ನು  ೦ ಯಿಂದ  ೭೦ ಯವರೆಗೆ ವಿಭಾಗಿಸಿದೆ. ಬ್ರಿಕ್ಸ್ ಮತ್ತು ಬಾಮೆ ಅಳತೆಗಳಿಗಿರುವ ಸಂಬಂಧವನ್ನು ಕೋಷ್ಠಕ ೮ ರಲ್ಲಿ ತೋರಿಸಿದೆ. ಬಾಮೆ ಅಳತೆಯಿಂದ ವಿಶಿಷ್ಟ ಗುರುತ್ವವನ್ನು ಈ ಕೆಳಗಿನ ಸೂತ್ರವನ್ನನುಸರಿಸಿ ಲೆಕ್ಕ ಹಾಕಬಹುದು.

ವಿಶಿಷ್ಟ ಗುರುತ್ವ = ೧೪೫ / ೧೪೫ಬಾಮೆ ಓದು

ಟ್ವಾಡ್ಡೆಲ್‌ನ ಹೈಡ್ರೋ ಮೀಟರಿನಲ್ಲಿರುವ ಅಂಕಿಗಳನ್ನು  ೬೦ ಫ್ಯಾ. ಗೆ ಸರಿಯಾಗಿ ಮಾರ್ಪಡಿಸಿದೆ. ಇದರಲ್ಲಿ  ೦ ಯಿಂದ  ೨೦೦ ಯವರೆಗೆ  ಅಂಕಿಗಳಿವೆ. ಟ್ವಾಡ್ಡೆಲ್‌ನ ಪ್ರತಿ ಒಂದು ಡಿಗ್ರಿ ೧.೦೦೫ ವಿಶಿಷ್ಟ ಗುರುತ್ವಕ್ಕೆ ಸಮ. ವಿವಿಧ ರೀತಿಯ ಹೈಡ್ರೋ ಮೀಟರುಗಳ ಸಂಬಂಧವನ್ನು ಕೋಷ್ಟಕ ೮ರಲ್ಲಿ ಕೊಟ್ಟಿದೆ.

ಉಷ್ಣತೆಗೂ ತಿದ್ದುಪಡಿ : ಒಂದು ಎತ್ತರವಾದ ಕೊಳವೆಯಾಕಾರದ ಗಾಜಿನ ಪಾತ್ರೆಯಲ್ಲಿ ಸಕ್ಕರೆಪಾಕವನ್ನು ತೆಗೆದುಕೊಂಡು ಹೈಡ್ರೋ ಮೀಟರನ್ನು ಅದರ ಒಳಗಿಡಬೇಕು. ಸಕ್ಕರೆಪಾಕದ ಮೇಲ್ಭಾಗದ ಬಾಗಿದ ಅಂಚಿಗೆ ಸರಿಹೋಗಿರುವ ಅಂಕಿಯನ್ನು ಹೈಡ್ರೋ ಮೀಟರಿನಲ್ಲಿ ಓದಿ ಗುರುತು ಹಾಖಿಕೊಳ್ಳಬೇಖು. ಸಕ್ಕರೆಪಾಕದ ಉಷ್ಣತೆಯನ್ನು ನೋಡಿ ಗುರುತು ಹಾಕಿಕೊಳ್ಳಬೇಕು. ಲೆಕ್ಕದ ಪ್ರಕಾರ ಉಷ್ಣತೆಗೆ ಸೂಕ್ತ ತಿದ್ದುಪಡಿಯನ್ನು ಮಾಡಿಕೊಳ್ಳಬೇಕು. ಇದರ ಪ್ರಕಾರ  ೨೦ ಉಷ್ಣತೆಯಲ್ಲಿ   ೩೦ ಬ್ರಿಕ್ಸ್ ತೋರಿಸುವ ಸಕ್ಕರೆಪಾಕ  ೫೫  ಸೆ. ನಲ್ಲಿ ಕೇವಲ ೨೬.೮೮ ಬ್ರಿಕ್ಸ್‌‌ ತೋರಿಸುತ್ತದೆ. ಸಕ್ಕರೆಪಾಕದ ಉಷ್ಣತೆ  ೨೦ ಗಿಂತ ಹೆಚ್ಚಿದ್ದರೆ ಹೈಡ್ರೋ ಮೀಟರಿನಲ್ಲಿ ಓದಿದ ಅಂಕಿಗೆ ತಿದ್ದುಪಡಿ ಮಾಡಲಿರುವ ಸಂಖ್ಯೆಯನ್ನು ಕಳೆಯಬೇಕು.

ಸಕ್ಕರೆ ಪಾಕದ ಲೆಕ್ಕಾಚಾರ : ಕೆಲವು ವೇಳೆ ಸಕ್ಕರೆಪಾಕದ ಸಾಮರ್ಥ್ಯವನ್ನ್‌ಉ ಕಡಿಮೆ ಇಲ್ಲವೆ ಹೆಚ್ಚಿಗೆ ಮಾಡಬೇಕಾಗಬಹುದು. ಇದನ್ನು ಈ ಕೆಳಗೆ ಕಾಣಿಸಿದ ‘ಚೌಕ ವಿಧಾನ’ ದಿಂದ ಸುಲಭವಾಗಿ ಮಾಡಬಹುದು.

ಒಂದು ‘ABCD’ ಎಂಬ ಚೌಕವನ್ನು ಎಳೆದು ಮಧ್ಯದಲ್ಲಿ ‘E’ ಎಂದು ಗುರುತು ಹಾಕಬೇಕು. ‘A’ ಯಲ್ಲಿ ಮಂದವಾಗಿರುವ ಪಾಕದ ಬ್ರಿಕ್ಸ್ ಮತ್ತು ಪ್ರತಿ ಗ್ಯಾಲನ್ ಪಾಕದಲ್ಲಿರುವ ಸಕ್ಕರೆಯನ್ನು ಪೌಂಡುಗಳಲ್ಲಿ ಗುರುತು ಹಾಕಬೇಕು. ‘D’ ಯಲ್ಲಿ ತೆಳ್ಳಗಿನ ಪಾಕದ ಬ್ರಿಕ್ಸ್ ಮತ್ತು ಪ್ರತಿ ಗ್ಯಾಲನ್ ಪಾಕದಲ್ಲಿರಬೇಕಾದ ಸಕ್ಕರೆಯನ್ನು  ಪೌಂಡುಗಳಲ್ಲಿ ಬರೆಯಬೇಕು. ಸಕ್ಕರೆಯ ಪಾಕವನ್ನು ತೆಳ್ಳಗೆ ಮಾಡಲು ಬರೀ ನೀರನ್ನು ಸೇರಿಸುವುದಿದ್ದರೆ ಇಲ್ಲಿ ಸೊನ್ನೆ (೦) ಎಂದೂ

ಬರೀ ಸಕ್ಕರೆ ಸೇರಿಸುವುದಿದ್ದರೆ ೧೦೦ ಎಂದೂ ಬರೆಯಬೇಕು. ‘E’ ಯಲ್ಲಿ ಇಚ್ಛಿತ ಸಕ್ಕರೆ ಪಾಕದ ಬ್ರಿಕ್ಸ್ ಮತ್ತು ಪ್ರತಿ ಗ್ಯಾಲನ್ ಪಾಕದಲ್ಲಿರಬೇಕಾದ ಸಕ್ಕರೆಯನ್ನು ಪೌಂಡುಗಳಲ್ಲಿ ಗುರುತುಹಾಕಬೇಕು. ಈಗ ಚೌಕದ ಎದುರು-ಬದುರು ಮೂಲೆಗಳಿಗೆ ಲೆಕ್ಕ ಹಾಕಬೇಕು. ದೊಡ್ಡ ಅಂಕಿಯಿಂದ ಸಣ್ಣ ಅಂಕಿಯನ್ನು ಕಳೆದು ಬಂದ ವ್ಯತ್ಯಾಸವನ್ನು ವಿರುದ್ಧ ಮೂಲೆಗಳಲ್ಲಿ ಅಂದರೆ ‘C’ ಮತ್ತು ‘B’ಯಲ್ಲಿ ಬರೆಯಬೇಕು. ಈ ಅಳತೆಗಳು ‘E’ ಯಲ್ಲಿ ಸೂಚಿಸಿದ ಇಚ್ಛಿತ ಸಾಮರ್ಥ್ಯ ಸಕ್ಕರೆ ಪಾಕ ಪಡೆಯಲು ಎರಡೂ ಪಾಕಗಳನ್ನು ಯಾವ ಅಳತೆಯಲ್ಲಿ ಸೇರಿಸಬೇಕೆಂಬುದನ್ನು ತೋರಿಸುತ್ತದೆ.

ಉದಾಹರಣೆಗೆ : ೬೨ ಬ್ರಿಕ್ಸ್  ಮತ್ತು  ೧೦ ಬ್ರಿಕ್ಸ್‌ನ ದ್ರಾವಣದಿಂದ  ೪೫  ಬ್ರಿಕ್ಸ್‌ನ  ಸಕ್ಕರೆಪಾಕವನ್ನು ಮುಂದೆ ಕಾಣಿಸಿದಂತೆ ತಯಾರಿಸಬಹುದು. ಈ ರೀತಿಯಲ್ಲಿ ೪೫  ಬ್ರಿಕ್ಸ್‌ನ  ಸಕ್ಕರೆಪಾಕವನ್ನು ತಯಾರಿಸಲು ೬೨  ಬ್ರಿಕ್ಸ್‌ ಮತ್ತು ೧೦  ಬ್ರಿಕ್ಸ್‌ನ  ಪಾಕಗಳನ್ನು ೪.೩೮ : ೨.೬೩ ಪ್ರಮಾಣದಲ್ಲಿ ಅಳತೆ ಮಾಡಿ ಬೆರೆಸಬೇಕು.

ಸಕ್ಕರೆ ಪಾಕಗಳನ್ನು ತೂಕ ಲೆಕ್ಕದಲ್ಲಿಯೂ ಈ ಕೆಳಗೆ ವಿವರಿಸಿದ ಮೇರೆ ಇಚ್ಛಿತ ಪಾಕ ಪಡೆಯಲು ಸೇರಿಸಬಹುದು. ಈಗ ೬೨  ಬ್ರಿಕ್ಸ್‌ ಮತ್ತು ೧೦  ಬ್ರಿಕ್ಸ್‌ ಪಾಕಗಳಿಂದ ೪೫  ಬ್ರಿಕ್ಸ್‌ನ   ಪಾಕ ತಯಾರಿಸಬೇಕೆಂದಿಟ್ಟುಕೊಳ್ಳೋಣ. ಇದಕ್ಕೆ ೬೨  ಬ್ರಿಕ್ಸ್‌ನ  ೪೫-೧೦ = ೩೫ ಪೌಂಡ್ ಪಾಕವನ್ನು ೧೦  ಬ್ರಿಕ್ಸ್‌ನ  ೬೨-೪೫ = ೧೭ ಪೌಂಡ್ ಪಾಕದೊಡನೆ ಬೆರೆಸಿದರೆ ೪೫  ಬ್ರಿಕ್ಸ್‌ದ ೫೨ ಪೌಂಡ್ ಸಕ್ಕರೆ ಪಾಕ ದೊರಕುತ್ತದೆ. ಇದನ್ನುಈ ಕೆಳಗೆ ಕಾಣಿಸಿದ ಚೌಕದಲ್ಲಿ ವಿವರಿಸಿದೆ.

ಈ ವಿಧಾನದಿಂದ, ಸಕ್ಕರೆ ಪಾಕ ತಯಾರಿಸುವಾಗ ಬರುವ ವಿವಿಧ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದಾಗಿದೆ.

ಕೋಷ್ಠಕ ೫ : ಸಾಂದ್ರತೆ, ಶೇಕಡಾ ಉಪ್ಪು ಮತ್ತು ಉಪ್ಪಿನ ಮಾಪಕ (ಸಲೋಮೀಟರ್) ದಲ್ಲಿಯ ಎಣಿಕೆಯ ಸಂಬಂಧ

ಸಾಂದ್ರತೆ

ಶೇಕಡಾ ಉಪ್ಪು ತೂಕಕ್ಕೆ ತೂಕ

ಉಪ್ಪಿನ ಮಾಪಕ

ಒಂದು ಗ್ಯಾಲನ್ ನೀರಿಗೆ ಉಪ್ಪು

೧.೦೧೭ ೨ ½ ೯.೫ ೪½ ಜೌನ್ಸ್
೧.೦೩೪ ೧೮.೯ ೮½ ಜೌನ್ಸ್
೧.೦೫೨ ೭½ ೨೮.೩ ೧೩ ಜೌನ್ಸ್
೧.೦೭೧ ೧೦ ೩೭.೭ ೧ ಪೌಂಡ್ ೨ ಜೌನ್ಸ್
೧.೦೯ ೧೨½ ೪೭.೧ ೧ ಪೌಂಡ್ ೭ ಜೌನ್ಸ್
೧.೧೦೯ ೧೫ ೫೬.೬ ೧ ಪೌಂಡ್ ೧೨ ಜೌನ್ಸ್
೧.೧೨೮ ೧೭½ ೬೬.೦ ೧ ಪೌಂಡ್ ೨ ಜೌನ್ಸ್
೧.೧೪೮ ೨೦ ೭೫.೫ ೧ ಪೌಂಡ್ ೮ ಜೌನ್ಸ್
೧.೧೬೯ ೨೨½ ೮೪.೯ ೧ ಪೌಂಡ್ ೧೫ ಜೌನ್ಸ್
೧.೧೯ ೨೫ ೯೪.೫ ೧ ಪೌಂಡ್ ೫ ಜೌನ್ಸ್
೧.೨೦೪ ೨೬½ ೧೦೦.೦ ೧ ಪೌಂಡ್ ೧೦ ಜೌನ್ಸ್

ಅಡುಗೆ ಉಪ್ಪಿನ ದ್ರಾವಣ : ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಅಡಿಗೆ ಉಪ್ಪಿನ ದ್‌ಆವಣವನ್ನು ಉಪಯೋಗಿಸಬೇಕು. ಸಾಧಾರಣವಾಗಿ ಉಪಯೋಗಿಸಲ್ಪಡುವ ಉಪ್ಪಿನ ದ್ರಾವಣದಲ್ಲಿ ಶೇಕಡಾ ೧-೨ ರಷ್ಟು ಉಪ್ಪಿರುತ್ತದೆ. ಉಪಯೋಗಿಸುವ ಉಪ್ಪು ಉತ್ತಮ ಮಟ್ಟದ್ದಾಗಿರಬೇಕು. ಕಬ್ಬಿಣ ಮತ್ತು ಕ್ಷಾರದ ಅಶುದ್ಧ ವಸ್ತುಗಳಾದ ಸೋಡಿಯಂ ಸಲ್ಫೈಟ್, ಕ್ಯಾಲ್ಸಿಯಂ ಕ್ಲೋರೈಡ್, ಮೆಗ್ನೇಷಿಯಂ ಸಲ್ಫೈಟ್ ಮತ್ತು ಬೈಕಾರ್ಬೋನೇಟ್‌ಗಳಿಂದ ಹೊರತಾಗಿರಬೇಕು. ನೀರಿನಲ್ಲಿ ಉಪ್ಪಿನ ಕರಗುವಿಕೆಯ ಗರಿಷ್ಠ ಮಿತಿ ಶೇಕಡಾ ೨೬.೫ ಇರುತ್ತದೆ.

ಉಪ್ಪಿನ ದ್ರಾವಣದ ಸಾಮರ್ಥ್ಯವನ್ನು ಉಪ್ಪಿನ ಮಾಪಕ ಅಥವಾ ಬಾಮೆ ಹೈಡ್ರೋ ಮೀಟರಿನಿಂದ ಅಳೆಯಬಹುದು. ಉಪ್ಪಿನ ಮಾಪಕದ ಅಂಕಿ-ಅಂಶಗಳು ೦-೧೦೦ ವರೆಗಿದ್ದು, ೬೦ ಫ್ಯಾ ಗೆ ಅಳವಡಿಸಲಾಗಿರುತ್ತದೆ. ಉಪ್ಪಿನ ಮಾಪಕದಲ್ಲಿ ೧೦೦ ತೋರಿಸುವ ಉಪ್ಪಿನ ದ್ರಾವಣ ಶೇಕಡಾ ೨೬.೫ ರಷ್ಟು ಉಪ್ಪನ್ನು ಹೊಂದಿರುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಉಪ್ಪಿನ ಮಾಪಕದಲ್ಲಿ ಸೂಚಿಸಿರುವ ಪ್ರತಿಯೊಂದು ಡಿಗ್ರಿ, ಸಾಧಾರಣ ಶೇಕಡಾ ೦.೨೫ರಷ್ಟು ಉಪ್ಪಿಗೆ ಸಮವಾಗಿರುತ್ತದೆ. ಬಾಮೆ ಮಾನವು ಉಪ್ಪು ನೀರಿನಲ್ಲಿ ಇರುವ ಉಪ್ಪನ್ನು ನೇರವಾಗಿ ಸೂಚಿಸುತ್ತದೆ. ಬಾಮೆ ಮಾನದ ಒಂದು ಭಾಗ ಸಾಧಾರಣ ಉಪ್ಪಿನ ಮಾಪಕದ ೪ ಭಾಗಗಳಿಗೆ ಸಮವಾಗುತ್ತದೆ. ಉಪ್ಪಿನ ದ್ರಾವಣದಲ್ಲಿರುವ ಉಪ್ಪಿನ ಶೇಕಡಾಂಶಕ್ಕೂ ಮತ್ತು ಉಪ್ಪಿನ ಮಾಪಕದ ಭಾಗಗಳಿಗೂ ಇರುವ ಸಂಬಂಧವನ್ನು ಕೋಷ್ಠಕ ೬ರಲ್ಲಿ ಕೊಟ್ಟಿದೆ. ಕೆಲವು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಅಡಿಗೆ ಉಪ್ಪಿನ ದ್ರಾವಣಕ್ಕೆ ಬಣ್ಣ ಮತ್ತು ವಾಸನೆಯನ್ನು ಕೊಡುವುದುಂಟು.