) ಕಲ್ಲು ದುಂಡಿಗಳಿಂದ (ಗುಂಡುಕಲ್ಲುಗಳಿಂದ) ಬಸಿಗಾಲುವೆಗಳು: ನಿರ್ಧರಿಸಿದ ಆಳದವರೆಗೆ ಕಾಲುವೆಯನ್ನು ಅಗೆದು ತಳಭಾಗದ ಸುಮಾರು ೪೫ ಸೆಂ.ಮೀ.ನವರೆಗೆ ೨೦ ರಿಂದ ೨೫ ಸೆಂ.ಮೀ. ವ್ಯಾಸದ ಕಲ್ಲು ದುಂಡಿಗಳನ್ನು ಹಾಕಬೇಕು. ಈ ರೀತಿ ತುಂಬುವಾಗ ದೊಡ್ಡ ದುಂಡಿಗಳು ಕೆಳಗಿನ ಪದರಗಳಲ್ಲಿರುವಂತೆ ನೋಡಿಕೊಳ್ಳಬೇಕು. ದುಂಡಿಗಳ ಮೇಲೆ ನಿಧಾನವಾಗಿ ಕಳಿಯುವ ಸಾವಯವ ವಸ್ತುಗಳನ್ನು ಹಾಸಬೇಕು. ಕತ್ತಾಳೆಯ ಎಲೆಗಳು, ಮರದ ಬೆಳೆದ ಟೊಂಗೆಗಳು ಇತ್ಯಾದಿಗಳನ್ನು ಈ ಕೆಲಸಕ್ಕೆ ಬಳಸಬಹುದು.

ಕಲ್ಲು ದುಂಡಿಗಳ ಮಧ್ಯದಲ್ಲಿರುವ ಖಾಲಿ ಸ್ಥಳಗಳಲ್ಲಿ ನೀರು ಸಂಗ್ರಹಗೊಂಡು ಮುಂದೆ ಸಾಗುತ್ತದೆ. ಈ ಖಾಲಿಯಿರುವ ಸ್ಥಳಗಳಲ್ಲಿ ಮಣ್ಣು ಸಂಗ್ರಹಗೊಳ್ಳುತ್ತಾ ಕೆಲವು ವರ್ಷಗಳಲ್ಲಿ ಈ ಬಗೆಯ ಬಸಿಗಾಲುವೆಗಳು ನಿರುಪಯೋಗಿಯಾಗುತ್ತವೆ.

) ಕಲ್ಲು ಚಪ್ಪಡಿಯ ಬಸಿಗಾಲುವೆಗಳು: ಕಲ್ಲು ಚಪ್ಪಡಿಗಳನ್ನಾಗಲೀ ಯು.ಸಿ.ಆರ್ (unconsolidated rock) ಗಳನ್ನಾಗಲೀ ಬಳಸಿ ಕಾಲುವೆಯನ್ನು ನಿರ್ಮಿಸಬಹುದು. ಕಾಲುವೆಯ ಮೇಲ್ಭಾಗದಲ್ಲಿ ಕಲ್ಲನ್ನಿಟ್ಟು ಅದರ ಮೇಲೆ ಮಣ್ಣನ್ನು ಮುಚ್ಚಬಹುದು. ಕಾಲುವೆಗಳನ್ನು ಸರಿಯಾಗಿ ರಚಿಸಿದರೆ, ಇವು ಹಲವು ವರ್ಷಗಳವರೆಗೆ ಬಾಳುತ್ತವೆ.

) ಮಂಗಳೂರು ಹೆಂಚುಗಳ ಬಳಕೆ: ಅವಶ್ಯವಿರುವಷ್ಟು ಆಳದವರೆಗೆ ಕಾಲುವೆಯನ್ನು ತೋಡಬೇಕು. ಕಾಲುವೆಯ ತಳ(ಬುಡ)ದಲ್ಲಿ ಒಂದು ಮಂಗಳೂರು ಹಂಚನ್ನಿಟ್ಟು ಅದರ ಮೇಲೆ ಇನ್ನೆರಡು ಹಂಚುಗಳನ್ನು ಮೊದಲಿನ ಹಂಚಿನೊಡನೆ ತ್ರಿಕೋನಾಕಾರವಾಗುವಂತೆ ಇಡಬೇಕು. ಇದೇ ರೀತಿ ಹೆಂಚುಗಳನ್ನು ಇಡುತ್ತ ಸಾಗಿ ಮಣ್ಣನ್ನು ಮುಚ್ಚಬೇಕು. ಸರಿಯಾಗಿ ನಿರ್ಮಿಸಿದರೆ, ಈ ರೀತಿಯ ಬಸಿಗಾಲುವೆಯು ಹಲವು ವರ್ಷಗಳವರೆಗೆ ಕಾರ್ಯನಿರತವಾಗಿರುತ್ತದೆ.

) ಕೊಳವೆಗಳ ಬಳಕೆ: ವಿವಿಧ ಸಾಮಗ್ರಿಗಳನ್ನು ಉಪಯೋಗಿಸಿ ನಿರ್ಮಿಸಿದ ಕೊಳವೆಗಳನ್ನು ಬಳಸಿ ಹೆಚ್ಚಾದ ನೀರನ್ನು ಮಣ್ಣಿನಿಂದ ಹೊರ ತೆಗೆಯಬಹುದು. ಕೆಳಗೆ ತಿಳಿಸಿದ ಕೊಳವೆಗಳು ಬಳಕೆಯಲ್ಲಿವೆ.

i) ಪಿವಿಸಿ (p.v.c) ಕೊಳವೆಗಳು: ಈ ಕೊಳವೆಗಳು ಹಲವು ವರ್ಷಗಳವರೆಗೆ ಬಾಳುತ್ತವೆ. ಒಮ್ಮೆ ನೆಲದಲ್ಲಿ ಸರಿಯಾಗಿ ಸ್ಥಾಪಿತಗೊಂಡವೆಂದರೆ, ಶಾಶ್ವತವಾಗಿ, ತಮ್ಮ ಕಾರ್ಯವನ್ನು ಮಾಡುತ್ತವೆನ್ನಬಹುದು. ಆದರೆ, ಕೊಳವೆಗಳಿಗೆ ತಗಲುವ ಖರ್ಚು ಅಧಿಕ.

ii) ಸಿಮೆಂಟ್ ಕಾಂಕ್ರೀಟಿನ ಕೊಳವೆಗಳು: ಮಣ್ಣಿನಲ್ಲಿ, ಅದರಲ್ಲಿಯೂ ಆಮ್ಲ ಮತ್ತು ಲವಣಯುತ ಮಣ್ಣಿನಲ್ಲಿ ಇವು ಹೆಚ್ಚು ಕಾಲದವರೆಗೆ ಬಾಳುವುದಿಲ್ಲ.

iii) ಪಿಂಗಾಣಿಯ ಕೊಳವೆಗಳು: ಪಿಂಗಾಣಿಯ ಕೊಳವೆಗಳು ಹಲವು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಇವು ಮಣ್ಣಿನ ಕೊಳವೆಗಳಿಗಿಂತ ಭಾರವಾಗಿರುತ್ತವೆ. ಬೆಲೆಯೂ ಅಧಿಕ.

iv) ಮಣ್ಣಿನ ಸುಟ್ಟ ಕೊಳವೆಗಳು: ಸೂಕ್ತ ಮಣ್ಣಿನಿಂದ ತಯಾರಿಸಿ, ಸುಟ್ಟರೆ, ಹಲವು ದೃಷ್ಟಿಯಿಂದ, ಕೊಳವೆಗಳು ಅನುಕೂಲಕರ ಎನ್ನಬಹುದು. ಪಿ.ವಿ.ಸಿ. ಕೊಳವೆಗಳನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಕೊಳವೆಗಳಿಗಿಂತ ಹಗುರ, ಬೆಲೆಯೂ ಕಡಮೆ. ಅಲ್ಲದೇ ಹಲವು ವರ್ಷಗಳವರೆಗೆ ಕಾರ್ಯವನ್ನು ನಿರ್ವಹಿಸುತ್ತವೆ.

ಮೇಲೆ ಹೇಳಿದ ಎಲ್ಲ ಬಗೆಯ ಕೊಳವೆಗಳಿಗೂ ಕೆಳ ಭಾಗದಲ್ಲಿ ರಂಧ್ರಗಳಿರಬೇಕು. ರಂಧ್ರಗಳು ಗೋಲಾಕಾರದ ಇಲ್ಲವೇ ಚೌಕೋನ ಆಕಾರವಿರಬಹುದು.

ಭೂಗತ ಬಸಿಗಾಲುವೆಗಳ ವಿನ್ಯಾಸ (design) : ಭೂಗತ ಬಸಿಗಾಲುವೆಗಳನ್ನು ಒಂದಕ್ಕಿಂತ ಹೆಚ್ಚಿನ ರೀತಿಯಲ್ಲಿ ವಿನ್ಯಾಸಗೊಳಿಸಬಹುದು. ಭೂರಚನೆ, ಮಣ್ಣಿನ ಗುಣಧರ್ಮಗಳು ಮತ್ತು ಬೆಳೆಯ ಅವಶ್ಯಕತೆ ಇವುಗಳನ್ನು ಪರಿಗಣಿಸಿ ಅನುಸರಿಸಬೇಕಾದ ವಿನ್ಯಾಸವನ್ನು ನಿರ್ಧರಿಸಬೇಕು. ಈ ಸಂದರ್ಭದಲ್ಲಿ ಕೆಳಗಿನ ಸಾಮಾನ್ಯ ನಿಯಮಗಳು ಪ್ರಯೋಜನಕಾರಿಯಾಗಬಲ್ಲವು.

i) ನೈಸರ್ಗಿಕವಾಗಿ ನೀರು ಬಸಿದು ಹೋಗುವ ದಿಕ್ಕಿನಲ್ಲಿಯೇ ಪ್ರಮುಖ ಬಸಿಗಾಲುವೆಯು ಬರುವಂತೆ ಮಾಡಿದರೆ ಅನುಕೂಲ. ಆದರೆ, ಕೆಲವು ಸಂದರ್ಭಗಳಲ್ಲಿ, ಈ ದಿಕ್ಕಿಗೆ ಅಡ್ಡವಾಗುವಂತೆ ಪ್ರಮುಖ ಕಾಲುವೆಯನ್ನು ನಿರ್ಮಿಸಬೇಕಾಗಬಹುದು.

ii) ಅಡ್ಡ ಕಾಲುವೆಗಳನ್ನು, ಭೂಮಿಯ ಮುಖ್ಯ ಇಳಿಜಾರಿನ ದಿಕ್ಕಿನಲ್ಲಿ ಜೋಡಿಸಬೇಕು.

iii) ಸಾಧ್ಯವಿದ್ದಲ್ಲೆಲ್ಲ, ಅಡ್ಡ ಬಸಿಗಾಲುವೆಗಳನ್ನು ಆದಷ್ಟು ಉದ್ದವಾಗಿರುವಂತೆ ಮತ್ತು ಒಂದಕ್ಕೊಂದು ಸಮಾನವಾಗಿರುವಂತೆ ನೋಡಿಕೊಳ್ಳಬೇಕು.

iv) ಬಸಿಗಾಲುವೆಗಳು ಆದಷ್ಟು ಸರಳ ರೇಖೆಯಲ್ಲಿರುವುದು ಉತ್ತಮ. ಅನಿವಾರ್ಯವಾಗಿ ತಿರುವನ್ನು ಕೊಡಲೇಬೇಕಾದಾಗ ತಿರುವು ನಿಧಾನವಾಗಿರುವಂತೆ ನೋಡಿಕೊಳ್ಳಬೇಕು. ತಿರುವು ಕಾಟಕೋನ (೯೦ಕೋನ)ದಲ್ಲಿದ್ದರೆ, ನೀರಿನ ಸಹಜ ಹರಿವಿಗೆ ತಡೆಯುಂಟಾಗಿ ಆ ಭಾಗದಲ್ಲಿ ರೇವೆಯು ಸಂಗ್ರಹಗೊಳ್ಳಬಹುದು.

v) ತಿರುವುಗಳಲ್ಲಿ, ಬಸಿಗಾಲುವೆಗಳ ಎರಡು ಸಾಲುಗಳು ಸಂಧಿಸುವಲ್ಲಿ ಅಥವ ರೇವೆಯ ಸಂಗ್ರಹವಾಗುವ ಸಾಧ್ಯತೆಯಿರುವಲ್ಲಿ, ರೇವೆ ಸಂಗ್ರಹ ತಗ್ಗನ್ನು (silt trap) ನಿರ್ಮಿಸುವುದು ಉತ್ತಮ.

vi) ಬಸಿಗಾಲುವೆಗೆ ಒಂದೇ ಪ್ರಮಾಣದ ಇಳಿಜಾರಿರುವಂತೆ ನೋಡಿಕೊಳ್ಳುವುದು ಪ್ರಶಸ್ತ.

vii) ಕೊಳವೆಗಳ ಸಲುವಾಗಿ ನಿರ್ಮಿಸಬೇಕಾದ ಕಾಲುವೆಯನ್ನು ತುದಿಯ ಭಾಗದಿಂದ ಅಗೆಯುತ್ತ ಮೇಲ್ಭಾಗಕ್ಕೆ ಸಾಗಬೇಕು. ಅದರಂತೆಯೇ ಕೊಳವೆಗಳನ್ನು ಜೋಡಿಸುವ ಕಾರ್ಯವನ್ನು ಕೊನೆಯಿಂದಲೇ ಆರಂಭಿಸಬೇಕು.

viii) ಬಸಿಗಾಲುವೆಯ ಕೊನೆಯ ಸ್ವಲ್ಪ ಭಾಗವನ್ನು, ಸಿಮೆಂಟ್ ಕಾಂಕ್ರೀಟ್‌ನಿಂದ ಭದ್ರಪಡಿಸಬೇಕು. ಹೀಗೆ ಮಾಡುವುದರಿಂದ ಕೊಳವೆಗಳು ಸ್ಥಾನದಿಂದ ಕದಲುವುದಿಲ್ಲ.

ix) ಬಸಿಗಾಲುವೆಯ ಕೊನೆಯ ಕೊಳವೆಯ ತುದಿಗೆ ಜಾಳಿಗೆಯನ್ನು ಕೂಡಿಸಿ ಕಪ್ಪೆ, ಹಾವು, ಇಲಿ, ಹೆಗ್ಗಣ ಮುಂತಾದ ಪ್ರಾಣಿಗಳು ಒಳಸೇರದಂತೆ ಮಾಡಬೇಕು. ಜಾಳಿಗೆಯ ರಂಧ್ರಗಳು, ನೀರು ಸುಲಭವಾಗಿ ಹೊರ ಬರುವಷ್ಟು ದೊಡ್ಡವಿರಬೇಕು. ಆದರೆ, ಮೇಲೆ ಹೇಳಿದ ಪ್ರಾಣಿಗಳ ಪ್ರವೇಶವನ್ನು ತಡೆಯುವಷ್ಟು ಸಣ್ಣವಿರಬೇಕು.

ಕೊಳವೆಗಳನ್ನು ಜೋಡಿಸುವ ಕಾರ್ಯ

  • ಮೇಲೆ ಸೂಚಿಸಿದಂತೆ, ಕೊಳವೆಗಳನ್ನು ಕಾಲುವೆಯ ತುದಿಯಿಂದ ಜೋಡಿಸುತ್ತ ಮೇಲ್ಭಾಗಕ್ಕೆ ಬರಬೇಕು.
  • ಎರಡು ಕೊಳವೆಗಳನ್ನು ಜೋಡಿಸುವಾಗ, ಅವೆರಡರ ಮಧ್ಯದಲ್ಲಿ ಅರ್ಧ ಸೆಂ.ಮೀ. ಸ್ಥಳವನ್ನು ಬಿಡಬೇಕು.
  • ಎರಡು ಕೊಳವೆಗಳು ಸಂಧಿಸಿದಲ್ಲಿ, ನೀರನ್ನು ಸೋಸಿ ಕೊಳವೆಯೊಳಗೆ ಬಿಡುವ ವಸ್ತುಗಳನ್ನು ಬಳಸಬೇಕು. ಒಣ ಹುಲ್ಲು, ತೆಂಗಿನ ನಾರು, ಮರದ ಚೂರುಗಳು ಮುಂತಾದ ಸಾವಯವ ಪದಾರ್ಥಗಳನ್ನು ಉಪಯೋಗಿಸಬಹುದು. ಮಾನವ ನಿರ್ಮಿತ ಕಾಜಿನನಾರು, ಪ್ಲಾಸ್ಟಿಕ್ ನಾರು ಇತ್ಯಾದಿ ವಸ್ತುಗಳನ್ನು ಬಳಸಬಹುದು. ಆದರೆ, ಉರುಟು ಮರಳು ಮತ್ತು ಹರಳುಗಳು ಉತ್ತಮವೆಂದು ಕಂಡು ಬಂದಿದೆ. ಇವನ್ನುಕೊಳವೆಗಳ ಸುತ್ತಲೂ ಬರುವಂತೆ ಹಾಕಬೇಕು.

ಬಸಿಗಾಲುವೆಗಳನ್ನು ಜೋಡಿಸುವ ವಿವಿಧ ವಿನ್ಯಾಸಗಳು ಭೂ ರಚನೆ ಮತ್ತು ಇತರೆ ಕೆಲ ಸಂಗತಿಗಳ ಆಧಾರದ ಮೇಲೆ, ಸೂಕ್ತ ರೀತಿಯಲ್ಲಿ, ಕೊಳವೆಗಳ ವಿನ್ಯಾಸವನ್ನು ಮಾಡಬೇಕಾಗುತ್ತದೆ. ಕೆಲವು ಪ್ರಮುಖ ವಿನ್ಯಾಸಗಳನ್ನು ಚಿತ್ರ ೨೮ರಲ್ಲಿ ತೋರಿಸಲಾಗಿದೆ.

ಬಸಿಗಾಲುವೆಗಳ ಆಳ: ಬಸಿಕಾಲುವೆಗಳ ಆಳವನ್ನು ನಿರ್ಧರಿಸುವಾಗ ಕೆಳಗಿನ ಸಂಗತಿಗಳನ್ನು ಪರಿಗಣಿಸಬೇಕು.

i) ನೀರಿನ ಪಾತಳಿ : ಮಣ್ಣಿನಲ್ಲಿರುವ ನೀರಿನ ಪಾತಳಿಯನ್ನು ಎಷ್ಟು ಆಳಕ್ಕೆ ಒಯ್ಯಬೇಕೆಂಬುದನ್ನು ನಿರ್ಧರಿಸಿ, ಅದಕ್ಕನುಗುಣವಾಗಿ ಬಸಿಗಾಲುವೆಗಳ ಆಳವನ್ನು ಇಡಬೇಕು.

ii) ಬೆಳೆಯ ಬೇರುಗಳ ಆಳ: ಬೆಳೆಯ ಬೇರುಗಳು ಹೆಚ್ಚು ಆಳಕ್ಕೆ ಹೋಗುವಂತಿದ್ದರೆ, ಬಸಿಗಾಲುವೆಗಳ ಆಳವನ್ನು ಹೆಚ್ಚಿಸಬೇಕು. ಕಡಮೆ ಆಳದ ಬೇರಿರುವ ಬೆಳೆಗಳಾದರೆ, ಬಸಿಗಾಲುವೆಗಳ ಆಳವನ್ನು ೮೦ ರಿಂದ ೯೦ ಸೆಂ.ಮೀ. ಇಟ್ಟರೂ ಸಾಕಾಗುತ್ತದೆ.

iii) ಮಣ್ಣಿನ ಗುಣ ಧರ್ಮಗಳು: ಹೆಚ್ಚಾದ ನೀರನ್ನು ಸುಲಭವಾಗಿ ಮತ್ತು ಆಳಕ್ಕೆ ಬಸಿಯಲು ಬಿಡುವಂತಹ ಮರಳು ಮಣ್ಣಿನಲ್ಲಿ ೧೨೦ ಸೆಂ.ಮೀ. ಅಥವಾ ಅದಕ್ಕಿಂತ ಆಳದಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಬಹುದು. ಆದರೆ, ನೀರು ನಿಧಾನವಾಗಿ ಬಸಿಯುವ ಮತ್ತು ಹೆಚ್ಚು ಆಳಕ್ಕೆ ನೀರನ್ನು ಬಸಿಯಲು ಬಿಡದ ಜಿಗುಟು ಎರೆ ಮಣ್ಣಿನಲ್ಲಿರುವ ಬಸಿಗಾಲುವೆಗಳನ್ನು ಬಹಳ ಆಳದಲ್ಲಿಟ್ಟರೆ, ಮೇಲ್ಭಾಗದಿಂದ ಬಸಿದು ಬಂದ ನೀರು ಕಾಲುವೆಗಳನ್ನು ತಲುಪುವುದಿಲ್ಲ. ಹೀಗಾಗಿ ಬಸಿಗಾಲುವೆಗಳಿಂದ ನಿರೀಕ್ಷಿತ ಫಲವೂ ದೊರೆಯುವುದಿಲ್ಲ. ಇಂತಹ ಮಣ್ಣಿನಲ್ಲಿ, ಬಸಿಗಾಲುವೆಗಳನ್ನು ೮೦ ರಿಂದ ೯೦ ಸೆಂ.ಮೀ. ಆಳದವರೆಗಿಡುವುದು ಅನಿವಾರ್ಯ.

iv) ನೀರು ಹೊರ ಬೀಳುವ ಸ್ಥಳ: ಬಸಿಗಾಲುವೆಗಳಿಂದ ಹರಿದು ಬಂದ ನೀರು ಹೊರ ಬೀಳುವ ಸ್ಥಳವು, ಬಸಿಗಾಲುವೆಗಳ ಆಳಕ್ಕಿಂತ ಹೆಚ್ಚಿನ ಆಳದಲ್ಲಿ ಇರಬೇಕಾಗುತ್ತದೆ. ಇದು ಸಾಧ್ಯವಿರದ ಸಂದರ್ಭದಗಳಲ್ಲಿ ಬಸಿಗಾಲುವೆಗಳ ಆಳವನ್ನೇ ಕಡಮೆ ಮಾಡುವ ಅನಿವಾರ್ಯತೆಯುಂಟಾಗುತ್ತದೆ.

ಬಸಿಗಾಲುವೆಗಳ ಮಧ್ಯದ ಅಂತರ : ಮಣ್ಣಿನಲ್ಲಿರುವ ಗುಣಧರ್ಮಗಳಿಗೂ, ಎರಡು ಬಸಿಗಾಲುವೆಗಳ ಮಧ್ಯದಲ್ಲಿರುವ ಅಂತರಕ್ಕೂ ಸಂಬಂಧವಿದೆ. ನೀರು ಸುಲಭವಾಗಿ ಬಸಿಯುವ ಮರಳು ಮಣ್ಣಿನಲ್ಲಿ, ಬಸಿಗಾಲುವೆಗಳನ್ನು ಹೆಚ್ಚು ಅಂತರದಲ್ಲಿ ಜೋಡಿಸಬಹುದು. ಆದರೆ, ನೀರು ನಿಧಾನವಾಗಿ ಚಲಿಸುವ ಜಿಗುಟು ಎರೆಮಣ್ಣಿನಲ್ಲಿ, ಬಸಿಗಾಲುವೆಗಳು ತುಲನಾತ್ಮಕವಾಗಿ ಕಡಮೆ ಅಂತರದಲ್ಲಿರಬೇಕಾಗುತ್ತವೆ.

ಬಸಿಗಾಲುವೆಗಳ ಆಳಕ್ಕೂ ಮತ್ತು ಅವುಗಳ ನಡುವಿನ ಅಂತರಕ್ಕೂ ಸಂಬಂಧವಿದೆ ಎಂಬುದನ್ನು ಗಮನಿಸಬೇಕು. ಬಸಿಗಾಲುವೆಗಳ ಆಳ ಮತ್ತು ಅಂತರ ಇವುಗಳನ್ನು ನಿರ್ಧರಿಸುವಾಗ ಕೆಳಗಿನ ಸಲಹೆಗಳು ಪ್ರಯೋಜನಕಾರಿ ಎನಿಸುತ್ತವೆ (ಕೋಷ್ಟಕ ೧೭).

ಕೋಷ್ಟಕ ೧೭ : ವಿವಿಧ ಮಣ್ಣುಗಳಲ್ಲಿ ಬಸಿಗಾಲುವೆಗಳನ್ನು ನಿರ್ಮಿಸುವಾಗ ಅನುಸರಿಸಬೇಕಾದ ಆಳ ಮತ್ತು ಅಂತರ.

ಅ. ಸ.

ಮಣ್ಣಿನ ಮಾದರಿ

ಬಸಿಗಾಲುವೆಯ

ಆಳ (ಮೀ.ಗಳು)

ಅಂತರ (ಮೀ.ಗಳು)

೧. ಮರಳು ಮಣ್ಣು ೧.೨೫-೧.೪ ೩೦-೭೦
೨. ರೇವೆ ಮಣ್ಣು ೧.೦-೧, ೨೫ ೧೮-೩೦
೩. ಜಿಗುಟು ಎರೆ ಮತ್ತು ಎರೆ ಗೋಡು ೦.೭೫-೧.೦ ೧೨.೨೦

ಲಂಬ ಬಸಿಗಾಲುವೆಗಳು (Vertical drains) : ಇಲ್ಲಿಯವರೆಗೆ ವಿವರಿಸಿದ ಬಸಿಗಾಲುವೆಗಳು ಕೆಳಗೆ ಸೂಚಿಸಿದ ಸಂದರ್ಭಗಳಲ್ಲಿ ಅಸಾಧ್ಯವೆನಿಸಬಹುದು ಇಲ್ಲವೇ ಪ್ರಯೋಜನಕಾರಿಯಾಗದಿರಬಹುದು.

i) ಭೂ ಪ್ರದೇಶವು ಸಪಾಟಾಗಿದ್ದು, ಬಸಿದ ನೀರು ಹೊರ ಹರಿಯಲು ಸಾಧ್ಯವಾಗದಿದ್ದಾಗ.

ii) ಭೂ ಪ್ರದೇಶವು ಇತರರಿಗೆ ಸೇರಿದ ಭೂಮಿಯಿಂದ ಆವೃತವಾಗಿದ್ದು, ಬಸಿಗಾಲುವೆಯ ನೀರನ್ನು ಹೊರ ಹರಿಯಲು ಆ ಭೂಮಿಯ ಮಾಲಿಕರಿಂದ ಸಹಕಾರವು ದೊರೆಯದಿದ್ದಾಗ

iii) ಬಸಿಗಾಲುವೆಯ ನೀರಿನಲ್ಲಿ ಲವಣಗಳ ಪ್ರಮಾಣವು ಅತಿ ಕಡಿಮೆಯಿದ್ದು, ಆ ನೀರನ್ನು ನೀರಾವರಿಗೆಂದು ಬಳಸಲು ಸಾಧ್ಯವಿದ್ದಾಗ.

iv) ನೀರಿನ ಪಾತಳಿಯನ್ನು ಎರಡು ಮೀ.ಗಳಿಗಿಂತ ಕೆಳಗೆ ಇಳಿಸಬೇಕಾದ ಪ್ರಸಂಗವಿದ್ದಾಗ.

v) ಭೂ ಪ್ರದೇಶವು ತಗ್ಗು ದಿಣ್ಣೆಗಳಿಂದ ಕೂಡಿರುವಾಗ.

ಮೇಲೆ ಹೇಳಿ ಪ್ರಸಂಗಗಳಲ್ಲಿ ಲಂಬ ಬಸಿಗಾಲುವೆಗಳನ್ನು ನಿರ್ಮಿಸುವುದು ಹೆಚ್ಚು ಪ್ರಯೋಜನಕಾರಿ ಎನಿಸುತ್ತದೆ.

ಲಂಬ ಬಸಿಗಾಲುವೆಗಳು ಮತ್ತು ಅವುಗಳಿಂದಾಗುವ ಅನುಕೂಲತೆಗಳು: ಭೂಮಿಗೆ ಸಮಾನಾಂತರವಾಗಿ ಬಸಿಗಾಲುವೆಗಳನ್ನು ರಚಿಸುವ ಬದಲು, ಭೂಮಿಗೆ ಲಂಬವಾಗಿ ನಿರ್ಮಿಸಿದ ಬಾವಿ ಇಲ್ಲವೇ ಕೊಳವೆ ಬಾವಿಗಳಿಗೆ ಲಂಬ ಬಸಿಗಾಲುವೆಗಳೆಂಬ ಹೆಸರಿದೆ. ಇವು ಭೂಮಿಯ ಜಲಪಾತಳಿಯನ್ನು ತಗ್ಗಿಸುತ್ತವೆಯಲ್ಲದೇ ಇವುಗಳಿಂದ ದೊರೆತ ಜಲವು ಉತ್ತಮ ಗುಣಮಟ್ಟದ್ದಾಗಿದ್ದರೆ, ಈ ಜಲವನ್ನು ನೀರಾವರಿಗೆಂದು ಉಪಯೋಗಿಸಬಹುದು.

ಲಂಬ ಬಸಿಗಾಲುವೆಗಳ ನಿರ್ಮಾಣಕ್ಕೆ ಬಹುತೇಕ ಸಂದರ್ಭಗಳಲ್ಲಿ ಅಧಿಕ ಹಣವು ವ್ಯಯವಾಗುತ್ತದೆಯಾದರೂ ಅವುಗಳಿಂದ ಮುಂದಿನ ಪ್ರಯೋಜನಗಳಿವೆ.

i) ಲಂಬ ಬಸಿಗಾಲುವೆಗಳಿಂದ ನೀರಿನ ಮಟ್ಟವನ್ನು ತುಲನಾತ್ಮಕವಾಗಿ, ಹೆಚ್ಚು ಆಳಕ್ಕೆ ತಗ್ಗಿಸಬಹುದು.

ii) ತೆರೆದ ಬಸಿಗಾಲುವೆಯೊಡನೆ ತುಲನೆ ಮಾಡಿದರೆ ಈ ಪದ್ದತಿಯ ಬಸಿಗಾಲುವೆಗಳಿಗೆ ಕಡಮೆ ಭೂ ಪ್ರದೇಶವು ಸಾಕಾಗುವುದರಿಂದ ಹೆಚ್ಚು ಭೂಮಿಯ ಬೇಸಾಯಕ್ಕೆ ದೊರೆಯುತ್ತದೆ.

iii) ಸಂಯುಕ್ತ ನೀರಾವರಿ ವಿಧಾನವನ್ನು ಅನುಸರಿಸಲು ಈ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ.

iv) ಸಂರಕ್ಷಣಾ ವೆಚ್ಚವು ತೆರೆದ ಬಸಿಗಾಲುವೆಗಳಿಗಿಂತ ಕಡಮೆ.

ಲಂಬ ಬಸಿಗಾಲುವೆಗಳ ಪ್ರಕಾರಗಳು: ಲಂಬ ಬಸಿಗಾಲುವೆಗಳನ್ನು ಮುಂದಿನಂತೆ ನಾಲ್ಕು ಪ್ರಕಾರಗಳಾಗಿ ವಿಂಗಡಿಸಬಹುದು.

i) ಕ್ರಮ ಬದ್ಧ ಬಸಿಗಾಲುವೆಗಳು: ಸಂಬಂಧಿಸಿದ ಪ್ರದೇಶದೆಲ್ಲೆಡೆ, ಒಂದು ವ್ಯವಸ್ಥಿತ ರೀತಿಯಲ್ಲಿ, ಬಾವಿಗಳನ್ನು ತೆಗೆಸಲಾಗುತ್ತದೆ. ಇವುಗಳನ್ನು ತೆಗೆಸುವಾಗ ಮುಂದಿನ ಸಂಗತಿಗಳನ್ನು ಪರಿಗಣಿಸಲಾಗುತ್ತದೆ.

  • ಬಾವಿಯಿಂದ ಸ್ಥಳಕ್ಕೆ ಹೋಗಿ ಬರಲು ಮತ್ತು ಅದನ್ನು ಸುಸ್ಥಿತಿಯಲ್ಲಿಡಲು ಇರುವ ಅನುಕೂಲತೆಗಳು.
  • ಬಾವಿಯಲ್ಲಿ ಸಂಗ್ರಹಗೊಂಡ ನೀರನ್ನು ಹೊರಗೆ ತೆಗೆಯಲು ಅಥವ ನೀರಾವರಿಗೆಂದು ಬಳಸಲು ಇರುವ ಅನುಕೂಲತೆಗಳು.

ii)         ಆರಿಸಿದ ಸ್ಥಳದಲ್ಲಿ ನಿರ್ಮಿಸಿದ ಬಸಿಗಾಲುವೆಗಳು: ಬೇಸಾಯಕ್ಕೆ ಕಡಮೆ ಪ್ರಯೋಜನಕಾರಿ ಎನಿಸಿದ ಭೂಮಿಯಲ್ಲಿ ಈ ಪ್ರಕಾರದ ಬಸಿಗಾಲುವೆಗಳನ್ನು ನಿರ್ಮಿಸಲಾಗುತ್ತದೆ. ತಗ್ಗು ಪ್ರದೇಶಗಳ ಇಲ್ಲವೇ ಲವಣಗಳ ಸಂಗ್ರಹವಾಗಿರುವ ಸ್ಥಳಗಳಲ್ಲಿ ನಿರ್ಮಿಸಿದ ಲಂಬ ಬಸಿಗಾಲುವೆಗಳು ಈ ಪ್ರಕಾರದ ಉದಾಹರಣೆಗಳೆನ್ನಬಹುದು.

iii)        ಮುಖ್ಯವಾಹಿನಿಯನ್ನು ಛೇದಿಸುವ (ಸೀಳುಮಾಡುವ) ಬಸಿಗಾಲುವೆಗಳು: ಬಸಿದು ಬರುವ ನೀರಿನ ಮುಖ್ಯವಾಹಿನಿಯನ್ನು ಪೂರ್ತಿಯಾಗಿ ಇಲ್ಲವೇ ಭಾಗಶಃ ಛೇದಿಸುವಂತೆ, ನಿರ್ಮಿಸಲಾದ ಬಸಿಗಾಲುವೆಗಳು ಈ ಗುಂಪಿಗೆ ಸೇರಿವೆ.

iv)        ದಂಡೆಗುಂಟ ನಿರ್ಮಿಸಿದ ಬಸಿಗಾಲುವೆಗಳು: ನದಿಯ ದಂಡೆ ಗುಂಟ ಇಲ್ಲವೇ ಆಣೆಕಟ್ಟುಗಳ ಸುತ್ತಲಿನ ಪ್ರದೇಶಗಳಲ್ಲಿ, ಹಲವು ಬಾವಿಗಳನ್ನು ತೆಗೆಸುವುದರಿಂದ, ಜಲ ಸಂಗ್ರಹದಿಂದ ಬಸಿದು ಬರುವ ನೀರನ್ನು ತಡೆದು, ಸುತ್ತಲಿರುವ ಭೂಮಿಯು ಜೌಗಾಗದಂತೆ ಮಾಡಬಹುದು.

ಲಂಬದ ಬಸಿಗಾಲುವೆಗಳಿಗೆ ಇರಬೇಕಾದ ಕೆಲವು ಅವಶ್ಯಕತೆಗಳು: ತೆರೆದ ಬಾವಿಗಳನ್ನು ಆಳದವರೆಗೆ ಅಗೆದಾಗ ಅಥವಾ ಕೊಳವೆ ಬಾವಿಗಳನ್ನು ನಿರ್ಮಿಸಿದಾಗ ಅವುಗಳಲ್ಲಿ ಸಂಗ್ರಹವಾದ ನೀರನ್ನು ಮೇಲೆತ್ತಲು ವಿದ್ಯುತ್, ಡೀಸೆಲ್ ಇಲ್ಲವೇ ಸೌರ ಶಕ್ತಿಯಿಂದ ನಡೆಯುವ ಯಂತ್ರಗಳು ಬೇಕಾಗುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ, ಭಾವಿಯ ಆಳವು ಕಡಮೆ ಇದ್ದಾಗ (ಉದಾಹರಣೆಗೆ ೪-೫ ಮೀಟರುಗಳು) ಕೈ ಪಂಪುಗಳಿಂದಲೇ ನೀರನ್ನು ಮೇಲೆ ತೆಗೆಯಬಹುದು.

ಜೈವಿಕ ಬಸಿಗಾಲುವೆಗಳು: ತೆರೆದ ಅಥವಾ ಭೂಗತ ಬಸಿಗಾಲುವೆಗಳನ್ನು ನಿರ್ಮಿಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ, ವೇಗದಿಂದ ಬೆಳೆಯುವ ಕೆಲವು ಜಾತಿಯ ಮರಗಳನ್ನು ಬೆಳೆಸಿ, ಹೆಚ್ಚಾಗ ನೀರನ್ನು ನಿವಾರಿಸಲು ಸಾಧ್ಯವಿದೆ. ಉದಾಹರಣೆಗೆ ಕೆಲವು ತಳಿಗೆ ಸೇರಿದ ನೀಲಗಿರಿ ಮರಗಳು ಈ ಕೆಲಸವನ್ನು ಬಹು ಸಮರ್ಥವಾಗಿ ನೆರವೇರಿಸಬಲ್ಲವೆಂದು ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇದೆ.

ಬಸಿಗಾಲುವೆಗಳಿಂದ ಹೊರ ಬಂದ ನೀರಿನ ನಿರ್ವಹಣೆ: ಬಸಿಗಾಲುವೆಗಳಿಂದ ಹೊರ ಬಂದ ನೀರನ್ನು ಕೆಳಗಿನಂತೆ ನಿರ್ವಹಿಸಬಹುದು.

ನೀರಾವರಿಗೆ ಬಳಕೆ: ಮಳೆಗಾಲದಲ್ಲಿ ಬಸಿಗಾಲುವೆಗಳಿಂದ ಹೊರ ಹರಿದ ನೀರು ಸಾಮಾನ್ಯವಾಗಿ ನೀರಾವರಿಗೆ ಸೂಕ್ತವೆನಿಸುತ್ತದೆ. ಇಂತಹ ನೀರನ್ನು ಹೆಚ್ಚು ನೀರಿನ ಅವಶ್ಯಕತೆ ಇರುವ ಬತ್ತದಂತಹ ಬೆಳೆಗೆ ಉಪಯೋಗಿಸಬಹುದು. ಮಳೆಗಾಲದ ನಂತರ ಹೊರ ಹರಿದ ನೀರನ್ನು ಪರೀಕ್ಷಿಸಿ, ಜಲವು ಸೂಕ್ತವೆನಿಸಿದರೆ. ನೀರಾವರಿಗೆ ಬಳಸಬಹುದು. ನೀರಿನಲ್ಲಿ ಲವಣಗಳು ಮಧ್ಯಮ ಪ್ರಮಾಣದಲ್ಲಿದ್ದರೆ, ಸಾಧ್ಯವಿದ್ದಲ್ಲಿ ಉತ್ತಮ ಗುಣಮಟ್ಟದ ನೀರಿನೊಡನೆ ಮಿಶ್ರ ಮಾಡಿ ನೀರಾವರಿಗೆ ಉಪಯೋಗಿಸಬಹುದು.

ನೈಸರ್ಗಿಕ ಬಸಿಗಾಲುವೆಗಳಿಗೆ ಜೋಡಣೆ: ಬಸಿಗಾಲುವೆಗಳಿಂದ ಹೊರ ಹರಿದ ನೀರು, ನೀರಾವರಿಗೆ ಅವಶ್ಯವೆನಿಸದಿದ್ದಲ್ಲಿ ಅಥವಾ ನೀರಿನ ಗುಣಮಟ್ಟವು ನೀರಾವರಿಗೆ ಸೂಕ್ತವೆನಿಸದಿದ್ದಾಗ, ನೀರನ್ನು ಭೂ ಪ್ರದೇಶದಿಂದ ಹೊರಗೆ ಹರಿದು ಹೋಗುವಂತೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ, ಈ ನೀರು ಗುರುತ್ವಾಕರ್ಷಣೆಯಿಂದ ಇಳಜಾರಿನವರೆಗೆ ಹರಿದು ಭೂ ಪ್ರದೇಶದ ಹೊರಗೆ ಹೋಗುತ್ತದೆ. ಆದರೆ, ಭೂಮಿಯು ಬಟ್ಟಲಿನ ಆಕಾರವಿರುವಾಗ, ನೀರು ಸ್ವಾಭಾವಿಕವಾಗಿ, ಹರಿದು ಹೊರಗೆ ಹೋಗಲಾರದು. ಅಂಥ ಪ್ರಸಂಗಗಳಲ್ಲಿ, ನೀರನ್ನು ಯಂತ್ರದ ಸಹಾಯದಿಂದ ಮೇಲೆತ್ತಿ ಹೊರಗಡೆ ಹರಿಯುವಂತೆ ಮಾಡಬೇಕಾಗುತ್ತದೆ.

ಆವಿಯ ತೊಟ್ಟಿಯ ಬಳಕೆ: ಕೆಲವು ಸಂದರ್ಭಗಳಲ್ಲಿ, ಬಸಿಗಾಲುವೆಯಿಂದ ಹೊರ ಹರಿದ ನೀರು ಬೇಸಾಯಕ್ಕೆ ಉಪಯೋಗವಾಗದಿದ್ದಾಗ ಇತರೆ ಕೆಲಸಗಳಿಗೆ ನಿರುಪಯೋಗವೆನಿಸದ ತಗ್ಗುಗಳಲ್ಲಿ ಸಂಗ್ರಹ ಮಾಡಿ, ನೀರನ್ನು ಆವಿಯಾಗಲು ಬಿಡಬೇಕು. ಇಂಥ ತಗ್ಗುಗಳ ಮತ್ತು ಅವು ಇರುವ ಪ್ರದೇಶಗಳ ಗುಣಧರ್ಮಗಳು ಮುಂದಿನಂತೆ ಇರಬೇಕಾಗುತ್ತದೆ.

i) ಸಂಬಂಧಿಸಿದ ಪ್ರದೇಶಗಳಲ್ಲಿ, ನೀರು ವೇಗದಿಂದ ಆವಿಯಾಗುವ ಹವಾಮಾನವಿರಬೇಕು.

ii) ಸ್ಥಳವು ಅತಿ ತಗ್ಗಿನಲ್ಲಿರಬೇಕು ಮತ್ತು ಆ ಭೂಮಿಯನ್ನು ಬೇಸಾಯಕ್ಕೆಂದು ಬಳಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿರಬೇಕು.

iii) ತಗ್ಗು, ವಿಶಾಲವೂ ಆಳವು ಕಡಮೆಯೂ ಇರಬೇಕು.

iv) ಬಸಿಗಾಲುವೆಯ ನೀರು, ಸುಲಭವಾಗಿ ಹರಿದು ಹೋಗಿ ಆ ಸ್ಥಳವನ್ನು ತಲುಪುವಷ್ಟು ಕೆಳಭಾಗದಲ್ಲಿರಬೇಕು.

v) ಆ ಸ್ಥಳದಲ್ಲಿ ಸಂಗ್ರಹಿಸಿದ ನೀರು, ಅಲ್ಲಿಯೇ ಆವಿಯಾಗಿ ವ್ಯಯವಾಗುವಂತಿರಬೇಕು. ಪಕ್ಕದ ಭೂಮಿಗೆ ಬಸಿದು ಅಥವಾ ಹರಿದು ಹೋಗುವಂತಿರಬಾರದು. ಶುಷ್ಕ ಪ್ರದೇಶಗಳಲ್ಲಿ, ಬಸಿಗಾಲುವೆಯ ನೀರನ್ನು ಈ ರೀತಿ ನಿರ್ವಹಿಸಲು ಸಾಧ್ಯವಿದೆ.

ಮೀನುಗಾರಿಕೆ: ಲವಣಯುತ ನೀರಿನಲ್ಲಿ ಸೂಕ್ತತಳಿಯ ಮೀನು ಮತ್ತು ಸೀಗಡಿ ಮೀನುಗಳನ್ನು ಸಾಕಬಹುದು. ಹೀಗೆ ಮಾಡುವಾಗ, ಈ ಪ್ರಾಣಿಗಳಗೆ ಅವಶ್ಯವಿರುಷ್ಟು ನೀರು, ಹೊಂಡದಲ್ಲಿ ಸದಾ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ, ಲವಣದ ಪ್ರಮಾಣವು ಮಿತಿ ಮೀರದಂತೆ, ಆಗಾಗ ಶುದ್ಧ ನೀರನ್ನು ಮಿಶ್ರ ಮಾಡುತ್ತಿರಬೇಕು.

��;�a>h��@�ng=KN style=’font-size:12.0pt;font-family:”Times New Roman”,”serif”; color:black’> ಕೊಳವೆಯಾಕಾರದ ಕಾಲುವೆಯು ನಿರ್ಮಾಣಗೊಳ್ಳುತ್ತದೆ. ಆ ಪ್ರದೇಶದ ವಿವಿಧ ಭಾಗಗಳಿಂದ ಬಸಿದು ಬಂದ ನೀರು ಈ ಕಾಲುವೆಯಲ್ಲಿ ಸಂಗ್ರಹಗೊಂಡು ಹೊರಗೆ ಹರಿಯುತ್ತದೆ.

ಮೋಲ್ ಬಸಿಗಾಲುವೆಯು ಎರೆಮಣ್ಣು ಅಥವಾ ಎರೆಮಿಶ್ರಿತ ಗೋಡು ಮಣ್ಣುಗಳಲ್ಲಿ ಮಾತ್ರ ಪ್ರಯೋಜನಕಾರಿ ಎನಿಸಿದೆ. ಮರಳಿನ ಪ್ರಾಬಲ್ಯವಿರುವ ಮಣ್ಣಿನಲ್ಲಿ ಇಂತಹ ಕಾಲುವೆಗಳನ್ನು ನಿರ್ಮಿಸಿದರೆ, ಅವು ಸ್ಥಿರವಾಗಿರದೆ ಬಹು ಬೇಗನೆ ಕುಸಿಯುತ್ತವೆ. ಆದ್ದರಿಂದ ಮರಳು ಮಣ್ಣಿನಲ್ಲಿ, ಮೋಲ್ ಬಸಿಗಾಲುವೆಗಳು ನಿಷ್ಪ್ರಯೋಜಕವೆನಿಸಿವೆ. ಅದರಂತೆಯೇ ಮೋಲ್ ಬಸಿಗಾಲುವೆಗಳನ್ನು ಸುಮಾರು ೯೦ ಸೆಂ.ಮೀ. ಆಳದವರೆಗೆ ಮಾತ್ರ ನಿರ್ಮಿಸಲು ಸಾಧ್ಯ. ಇದಕ್ಕೂ ಹೆಚ್ಚು ಆಳದಲ್ಲಿ ಈ ಬಸಿಗಾಲುವೆಗಳನ್ನು ನಿರ್ಮಾಣ ಮಾಡುವುದು ಕಷ್ಟಕರ.