ಕರುಣದಿಂದ ಕಾಯ್ಬೇಕ ಮಾದೇವಿ
ನೀನು ಕರುಣದಿಂದ ಕಾಯ ಮಾದೇವಿ ಪಲ್ಲ
ನಿನ್ನ ಏಳುಕೊಳ್ಳ ನೋಡಿ ನೆನೆದೆ ಮಾದೇವಿ
ನಿನ್ನ ಸುತ್ತಮುತ್ತ ಗಚ್ಚಿನಗುಡಿಯ ಮಾದೇವಿ ೧
ನಿನ್ನ ಗುಡಿಯ ಮ್ಯಾಲ ಬಂಗಾರ ಕಳಸ ಮಾದೇವಿ
ನಿನ್ನ ಗುಡಿಯ ಒಳಗ ದೀಪದ ಬೆಳಕ ಮಾದೇವಿ ೨
ನಿನ್ನ ಜಳಕವ ಎಣ್ಣೀಗೊಂಡ ಮಾದೇವಿ
ನಿನ್ನ ಉಡುಸೀರಿ ಜರತಾರಿ ಮಾದೇವಿ ೩
ನಿನ್ನ ತೊಡು ಕುಬಸ ಮಲ್ಲಿಗಿ ಹೂವ ಮಾದೇವಿ
ನಿನ್ನ ತಲಿಯ ಮ್ಯಾಲ ಮುತ್ತಿನ ದಂಡಿ ಮಾದೇವಿ ೪
ನಿನ್ನ ಹಣಿಯ ಮ್ಯಾಲ ಭಂಡಾರ ಬಟ್ಟ ಮಾದೇವಿ
ನಿನ್ನ ಮೂಗಿನಲ್ಲೆ ಬಂಗಾರ ನತ್ತ ಮಾದೇವಿ ೫
ನಿನ್ನ ಕುಂದ್ರು ಸದರ ಬೆಳ್ಳಿ ಮಂಚ ಮಾದೇವಿ
ನಿನ್ನ ಎಡಬಲಕ ಪೂಜೇರು ಮಾದೇವಿ ೬
ನಿನಗ ಹಾಲು ಹಣ್ಣು ನೈವೇದ್ಯ ಮಾದೇವಿ
ನಿನಗ ಹಾಲು ಹಣ್ಣು ನೈವೇದ್ಯ ಮಾದೇವಿ ೭
Leave A Comment