೧ಸಿಂಬೀ ಹಾಕಿದಾs ಬಳ್ಳಿಯಾ ತಡುದಿದಾs
ಕೇರಿಯ ಮೇನೇss ಹೊರಟೀದಾ || ಊರ ಪೋರಾs
ಬೆಳ್ಳೀಯಾ ಬೆತ್ತಾss ಹಿಡುದೀದಾ ||
ದೊಡ್ಡವರಾ ಮನಿಯೇs ಹಿಡುದೀದಾ ||
“ಯಾರಪ್ಪಾ ನೀನೂ ? ಯಾವೂರು ಆಯಿತ್ಹೇಳುs
ನಮ್ಮನಿ ಆಳಾಗೀs ವಳಿವ್ಯೇನೂ ?’ |
“ಕೆಲಸಾನಾ ಕೇಳುತೇs ಬಂದಿದೇ ಈಗಲೇ
ನಿಮ್ಮನಿ ಆಳಾಗೀs ದುಡಿವೆನೆs’ |
ಅಂತಾ ಮಾತು ಕೇಳೀs ಸಂತೋಸೂ ಪಡುದಾರೂ
ಕೀಲಿಯ ಬೀಗಾs ಕೊಡುವರೂ ||
ಕೀಲಿಯ ಬೀಗಾs ಕೈಯಲ್ಲಿ ಬೇಡಿಕೊಂಡಾs
ವಳುಗಲು ಕೋಣೆಗೇ ನೆಡವನೂ || ಊರ ಪೋರಾ
೩ತಜುರಿಯಾs ಬೀಗಾs ಮುರಿದೀದಾs || ಊರ ಪೋರಾ
ಹೊನ್ನಲು ಬಂಗಾರವೇs ತಗದೀದಾs || ಊರ ಪೋರಾ
ಹಿಂತಿರುಗೀ ಮನಿಗೇs ಬರುವನೂ || ಬರುವಟ್ಟಾ ಹೊತ್ತಿಗೇ
ಕಯ್ಯಾಗೂ ಬೇಡಿಯೇs ಹಿಡವರೂ ||
“ಯಾರು ಮನಿಗ್ಹೊಗುಲೆಲ್ಲಾs ಯಾವ ಕಳೂ ಮಾಡಲೆಲ್ಲಾs
೪ಸೊಂಟಿಗೇ ಬೇಡೀss ಇಡಬೇಡೀ ||
ಸೊಂಟಿಗುವಾs ಬೇಡೀs ಲಟ್ಟದುಂಟಾsದರೇs
೫ಚೆಂಡಿಯಲ್ಹಾರಿಸುವೇs ಆರೂಗಳಿಗೇs ||
ಚಂದಕೂ ಚಾಕು ಕೊಟ್ಟ ಬೆನ್ನಿಗೂ ಬೇಡಿ ಹಿಡಿದಾ ||
ವಂದಾಳಾ ರಾಗಿಯಾs (ಯೇ) ಕರುಕಂಡಾs || ಕರುಕಂಡೀ ಬರವಾಗೂ

ಸೊಂಟೀಗಿದು ಚಾಕೂss ತಗದೀದಾs || ತಗುದೀ ಯೇ ನಂಬೂವ ?
“ಕಯ್ಯನು ವಾಚೂss ಕೊಡು ಬೇಗಾss ||’
೧ವಾಚಿನ ಕೇಳುವಾಗೇs ಪಿಸ್ತೂಲೂ ನೆಗುವಾಗೇ
ಕತ್ತೀ ತೆಗದ ಹಾರುಸಿದಾs ಲರುಗಳಿಗೇ ||
ಊರ ಪೋರನಾss ಹುಡುಕುತೀ ಬರುವಾಗೂs
ದೊರಗೊಳು ಮನಿಯಲ್ಲೀs ಇರುಲಿಲ್ಲಾ ಸುದ್ದಿ ಕೇಳೀ
೨ಜೀಪೂ ಕಾರೆಲ್ಲಾs ಹೊರಡೂರೂ || ಹೊರಡುವಾ ಹೊತ್ತಿಗೂs
ಊರು ಪೋರಾ ಬಿದ್ದೀs ವೋಡುವಾಗೇss
ಊರು ಪೋರಾ ಬಿದ್ದೀs ವೋಡುದಟ್ಟಾs ಹೊತ್ತಿಗೂs
ಮುನಸಿಪರು ಬಂದೀss ಹಿಡವರೂ || ಹಿಡವಟ್ಟಾ ಹೊತ್ತಿಗೂs
ಕಯ್ಯಾನs ಬೇಡೀss ಹಿಡವರೂ || ಬಿಡಸೂರೂ ||
ಕಯ್ಯಾನs ಬೇಡೀss ಬಿಡುಸೀ ಯೇನಂಬೂರೂ ?
“ಸೊಂಟೀಗಿದ್ದು ಚಾಕೂss ಕೊಡು’ ಅಂದೀs ||
“ನೀ ತಿನ್ನುವಾs ಹಣ್ಣುs ಯಾವದು ಲಂದೆ ಪೇಳುs
ಬೇಕಾದಾs ಹಣ್ಣುs ಕೊಡಸೂತೇs || ಕೊಡಸುವೆ ಪೂರಾ ಪೋರಾ,
ತಾಯಿತಂದಿ ಗುರುತಾss ನನುಗ್ಹೇಳೂs ||
“ತಾಯಿತಂದಿ ಗುರುತ್ ಹೇಳುಕೇs ಹಾದಿ ತಪ್ಪಿ ಬರುಲಿಲ್ಲಾs
ಊರಾ ೩ಬಸುವಾಗೀs ಕೊಣಿಲಿಲ್ಲಾs”
“ಸೊಕ್ಕಿನೂ ಮಾತೂs ನಮ್ಮೊಡನೇs ಹೇಳಲು ಬೇಡಾ
ಕೊಡುವೆ ನೇs ನಿನಗೇ ಹಣುಗಳಾ
“ನಿಮ್ಮಲಿ ಕೇಳುಕೇs ಊರು ಬಸುವಾಗಿ ಬರುಲೆಲ್ಲಾs
ಬೇಡುತೆ ನಿಮ್ಮನಿಗೂs ಬರುಲಿಲ್ಲಾs ||
ಕಳ್ಳನು ನಾನಲ್ಲಾs ಸುಳುಗಾsರನಲ್ಲಾ
ಮೋಸ ಮಾಡುವೆ ನಾನೂsಲರುಗಳುಗೇs ||”
“ಕೂರ್ತಾ ಕುರ್ಚಿ ಬಿಟ್ಟೀs ಬರವಾs ಬೇಂಚು ಬಿಟ್ಟೀs
೪ಬೇಲೀಪರ ಕೊಟ್ಟೀss ಕರತರವೇs || ಲೂರು ಪೋರಾs

ಪೌದ್ದಾರನ ಮೋಸೂಗೈದಿದೇ | ಲೂರುಪೋರಾ,
ನನುಮೋಸುಕು ಬಂದೇ ಲರುಗಳಿಗೇs ಲಂದಿಕಂಡೀss
ಬೆಳುಗಾವಕೂ ತಾರೂs ಹೊಡುದಿರೂs ||
ಬೆಳುಗಾವಕೂ ತಾರೂs ಯೇನಂದೀ ಹೊಡುದಿರೂ ?
ಊರುಪೋರಾ ಮೋಸಾs ಗೈದಿದಾs ನಮ್ಮುರಲ್ಲಿs
ಇವ್ನಾರುವಾ ಪರುಜಿಲ್ಯಲ್ಲೀss ಕೊಡುವಬದೂ ||*      ಊರಪೋರ; ಹೆಗಡೆ ಎಲ್.ಆರ್. ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು – ೧೯೭೯ ಪು.ಸಂ. ೮೧-೮೨.